ಮಡಿಕೇರಿ: ಜಿಲ್ಲಾಡಳಿತ, ಪ್ರವಾಸೋದ್ಯಮ, ತೋಟಗಾರಿಕೆ ಹಾಗೂ ಪಶುಪಾಲನೆ ಇಲಾಖೆ ಸಹಯೋಗದಲ್ಲಿ ಜ.11 ರಿಂದ ಮೂರು ದಿನಗಳ ಕಾಲ ‘ಕೊಡಗು ಪ್ರವಾಸಿ ಉತ್ಸವ’ವು ನಗರದ ರಾಜಾಸೀಟು ಮತ್ತು ಗಾಂಧಿ ಮೈದಾನದಲ್ಲಿ ನಡೆಯಲಿದೆ. ಜ.11 ರಂದು ಸಂಜೆ 4.30 ಗಂಟೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ‘ಕೊಡಗು ಪ್ರವಾಸಿ ಉತ್ಸವಕ್ಕೆ’ ಚಾಲನೆ ನೀಡಲಿದ್ದಾರೆ. ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಉದ್ಘಾಟಿಸಲಿದ್ದಾರೆ. ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ಬಿ.ಎ.ಹರೀಶ್,…
ವಿಷ ಸೇವಿಸಿ, ಮನೆಗೆ ಬೆಂಕಿ ಇಟ್ಟುಕೊಂಡ ಭೂಪ
January 10, 2019ಗೋಣಿಕೊಪ್ಪಲು: ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋತೂರು ಗ್ರಾಮದ ಲಕ್ಕುಂದ ಹಾಡಿಯ ಮಲೆಯಾಳಿ ಸುರೇಂದ್ರ(45) ಎಂಬುವರು ವಿಷ ಸೇವಿಸಿ, ತನ್ನ ಮನೆಗೆ ಬೆಂಕಿ ಇಟ್ಟುಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆ ಸುರೇಂದ್ರ ವಿಷ ಸೇವಿಸಿ ತನ್ನ ಮನೆಗೆ ಬೆಂಕಿ ಇಟ್ಟುಕೊಂಡರೆನ್ನಲಾಗಿದೆ. ಬೆಂಕಿ ಹತ್ತಿಕೊಂಡ ಹೊಗೆಯಿಂದ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿ ಸುವ ಪ್ರಯತ್ನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ವಿಷ ಸೇವಿಸಿದ್ದ ಸುರೇಂದ್ರ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಆತನನ್ನು ಕುಟ್ಟ ಆಸ್ಪತ್ರೆಗೆ ಸಾಗಿಸಿ ನಂತರ ಹೆಚ್ಚಿನ…
ಗುಡ್ಡೆಹೊಸೂರು ಶಾಲೆಯಲ್ಲಿ ಮಕ್ಕಳ ಸಂತೆ
January 10, 2019ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಸಂತೆ ಭರ್ಜರಿಯಾಗಿ ನಡೆಯಿತು. ಇಲ್ಲಿನ ಗ್ರಾಪಂ ಅಧ್ಯಕ್ಷ ಕೆ.ಎಸ್.ಭಾರತಿಯವರು ಸಂತೆಗೆ ಚಾಲನೆ ನೀಡಿದರು. ಈ ಸಂದರ್ಭ ಎಸ್‍ಡಿಎಂಸಿ ಅಧ್ಯಕ್ಷ ಬಿ.ಎಸ್.ದಿನೇಶ್ ಮತ್ತು ಸದಸ್ಯರು ಹಾಜರಿದ್ದರು. ಗುಡ್ಡೆಹೊಸೂರುನ ಗ್ರಾಮಸ್ಥರಿಗೆ ಸ್ಥಳೀಯವಾಗಿ ಮಂಗ ಳವಾರ ಕುಶಾಲನಗರ ಸಂತೆಯಾದ್ದರಿಂದ ಹಲವು ಸಾರ್ವಜನಿಕರು ಶಾಲಾ ಆವರಣದಲ್ಲಿ ತರಕಾರಿ ಖರೀದಿಸುವ ದೃಶ್ಯ ಕಂಡು ಬಂತು. ಈ ಸಂದರ್ಭ ಶಾಲಾ ಮುಖ್ಯಶಿಕ್ಷಕ ಸಣ್ಣಸ್ವಾಮಿ ಮತ್ತು ಶಿಕ್ಷಕ ವೃಂದ ಹಾಜರಿದ್ದರು. ಈ ಸಂದರ್ಭ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ…
ಫಲಪುಷ್ಪ ಪ್ರದರ್ಶನಕ್ಕೆ ಮೈದಾಳುತ್ತಿದೆ ರಾಜಾಸೀಟು
