ಜಾಗತಿಕ ತಾಪಮಾನ ಹೆಚ್ಚಳಕ್ಕೆ ಯಾರು ಹೊಣೆ
ಕೊಡಗು

ಜಾಗತಿಕ ತಾಪಮಾನ ಹೆಚ್ಚಳಕ್ಕೆ ಯಾರು ಹೊಣೆ

March 18, 2019

ಮಡಿಕೇರಿ: ಪ್ರಸ್ತುತ ಜಾಗತಿಕ ತಾಪಮಾನ ಹೆಚ್ಚಾಗಿದ್ದು, ಇದಕ್ಕೆ ಯಾರು ಹೊಣೆ ಎಂದು ಯೋಚಿಸ ಬೇಕಾಗಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಪ್ರೊ.ಟಿ.ಡಿ.ತಿಮ್ಮಯ್ಯ ಹೇಳಿದರು.

ಯುವ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು ಪ್ರಕೃತಿ ವಿಕೋಪ ಕುರಿತು ಬರೆದ ಪ್ರಕೃತಿ ಮುನಿದ ಹಾದಿಯಲ್ಲಿ… ಕೃತಿ ಲೋಕಾರ್ಪಣೆ ಪ್ರಯುಕ್ತ ಕೊಡಗು ಪ್ರೆಸ್ ಕ್ಲಬ್ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪತ್ರಿಕೋ ದ್ಯಮ ವಿಭಾಗ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಡೆದ ಭಾಷಣ ಸ್ಪರ್ಧೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭ ವಿಸಿ 7 ತಿಂಗಳು ಕಳೆದಿದ್ದು, ಪ್ರಕೃತಿ ವಿಕೋ ಪಕ್ಕೆ ಕಾರಣವಾದ ಅಂಶಗಳ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಿದೆ. ಮಾನವ ನಿರ್ಮಿತ ಎಂದು ಕೆಲವರು, ನಿಸರ್ಗದಲ್ಲಿ ನಡೆ ಯುವ ಸ್ವಾಭಾವಿಕ ಪ್ರಕ್ರಿಯೆ ಎಂದು ಕೆಲ ವರು ಹೇಳುತ್ತಿದ್ದಾರೆ. ಕೊಡಗಿನಲ್ಲಿ ಪರಿ ಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿಯ ಅಗತ್ಯತೆ ಇದೆ ಎಂದರು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭ ಕಿಶೋರ್ ರೈ ಕತ್ತಲೆಕಾಡು ಸೇರಿದಂತೆ ಹಲವು ಪತ್ರಕರ್ತರು ಜೀವದ ಹಂಗು ತೊರೆದು ಸಂಕಷ್ಟಕ್ಕೆ ಸಿಲುಕಿದವರ ಜೀವ ರಕ್ಷಿಸುವ ಕೆಲಸ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಫ್‍ಎಂಸಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಗಳಾದ ಉದಿಯಂಡ ಜಯಂತಿ ಮಂದಣ್ಣ, ವಿಘ್ನೇಶ್ ಭೂತನಕಾಡು, ಕಿಶೋರ್ ರೈ ಕತ್ತಲೆಕಾಡು ಕೊಡಗಿನಲ್ಲಿ ಪತ್ರಕರ್ತರಾಗಿ ಛಾಪು ಮೂಡಿಸಿದ್ದಾರೆ. ಇದು ಪತ್ರಿಕೋ ದ್ಯಮ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿದ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ, ಪತ್ರಿಕೋದ್ಯಮ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ಮುಂದಾಗಬೇಕು. ತಾವು ಮಾಡುವ ಕೆಲಸ ವನ್ನು ಖುಷಿಯಾಗಿ, ಪ್ರೀತಿಯಿಂದ ಮಾಡಬೇಕೆಂದರು.

ಪ್ರಕೃತಿ ಮುನಿದ ಹಾದಿಯಲ್ಲಿ… ಕೃತಿ ಅನಾವರಣಕ್ಕೆ ಮುನ್ನ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿ ಎಂದು ಪತ್ರಿಕೋ ದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಹಮ್ಮಿಕೊಳ್ಳ ಲಾಗಿದೆ. ಮಾ.26 ರಂದು ಪುಸ್ತಕ ಅನಾವರಣ ಮಾಡಲಾಗು ವುದೆಂದು ಕಿಶೋರ್ ರೈ ಕತ್ತಲೆಕಾಡು ಹೇಳಿದರು. ವಿರಾಜಪೇಟೆ ಕಾವೇರಿ ಕಾಲೇಜು ಪತ್ರಿಕೋದ್ಯಮ ವಿಭಾಗ ಉಪನ್ಯಾಸಕ ಐನಂಡ ಸಚಿನ್ ಸೋಮಣ್ಣ ಹೇಳಿದರು. ಆಸಕ್ತಿ ಇದ್ದಲ್ಲಿ ಮಾತ್ರ ಪತ್ರಿಕೋದ್ಯಮದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಮಾಧ್ಯಮ ಕ್ಷೇತ್ರ ದಲ್ಲಿರುವ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಇಳೆಯರಾಜ, ಮೋನಿಕಾ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿ ಅರುಣ್ ಕೂರ್ಗ್, ನಿರ್ದೇಶಕರಾದ ಬೊಳ್ಳಜೀರ ಬಿ. ಅಯ್ಯಪ್ಪ, ಕೊಳಂಬೆ ಉದಯ್ ಮೊಣ್ಣಪ್ಪ ಇದ್ದರು. ಕೆ.ಡಿ. ಪುಣ್ಯ, ಬಿ.ಆರ್. ಭವ್ಯ ನಿರೂಪಿಸಿದರು. ಪ್ರತೀಕ್ಷಾ ಪ್ರಾರ್ಥಿಸಿದರು. ರಾಜೇಶ್ ನಾಯಕ್ ಸ್ವಾಗತಿಸಿದರು. ಬಿ.ಆರ್. ನಿಷಾ ವಂದಿಸಿದರು.

ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ವಿರಾಜಪೇಟೆ ಕಾವೇರಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪ್ರಥಮ, ದ್ವಿತೀಯ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗ ದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 14 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತೀರ್ಪು ಗಾರರಾಗಿ ಟ್ರಾವೆಲ್ ಕೂರ್ಗ್ ಸಂಸ್ಥೆ ಮುಖ್ಯಸ್ಥ ಚೈಯ್ಯಂಡ ಸತ್ಯ ಗಣಪತಿ, ಹಿರಿಯ ಪತ್ರ ಕರ್ತರಾದ ಬಿ.ಸಿ.ದಿನೇಶ್, ಬಾಚರಣಿ ಯಂಡ ಅನು ಕಾರ್ಯಪ್ಪ ಕಾರ್ಯ ನಿರ್ವ ಹಿಸಿದರು. ಪ್ರಥಮ ಮೂರು ಸ್ಥಾನ ಪಡೆದ ವರಿಗೆ ಮಾ.26 ರಂದು ನಡೆಯಲಿರುವ ಪ್ರಕೃತಿ ಮುನಿದ ಹಾದಿಯಲ್ಲಿ… ಕೃತಿ ಲೋಕಾರ್ಪಣೆ ವೇಳೆ ಬಹುಮಾನ ವಿತರಿ ಸಲಾಗುವುದೆಂದು ಕಿಶೋರ್ ರೈ ಕತ್ತಲೆ ಕಾಡು ಮಾಹಿತಿ ನೀಡಿದರು.

Translate »