ಚಂದ್ರವನ ಆಶ್ರಮದಲ್ಲಿ ದೀಪಾರತಿ
ಮಂಡ್ಯ

ಚಂದ್ರವನ ಆಶ್ರಮದಲ್ಲಿ ದೀಪಾರತಿ

March 23, 2019

ಶ್ರೀರಂಗಪಟ್ಟಣ: ಪಶ್ಚಿಮವಾಹಿನಿ ಹೊರವಲಯ ದಲ್ಲಿರುವ ಡಿ.ಎಂ.ಎಸ್. ಚಂದ್ರವನ ಆಶ್ರಮದಲ್ಲಿ 75ನೇ ಬೆಳದಿಂಗಳ ದೀಪಾರತಿ, ಧಾರ್ಮಿಕ ಕಾರ್ಯಕ್ರಮ ಮತ್ತು ದಾಸೋಹವು ಪೀಠಾಧ್ಯಕ್ಷರಾದ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರ ಸಾನಿಧ್ಯದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಶ್ರೀಗಳು, ಇಂದಿನ ಯುಗಮಾನ ದಲ್ಲಿ ಜನರಿಗೆ ದುಃಖ ಕಡಿಮೆ ಮಾಡಲು ಆಗುತ್ತಿಲ್ಲ. ಯಾರಿಗೂ ನೆಮ್ಮದಿ-ಶಾಂತಿ ಸಿಗುತ್ತಿಲ್ಲ. ಹಿಂದೆ ಶರಣರು ಎಷ್ಟೇ ಕಷ್ಟ ಬಂದರೂ ಹೆದರದೆ ದೇವರಲ್ಲಿ ಆ ಕಷ್ಟ ಎದುರಿಸುವ ಶಕ್ತಿ ಬೇಡುತ್ತಿದ್ದರು. ಇಂದು ಕೆಲವರು ಮಾನಸಿಕ ದೌರ್ಬಲ್ಯಕ್ಕೆ ಒಳಗಾಗಿ ಎಲ್ಲವನ್ನು ಕಳೆದುಕೊಳ್ಳುತ್ತಾರೆ. ಸಂಸಾರ ದಲ್ಲಿ ನೋಡುವ ನೋಟಗಳು, ಭಾವನೆ ಗಳು ನಿಶ್ಚಲವಾಗಿದೆ. ಮನುಷ್ಯನಿಗೆ ಆಸೆ ಇರಬೇಕು, ದುರಾಸೆ ಇರಬಾರದು. ನಿರೀಕ್ಷೆ, ಅಪೇಕ್ಷೆಗಳಿಂದ ಸಂಬಂಧ, ಬಾಂಧವ್ಯ ಗಳೇ ಹಾಳಾಗುತ್ತಿವೆ. ಅತಿಯಾದ ಆಸೆ, ನಿರೀಕ್ಷೆಗಳು ದುಃಖ ಉಂಟು ಮಾಡುತ್ತವೆ. ನಾವು ಸಂತೋಷವಾಗಿರಲು ಮುಖ್ಯವಾಗಿ ಬೇಕಾದುದು ಪ್ರೀತಿ. ಪ್ರೀತಿಗೆ ಎಂದೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಪ್ರೀತಿಯನ್ನು ನಾವು ಎಲ್ಲರೊಂದಿಗೆ ಹಂಚಿಕೊಂಡು ಬಾಳಿದಾಗ ಮಾತ್ರ ನಾವು ಸಂತೋಷವಾಗಿರಲು ಸಾಧ್ಯ ಎಂದು ಮಧುರ ಜೀವನದ ಸಂದೇಶ ವನ್ನು ಬಹಳ ಅರ್ಥವತ್ತಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಲಂಡನ್ನಿನ ಬಸವ ಇಂಟರ್‍ನ್ಯಾಷನಲ್ ಫೌಂಡೇಶನ್‍ನ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ಎಸ್. ಮಹಾ ದೇವಯ್ಯರವರು ಆಗಮಿಸಿದ್ದರು. ಇವರು ಬಸವ ತತ್ವದ ಬಗ್ಗೆ ತಿಳಿಸಿದರು. ಎಲ್ಲಾ ಕಡೆ ಬಸವ ತತ್ವದ ಅರಿವನ್ನು ಮೂಡಿಸುವುದೇ ನಮ್ಮ ಕಾಯಕವಾಗಿದೆ ಎಂದರು.

Translate »