Tag: Kodagu

ಬಂದೂಕು ತೋಟ ಮಾರಾಟ: ಮೂವರ ಬಂಧನ
ಕೊಡಗು

ಬಂದೂಕು ತೋಟ ಮಾರಾಟ: ಮೂವರ ಬಂಧನ

January 16, 2019

ಮಡಿಕೇರಿ: ಬಂದೂಕು ತೋಟಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮಡಿಕೇರಿ ಮೂಲದ ಇಬ್ಬರು ಹಾಗೂ ಕೇರಳ ಮೂಲದ ಓರ್ವನನ್ನು ಮಡಿಕೇರಿ ಪ್ರವಾಸಿ ಮಂದಿರದ ಬಳಿ ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಯಶಸ್ವಿಯಾಗಿದೆ. ಮಡಿಕೇರಿಯ ಬಂದೂಕು ಅಂಗಡಿಗಳಿಂದ ಬಂದೂಕು ತೋಟಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಕೇರಳ ಮೂಲದ ವ್ಯಕ್ತಿಗೆ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾ ಚರಣೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅರ್ವತೊಕ್ಲು…

ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ
ಕೊಡಗು

ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆಗೆ ನಿರ್ಧಾರ

January 15, 2019

ಮಡಿಕೇರಿ: ಜಿಲ್ಲಾಡಳಿತ ವತಿಯಿಂದ ವಿಶಿಷ್ಟ ಮತ್ತು ಅರ್ಥಪೂರ್ಣವಾಗಿ ಜನವರಿ 26 ರಂದು ಗಣರಾಜ್ಯೋತ್ಸವ ಆಚರಣೆಗೆ ನಿರ್ಧರಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿ ಕಾರಿ ಲಕ್ಷ್ಮಿಪ್ರಿಯ, ಎಲ್ಲಾ ಇಲಾಖಾ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳು ಕೈಜೋಡಿಸಿ ಗಣರಾ ಜ್ಯೋತ್ಸವ ಯಶಸ್ವಿಗೆ ಸಹಕರಿಸುವಂತೆ ಕೋರಿದರು. ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕಳೆದ ಬಾರಿಯಂತೆ ಅರ್ಥ ಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ…

ಕೊಡಗು ಪ್ರವಾಸಿ ಉತ್ಸವ: ನಿರೀಕ್ಷೆ ಮೀರಿ ಯಶಸ್ಸು
ಕೊಡಗು

ಕೊಡಗು ಪ್ರವಾಸಿ ಉತ್ಸವ: ನಿರೀಕ್ಷೆ ಮೀರಿ ಯಶಸ್ಸು

January 15, 2019

ಮಡಿಕೇರಿ: ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತವಾಗಿ ನೆಲಕಚ್ಚಿದ್ದ ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಚೇತರಿಕೆಗಾಗಿ ಹಮ್ಮಿಕೊಂಡಿದ್ದ ಕೊಡಗು ಪ್ರವಾಸಿ ಉತ್ಸವ ಮತ್ತು ಫಲಪುಷ್ಪ ಪ್ರದರ್ಶನ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. 3 ದಿನಗಳ ಕಾಲ ಮಡಿಕೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರವಾಸಿ ಉತ್ಸವಕ್ಕೆ ಸುಮಾರು 70 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದಾರೆಂದು ತೋಟಗಾರಿಕಾ ಇಲಾಖೆ ಮೂಲಗಳು ತಿಳಿಸಿವೆ. ಪ್ರವಾಸಿ ಉತ್ಸವದ ಪ್ರಯುಕ್ತ ರಾಜಾಸೀಟಿನಲ್ಲಿ ನಡೆದ ಫಲಪುಷ್ಪ ಪ್ರದರ್ಶನಕ್ಕೆ 43 ಸಾವಿರ ಮಂದಿ ಸಂದರ್ಶಕರು ಆಗಮಿಸಿದ್ದಾರೆಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಾ…

