ಗಂಗೆ ಬಾರೆ… ತುಂಗೆ ಬಾರೆ… ದಾಹ ನೀಗೇ… ಆನೆಚೌಕೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಪ್ರಾಣಿ ಪಕ್ಷಗಳ ಪರದಾಟ
ಕೊಡಗು

ಗಂಗೆ ಬಾರೆ… ತುಂಗೆ ಬಾರೆ… ದಾಹ ನೀಗೇ… ಆನೆಚೌಕೂರು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಪ್ರಾಣಿ ಪಕ್ಷಗಳ ಪರದಾಟ

March 18, 2019

ಮಡಿಕೇರಿ: ಸೊಂಡಿಲಿ ನಿಂದ ನೀರು ಹಾಕಿಕೊಂಡು ತಂಪು ಮಾಡಿಕೊಳ್ಳುತ್ತಿರುವ ಕಾಡಾನೆ.. ಕಾಡಾನೆ ಗಳಿಗೆ ಹೆದರಿ ಕದ್ದು ಮುಚ್ಚಿ ಓಡಿ ಬಂದು ನೀರು ಕುಡಿಯುತ್ತಿರುವ ಜಿಂಕೆ.. ಗುಟುಕು ನೀರಿಗಾಗಿ ದೂರದ ಕೆರೆಗಳಿಗೆ ಬಂದು ದಾಹ ನೀಗಿಸಿಕೊಳ್ಳುತ್ತಿರುವ ಪ್ರಾಣಿ ಪಕ್ಷಿ ಗಳು.. ಇಂಥ ದೃಶ್ಯಗಳೆಲ್ಲಾ ವಿರಾಜಪೇಟೆ ತಾಲೂಕಿನ ಆನೆಚೌಕೂರು ಅರಣ್ಯ ಪ್ರದೇ ಶದಂಚಿನಲ್ಲಿ ಕಂಡು ಬರುತ್ತಿದೆ.

ಕೆಲವೇ ತಿಂಗಳ ಹಿಂದಷ್ಟೇ ದಾಖ ಲೆಯ ಮಳೆ ಕಂಡು ಜಲಪ್ರಳಯದಿಂದ ತತ್ತರಿಸಿದ್ದ ಕೊಡಗಿನಲ್ಲಿ, ಈಗ ಬಿಸಿಲಿನ ಬೇಗೆಗೆ ಜನರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳೂ ಕೂಡ ತತ್ತರಿಸುವಂತಾಗಿದೆ. ಮಾರ್ಚ್ ಆರಂಭದಲ್ಲೇ ಕಾವೇರಿ ತವರು ಜಿಲ್ಲೆಯಾಗಿರುವ ಕೊಡಗಿನಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ಬಿಸಿಲಿನ ತಾಪಮಾನ ಏರುತ್ತಿರುವಂತೆಯೇ ಕೆರೆ ಕಟ್ಟೆ, ಹಳ್ಳ ಕೊಳ್ಳಗಳಲ್ಲಿ ನೀರು ಬತ್ತುತ್ತಿದೆ. ಈಗಾಗಲೇ ನೀರಿಲ್ಲದೇ ಅನೇಕ ಕಡೆ ಜನರು ಹನಿ ನೀರಿಗೂ ಪರದಾಡುವಂತಾ ಗಿದೆ. ಈ ಹಿನ್ನಲೆಯಲ್ಲಿ ಅರಣ್ಯದಲ್ಲಿ ನೀರಿನ ಕ್ಷಾಮ ಎದುರಿಸುತ್ತಿರುವ ಪ್ರಾಣಿ ಪಕ್ಷಿಗಳಿಗೆ ನೀರಿನ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಖಾಲಿಯಾಗಿರುವ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಒಂದೆಡೆ ನೀರಿನ ಕೊರತೆ ಮತ್ತೊಂದೆಡೆ ಬಿಸಿಲಿನಿಂದಾಗಿ ಕಾಡ್ಗಿಚ್ಚಿನ ಭಯ.. ಈ ನಡುವೇ ಕಾಡು ಪ್ರಾಣಿಗಳಿಗೆ ಆಹಾರದ ಅಭಾವ… ಕುಡಿಯಲು ಕೂಡ ನೀರಿಲ್ಲ. ಈ ಪರಿಸ್ಥಿತಿಯಲ್ಲಿ ಕಾಡಿನ ಜೀವಿಗಳಾದ ಪ್ರಾಣಿ, ಪಕ್ಷಿಗಳ ಸ್ಥಿತಿ ಶೋಚನೀಯ ವಾಗಿದೆ. ಆನೆ ಚೌಕೂರು ಅರಣ್ಯ ಪ್ರದೇಶ ಗುಡ್ಡಗಾಡುಗಳಲ್ಲಿ ಮಳೆ ಇಲ್ಲದೆ ನೀರು ಎಲ್ಲಿಯೂ ಸಂಗ್ರಹವಾಗಿಲ್ಲ. ಈ ಹಿನ್ನಲೆ ಯಲ್ಲಿ ಕೊಡಗಿನ ಸಾಕಾನೆ ಶಿಬಿರ ದಲ್ಲಿರುವ ಆನೆ ಚೌಕೂರು ಅರಣ್ಯ ಪ್ರದೇಶ ದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಅರ ಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಖಾಲಿಯಾಗಿರುವ ಕೆರೆಗಳಿಗೆ ನೀರು ತುಂಬಿ ಸುವ ಕಾರ್ಯದಲ್ಲಿ ತೊಡಗಿದ್ದಾರೆ.

