ಲೋಕಸಭಾ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ
ಕೊಡಗು

ಲೋಕಸಭಾ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ

March 19, 2019

ಮಡಿಕೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಮಾ.19 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಅಂದಿನಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗ ಲಿದ್ದು, ಕೊಡಗು-ಮೈಸೂರು ಲೋಕ ಸಭಾ ಕ್ಷೇತ್ರ ಸಂಬಂಧಿಸಿದಂತೆ ಮೈಸೂರಿನಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದೆ.

ಮಾ.26 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ.27 ರಂದು ನಾಮಪತ್ರ ಪರಿಶೀಲನಾ ಕಾರ್ಯ ನಡೆಯ ಲಿದೆ. ಮಾ.29 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ. ಏಪ್ರಿಲ್ 18 ರಂದು ಮತದಾನ ನಡೆಯಲಿದೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿ ದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತಗಟ್ಟೆಗಳ ಮೇಲ್ವಿಚಾರಣೆ, ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ ನಿರ್ವಹಣೆ, ಸಹಾಯವಾಣಿ ಕೇಂದ್ರದ ಕಾರ್ಯನಿರ್ವಹಣೆ, ಸಿ-ವಿಜಿಲ್, ಮತಗಟ್ಟೆ ಗಳ ಮೇಲ್ವಿಚಾರಣೆ ಮತ್ತಿತರ ಸಂಬಂಧ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ವಾಗುವುದರಿಂದ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳು ನಡೆಯಲಿವೆ. ಅದಕ್ಕೆ ಅನುಮತಿ ನೀಡುವುದು, ಚೆಕ್ ಪೋಸ್ಟ್‍ಗಳಲ್ಲಿ ಹೆಚ್ಚಿನ ನಿಗಾವಹಿಸುವುದು, ಚುನಾವಣಾ ವೆಚ್ಚ ನಿರ್ವಹಣೆ ಮತ್ತಿತರ ಬಗ್ಗೆ ನೋಡಲ್ ಅಧಿಕಾರಿಗಳಿಗೆ ನಿರ್ದೇ ಶನ ನೀಡಿದರು. ಮತಗಟ್ಟೆಗಳಿಗೆ ವಿಕಲ ಚೇತನ ಮತದಾರರನ್ನು ಕರೆದುಕೊಂಡು ಬರಲು ವ್ಯವಸ್ಥೆ ಮಾಡುವುದು, ಮತದಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಮತಗಟ್ಟೆ ಅಧಿಕಾರಿ ಗಳಿಗೆ ತರಬೇತಿ ನೀಡುವುದು, ಮತ್ತಿತರ ಕಾರ್ಯಗಳನ್ನು ಕೈಗೊಳ್ಳುವಂತೆ ಸಂಬಂಧ ಪಟ್ಟ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಸಭೆ ಸಮಾರಂಭ ಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಗಳಿಗೆ ಸಲಹೆ ಮಾಡಿದರು.
ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಮಾದರಿ ನೀತಿ ಸಂಹಿತೆ ಮತ್ತು ಮತ ದಾನದ ಮಹತ್ವ ಕುರಿತು ಜಾಗೃತಿ ಅಭಿಯಾನ ಬಗ್ಗೆ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್ ಅವರು ಲೋಕ ಸಭಾ ಚುನಾವಣೆ ಸಂಬಂಧ ವ್ಯವಸ್ಥಿತ ವಾಗಿ ಕಾರ್ಯ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಲವು ಸಲಹೆ ನೀಡಿದರು.

ಸಹಾಯಕ ಚುನಾವಣಾಧಿಕಾರಿಗಳಾದ ಟಿ.ಜವರೇಗೌಡ, ಶ್ರೀನಿವಾಸ್, ಮತಗಟ್ಟೆಗಳ ಮೇಲ್ವಿಚಾರಣಾ ನೋಡಲ್ ಅಧಿಕಾರಿ ಗುಡೂರು ಭೀಮಸೇನ, ಚುನಾವಣಾ ವೆಚ್ಚ ನಿರ್ವಹಣೆಯ ನೋಡಲ್ ಅಧಿಕಾರಿ ಎಚ್.ಇ.ನಂದ, ಸಿ-ವಿಜಿಲ್ ನೋಡಲ್ ಅಧಿಕಾರಿ ಷಂಶುದ್ದೀನ್, ಮತಗಟ್ಟೆ ಅಧಿಕಾರಿ ಗಳ ನೇಮಕ ನೋಡಲ್ ಅಧಿಕಾರಿ ಮಚ್ಚಾಡೋ, ವಿದ್ಯುನ್ಮಾನ ಮತಯಂತ್ರ ನೋಡಲ್ ಅಧಿಕಾರಿ ಕೆ.ಇ.ಇಬ್ರಾಹಿಂ, ಚುನಾವಣಾ ವೀಕ್ಷಕರ ನೋಡಲ್ ಅಧಿಕಾರಿ ಪ್ರಮೋದ್, ಜಿಲ್ಲಾ ಮಾಹಿತಿ ಅಧಿಕಾರಿ ಅಜೀತ್, ತರಬೇತಿ ನೋಡಲ್ ಅಧಿಕಾರಿ ವಾಲ್ಟರ್ ಡಿಮೆಲೊ, ವಾಹನ ನಿಯೋಜನೆ ನೋಡಲ್ ಅಧಿಕಾರಿ ಶಿವಣ್ಣ ಇತರರು ಹಲವು ಮಾಹಿತಿ ನೀಡಿದರು.

Translate »