Tag: Lok Sabha Elections 2019

ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ: ಶಾಸಕ ನಾಗೇಂದ್ರ ಅಸಮಾಧಾನ
ಮೈಸೂರು

ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ: ಶಾಸಕ ನಾಗೇಂದ್ರ ಅಸಮಾಧಾನ

April 19, 2019

ಮೈಸೂರು: ಮತದಾನ ಗುರುತಿನ ಚೀಟಿ ಇದ್ದರೂ ಸಾಕಷ್ಟು ಮತದಾರರನ್ನು ಪಟ್ಟಿಯಲ್ಲಿ ಕೈ ಬಿಡಲಾಗಿದೆ. ಇದಕ್ಕೆ ಚುನಾವಣಾ ಅಧಿಕಾರಿಗಳ ಲೋಪವೇ ಕಾರಣ ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು. ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿ ಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಸಾಕಷ್ಟು ಮತದಾರರು ಈ ಸಂಬಂಧ ನನಗೆ ಕರೆ ಮಾಡಿ ತಿಳಿಸಿದ್ದಾರೆ. ಅಲ್ಲದೆ ವಿದೇಶದಿಂದ ನನ್ನ ಸ್ನೇಹಿತರು ಮತದಾನ ಮಾಡಲು ಬಂದಿದ್ದರು. ಅವರ ಹೆಸರನ್ನು…

ಸ್ಕೇಟಿಂಗ್ ಮೂಲಕ ಮತದಾನ ಜಾಗೃತಿ
ಮೈಸೂರು

ಸ್ಕೇಟಿಂಗ್ ಮೂಲಕ ಮತದಾನ ಜಾಗೃತಿ

April 19, 2019

ಮೈಸೂರು: ಕಡ್ಡಾಯ ಮತದಾನ ಮಾಡುವ ಕುರಿತು ಯುವಕರು ಸ್ಕೇಟಿಂಗ್ ಮೂಲಕ ಮೈಸೂರಲ್ಲಿ ವಿನೂತನ ಶೈಲಿಯಲ್ಲಿ ಮತದಾನ ಜಾಗೃತಿ ಮೂಡಿಸಿದರು. ಮತದಾನ ಜಾಗೃತಿ ಕುರಿತ ಟೀ ಶರ್ಟ್ ಹಾಗೂ ಸ್ಕೇಟಿಂಗ್ ತೊಟ್ಟ ಯುವಕರು, ಸಿದ್ದಾರ್ಥ ಬಡಾವಣೆ, ನಜರ್‍ಬಾದ್, ಪುರಭವನ, ಮೆಡಿಕಲ್ ಕಾಲೇಜು, ಅರಸು ಬೋರ್ಡಿಂಗ್ ಸ್ಕೂಲ್, ಜಿಲ್ಲಾಧಿಕಾರಿ ಕಚೇರಿ, ಶಿವರಾಂಪೇಟೆ, ಡೈರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಕೇಟಿಂಗ್ ನಡೆಸಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಮತದಾನ ನಮ್ಮ ಹಕ್ಕು. ಹಾಗಾಗಿ ನಮ್ಮ ತಂಡದಿಂದ ಪ್ರತಿಯೊಬ್ಬರೂ ತಪ್ಪದೇ ಮತ ದಾನ…