January 10, 2019ಮಡಿಕೇರಿ: ಜಿಲ್ಲೆಯ ಪ್ರಸಿದ್ಧ ನೈಸರ್ಗಿಕ ಸೊಬಗಿನ ಮಡಿಕೇರಿಯ ರಾಜಾ ಸೀಟು ಉದ್ಯಾನವನದಲ್ಲಿ ಜ.11 ರಿಂದ 13ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಅರಳಿ ನಿಂತಿರುವ ರಂಗು ರಂಗಿನ ಹೂವುಗಳಿಂದ ಉದ್ಯಾನವನ ಕಂಗೊಳಿಸುತ್ತಿದೆ. ವಿವಿಧ ಜಾತಿಯ ಹೂವುಗಳನ್ನು ಕುಂಡಗಳಲ್ಲಿ ಬೆಳೆಯಲಾಗಿದ್ದು, ಉದ್ಯಾನ ವನಕ್ಕೆ ಹೊಸ ಮೆರುಗು ತುಂಬಿವೆ. 8 ರಿಂದ 10 ಸಾವಿರ ಸಂಖ್ಯೆಯಲ್ಲಿ ವಿವಿಧ ಜಾತಿಯ ಪೇಟೂನಿಯಾ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಪ್ಲಾಕ್ಸ್, ವಿಂಕಾ, ರೋಸಿಯಾ, ಡೇಲಿಯಾ ಹೂವುಗಳು ನೋಡುಗರನ್ನು ಆಕರ್ಷಿಸಲಿದೆ. ಕೊಡಗಿನ ಕುಲದೇವತೆಯಾದ ಕಾವೇರಿ…
ಹಾರಂಗಿ ಜಲಾಶಯದಲ್ಲಿ ಕೆಸರುಮಯ
January 10, 2019ಕುಶಾಲನಗರ: ಕೊಡಗು ಜಿಲ್ಲೆಯಲ್ಲಿರುವ ಹಾರಂಗಿ ಜಲಾಶಯದ ನೀರಿನ ಮಟ್ಟ ಕ್ರಮೇಣ ಇಳಿಮುಖವಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 8.5 ಟಿಎಂಸಿ ಇದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ 0.3 ಟಿಎಂಸಿಗೆ ಇಳಿಮುಖ ವಾಗಿದೆ. ಪ್ರಸ್ತುತ ಜಲಾಶಯಕ್ಕೆ ಒಳಹರಿವು ಇಂದು ಬೆಳಗಿನ ದಾಖಲೆ ಪ್ರಕಾರ 103 ಕ್ಯೂಸೆಕ್, ಹೊರಹರಿವು 15ಕ್ಯೂಸೆಕ್. ಜಲಾಶಯವು ಅತೀ ಹೆಚ್ಚು ಕೆಸರಿನಿಂದ ಕೂಡಿದ್ದು, ಹೆಚ್ಚಿನ ನೀರು ಸಂಗ್ರಹಣಾ ಸಾಮಥ್ರ್ಯವನ್ನು ಕಳೆದುಕೊಂಡಿದೆ. ಜಲಾ ಶಯದ ನೀರಿನ ಮಟ್ಟ ಗಣನೀಯವಾಗಿ ಇಳಿಮುಖವಾಗುತ್ತಿರುವುದರಿಂದ ಕುಶಾಲ ನಗರ, ಕೂಡಿಗೆ ಮತ್ತು ಸುತ್ತಮುತ್ತಲಿನ…
ಮಕ್ಕಳಗುಡಿ ಬೆಟ್ಟದಲ್ಲಿ ಯುವಕನ ಮೇಲೆ ಹಲ್ಲೆ ಪ್ರಕರಣ
January 10, 2019ಬುದ್ಧಿ ಹೇಳಲು ಹೋದವನ ಮೇಲೆ ಕೊಲೆ ಯತ್ನ ಸೋಮವಾರಪೇಟೆ: ತಾಲೂಕಿನ ಮಕ್ಕಳಗುಡಿ ಬೆಟ್ಟದಲ್ಲಿ ಮಂಗಳವಾರ ಮೈಸೂರಿನ ಯುವಕನ ಮೇಲೆ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಪ್ರಾಪ್ತ ಹುಡುಗಿಯನ್ನು ಪ್ರೀತಿಸುತ್ತಿದ್ದ ಬಾಲಕನಿಗೆ ಬುದ್ಧಿ ಹೇಳಲು ಹೋದವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಮಂಗಳವಾರ ಮಕ್ಕಳಗುಡಿ ಬೆಟ್ಟಕ್ಕೆ ತೆರಳಿದ್ದ ಮೈಸೂರಿನ ರಾಕೇಶ್‍ಗೌಡ ಎಂಬ ಯುವಕನ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಯತ್ನ ನಡೆಸಲಾಗಿತ್ತು. ಈ ಬಗ್ಗೆ ತನಿಖೆ ಶುರು ಮಾಡಿದ…
ಕೇರಳ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ
