ಪರಿಹಾರ ನಿಧಿಗೆ ಚೆಕ್, ಡಿಡಿ ಮಾತ್ರ ನೀಡಿ: ಸಿಎಂ
ಮೈಸೂರು

ಪರಿಹಾರ ನಿಧಿಗೆ ಚೆಕ್, ಡಿಡಿ ಮಾತ್ರ ನೀಡಿ: ಸಿಎಂ

August 22, 2018

ಬೆಂಗಳೂರು: ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಸಂತ್ರಸ್ತರ ನೆರವಿಗಾಗಿ ನೀಡುವ ದೇಣಿಗೆಯನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿ ಹೆಸರಿನಡಿಯಲ್ಲೇ ನೀಡಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಮನವಿ ಮಾಡಿದ್ದಾರೆ.

ಪರಿಹಾರವನ್ನು ಹಣದ ರೂಪದಲ್ಲಿ ನೀಡಿದರೆ ದುರುಪಯೋಗ ಆಗುವ ಸಾಧ್ಯತೆ ಇದೆ. ಆದ್ದರಿಂದ ಚೆಕ್ ಹಾಗೂ ಡಿಡಿ ಮೂಲಕವಷ್ಟೇ ಪರಿ ಹಾರ ಮೊತ್ತ ತಲುಪಿಸಿ. ಯಾವುದೇ ಸಂದರ್ಭದಲ್ಲೂ ನೀವು ನೀಡುವ ಚೆಕ್‍ಗಳನ್ನು ನಮ್ಮ ಕಾರ್ಯಾಲಯ ಪಡೆದುಕೊಳ್ಳಲಿದೆ ಹಾಗೂ ಈ ಹಣ ಎಲ್ಲಿಯೂ ದುರುಪಯೋಗ ಆಗದಂತೆ ಭರವಸೆ ಇತ್ತಿದ್ದಾರೆ.

Translate »