ಕೊಡಗಿನ ಹಿರಿಯ ದಂಪತಿ ಉತ್ಸಾಹ
ಮೈಸೂರು

ಕೊಡಗಿನ ಹಿರಿಯ ದಂಪತಿ ಉತ್ಸಾಹ

April 19, 2019

ಮೈಸೂರು: ಸುಡು ಬಿಸಿಲನ್ನು ಲೆಕ್ಕಿಸದೆ 86ರ ಪ್ರಾಯದ ಕೊಡಗಿನ ದಂಪತಿ ಮತದಾನ ಮಾಡುವ ಮೂಲಕ ಮತದಾನದ ಮಹತ್ವ ಸಾರಿದರು. ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ನಿರ್ಮಲಾ ಶಾಲೆಯ ಮತಗಟ್ಟೆ ಸಂಖ್ಯೆ-84ಕ್ಕೆ ಆಗಮಿಸಿದ ಕೊಡಗು ಮೂಲದ ವಿವಿ ಮೊಹಲ್ಲಾ ನಿವಾಸಿಗಳಾದ ಎಂ.ಎಂ. ನಂಜಪ್ಪ (86) ಹಾಗೂ ಇವರ ಪತ್ನಿ ಚಿಮ್ಮಿ ನಂಜಪ್ಪ (81) ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಸಾಥ್ ನೀಡಿದರು. ಇದೇ ವೇಳೆ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ನಾವೇ ಮತ ಹಾಕದಿದ್ದರೇ ಮತ್ಯಾರು ಮತ ನೀಡುತ್ತಾರೆ….

ಮತದಾನ ಮಾಡಿದವರಿಗೆ ಉಚಿತ ದಂತ ಚಿಕಿತ್ಸಾ ಭಾಗ್ಯ
ಮೈಸೂರು

ಮತದಾನ ಮಾಡಿದವರಿಗೆ ಉಚಿತ ದಂತ ಚಿಕಿತ್ಸಾ ಭಾಗ್ಯ

April 19, 2019

ಮೈಸೂರು: ಮತದಾನ ಪ್ರಮಾಣ ಹೆಚ್ಚಳ ಮಾಡುವ ಜಿಲ್ಲಾಡಳಿ ತದ ಪ್ರಯತ್ನಕ್ಕೆ ಹಲವು ಸಂಘ ಸಂಸ್ಥೆಗಳು ಸಾಥ್ ನೀಡಿದ್ದವು. ಅನಿ ಫೌಂಡೇಷನ್ `ಓಟ್ ಫಾರ್ ಬೆಟರ್ ಇಂಡಿಯಾ’ ಶೀರ್ಷಿಕೆಯಡಿ ಮತದಾನ ಮಾಡಿದವರಿಗೆ ಉಚಿತ ದಂತ ಚಿಕಿತ್ಸೆ ನೀಡುವ ಮೂಲಕ ಮತದಾನ ಜಾಗೃತಿಗೆ ಕೈ ಜೋಡಿಸಿತು. ಮತದಾನದ ಪ್ರಮಾಣ ಹೆಚ್ಚಿಸಲು ಉಚಿತ ದಂತ ಚಿಕಿತ್ಸೆ ಅಭಿಯಾನ ನಡೆಸುತ್ತಿದ್ದು, ಈಗಾಗಲೇ 85 ಮಂದಿ ಹೆಸರನ್ನು ನೋಂದಾಯಿಸಿದ್ದಾರೆ. ಅದರಲ್ಲಿ 35 ಮಂದಿಗೆ ಉಚಿತ ದಂತ ಚಿಕಿತ್ಸೆ ನೀಡಲಾಗಿದ್ದು, ಇನ್ನೂ 50 ಮಂದಿಗೆ ದಂತ…

ಮತಯಂತ್ರವಿದ್ದ ಬಸ್‍ನಲ್ಲಿ ಬೆಂಕಿ
ಮೈಸೂರು

ಮತಯಂತ್ರವಿದ್ದ ಬಸ್‍ನಲ್ಲಿ ಬೆಂಕಿ

April 19, 2019

ಚಾಲಕನ ಜಾಗೃತಿ: ತಪ್ಪಿದ ಅನಾಹುತ ಮೈಸೂರು: ಇವಿಎಂ ಮತಯಂತ್ರಗಳನ್ನು ತರುತ್ತಿದ್ದ ಬಸ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಗೌರಿಶಂಕರ ನಗರದಲ್ಲಿ ಗುರುವಾರ ಸಂಜೆ ನಡೆದಿದೆ. ಮತಗಟ್ಟೆ ಸಂಖ್ಯೆ 242 ಮತ್ತು 245ರ ಮತಯಂತ್ರಗಳನ್ನು ಮಂಗಳವಾರ ಸಂಜೆ ಮಹಾರಾಣಿ ಕಾಲೇಜಿಗೆ ತರುತ್ತಿದ್ದಾಗ ಇದ್ದಕ್ಕಿದ್ದಂತೆ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ವೈಯರ್‍ಗಳನ್ನು ಕತ್ತರಿಸಿ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ. ವಿಷಯ ತಿಳಿದು ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಬೇರೊಂದು ಬಸ್‍ನ್ನು ತರಿಸಿ ಮತಯಂತ್ರಗಳನ್ನು ಸಾಗಿಸಿದರು.

