ಮಡಿಕೇರಿ: ಮಹಾಮಳೆ ಮತ್ತು ಭೂ ಕುಸಿತದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ವೈಮಾನಿಕ ಸಮೀಕ್ಷೆ ನಡೆಸಿದರು. ಹಾರಂಗಿ, ಮಕ್ಕಂದೂರು, ಜೋಡು ಪಾಲ, ಮುಕ್ಕೋಡ್ಲು, ಕಾಲೂರು ಹಾಗೂ ಮಡಿಕೇರಿ ಭಾಗದಲ್ಲಿ ಸಮೀಕ್ಷೆ ನಡೆಸಿದ ಜಿಲ್ಲಾಡಳಿತ, ಪ್ರಕೃತಿ ವಿಕೋಪದ ತೀವ್ರತೆಯ ಬಗ್ಗೆ ಮಾಹಿತಿ ಪಡೆದರು. ಶುಕ್ರವಾರ ದಿಂದ ಬೆಳೆ ಹಾನಿ ಸಮೀಕ್ಷೆಯನ್ನು ನೂತನ ತಂತ್ರಜ್ಞಾನದ ಮೂಲಕ ನಡೆಸಿ ನಂತರ ಪರಿಹಾರವನ್ನು ವಿತರಣೆ ಮಾಡಲಾಗುವು ದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮಡಿಕೇರಿ-ಮಂಗಳೂರು ರಸ್ತೆ ಗುಡ್ಡ ಕುಸಿತದಿಂದ ಸಂಪರ್ಕವನ್ನು ಕಳೆದು…
ಇಂದಿನಿಂದ ಕೊಡಗಿನಲ್ಲಿ ಶಾಲಾ-ಕಾಲೇಜು ಪುನರಾರಂಭ
August 23, 2018ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಪ್ರಮಾಣ ತಗ್ಗಿದ್ದು, ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಅತಿವೃಷ್ಟಿ ಯಿಂದ ತೀವ್ರ ಹಾನಿಗೀಡಾಗಿರುವ ಪ್ರದೇಶಗಳ 61 ಶಾಲೆಗಳನ್ನು ಹೊರತುಪಡಿಸಿ, ಉಳಿದ ಶಾಲಾ-ಕಾಲೇಜು ಪುನರಾರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್, ಜಿಲ್ಲಾಧಿ ಕಾರಿ ಪಿ.ಐ.ಶ್ರೀವಿದ್ಯಾ ಉಪಸ್ಥಿತಿಯಲ್ಲಿ ನಡೆದ ಸಭೆ ಯಲ್ಲಿ ಈ…
ನಾಳೆ ಕೊಡಗಿಗೆ ಕೇಂದ್ರ ರಕ್ಷಣಾ ಸಚಿವರ ಭೇಟಿ
August 23, 2018ಮಡಿಕೇರಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 24 ರಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಅಂದು ಬೆಳಿಗ್ಗೆ 9 ಗಂಟೆಗೆ ಹಾರಂಗಿ ಹೆಲಿಪ್ಯಾಡ್‍ಗೆ ಆಗಮಿಸಲಿದ್ದಾರೆ. ನಂತರ ತೀವ್ರ ಮಳೆಹಾನಿಗೆ ಒಳಗಾಗಿರುವ ಪ್ರದೇಶ ಗಳಾದ ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10.15 ಗಂಟೆಗೆ ಮಾದಾಪುರದ ಬರೇ ಕುಸಿತ ಪ್ರದೇಶ, ನಂತರ ಬೆಳಿಗ್ಗೆ 11.15 ಗಂಟೆಗೆ ನಗರದ ಮೈತ್ರಿ ಭವನಕ್ಕೆ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ…
ಸಂತ್ರಸ್ತರ ಶಿಬಿರಗಳು ಸಾರುತ್ತಿವೆ ಸರ್ವಧರ್ಮ ಸಾಮರಸ್ಯ