ಮೂರ್ನಾಡುವಿನಲ್ಲಿ ಸರ್ಟಿಫಿಕೇಟ್ ಕೋರ್ಸ್
ಕೊಡಗು

ಮೂರ್ನಾಡುವಿನಲ್ಲಿ ಸರ್ಟಿಫಿಕೇಟ್ ಕೋರ್ಸ್

January 15, 2019

ಮೈಸೂರು: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಸಾಹಿತಿ ಶ್ರೀಮತಿ ಮೊಣ್ಣಂಡ ಶೋಭ ಸುಬ್ಬಯ್ಯ, ಮಾಲತಿ ದೇವಯ್ಯರವರು ಉಪನ್ಯಾಸ ತರಬೇತಿಯನ್ನು ನಡೆಸಿಕೊಟ್ಟರು. ಸಾಹಿತಿಗಳಾದ ಶ್ರೀಮತಿ ಮೊಣ್ಣಂಡ ಶೋಭ ಸುಬ್ಬಯ್ಯನವರು ತಮ್ಮ ಉಪನ್ಯಾಸದಲ್ಲಿ “ ಆಧುನಿಕ ಜಗತ್ತಿನಲ್ಲಿ ಕನ್ನಡದ ಸ್ಥಾನ ಮಾನ” ಎಂಬ ಬಗ್ಗೆ ಮಾತನಾಡುತ್ತ ಜಗತ್ತು ಎಷ್ಟೇ ಮುಂದು ವರೆದರು ಕೂಡ ನಮ್ಮ ಕನ್ನಡ ತನ್ನದೇ ಆದ ಸ್ಥಾನಮಾನವನ್ನು ಕಾಯ್ದುಕೊಂಡಿದೆ. ಸುಲಿದ ಬಾಳೆಹಣ್ಣಿನ ರೀತಿ ಸುಲಭವಾಗಿ ಅರಗಿಸಿಕೊಳ್ಳಬಹುದು ಎಂದು ಹೇಳಿದರು….

ಕೊಡಗು ಪ್ರವಾಸಿ ಉತ್ಸವಕ್ಕೆ ಸಾರಾ ಚಾಲನೆ
ಕೊಡಗು, ಮೈಸೂರು

ಕೊಡಗು ಪ್ರವಾಸಿ ಉತ್ಸವಕ್ಕೆ ಸಾರಾ ಚಾಲನೆ

January 12, 2019

ಮಡಿಕೇರಿ: ಕೊಡಗು ಪ್ರವಾಸಿ ಉತ್ಸವ ಹಾಗೂ 3 ದಿನಗಳ ಕಾಲ ಹಮ್ಮಿ ಕೊಂಡಿರುವ `ಫಲಪುಷ್ಪ ಪ್ರದರ್ಶನ’ಕ್ಕೆ ರಾಜ್ಯ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಶುಕ್ರವಾರ ಇಲ್ಲಿ ಚಾಲನೆ ನೀಡಿದರು. ನಂತರ ಪಟ್ಟಣದ ನೈಸರ್ಗಿಕ ಸೊಬಗಿನ ರಾಜಾಸೀಟ್ ನಲ್ಲಿ ಹೂವುಗಳಿಂದ ಅಲಂಕೃತವಾಗಿದ್ದ ಕಾವೇರಿ ಮಾತೆಯ ಪ್ರತಿಮೆಗೆ ಪುಷ್ಪಾ ರ್ಚನೆ ನೆರವೇರಿಸಿ, ಉದ್ಯಾನದೊಳಗೆ ವಿಹರಿಸಿದ ಸಚಿವರು ವಿವಿಧ ಕಲಾಕೃತಿ ಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರಕೃತಿ ವಿಕೋಪದಿಂದ ಸಂತ್ರಸ್ತ ವಾಗಿದ್ದ…

ಸಂಸತ್‍ನಲ್ಲಿ ಪ್ರತಿಧ್ವನಿಸಿದ ತಲಚೇರಿ-ಮೈಸೂರು ರೈಲು  ಯೋಜನೆ: ಮೊದಲು ಪರಿಸರ ಇಲಾಖೆಯಿಂದ ಅನುಮತಿ  ಪಡೆಯುವಂತೆ ಕೇರಳ ಸಂಸದರಿಗೆ ಕೇಂದ್ರ ಸೂಚನೆ
ಕೊಡಗು

ಸಂಸತ್‍ನಲ್ಲಿ ಪ್ರತಿಧ್ವನಿಸಿದ ತಲಚೇರಿ-ಮೈಸೂರು ರೈಲು ಯೋಜನೆ: ಮೊದಲು ಪರಿಸರ ಇಲಾಖೆಯಿಂದ ಅನುಮತಿ ಪಡೆಯುವಂತೆ ಕೇರಳ ಸಂಸದರಿಗೆ ಕೇಂದ್ರ ಸೂಚನೆ

