ಸದ್ಭಾವನೆಗಳಿಂದ ಜೀವನ ಸಾರ್ಥಕ
ಕೊಡಗು

ಸದ್ಭಾವನೆಗಳಿಂದ ಜೀವನ ಸಾರ್ಥಕ

March 25, 2019

ನಾಪೆÇೀಕ್ಲು: ಮಾನಸಿಕ ಸಾಮಥ್ರ್ಯವನ್ನು ಸಮಾಜದ ಒಳಿತಿಗೆ ಸದುಪಯೋಗಪಡಿಸಿ ಕೊಡು ಸಮಾಜದಲ್ಲಿ ಸದ್ಭಾವನೆಗಳನ್ನು ಬೆಳೆಸಿಕೊಂಡಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ‘ಶಕ್ತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅಭಿಪ್ರಾಯಪಟ್ಟರು.

ಸಮೀಪದ ಕೊಟ್ಟಮುಡಿ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯ ವತಿಯಿಂದ ಆಯೋಜಿಸ ಲಾಗಿದ್ದ ಎನಲೈಜ್ó ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮನುಷ್ಯನಿಗೆ ಆತ್ಮ ವಿಶ್ವಾಸ ಅಗತ್ಯ. ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿರಬೇಕು. ವಿಶ್ವಾಸ ಮತ್ತು ದೃಢತೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ಶಿಕ್ಷಣಕ್ಕೆ ಶಿಸ್ತು ಮುಖ್ಯ. ಕೆಲವು ಚಿಂತನೆಗಳನ್ನು ಮಾಡುವುದರ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬಹುದು. ಸ್ವಾಭಿಮಾನವನ್ನು ಬೆಳೆಸಿಕೊಂಡರೆ ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ ಎಂದರು. ಎಲ್ಲಾ ಕ್ಷೇತ್ರಗಳಲ್ಲಿ ದಿನದಿಂದ ದಿನಕ್ಕೆ ಹೊಸತನ್ನು ಕಲಿಯಬೇಕು. ಕಾನೂನಲ್ಲಿಯೂ ದಿನದಿಂದ ದಿನಕ್ಕೆ ಬದಲಾವಣೆಗಳು ನಡೆಯುತ್ತಿರುತ್ತದೆ. ಅದನ್ನು ಅರಿತುಕೊಂಡಾಗ ಮಾತ್ರ ಉತ್ತಮ ಪ್ರಜೆಯಾಗಿ ಬದುಕಲು ಸಾಧ್ಯ. ದೈಹಿಕ ಸಾಮಥ್ರ್ಯದೊಂದಿಗೆ ಮಾನಸಿಕ ಸಾಮಥ್ರ್ಯದ ಅಗತ್ಯವೂ ಇದೆ ಎಂದು ಸಲಹೆ ನೀಡಿದರು. ತಮ್ಮ ಕುಟುಂಬದ ಸದಸ್ಯರ ರಕ್ಷಣೆಯ ಜೊತೆಗೆ ಸಾಮಾಜಿಕವಾಗಿ ಸಹಾಯ ಮಾಡುವ ಗುಣಗಳನ್ನು, ದೇಶದ ಬಗ್ಗೆ ಚಿಂತನೆಯನ್ನು ಬೆಳೆಸಿಕೊಂಡರೆ ಮಾತ್ರ ಸಮಾಜದಲ್ಲಿ ಆತ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಹೈಕೋರ್ಟ್ ವಕೀಲ ಹಿದಾಯುತ್ತುಲ್ಲಾ, ವಕೀಲ ವೃತ್ತಿಯನ್ನು ಪ್ರಾಮಾಣಿಕವಾಗಿ ಸತ್ಯಸಂಧತೆಯಿಂದ ನಡೆಸಬೇಕು. ನಿರಂತರ ಅಭ್ಯಾಸ, ಸೇವೆಗೆ ಮೊದಲ ಆದ್ಯತೆ ನೀಡಬೇಕು. ಮೊದಲು ತಮ್ಮಲ್ಲಿರುವ ಸಾಮಥ್ರ್ಯವನ್ನು ತಾವು ಅರಿಯಬೇಕು ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮರ್ಕಝ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಮಹಮ್ಮದ್ ಮುಸ್ಲಿಯಾರ್, ಇಸ್ಮಾಯಿಲ್ ಸಖಾಫಿ ಉಸ್ತಾದ್, ಯಾಕುಬ್ ಮಾಸ್ಟರ್ ಮಾತನಾಡಿದರು.

ವೇದಿಕೆಯಲ್ಲಿ ಶಿಯಾಬುದ್ದೀನ್ ನುರಾನಿ, ಯೂಸಫ್ ಕೊಂಡಂಗೇರಿ, ಅಬ್ದುಲ್ಲಾ ಸಾಹೇಬ್, ಮೈದುಕುಟ್ಟಿ ಹಾಜಿ, ಅದಪೆÇಳೆ ಮಹಮ್ಮದ್ ಹಾಜಿ, ಅಬ್ದುಲ್ಲ ಹಾಜಿ, ಸೈಯ್ಯದ್ ಎಲಿಯಾಸ್, ಕೂವೆಂಡ ಆಲಿ, ಉಮರುಲ್ ಫಾರುಕ್, ಮತ್ತಿತರರುಪಾಲ್ಗೊಂಡಿದ್ದರು.

Translate »