Tag: Kodagu

ವಿಚಾರಣೆಗಾಗಿ ಶಂಕಿತ ನಕ್ಸಲ್ ಮುಖಂಡನನ್ನು  ಮಡಿಕೇರಿಗೆ ಕರೆತಂದ ಪೊಲೀಸರು
ಕೊಡಗು

ವಿಚಾರಣೆಗಾಗಿ ಶಂಕಿತ ನಕ್ಸಲ್ ಮುಖಂಡನನ್ನು ಮಡಿಕೇರಿಗೆ ಕರೆತಂದ ಪೊಲೀಸರು

March 19, 2019

ಮಡಿಕೇರಿ: ದಕ್ಷಿಣ ಭಾರತದಲ್ಲಿ ನಿಷೇಧಿತ ನಕ್ಸಲ್ ಸಂಘಟನೆಯ ಚಟು ವಟಿಕೆಯನ್ನು ಸಕ್ರಿಯಗೊಳಿಸುವ ಹೊಣೆ ಹೊತ್ತ ಆರೋಪ ಎದುರಿಸುತ್ತಿರುವ ಶಂಕಿತ ನಕ್ಸಲ್ ಮುಖಂಡ ರೂಪೇಶ್ ಎಂಬಾತನನ್ನು ವಿಚಾರಣೆಗಾಗಿ ಮಡಿಕೇರಿಗೆ ಕರೆತರಲಾಗಿದೆ. ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ರೂಪೇಶ್‍ನ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯಲ್ಲಿ ಸೋಮವಾರ ಸಂಜೆ ಕರೆತಂದು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ರೂಪೇಶನನ್ನು ಇಡಲಾಯಿತು. ಕೇರಳ ರಾಜ್ಯದ ವೈವೂರು ಕೇಂದ್ರ ಕಾರಾ ಗೃಹದಲ್ಲಿದ್ದ ಶಂಕಿತ ನಕ್ಸಲ್ ರೂಪೇಶ್‍ನನ್ನು ಕೇರಳ ಪೊಲೀಸರು ಹಾಗೂ ಕೊಡಗು ಕಮಾಂಡೊ ಶಸ್ತ್ರ…

ನಕ್ಷತ್ರ ಆಮೆ ಮಾರಾಟ: ಆರೋಪಿ ಬಂಧನ
ಕೊಡಗು

ನಕ್ಷತ್ರ ಆಮೆ ಮಾರಾಟ: ಆರೋಪಿ ಬಂಧನ

March 19, 2019

ಮಡಿಕೇರಿ: ತೀರಾ ಅಪರೂಪದ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಯನ್ನು ಮಡಿಕೇರಿಯ ಸಿಐಡಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಕಾಟಕೇರಿ ನಿವಾಸಿ ತಿಮ್ಮಯ್ಯ ಎಂಬುವರೇ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ತಿಮ್ಮಯ್ಯ ಕಳೆದ 3 ತಿಂಗಳಿಂದ ನಕ್ಷತ್ರ ಆಮೆಯನ್ನು ಮನೆಯಲ್ಲಿ ಸಾಕುತ್ತಾ, ವ್ಯಾಪಾರ ಕುದುರಿಸಲು ಹವಣಿಸುತ್ತಿದ್ದನೆನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಸಿಐಡಿ ಅರಣ್ಯ ಸಂಚಾರಿ ದಳ ದಾಳಿ ನಡೆಸಿ ಆಮೆ ಸಹಿತ…

ಖಾಸಗಿ ಆಸ್ಪತ್ರೆಯಲ್ಲಿ ರೋಗಿ ಸಾವು: ಸಂಬಂಧಿಕರ ಪ್ರತಿಭಟನೆ ಆಸ್ಪತ್ರೆ ಮುಖ್ಯಸ್ಥರಿಂದ ಪರಿಹಾರ, ಬಗೆಹರಿದ ಸಮಸ್ಯೆ
ಕೊಡಗು

ಖಾಸಗಿ ಆಸ್ಪತ್ರೆಯಲ್ಲಿ ರೋಗಿ ಸಾವು: ಸಂಬಂಧಿಕರ ಪ್ರತಿಭಟನೆ ಆಸ್ಪತ್ರೆ ಮುಖ್ಯಸ್ಥರಿಂದ ಪರಿಹಾರ, ಬಗೆಹರಿದ ಸಮಸ್ಯೆ

March 19, 2019

ಕುಶಾಲನಗರ: ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸಿದ ರೋಗಿಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಂಬಂಧಿಕರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಗ್ರಾಮದ ಪದ್ಮನಾಭ (52) ಮೃತ ವ್ಯಕ್ತಿ. ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಹಿನ್ನಲೆಯಲ್ಲಿ ಪದ್ಮನಾಭ ಅವರನ್ನು ಸೋಮವಾರ ಬೆಳಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಚೇತರಿಸಿ ಕೊಳ್ಳುವ ಭರವಸೆ ನೀಡಿದ್ದರು. ಆದರೆ ಏಕಾಏಕಿ ರೋಗಿಯನ್ನು ಮೈಸೂರಿಗೆ ರವಾನಿಸ ಬೇಕಿದೆ…