January 12, 2019

ನವದೆಹಲಿ: ದಕ್ಷಿಣ ಕೊಡ ಗಿನ ದಟ್ಟ ಅರಣ್ಯದ ನಡುವೆ ಹಾದು ಹೋಗಲಿರುವ ವಿವಾದಾತ್ಮಕ ತಲಚೇರಿ-ಮೈಸೂರು ರೈಲ್ವೆ ಯೋಜನೆಯ ವಿಚಾರ ಸಂಸತ್‍ನಲ್ಲೂ ಇಂದು ಪ್ರತಿಧ್ವನಿಸಿತು. ಈ ವಿವಾದಾತ್ಮಕ ತಲಚೇರಿ-ಮೈಸೂರು ರೈಲ್ವೆ ಯೋಜನೆಯನ್ನು ಕೊಡಗು ಮತ್ತು ಮೈಸೂರು ನಿವಾಸಿಗಳು, ಕೊಡಗಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ಪರಿಸರವಾದಿ ಗಳು ಪ್ರತಿಭಟನೆ ಹಾಗೂ ಹೋರಾಟಗಳ ಮೂಲಕ ತೀವ್ರವಾಗಿ ವಿರೋಧಿಸುತ್ತಿ ದ್ದರೂ ಕೇರಳದ ಚುನಾಯಿತ ಜನಪ್ರತಿನಿಧಿ ಗಳು ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಭಾರೀ ಲಾಬಿ ನಡೆಸುತ್ತಿದ್ದಾರೆ. ಸಂಸತ್‍ನಲ್ಲಿ ಪ್ರಸ್ತಾಪಿಸುತ್ತಲೇ ಇದ್ದಾರೆ. ಇದೇ…

ಕ್ಲಾಸ್‍ರೂಂನಲ್ಲಿ ತುಂಬಿತು ತಾಯ್ತತನದ ವಾತ್ಸಲ್ಯ
ಕೊಡಗು

ಕ್ಲಾಸ್‍ರೂಂನಲ್ಲಿ ತುಂಬಿತು ತಾಯ್ತತನದ ವಾತ್ಸಲ್ಯ

January 12, 2019

ಗೋಣಿಕೊಪ್ಪ: ಅದು ಕಾಲೇಜು ಕೊಠಡಿ. ಆದರೆ ಅಲ್ಲಿ ಪಾಠ-ಪ್ರವ ಚನವಿರಲಿಲ್ಲ. ಅಲ್ಲಿ ಪ್ರೀತಿ ಮೈದಳೆದಿತ್ತು. ತಾಯ್ತನದ ವಾತ್ಸಲ್ಯ ಅರಳಿತ್ತು. ಎಲ್ಲರ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಸಹಪಾಠಿಗಳಿಂದ ಮಮತೆಯ ಮಡಿಲು ತುಂಬಿತ್ತು. ಇದು ಗೋಣಿಕೊಪ್ಪಲು ಕಾಲೇಜಿನಲ್ಲಿ ಕಂಡುಬಂದು ದೃಶ್ಯ. ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಶಾಲಿನಿಗೆ ಕಳೆದ ಕಳೆದ ವರ್ಷ ಮದುವೆಯಾಗಿತ್ತು. ಆದರೂ ತನ್ನ ಓದುವ ಅಭಿಲಾಷೆಯಿಂದ ಪತಿಗೆ ತಿಳಿಸಿದ ಶಾಲಿನಿ ವ್ಯಾಸಂಗ ಮುಂದುವರೆಸಿದ್ದಳು. ಎರಡನೇ ವರ್ಷದ ಎಂ.ಎ ಪದವಿ ಓದುತ್ತಿದ್ದ ಶಾಲಿನಿ ಗರ್ಭಿಣಿಯಾಗಿದ್ದಳು. ಈ…