ಮತಗಟ್ಟೆ, ಹೆಸರು ಗೊಂದಲ
ಮೈಸೂರು

ಮತಗಟ್ಟೆ, ಹೆಸರು ಗೊಂದಲ

April 19, 2019

ಮೈಸೂರು: ಎಂದಿನಂತೆ ಮತದಾರರ ಪಟ್ಟಿಯಲ್ಲಿ ಹೆಸರು ಮತ್ತು ಮತಗಟ್ಟೆಯ ಗೊಂದಲ ಮೈಸೂರು -ಕೊಡಗು ಲೋಕಸಭಾ ಚುನಾವಣೆಯಲ್ಲೂ ಕಂಡು ಬಂದಿತು. ಕೆ.ಆರ್. ಕ್ಷೇತ್ರದಲ್ಲಿ ಕೆಲವು ಮತದಾರ ಹೆಸರು ಮತದಾರರ ಪಟ್ಟಿಯಲ್ಲಿಲ್ಲದೆ ಪರ ದಾಡುವಂತಾಯಿತು. ಮತದಾನ ಮಾಡಲು ಆಗಮಿಸಿದ್ದ 79ವರ್ಷದ ವೃದ್ಧೆ ಶೀಲಾ ಶಾಂಭವಮೂರ್ತಿ ಅವರ ಹೆಸರು ಪಟ್ಟಿಯಲ್ಲಿರಲಿಲ್ಲ. ಆದರೆ, ಎಲ್ಲಾ ದಾಖಲೆಗಳಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಅವಕಾಶ ನೀಡದೆ ವಾಪಸ್ ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದೇ ರೀತಿ ಹಲವರು ತಮ್ಮ ಹೆಸರು…

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಮಂದಗತಿ, ಬಳಿಕ ಬಿರುಸಿನ ಶೇ.71.75 ಮತದಾನ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಮಂದಗತಿ, ಬಳಿಕ ಬಿರುಸಿನ ಶೇ.71.75 ಮತದಾನ

April 19, 2019

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಪ್ರತಿಷ್ಠೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಶೇ.71.75ರಷ್ಟು ಮತದಾನ ದಾಖಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಪ್ರತಿಷ್ಠೆಯ ಕ್ಷೇತ್ರ. ಇಲ್ಲಿ ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಅಂದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು ಕಂಡಿದ್ದರು. ಜಿ.ಟಿ.ದೇವೇಗೌಡ ವಿಜಯ ಸಾಧಿ ಸಿದ್ದರು. ಅಂದಿನಿಂದಲೂ ಸಿದ್ದರಾಮಯ್ಯ ಮತ್ತು ಜಿ.ಟಿ. ದೇವೇಗೌಡರ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಮೈತ್ರಿ ಸರ್ಕಾರದಲ್ಲಿ ಪಾಲುದಾರರಾಗಿರುವ…