August 23, 2018ಸುಂಟಿಕೊಪ್ಪ: ಕೊಡಗು ಜಿಲ್ಲೆಯಲ್ಲಿ ಸುರಿದ ಮಹಾಮಳೆಯಿಂದಾಗಿ ಹತ್ತಾರು ಜನ, ನೂರಾರು ಜಾನುವಾರುಗಳು, ಸಾವಿರಾರು ಕಾಡುಪ್ರಾಣಿಗಳು ಬಲಿಯಾಗಿವೆ. ಸಾವಿರಾರು ಎಕರೆ ಭೂಮಿ ಕುಸಿದು, ಕಾಫಿ ಬೆಳೆಗಾರರ ಬದುಕು ಬೀದಿಗೆ ಬಿದ್ದಿದೆ. ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಕೂಲಿ ಕಾರ್ಮಿಕರು ದುಡಿಮೆಯಿಲ್ಲದೆ ಪರಿತಪಿಸುತ್ತಿದ್ದಾರೆ. ಸುಮಾರು 30 ಗ್ರಾಮಸ್ಥರ ಬದುಕು ನೆರೆಯ ಕೆಸರಲ್ಲಿ ಹೂತು ಹೋಗಿದೆ. ಆದರೆ ಇಲ್ಲಿನ ಜನರ ಮಾನವತೆ ಬಲಿಯಾಗಿಲ್ಲ. ಸಾಮರಸ್ಯ ಕದಡಿಲ್ಲ. ನೊಂದವರ ನೆರವಿಗಾಗಿ ಇಲ್ಲಿ ಎಲ್ಲರೂ ಒಂದಾಗಿ ದುಡಿಯುತ್ತಿದ್ದಾರೆ ಎಂಬುದಕ್ಕೆ ಸುಂಟಿಕೊಪ್ಪ ಜನರೇ ಸಾಕ್ಷಿ….
ಮೈಸೂರು ನಾಗರಿಕರ ವೇದಿಕೆಯಿಂದ ಕೊಡಗಿನ ನೆರೆ ಸಂತ್ರಸ್ತರ ನೈಜ ಸ್ಥಿತಿ ಅವಲೋಕನ
August 23, 2018ಮೈಸೂರು: ಪ್ರಕೃತಿ ವಿಕೋಪ ದಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿ ರುವ `ಮೈಸೂರು ನಾಗರಿಕ ವೇದಿಕೆ’ ತಂಡ ಇಂದು ಕೊಡಗಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೈಜ ಪರಿಸ್ಥಿತಿಯ ಅವಲೋಕನ ನಡೆಸಿತು. ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ, ವೇದಿಕೆಯ ಕಾರ್ಯದರ್ಶಿ ಮಂಜುನಾಥ್, ಜೆಎಸ್‍ಎಸ್ ಸಂಸ್ಥೆಗಳ ಕಾರ್ಯ ನಿರ್ವಾ ಹಕ ನಿರ್ದೇಶಕ ಸಿ.ಜೆ.ಬೆಟಸೂರ ಮಠ್, ಉದ್ಯಮಿಗಳಾದ ಗಿರಿ, ಜಗದೀಶ್ ಬಾಬು, ನರೇಂದ್ರ ಹಾಗೂ ಸುಮಾರು…
ಸಂತ್ರಸ್ತರಿಗೆ ನೆರವಾಗುವುದರಲ್ಲೂ `ರಾಜಕೀಯ’
August 22, 2018ಮಾದಾಪುರ: ಕೊಡಗು ಜಿಲ್ಲೆ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಸತ್ಕಾರ್ಯದಲ್ಲೂ ಇದೀಗ ರಾಜಕೀಯ ಮೇಲಾಟ ಆರಂಭವಾಗಿದ್ದು, ಈವರೆಗೆ ಪಕ್ಷಾತೀತ, ಜಾತ್ಯಾತೀತ ವಾಗಿ ಸಂತ್ರಸ್ತರ ನೆರವಿಗೆ ನಿಂತಿದ್ದವರು ಹಿಂದೆ ಸರಿಯುವ ದುಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆಯಿಂದ ಎಲ್ಲವನ್ನೂ ಕಳೆದುಕೊಂಡು ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರ ನೆರವಿಗೆ ಇಡೀ ರಾಜ್ಯವೇ ಮುಂದಾಗಿದೆ. ಮೈಸೂರು, ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ ಹೀಗೆ ಎಲ್ಲಾ ಜಿಲ್ಲೆಗಳಿಂದ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳ ಮಹಾಪೂರವೇ ಹರಿದು ಬರುತ್ತಿದೆ. ಈವರೆಗೆ ದಾನಿಗಳು ನೀಡಿದ ವಸ್ತುಗಳನ್ನು ದುರುಪಯೋಗವಾಗದಂತೆ ಸ್ಥಳೀಯ ಸ್ವಯಂ ಸೇವಕರು…
ಪರಿಹಾರ ನಿಧಿಗೆ ಚೆಕ್, ಡಿಡಿ ಮಾತ್ರ ನೀಡಿ: ಸಿಎಂ
August 22, 2018ಬೆಂಗಳೂರು: ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸಂತ್ರಸ್ತರ ನೆರವಿಗಾಗಿ ನೀಡುವ ದೇಣಿಗೆಯನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿ ಹೆಸರಿನಡಿಯಲ್ಲೇ ನೀಡಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಮನವಿ ಮಾಡಿದ್ದಾರೆ. ಪರಿಹಾರವನ್ನು ಹಣದ ರೂಪದಲ್ಲಿ ನೀಡಿದರೆ ದುರುಪಯೋಗ ಆಗುವ ಸಾಧ್ಯತೆ ಇದೆ. ಆದ್ದರಿಂದ ಚೆಕ್ ಹಾಗೂ ಡಿಡಿ ಮೂಲಕವಷ್ಟೇ ಪರಿ ಹಾರ ಮೊತ್ತ ತಲುಪಿಸಿ. ಯಾವುದೇ ಸಂದರ್ಭದಲ್ಲೂ ನೀವು ನೀಡುವ ಚೆಕ್‍ಗಳನ್ನು ನಮ್ಮ ಕಾರ್ಯಾಲಯ ಪಡೆದುಕೊಳ್ಳಲಿದೆ ಹಾಗೂ ಈ ಹಣ ಎಲ್ಲಿಯೂ ದುರುಪಯೋಗ ಆಗದಂತೆ ಭರವಸೆ ಇತ್ತಿದ್ದಾರೆ.
ತಿಂಗಳ ಹಿಂದೆ ಸಂಭವಿಸಿದ ಭೂಕಂಪನವೇ ಕೊಡಗಿನ ಭೂಕುಸಿತಕ್ಕೆ ಕಾರಣವಿರಬಹುದು
August 22, 2018ಸುಂಟಿಕೊಪ್ಪ: ಮಳೆಯಿಂದ ಕೊಡಗಿನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭೂಕುಸಿತವಾಗಲು ತಿಂಗಳ ಹಿಂದೆ ಸಂಭವಿಸಿದ್ದ ಲಘು ಭೂಕಂಪನವೇ ಕಾರಣವಾಗಿರಬಹುದು ಎಂದು ಸಂಸದ ಪ್ರತಾಪ್‍ಸಿಂಹ ಅಭಿಪ್ರಾಯಿಸಿದ್ದಾರೆ. ಮಾದಾಪುರ ಸೇರಿದಂತೆ ನೆರೆ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಾಚರಣೆ ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಮಳೆಯಿಂದಾಗಿ ಮಡಿಕೇರಿ ಹಾಗೂ ಸೋಮವಾರ ಪೇಟೆ ತಾಲೂಕಿನ ಒಟ್ಟು ನಾಲ್ಕು ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಅಪಾರ ನಷ್ಟವಾಗಿದೆ. ಸುಮಾರು 2 ಸಾವಿರ ಎಕರೆಗಿಂತ ಹೆಚ್ಚು ಭೂಮಿ ಕುಸಿದಿದೆ. 5 ಸಾವಿರಕ್ಕಿಂತ ಹೆಚ್ಚು ಮನೆಗಳು ನೆಲ ಸಮವಾಗಿವೆ….
