ಮತದಾನ ಮಾಡಿದವರಿಗೆ ಉಚಿತ ದಂತ ಚಿಕಿತ್ಸಾ ಭಾಗ್ಯ
ಮೈಸೂರು

ಮತದಾನ ಮಾಡಿದವರಿಗೆ ಉಚಿತ ದಂತ ಚಿಕಿತ್ಸಾ ಭಾಗ್ಯ

April 19, 2019

ಮೈಸೂರು: ಮತದಾನ ಪ್ರಮಾಣ ಹೆಚ್ಚಳ ಮಾಡುವ ಜಿಲ್ಲಾಡಳಿ ತದ ಪ್ರಯತ್ನಕ್ಕೆ ಹಲವು ಸಂಘ ಸಂಸ್ಥೆಗಳು ಸಾಥ್ ನೀಡಿದ್ದವು.

ಅನಿ ಫೌಂಡೇಷನ್ `ಓಟ್ ಫಾರ್ ಬೆಟರ್ ಇಂಡಿಯಾ’ ಶೀರ್ಷಿಕೆಯಡಿ ಮತದಾನ ಮಾಡಿದವರಿಗೆ ಉಚಿತ ದಂತ ಚಿಕಿತ್ಸೆ ನೀಡುವ ಮೂಲಕ ಮತದಾನ ಜಾಗೃತಿಗೆ ಕೈ ಜೋಡಿಸಿತು.

ಮತದಾನದ ಪ್ರಮಾಣ ಹೆಚ್ಚಿಸಲು ಉಚಿತ ದಂತ ಚಿಕಿತ್ಸೆ ಅಭಿಯಾನ ನಡೆಸುತ್ತಿದ್ದು, ಈಗಾಗಲೇ 85 ಮಂದಿ ಹೆಸರನ್ನು ನೋಂದಾಯಿಸಿದ್ದಾರೆ. ಅದರಲ್ಲಿ 35 ಮಂದಿಗೆ ಉಚಿತ ದಂತ ಚಿಕಿತ್ಸೆ ನೀಡಲಾಗಿದ್ದು, ಇನ್ನೂ 50 ಮಂದಿಗೆ ದಂತ ಚಿಕಿತ್ಸೆ ನೀಡಬೇಕಿದೆ.

ಮತದಾನ ಮಾಡಿದ ಬೆರಳಿನಲ್ಲಿ ಶಾಯಿ ಎಷ್ಟು ದಿನ ಇರುತ್ತದೋ ಅಲ್ಲಿವರೆಗೂ ಉಚಿತ ದಂತ ಚಿಕಿತ್ಸೆ ಸೌಲಭ್ಯ ಪಡೆಯಬಹುದು. ಮೈಸೂರಿನ ಹೆಬ್ಬಾಳದ ಸಂಕ್ರಾಂತಿ ವೃತ್ತದಲ್ಲಿರುವ ಸ್ಮೈಲ್ ಆರ್ಕೀಟೆಕ್ ಡೆಂಟಲ್ ಕ್ಲಿನಿಕ್‍ನಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಕ್ಕಳ ದಂತ ವೈದ್ಯೆ ಡಾ.ನಿಸರ್ಗ ತಿಳಿಸಿದರು. ಈ ಅಭಿಯಾನದಲ್ಲಿ ದಂತ ವೈದ್ಯರಾದ ಡಾ.ಅನುಶ್ರೀ, ಡಾ.ಚೈತ್ರ, ಡಾ.ಪ್ರತಿಭಾ ಪಾಲ್ಗೊಂಡಿದ್ದಾರೆ.

Translate »