ಮಳೆಗಾಗಿ ಇಗ್ಗುತಪ್ಪನ ಮೊರೆ ಹೋದ ತಿತಿಮತಿ ಗ್ರಾಮಸ್ಥರು
ಕೊಡಗು

ಮಳೆಗಾಗಿ ಇಗ್ಗುತಪ್ಪನ ಮೊರೆ ಹೋದ ತಿತಿಮತಿ ಗ್ರಾಮಸ್ಥರು

March 25, 2019

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ತಿತಿಮತಿ ಸುತ್ತಮುತ್ತ ಭಾಗಕ್ಕೆ ಮಳೆ ಕರುಣಿಸುವಂತೆ ತಿತಿಮತಿ ಭಾಗದ ಜನತೆ ಪಾಡಿ ಇಗ್ಗುತ್ತಪ್ಪ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಗ್ರಾಮದಿಂದ ಇಗ್ಗುತ್ತಪ್ಪನ ಕ್ಷೇತ್ರಕ್ಕೆ ತೆರಳಿದ ಗ್ರಾಮದ ಭಕ್ತರು ಮಳೆ ಇಲ್ಲದೆ ಜನತೆ ಪರಿ ತಪಿಸುವಂತಾಗಿದೆ. ಕೃಷಿ ಚಟುವಟಿಕೆ, ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಕಾರಣ ಮಳೆಗಾಗಿ ಪೂಜೆ ಸಲ್ಲಿಸಿದರು. ಗ್ರಾಮಸ್ಥರುಗಳಾದ ಚೆಪ್ಪುಡೀರ ಕಾರ್ಯಪ್ಪ, ಮೋಹನ್, ಕಿಸು, ಮದನ್ ಸೇರಿದಂತೆ ಇತರರು ಪ್ರಾರ್ಥನೆ ಸಲ್ಲಿಸಿದರು.

Translate »