ಲೋಕಸಭಾ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ
ಕೊಡಗು

ಲೋಕಸಭಾ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ

March 19, 2019

ಮಡಿಕೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮಾ.19 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗ ಲಿದ್ದು, ಕೊಡಗು-ಮೈಸೂರು ಲೋಕ ಸಭಾ ಕ್ಷೇತ್ರ ಸಂಬಂಧಿಸಿದಂತೆ ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ. ಮಾ.26 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ.27 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯ ಲಿದೆ. ಮಾ.29 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ. ಏಪ್ರಿಲ್ 18 ರಂದು ಮತದಾನ ನಡೆಯಲಿದೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿ ದಂತೆ…

ಗಂಗೆ ಬಾರೆ… ತುಂಗೆ ಬಾರೆ… ದಾಹ ನೀಗೇ… ಆನೆಚೌಕೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಪ್ರಾಣಿ ಪಕ್ಷಗಳ ಪರದಾಟ
ಕೊಡಗು

ಗಂಗೆ ಬಾರೆ… ತುಂಗೆ ಬಾರೆ… ದಾಹ ನೀಗೇ… ಆನೆಚೌಕೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಪ್ರಾಣಿ ಪಕ್ಷಗಳ ಪರದಾಟ

March 18, 2019

ಮಡಿಕೇರಿ: ಸೊಂಡಿಲಿ ನಿಂದ ನೀರು ಹಾಕಿಕೊಂಡು ತಂಪು ಮಾಡಿಕೊಳ್ಳುತ್ತಿರುವ ಕಾಡಾನೆ.. ಕಾಡಾನೆ ಗಳಿಗೆ ಹೆದರಿ ಕದ್ದು ಮುಚ್ಚಿ ಓಡಿ ಬಂದು ನೀರು ಕುಡಿಯುತ್ತಿರುವ ಜಿಂಕೆ.. ಗುಟುಕು ನೀರಿಗಾಗಿ ದೂರದ ಕೆರೆಗಳಿಗೆ ಬಂದು ದಾಹ ನೀಗಿಸಿಕೊಳ್ಳುತ್ತಿರುವ ಪ್ರಾಣಿ ಪಕ್ಷಿ ಗಳು.. ಇಂಥ ದೃಶ್ಯಗಳೆಲ್ಲಾ ವಿರಾಜಪೇಟೆ ತಾಲೂಕಿನ ಆನೆಚೌಕೂರು ಅರಣ್ಯ ಪ್ರದೇ ಶದಂಚಿನಲ್ಲಿ ಕಂಡು ಬರುತ್ತಿದೆ. ಕೆಲವೇ ತಿಂಗಳ ಹಿಂದಷ್ಟೇ ದಾಖ ಲೆಯ ಮಳೆ ಕಂಡು ಜಲಪ್ರಳಯದಿಂದ ತತ್ತರಿಸಿದ್ದ ಕೊಡಗಿನಲ್ಲಿ, ಈಗ ಬಿಸಿಲಿನ ಬೇಗೆಗೆ ಜನರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳೂ…

ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಲು ಡಿಸಿ ಸೂಚನೆ
ಕೊಡಗು

ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಲು ಡಿಸಿ ಸೂಚನೆ

March 18, 2019

ಮಡಿಕೇರಿ: ಜಿಲ್ಲೆಯ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗೆ ಡಿಸಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಕೊಡಗು ಜಿಲ್ಲೆಯ ರಸ್ತೆ ಸುರ ಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪದೇ ಪದೇ ಸಂಭವಿಸುವ ಅಪಘಾತ ಸ್ಥಳಗಳಲ್ಲಿ ಉಬ್ಬು ನಿರ್ಮಾಣ, ಕನ್ನಡಿ ಅಳವಡಿಸು ವುದು, ಜೀಬ್ರಾ ಕ್ರಾಸ್, ಸೂಚನಾ ಫಲಕ ಅಳವಡಿಸುವುದು ಮತ್ತಿತರ…

ಜಾಗತಿಕ ತಾಪಮಾನ ಹೆಚ್ಚಳಕ್ಕೆ ಯಾರು ಹೊಣೆ
ಕೊಡಗು

ಜಾಗತಿಕ ತಾಪಮಾನ ಹೆಚ್ಚಳಕ್ಕೆ ಯಾರು ಹೊಣೆ

March 18, 2019

ಮಡಿಕೇರಿ: ಪ್ರಸ್ತುತ ಜಾಗತಿಕ ತಾಪಮಾನ ಹೆಚ್ಚಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ಯೋಚಿಸ ಬೇಕಾಗಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಪ್ರೊ.ಟಿ.ಡಿ.ತಿಮ್ಮಯ್ಯ ಹೇಳಿದರು. ಯುವ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಪ್ರಕೃತಿ ವಿಕೋಪ ಕುರಿತು ಬರೆದ ಪ್ರಕೃತಿ ಮುನಿದ ಹಾದಿಯಲ್ಲಿ… ಕೃತಿ ಲೋಕಾರ್ಪಣೆ ಪ್ರಯುಕ್ತ ಕೊಡಗು ಪ್ರೆಸ್ ಕ್ಲಬ್ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪತ್ರಿಕೋ ದ್ಯಮ ವಿಭಾಗ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ…