 

ಅರಣ್ಯ ಸಿಬ್ಬಂದಿಗಳು ಖಾಲಿಯಾಗಿ ರುವ ಕೆರೆಗಳ ಸುತ್ತಮುತ್ತ ಪ್ರದೇಶಗಲ್ಲಿ ಬೋರ್‍ವೆಲ್‍ಗಳನ್ನು ಕೊರೆಸಿದ್ದು, ಪ್ರಾಣಿ ಗಳಿಗೆ ಯಾವುದೇ ರೀತಿಯ ತೊಂದರೆ ಆಗ ದಂತೆ ಸೋಲಾರ್ ಶಕ್ತಿಯನ್ನು ಬಳಸಿಕೊಂಡು ಪ್ರತಿನಿತ್ಯ ಖಾಲಿ ಕೆರೆಗಳಿಗೆ ನೀರು ಹಾಯಿ ಸುತ್ತಿದ್ದಾರೆ. ಸಂಜೆ ಮತ್ತು ಬೆಳಿಗ್ಗೆ ಪ್ರಾಣಿ ಗಳು ಕೆರೆಗೆ ಬಂದು ನೀರು ಕುಡಿದು ಕೊಂಡು ಹೋಗುತ್ತಿದೆ. ಆನೆ, ಜಿಂಕೆ, ಕಡವೆ ಮತ್ತಿತರ ಪ್ರಾಣಿಗಳು ಸೇರಿದಂತೆ ಪಕ್ಷಿಗಳು ಕೂಡ ನೀರು ಕುಡಿದು, ದಾಹ ಆರಿಸಿಕೊಳ್ಳುತ್ತಿವೆ. ಅರಣ್ಯ ಇಲಾಖೆ ಸಿಬ್ಬಂ ದಿಗಳು ಸಾರ್ಥಕತೆಯ ಕೆಲಸ ಮಾಡು ತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಳೆಗಾಲದಲ್ಲಿ ಭಾರೀ ಪ್ರಮಾಣದ ಜಲಸ್ಫೋಟದಿಂದ ದೇಶವ್ಯಾಪಿ ಸುದ್ದಿ ಯಾಗಿದ್ದ ಕೊಡಗು ಜಿಲ್ಲೆ ಮುಂದಿನ ದಿನಗಳಲ್ಲಿ ನೀರಿನ ಮೂಲಗಳು ಬತ್ತಿ ಹೋಗಿ ಭೀಕರ ಬರಗಾಲದಿಂದ ಸುದ್ದಿ ಯಾಗುವ ಸಾಧ್ಯತೆಗಳೂ ಅಲ್ಲಗಳೆ ಯುವಂತಿಲ್ಲದಂತಾಗಿದೆ.
ಈ ಆತಂಕದ ಮಧ್ಯೆಯೂ ವನ್ಯ ಪ್ರಾಣಿ ಗಳಿಗಾಗಿ ನಾಗರಹೊಳೆ ವ್ಯಾಪ್ತಿ ಯಲ್ಲಿ ಅರಣ್ಯ ಸಿಬ್ಬಂದಿಗಳು ಕೆರೆಗಳಿಗೆ ನೀರು ಹಾಯಿಸಿ, ಪ್ರಾಣಿ ಪಕ್ಷಿಗಳ ದಾಹ ನೀಗಿಸುತ್ತಿದ್ದಾರೆ.

Translate »