January 10, 2019ವಿರಾಜಪೇಟೆ: ಶಬರಿಮಲೆಗೆ ಸ್ತ್ರೀಯರ ಪ್ರವೇಶ ಹಾಗೂ ಯಾತ್ರೆಯ ನಿಯಮ ಉಲ್ಲಂಘನೆ ಮಾಡಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ವಿರಾಜಪೇಟೆ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಕೇರಳದ ಕಮ್ಯುನಿಸ್ಟ್ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇನ್ನೊಂದೆಡೆ ರಾಜ್ಯ ಸರಕಾರದ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ ಬಳಿ ವಿಧಾನಸೌದದಲ್ಲಿಯೇ ರೂ.26 ಲಕ್ಷ ನಗದು ಸಿಕ್ಕಿರುವ ಹಿನ್ನಲೆಯಲ್ಲಿ ಪುಟ್ಟ ರಂಗಶೆಟ್ಟಿ ತಮ್ಮ ಸ್ಥಾನಕ್ಕೆ ಕೂಡಲೆ ರಾಜೀ ನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಕಾರ್ಯ ಕರ್ತರು ಪಟ್ಟಣದ ಗಡಿಯಾರ ಕಂಬದ ಬಳಿ…
ಕಾರ್ಮಿಕ ಸಂಘಟನೆಗಳ ಮುಂದುವರೆದ ಮುಷ್ಕರ
January 10, 2019ಮಡಿಕೇರಿ: ಕೇಂದ್ರ ಸರಕಾರ ಬೆಲೆ ಏರಿಕೆ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ನಗರದ ಇಂದಿರಾಗಾಂಧಿ ವೃತ್ತದಿಂದ ಸಹಸ್ರ ಸಂಖ್ಯೆಯಲ್ಲಿದ್ದ ವಿವಿಧ ಸಂಘಟನೆ ಗಳ ಕಾರ್ಯಕರ್ತರು ಗಾಂಧಿ ಮೈದಾನದ ವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಕೇಂದ್ರ ಸರಕಾರದ ಬೆಲೆ ಏರಿಕೆ, ಕಾರ್ಮಿಕ ಮಸೂದೆ ಅಂಗೀಕಾರಕ್ಕೆ ಒತ್ತಡ ಮತ್ತು ಪ್ರತಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿ ರುವ ಕಾರ್ಮಿಕರಿಗೆ ಕನಿಷ್ಠ 18 ಸಾವಿರ ರೂ.ವೇತನ ನೀಡುವಂತೆ…
ಜಿಲ್ಲಾದ್ಯಂತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ
January 9, 2019ಮಡಿಕೇರಿ: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲೆಯಲ್ಲಿರುವ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿ ಮೈದಾನದ ಎದುರು ಪ್ರತಿಭಟಸಿದ ಕಾರ್ಮಿಕರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಅಂಗನ ವಾಡಿ ಸಂಘಟನೆಯ ಮುಖಂಡರಾದ ಟಿ.ಪಿ.ರಮೇಶ್, ದೇಶದಲ್ಲಿ 1991ರಲ್ಲಿ ಜಾರಿಗೆ ಬಂದ ಹೊಸ ಆರ್ಥಿಕ ನೀತಿ ಯನ್ನು ಇಂದಿನ ಕೇಂದ್ರ ಸರ್ಕಾರ ವೇಗವಾಗಿ ಜಾರಿ ಮಾಡುತ್ತಿವೆ. ಇದರ ಪರಿಣಾಮ ಇಂದು…
ವಿರಾಜಪೇಟೆಯಲ್ಲೂ ಕಾರ್ಮಿಕರ ಹೋರಾಟ
January 9, 2019ವಿರಾಜಪೇಟೆ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ವಿರೋಧಿ ನೀತಿ ವಿರೋಧಿಸಿ ಇಂದು ವಿರಾಜಪೇಟೆ ತಾಲೂಕಿನ ಕಾರ್ಮಿಕ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ತಾಲೂಕಿನ ಕಟ್ಟಡ ಕಾರ್ಮಿಕರು, ತೋಟ ಕಾರ್ಮಿಕರು, ಬಿಎಸ್‍ಎನ್‍ಎಲ್, ಎಲ್.ಐ.ಸಿ ಹಾಗೂ ಜೆ.ಸಿ.ಟಿ.ಯು ನೇತೃತ್ವದಲ್ಲಿ ಪಟ್ಟಣದ ತೆಲುಗರ ಬೀದಿಯಿಂದ ಮೆರವಣಿಗೆ ಹೊರಟು ಜೈನರ ಬೀದಿ, ದೊಡ್ಡಟ್ಟಿ ಚೌಕಿ, ಮುಖ್ಯ ರಸ್ತೆಗಾಗಿ ಗಡಿಯಾರ ಕಂಬದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಮಿನಿ ವಿಧಾನ ಸೌಧ ತಾಲೂಕು ಕಚೇರಿ…