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ
ಕೊಡಗು

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

March 18, 2019

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ (ರಜಾ ದಿನಗಳನ್ನು ಹೊರತುಪಡಿಸಿ) ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು ಯಾವುದೇ ಅವ್ಯವಹಾರಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿಷೇಧಿತ ಸ್ಥಳ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ. ಈ ಆದೇಶವು ಪರೀಕ್ಷಾ ದಿನಗಳಂದು ಬೆಳಗ್ಗೆ 9 ಗಂಟೆಯಿಂದ…

ಗುಡ್ಡಮಾಡು ಹಾಡಿಗೆ ಅಧಿಕಾರಿಗಳ ಭೇಟಿ: 2 ದಿನದಲ್ಲೇ ಕೊಳವೆ ಬಾವಿ-ಭರವಸೆ
ಕೊಡಗು

ಗುಡ್ಡಮಾಡು ಹಾಡಿಗೆ ಅಧಿಕಾರಿಗಳ ಭೇಟಿ: 2 ದಿನದಲ್ಲೇ ಕೊಳವೆ ಬಾವಿ-ಭರವಸೆ

March 17, 2019

ಸಿದ್ದಾಪುರ: ಕುಡಿಯಲು ಶುದ್ಧ ನೀರು ಅಲಭ್ಯವಾಗಿದೆ. ಯಾವುದೇ ಮೂಲ ಸೌಕರ್ಯಗಳೂ ಇಲ್ಲ. ಪರಿಣಾಮ ಗುಡ್ಡ ಮಾಡು ಆದಿವಾಸಿ ಹಾಡಿಯ ಜನರ ಬದುಕು ಕಷ್ಟಗಳ ಮಡುವಿನಲ್ಲಿ ಮುಳುಗಿದೆ ಎಂಬ ವರದಿ ಪ್ರಕಟವಾದ ಬೆನ್ನಲ್ಲೇ ಜಿಲ್ಲಾಡಳಿ ತದ ಅಧಿಕಾರಿಗಳ ತಂಡ ಶನಿವಾರ ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 2 ದಿನಗಳಲ್ಲೇ ಕೊಳವೆ ಬಾವಿ ಕೊರೆಸಿ ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿ ಕೊಡುವುದಾಗಿ ಭರವಸೆ ನೀಡಿದೆ. ಸಹಾಯಕ ಕಾರ್ಯಪಾಲಕ ಅಭಿಯಂತರ ಲಕ್ಷ್ಮಿಕಾಂತ್ ಹಾಗೂ ಸಮಗ್ರ ಗಿರಿಜನ ಅಭಿ ವೃದ್ಧಿ…

ಕಾರ್ಮಿಕನ ಕೊಲೆ ಯತ್ನ: ಆರೋಪಿಗಳ ಸೆರೆ
ಕೊಡಗು

ಕಾರ್ಮಿಕನ ಕೊಲೆ ಯತ್ನ: ಆರೋಪಿಗಳ ಸೆರೆ

March 17, 2019

ಮಡಿಕೇರಿ: ನಗರದ ಸ್ಟೋನ್‍ಹಿಲ್ ಬಳಿ ಮಾ.12ರ ರಾತ್ರಿ 8.30ರ ವೇಳೆ ಕಾರ್ಮಿಕ ಶರತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿಗಳಾದ ಸುಜಿತ್(23) ಹಾಗೂ ಕೆ.ಹರ್ಷ(22)ನನ್ನು ಮಡಿಕೇರಿ ನಗರ ಠಾಣೆ ಪೊಲೀಸರ ತಂಡ ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಬಳಿ ಶನಿವಾರ ಬಂಧಿಸಿದೆ. ಈ ಮೊದಲು ಇನ್ನಿಬ್ಬರು ಆರೋಪಿಗಳಾದ ಪುಟಾಣಿ ಮಡಿಕೇರಿಯ ಬಿ.ಆರ್. ಕೀರ್ತನ್(19), ದೇಚೂರು ನಿವಾಸಿ ಬಿ.ಎಸ್.ಪುನೀತ್(25)ನನ್ನು ಬಂಧಿಸಲಾಗಿತ್ತು. ನಾಲ್ವರು ಆರೋಪಿಗಳು ಶರತ್ ಅವರನ್ನು…

1 21 22 23 24 25 84
Translate »