ನಕ್ಷತ್ರ ಆಮೆ ಮಾರಾಟ: ಆರೋಪಿ ಬಂಧನ
ಕೊಡಗು

ನಕ್ಷತ್ರ ಆಮೆ ಮಾರಾಟ: ಆರೋಪಿ ಬಂಧನ

March 19, 2019

ಮಡಿಕೇರಿ: ತೀರಾ ಅಪರೂಪದ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿ ಯನ್ನು ಮಡಿಕೇರಿಯ ಸಿಐಡಿ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಕಾಟಕೇರಿ ನಿವಾಸಿ ತಿಮ್ಮಯ್ಯ ಎಂಬುವರೇ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿ ತಿಮ್ಮಯ್ಯ ಕಳೆದ 3 ತಿಂಗಳಿಂದ ನಕ್ಷತ್ರ ಆಮೆಯನ್ನು ಮನೆಯಲ್ಲಿ ಸಾಕುತ್ತಾ, ವ್ಯಾಪಾರ ಕುದುರಿಸಲು ಹವಣಿಸುತ್ತಿದ್ದನೆನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಸಿಐಡಿ ಅರಣ್ಯ ಸಂಚಾರಿ ದಳ ದಾಳಿ ನಡೆಸಿ ಆಮೆ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಸಹಾಯಕ ನಿರೀಕ್ಷಕ ಸುಭಾಷ್, ಸಿಬ್ಬಂದಿಗಳಾದ ಲಿಂಗರಾಜು, ನಾಣಯ್ಯ, ಮೋಹನ್, ರಾಜೇಶ್, ತ್ರಿಶೂಲ್, ಪೆಮ್ಮಯ್ಯ ಪಾಲ್ಗೊಂಡಿದ್ದರು.

Translate »