ಮತದಾನ ಜಾಗೃತಿ; ಮೇಣದ ಬತ್ತಿ ಮೆರವಣಿಗೆ
ಕೊಡಗು

ಮತದಾನ ಜಾಗೃತಿ; ಮೇಣದ ಬತ್ತಿ ಮೆರವಣಿಗೆ

March 25, 2019

ಮಡಿಕೇರಿ: ಮತದಾನದ ಮಹತ್ವ ಕುರಿತು ಹಿರಿಯ ನಾಗರಿಕರು ಹಾಗೂ ವಿಕಲ ಚೇತನರಿಂದ ಮೇಣದ ಬತ್ತಿ ಮೆರವಣಿಗೆ ಜಾಗೃತಿ ಅಭಿಯಾನವು ನಡೆಯಿತು. ನಗರದ ಬಾಲಭವನದಿಂದ ಹೊರಟ ಮೆರ ವಣಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ, ಕಾಲೇಜು ರಸ್ತೆ, ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ಬಾಲಭವನ ತಲುಪಿತು.

ಮತದಾನದ ಕುರಿತು ಜಾಗೃತಿ ಮೆರವಣಿಗೆ ಯಲ್ಲಿ ಹಿರಿಯ ನಾಗರಿಕರು ಉತ್ಸ್ಸಾಹದಿಂದ ಪಾಲ್ಗೊಂ ಡಿದ್ದರು. ಮತದಾನ ಮಾಡಿ ಪ್ರಜಾಪ್ರಭುತ್ವ ಬಲ ಪಡಿಸಿ, ಮತದಾನ ಮಾಡಿದವರೇ ಶೂರರು, ನಿಮ್ಮ ಮತ ನಿಮ್ಮ ಹಕ್ಕು, ತಪ್ಪದೇ ಮತ ಚಲಾಯಿಸಿ, ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಮತದಾನ ಮಾಡುವ ಮೂಲಕ ಹೆಮ್ಮೆಯಿಂದ ಗುರ್ತಿಸಿಕೊಳ್ಳಿ ಎಂಬ ಘೋಷ ವಾಕ್ಯಗಳು ಮೊಳಗಿದವು. ಮೇಣದ ಬತ್ತಿ ಬೆಳಕಿನ ಮೆರ ವಣಿಗೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತ ನಾಡಿದ ತಾಪಂ ಇಒ ಲಕ್ಷ್ಮಿ ಅವರು 18 ವರ್ಷ ಪೂರ್ಣ ಗೊಂಡ ಪ್ರತಿ ಯೊಬ್ಬರೂ ಮತದಾನ ಮಾಡು ವಂತಾಗಬೇಕು ಎಂದು ಕೋರಿದರು. ಹಿರಿಯ ನಾಗರಿ ಕರ ಮತ್ತು ವಿಶೇಷ ಚೇತನರ ಕಲ್ಯಾಣ ಇಲಾ ಖೆಯ ಅಧಿಕಾರಿ ದೇವರಾಜು ಇತರರಿದ್ದರು.

Translate »