ಜನರಲ್ಲಿ ಮನೋಸ್ಥೈರ್ಯ ತುಂಬುವ ಕಾರ್ಯ ಆರಂಭ
August 22, 2018ಮಡಿಕೇರಿ: ಭೂ ಕುಸಿತ ಹಾಗೂ ಪ್ರವಾಹ, ಮನೆ-ಕಾಫಿ ತೋಟಗಳು ಕೊಚ್ಚಿಕೊಂಡು ಹೋಗಿರುವ ಭಯಾನಕ ದೃಶ್ಯಗಳನ್ನು ಕಂಡು ಆಘಾತಗೊಂಡಿರುವ ನಿರಾಶ್ರಿತರಿಗೆ ಮಾನಸಿಕ ಸ್ಥೈರ್ಯ ತುಂಬಿ ಬದುಕಿನಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಮಾನಸಿಕ ತಜ್ಞರಿಂದ ಕೌನ್ಸಿಲಿಂಗ್ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಮಾನಸಿಕ ತಜ್ಞ ವೈದ್ಯ ಡಾ.ರೂಪೇಶ್ ಗೋಪಾಲ್ ಅವರು ಜಿಲ್ಲೆಯ ವೈದ್ಯರು, ಮಾನಸಿಕ ತಜ್ಞರು ಹಾಗೂ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ತರಬೇತಿ ಏರ್ಪಡಿಸಿದ್ದರು. ಡಾ.ರೂಪೇಶ್‍ಗೋಪಾಲ್ ಅವರು ಭಾರತೀಯ…
ಕೊಡಗಿನಲ್ಲಿ 4 ಸಾವಿರ ಮಂದಿ ನಾಪತ್ತೆ
August 22, 2018ಮಡಿಕೇರಿ: ಕೊಡಗಿನಲ್ಲಿ ಸಂಭವಿಸಿರುವ ಭೂ ಕುಸಿತ ಹಾಗೂ ಪ್ರವಾಹದಿಂದಾಗಿ ಸುಮಾರು 4 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ನೀಡಿದೆ ಎನ್ನಲಾಗಿದೆ. ಗುಡ್ಡಗಳು ಕುಸಿದು, ಪ್ರವಾಹ ಬಂದ ವೇಳೆ ಬಹುತೇಕರು ರಕ್ಷಣೆಗಾಗಿ ಎತ್ತರವಾದ ಬೆಟ್ಟದ ಮೇಲೆ ಹತ್ತಿದ್ದರು. ಮತ್ತೆ ಹಲವರು ತಮಗೆ ತೋಚಿದ ದಿಕ್ಕಿನಲ್ಲಿ ಸಾಗಿ ಪ್ರವಾಹದ ಹೊಡೆತದಿಂದ ತಪ್ಪಿಸಿಕೊಂಡಿದ್ದರು. ಅವರಲ್ಲಿ 4 ಸಾವಿರ ಮಂದಿಯ ವಿವರಗಳು ಲಭ್ಯವಾಗುತ್ತಿಲ್ಲ. ಅವರುಗಳು ಸುರಕ್ಷಿತವಾಗಿ ಹೊರ ಊರುಗಳಲ್ಲಿರುವ ತಮ್ಮ ಸಂಬಂಧಿಕರ ಮನೆ ಸೇರಿರಲೂಬಹುದು ಎಂದು ಅಂದಾಜಿಸಲಾಗಿದೆ….