ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಆನೆ ಶವ ಪತ್ತೆ
ಕೊಡಗು

ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಆನೆ ಶವ ಪತ್ತೆ

March 25, 2019

ಗೋಣಿಕೊಪ್ಪಲು: ಕೆರೆಯಲ್ಲಿ ಗಂಡು ಕಾಡಾನೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆನೆಗೆ 13 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕಳತ್ಮಾಡು ಗ್ರಾಮದ ಉತ್ತಪ್ಪ ಎಂಬುವರಿಗೆ ಸೇರಿದ ಕೆರೆಯಲ್ಲಿ ಸೋಮವಾರ ಬೆಳಗ್ಗೆ ಸ್ಥಳೀಯರು ಅತ್ತ ತೆರಳುವಾಗ ಆನೆ ಶವ ಪತ್ತೆಯಾಗಿದೆ. ಸಾವನ್ನಪ್ಪಿ 3-4 ದಿನಗಳು ಕಳೆದಿರಬಹು ದೆಂದು ತಿಳಿದುಬಂದಿದೆ. ಕೊಳೆತು ವಾಸನೆ ಬೀರುತ್ತಿತ್ತು. ನೀರು ಕುಡಿಯಲು ಬಂದ ಸಂದರ್ಭ ಕೆಸರಿನಲ್ಲಿ ಸಿಲುಕಿ ಮೇಲೇಳಲಾ ಗದೆ ಸಾವನ್ನಪ್ಪಿರುವ ಶಂಕೆ ವ್ಯಕ್ತಗೊಂಡಿದೆ. ಸ್ಥಳಕ್ಕೆ ಎಸಿಎಫ್ ಶ್ರೀಪತಿ, ಆರ್‍ಎಫ್‍ಒ ಗೋಪಾಲ್ ಆಗಮಿಸಿ ಪರಿಶೀಲನೆ ನಡೆಸಿದರು. ಪಶುವೈದ್ಯ ಮುಜಿಬ್ ರೆಹಮನ್ ಶವ ಪರೀಕ್ಷೆ ನಡೆಸಿದರು.

Translate »