ಮತಯಂತ್ರವಿದ್ದ ಬಸ್‍ನಲ್ಲಿ ಬೆಂಕಿ
ಮೈಸೂರು

ಮತಯಂತ್ರವಿದ್ದ ಬಸ್‍ನಲ್ಲಿ ಬೆಂಕಿ

April 19, 2019

ಚಾಲಕನ ಜಾಗೃತಿ: ತಪ್ಪಿದ ಅನಾಹುತ

ಮೈಸೂರು: ಇವಿಎಂ ಮತಯಂತ್ರಗಳನ್ನು ತರುತ್ತಿದ್ದ ಬಸ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಗೌರಿಶಂಕರ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.

ಮತಗಟ್ಟೆ ಸಂಖ್ಯೆ 242 ಮತ್ತು 245ರ ಮತಯಂತ್ರಗಳನ್ನು ಮಂಗಳವಾರ ಸಂಜೆ ಮಹಾರಾಣಿ ಕಾಲೇಜಿಗೆ ತರುತ್ತಿದ್ದಾಗ ಇದ್ದಕ್ಕಿದ್ದಂತೆ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಚಾಲಕ ವೈಯರ್‍ಗಳನ್ನು ಕತ್ತರಿಸಿ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ. ವಿಷಯ ತಿಳಿದು ಅಧಿಕಾರಿಗಳು ಸ್ಥಳಕ್ಕಾಗಮಿಸಿ, ಬೇರೊಂದು ಬಸ್‍ನ್ನು ತರಿಸಿ ಮತಯಂತ್ರಗಳನ್ನು ಸಾಗಿಸಿದರು.

Translate »