ಮೊದಲ ಮತದಾನದ ಖುಷಿಯಲ್ಲಿ ಅವಳಿ ಸಹೋದರಿಯರು
ಮೈಸೂರು

ಮೊದಲ ಮತದಾನದ ಖುಷಿಯಲ್ಲಿ ಅವಳಿ ಸಹೋದರಿಯರು

April 19, 2019

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಿನಕಲ್‍ನಲ್ಲಿ ಅವಳಿ-ಜವಳಿ ಸಹೋದರಿಯರಾದ ನಿಸರ್ಗ ಮತ್ತು ವಿಸ್ಮಯ ಇದೇ ಮೊದಲ ಬಾರಿಗೆ ಮತದಾನ ಮಾಡಿದರು. ಗ್ರಾಮದ ವಿಜಯಾ ಸ್ಕೂಲ್‍ನಲ್ಲಿ ಮತದಾನ ಮಾಡಿದ ಅವರು ಕೈ ಬೆರ ಳಿಗೆ ಶಾಯಿ ಹಾಕಿಸಿಕೊಂಡು ಮೊದಲ ಬಾರಿ ಮತದಾನ ಮಾಡಿದ ಖುಷಿ ಅವರಲ್ಲಿತ್ತು. ಈ ಇಬ್ಬರೂ ಅವಳಿ ಸಹೋದರಿಯರು ಹಿನಕಲ್‍ನ ಹೋಟೆಲ್ ವ್ಯಾಪಾರಿ ಕುಶಾಲಪ್ಪ-ದಾಕ್ಷಾಯಿಣಿ ದಂಪತಿ ಪುತ್ರಿಯರು. ಮೈಸೂರಿನ ಎಸ್‍ಬಿಆರ್‍ಆರ್ ಮಹಾಜನ ಪಿಜಿ ಸೆಂಟರ್‍ನ ವಿದ್ಯಾರ್ಥಿನಿಯರು.

ಭೇರ್ಯ: ವಿಶೇಷ ಮತಗಟ್ಟೆಗಳಲ್ಲಿ ಮತದಾರರಿಗೆ ಹಣ್ಣಿನ ಸಸಿ, ಮಜ್ಜಿಗೆ ವಿತರಣೆ
ಮೈಸೂರು

ಭೇರ್ಯ: ವಿಶೇಷ ಮತಗಟ್ಟೆಗಳಲ್ಲಿ ಮತದಾರರಿಗೆ ಹಣ್ಣಿನ ಸಸಿ, ಮಜ್ಜಿಗೆ ವಿತರಣೆ

April 19, 2019

ವೈಯಕ್ತಿಕ ಸ್ವಚ್ಛತೆ ಜಾಗೃತಿಗಾಗಿ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಭೇರ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕೆ.ಆರ್.ನಗರ ತಾಲೂಕಿನ ಚಿಕ್ಕಭೇರ್ಯ ಹಾಗೂ ಹೆಬ್ಸೂರು ಗ್ರಾಮದ ಮತಗಟ್ಟೆಯಲ್ಲಿ ವಿವಿ ಪ್ಯಾಟ್ ದೋಷದಿಂದಾಗಿ ಮತದಾನ ಕೆಲಕಾಲ ಸ್ಥಗಿತಗೊಂಡಿದ್ದನ್ನು ಹೊರತುಪಡಿಸಿ ಉಳಿದಂತೆ ಭೇರ್ಯದಲ್ಲಿ ಶಾಂತಿಯುತ ಮತದಾನವಾಗಿದೆ. ಮತಕೇಂದ್ರಗಳ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲ ಮತಗಟ್ಟೆಗಳಲ್ಲಿ ವಿಶೇಷಚೇತನರು, ವಯೋವೃದ್ಧರನ್ನು ಗಾಲಿ ಕುರ್ಚಿಯಲ್ಲಿ ಸ್ಥಳೀಯ ಗ್ರಾ.ಪಂ. ಸಿಬ್ಬಂದಿ ಮತಗಟ್ಟೆ ಕರೆತಂದು ಮತದಾನ ಮಾಡಿಸಿದರು. ಕೆಲವು ಮತಗಟ್ಟೆಗಳಿಗೆ ಭೇಟಿ…

ಇಂದು ಮತದಾನ
ಮೈಸೂರು

ಇಂದು ಮತದಾನ

April 18, 2019

ಮೈಸೂರು: ಮೈಸೂರು-ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರ ದಲ್ಲಿ ನಾಳೆ(ಏ.18) ಮೊದಲ ಹಂತದ ಚುನಾ ವಣೆ ನಡೆಯಲಿದ್ದು, ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಐದು ಜಿಲ್ಲೆಗಳ ಜಿಲ್ಲಾಡಳಿತ ಮತದಾನಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಮತ ದಾರರಿಗೆ ಮತಗಟ್ಟೆಗಳಲ್ಲಿ ಸಕಲ ಸೌಲಭ್ಯ ಒದ ಗಿಸಿವೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್‍ಸಿಂಹ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಂಸದ ಸಿ.ಹೆಚ್….

1 3 4 5 6 7 12
Translate »