ನಾಳೆ ಕೊಡಗಿಗೆ ಕೇಂದ್ರ ರಕ್ಷಣಾ ಸಚಿವರ ಭೇಟಿ
ಮೈಸೂರು

ನಾಳೆ ಕೊಡಗಿಗೆ ಕೇಂದ್ರ ರಕ್ಷಣಾ ಸಚಿವರ ಭೇಟಿ

August 23, 2018

ಮಡಿಕೇರಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 24 ರಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.

ಅಂದು ಬೆಳಿಗ್ಗೆ 9 ಗಂಟೆಗೆ ಹಾರಂಗಿ ಹೆಲಿಪ್ಯಾಡ್‍ಗೆ ಆಗಮಿಸಲಿದ್ದಾರೆ. ನಂತರ ತೀವ್ರ ಮಳೆಹಾನಿಗೆ ಒಳಗಾಗಿರುವ ಪ್ರದೇಶ ಗಳಾದ ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10.15 ಗಂಟೆಗೆ ಮಾದಾಪುರದ ಬರೇ ಕುಸಿತ ಪ್ರದೇಶ, ನಂತರ ಬೆಳಿಗ್ಗೆ 11.15 ಗಂಟೆಗೆ ನಗರದ ಮೈತ್ರಿ ಭವನಕ್ಕೆ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

Translate »