ಪೊನ್ನಂಪೇಟೆಯಲ್ಲಿ ಮನಸೂರೆಗೊಂಡ ಸಾಂಸ್ಕøತಿಕ ಸೌರಭ
ಕೊಡಗು

ಪೊನ್ನಂಪೇಟೆಯಲ್ಲಿ ಮನಸೂರೆಗೊಂಡ ಸಾಂಸ್ಕøತಿಕ ಸೌರಭ

January 12, 2019

ವಿರಾಜಪೇಟೆ: ಕಲಾವಿದರ ನೃತ್ಯ, ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತ ಗೀತಗಾಯನ, ವಯಲಿನ್, ಕೊಳಲು ವಾದನ, ಗೀಗಿಪದ, ಗಿರಿಜನ ನೃತ್ಯ, ಕಂಸಾಳೆ, ಮೊದಲಾದ ಸಾಂಸ್ಕøತಿಕ ಕಲೆಗಳು ಹಾಗೂ ಮೈಸೂರಿನ ಡೊಳ್ಳುಕುಣಿತದ ಕಲಾವಿದರು ನೋಡುಗರನ್ನು ರೋಮಾಂಚನಗೊಳಿಸಿದರು. ಕನ್ನಡ ಮತ್ತು ಸಂಸ್ಕøತಿಕ ಇಲಾಖೆಯಿಂದ ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಸೌರಭದಲ್ಲಿ ಮೈಸೂರಿನ ಅರಮನೆ ಕಲಾವಿದರು ನುಡಿಸಿದ ಸುಶ್ರಾವ್ಯ ವಯಲಿನ್ ವಾದನ ಪ್ರೇಕ್ಷಕರಿಗೆ ಮುದ ನೀಡಿತು. ಇದೇ ಕಲಾವಿದರ ಕೊಳಲು ವಾದನವು ಇಂಪಾಗಿತ್ತು. ಆನಂತರ ಬೆಂಗ ಳೂರಿನ ನಾಟ್ಯಾಲಯ ನೃತ್ಯ ಶಾಲೆಯ…

ನೆರೆ ಸಂತ್ರಸ್ತರಿಗೆ ಧರ್ಮಸ್ಥಳ ಸಂಸ್ಥೆಯಿಂದ 8 ಕೋಟಿ ರೂ. ನೆರವು ವಿತರಣೆ
ಕೊಡಗು

ನೆರೆ ಸಂತ್ರಸ್ತರಿಗೆ ಧರ್ಮಸ್ಥಳ ಸಂಸ್ಥೆಯಿಂದ 8 ಕೋಟಿ ರೂ. ನೆರವು ವಿತರಣೆ

January 10, 2019

ಮಡಿಕೇರಿ: ಪ್ರಕೃತಿ ವಿಕೋಪ ದಲ್ಲಿ ಸಂತ್ರಸ್ತರಾದವರಿಗೆ ಅನುಕಂಪದ ಬದಲಿಗೆ ಅನುಭೂತಿಯಿಂದ ಪ್ರತಿಯೊ ಬ್ಬರು ನೆರವು ನೀಡಬೇಕೆಂದು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ರಾಜಶ್ರೀ ಡಾ.ಡಿ. ವೀರೇಂದ್ರ ಹೆಗ್ಗಡೆ ಕರೆ ನೀಡಿದ್ದಾರೆ. ಪ್ರಕೃತಿ ವಿಕೋಪದಿಂದಾಗಿ ಸಂತ್ರಸ್ತರಾದ ಕೊಡಗು ಜಿಲ್ಲೆಯ 2106 ಮಂದಿಗೆ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 8 ಕೋಟಿ ರೂ.ಗಳ ನೆರವು ನೀಡಲಾಯಿತು. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿತ ಸಮಾರಂಭದಲ್ಲಿ ಸಾಂಕೇತಿಕವಾಗಿ ಸಂತ್ರಸ್ತಗೆ ಪರಿಹಾರದ ಚೆಕ್‍ಗ ಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ….

ಜೂಜಾಟ: ನಾಲ್ವರ ಬಂಧನ
ಕೊಡಗು

ಜೂಜಾಟ: ನಾಲ್ವರ ಬಂಧನ

January 10, 2019

ವಿರಾಜಪೇಟೆ: ವಿರಾಜಪೇಟೆ ಬಳಿಯ ವಿನಾಯಕ ನಗರದ ಹೊಳೆಯ ಬದಿಯಲ್ಲಿ ಜೂಜಾಟ ಅಡುತ್ತಿದ್ದ ನಾಲ್ಕು ಮಂದಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿ ಪಣಕ್ಕಿಟ್ಟಿದ್ದ ರೂ.71 ಸಾವಿರ ವನ್ನು ವಶಪಡಿಸಿಕೊಂಡಿದ್ದಾರೆ. ಬುಧವಾರ ಸಂಜೆ ಜೂಜಾಟದಲ್ಲಿ ತೊಡ ಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಟಿ.ಜೆ.ಗಣೇಶ್, ಗೋಪಾಲಕೃಷ್ಣ, ಕೆ.ಟಿ.ದೀಪಕ್ ಮತ್ತು ಹೆಚ್.ಎಂ.ರಾಜೇಶ್ ಅವರುಗಳನ್ನು ಬಂಧಿಸಿದ್ದು, ಇನ್ನು ಮೂವರು ಪರಾರಿಯಾದರು ಎಂದು ಪೊಲೀಸರು ತಿಳಿಸಿದರು. ಮತ್ತೊಂದು ಪ್ರಕರಣದಲ್ಲಿ ಪಟ್ಟ ಣದ ಖಾಸಗಿ ಬಸ್ಸು ನಿಲ್ದಾಣದ…

1 42 43 44 45 46 84
Translate »