ನೇಣು ಹಾಕಿದ ಸ್ಥಿತಿಯಲ್ಲಿ ಜೆ.ಕೆ.ಟೈರ್ಸ್ ಕಾರ್ಮಿಕನ ಶವ ಪತ್ತೆ: ಕೊಲೆ ಶಂಕೆ
ಮಂಡ್ಯ

ನೇಣು ಹಾಕಿದ ಸ್ಥಿತಿಯಲ್ಲಿ ಜೆ.ಕೆ.ಟೈರ್ಸ್ ಕಾರ್ಮಿಕನ ಶವ ಪತ್ತೆ: ಕೊಲೆ ಶಂಕೆ

March 23, 2019

ಶ್ರೀರಂಗಪಟ್ಟಣ: ಮೈಸೂರಿನ ಜೆ.ಕೆ.ಟೈರ್ಸ್ ಕಾರ್ಮಿಕನ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಎಂ.ಶೆಟ್ಟಿಹಳ್ಳಿ ಗ್ರಾಮದ ಕೆಂಪೇಗೌಡ ಎಂಬುವರ ಪುತ್ರ ಜೆ.ಕೆ.ಟೈರ್ಸ್ ಕಾರ್ಮಿಕ ಸುರೇಶ್(38) ಮೃತಪಟ್ಟವನಾಗಿದ್ದು, ಈತ ಗುರುವಾರ ಬೆಳಿಗ್ಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದ. ಆದರೆ ಇಂದು ಬೆಳಿಗ್ಗೆ ಗ್ರಾಮದಲ್ಲಿರುವ ಅವರ ಜಮೀನಿನ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಮೃತನ ಕಾಲುಗಳು ನೆಲಕ್ಕೆ ತಾಗುತ್ತಿದ್ದು, ಆತನನ್ನು ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿ ನೇಣು ಹಾಕಿರಬಹು ದೆಂದು ಆತನ ತಂದೆ ಕೆಂಪೇಗೌಡ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಪುನೀತ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Translate »