Tag: Madikeri

ಮಡಿಕೇರಿಯಲ್ಲಿ ಲಾರಿ ಚಕ್ರ ಕಳವು
ಕೊಡಗು

ಮಡಿಕೇರಿಯಲ್ಲಿ ಲಾರಿ ಚಕ್ರ ಕಳವು

June 17, 2018

ಮಡಿಕೇರಿ: ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಯೊಂದರ 3 ಚಕ್ರಗಳನ್ನು ಕಳವು ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ನಗರದ ಉದ್ಯಮಿಯೊಬ್ಬರು ತಮ್ಮ ಟಿಪ್ಪರ್ ಲಾರಿಗಳನ್ನು ಮಂಗಳೂರು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದರು. ಕಳೆದ 4 ದಿನಗಳು ಹಿಂದೆ ಈ ಲಾರಿಯ 2 ಬ್ಯಾಟರಿಗಳನ್ನು ಕಳ್ಳರು ಕಳವು ಮಾಡಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿತ್ತು. ಆದರೆ ರಾತ್ರಿ ಸುರಿಯುವ ಭಾರಿ ಮಳೆಯ ಲಾಭ ಪಡೆದ ಕಳ್ಳರು, ಸಿ.ಸಿ.ಕ್ಯಾಮರಾವನ್ನು ಕಿತ್ತೆಸೆದು ಲಾರಿಯ ಚಕ್ರಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ. ಮಾತ್ರವಲ್ಲದೆ ಸ್ಥಳದಲ್ಲಿದ್ದ…

ನಿಯಂತ್ರಣ ಕೊಠಡಿ ಪ್ರಾರಂಭ
ಕೊಡಗು

ನಿಯಂತ್ರಣ ಕೊಠಡಿ ಪ್ರಾರಂಭ

June 16, 2018

ಮಡಿಕೇರಿ: ಅತಿವೃಷ್ಟಿ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಹಾಗೂ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗಳು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ ವಿವರ ಇಂತಿದೆ. ಜಿಲ್ಲಾಧಿಕಾರಿ ಕಚೇರಿ-08272-221077, ಜಿಲ್ಲಾ ಅಗ್ನಿಶಾಮಕ ಕಚೇರಿ-101, 08272-229299, ಮಡಿಕೇರಿ ತಾಲ್ಲೂಕು ಕಚೇರಿ-08272-228396, ನಗರಸಭೆ-08272-220111, ಸೋಮವಾರಪೇಟೆ ತಾಲ್ಲೂಕು ಕಚೇರಿ-08276-282045, ವಿರಾಜಪೇಟೆ ತಾಲ್ಲೂಕು ಕಚೇರಿ- 08274-256328 ಈ ದೂರವಾಣಿ ಸಂಖ್ಯೆಗಳಿಗೆ ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಮಸ್ಯೆಗಳಿದ್ದಲ್ಲಿ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಜಿಲ್ಲಾಧಿಕಾರಿ…

ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಮತ್ತೇ ತ್ರಿವೇಣಿ ಸಂಗಮ ಜಲಾವೃತ
ಕೊಡಗು

ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಮತ್ತೇ ತ್ರಿವೇಣಿ ಸಂಗಮ ಜಲಾವೃತ

June 15, 2018

ಮಡಿಕೇರಿ:  ಜಿಲ್ಲೆಯಲ್ಲಿ ಕುಂಭದ್ರೋಣ ಮಳೆಯ ಆರ್ಭಟ ಮುಂದುವರಿದಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಗುರುವಾರ ತ್ರಿವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿತು. ಭಾಗಮಂಡಲ-ಅಯ್ಯಂಗೇರಿ ರಸ್ತೆ ಮೇಲೆ 3 ಅಡಿ ನೀರು ಹರಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಕೇಶ ಮುಂಡನ ಪ್ರದೇಶ ಕೂಡ ನೀರಿನಿಂದ ಆವೃತವಾಗಿದ್ದು, ಸಂಪೂರ್ಣ ಪ್ರದೇಶ ದ್ವೀಪದಂತಾಗಿದೆ.ಜೂನ್ 2ನೇ ವಾರದಲ್ಲಿ ಭಾಗಮಂಡಲ ತ್ರಿವೇಣಿ ಸಂಗಮ 2ನೇ ಬಾರಿಗೆ ಜಲಾವೃತ ವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ವಾಹನ ಸಂಚಾರ ಸಂಪೂರ್ಣ ಬಂದ್ ಆದ ಹಿನ್ನಲೆಯಲ್ಲಿ…

ಜಮ್ಮಾಬಾಣೆಗೆ ಜಾಗಕ್ಕೆ ಕಂದಾಯ ನಿಗದಿ ಸರಿಯಲ್ಲ ಕಂದಾಯ ಇಲಾಖೆ ಆಡಿಟ್ ವರದಿಯಲ್ಲಿ ಉಲ್ಲೇಖ
ಕೊಡಗು

ಜಮ್ಮಾಬಾಣೆಗೆ ಜಾಗಕ್ಕೆ ಕಂದಾಯ ನಿಗದಿ ಸರಿಯಲ್ಲ ಕಂದಾಯ ಇಲಾಖೆ ಆಡಿಟ್ ವರದಿಯಲ್ಲಿ ಉಲ್ಲೇಖ

June 15, 2018

ಮಡಿಕೇರಿ:  ಜಮ್ಮಾ ಜಾಗ ಸಮೀಪವಿರುವ ಜಾಗಗಳನ್ನು ಜಮ್ಮಾ ಬಾಣೆ ಎಂದು ಪರಿಗಣಿಸಿ ಜನತೆಗೆ ನೀಡ ಲಾಗಿದ್ದು, ಅಲ್ಲಿ ಯಾವುದೇ ಕೃಷಿ ಚಟು ವಟಿಕೆಗೆ ಅವಕಾಶವಿಲ್ಲದ್ದರಿಂದ ಅಂತಹ ಜಾಗಗಳಿಗೆ ಕಂದಾಯ ನಿಗದಿ ಮಾಡಿರು ವುದು, ಪರಿವರ್ತನೆಗೆ ಅವಕಾಶ ನೀಡಿರು ವುದು ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಸರಿಯಲ್ಲವೆಂದು ಜಿಲ್ಲಾ ಕಂದಾಯ ಇಲಾಖೆ ಕುರಿತು ಲೆಕ್ಕ ತಪಾಸಣೆ ಮಾಡಿರುವ ತಂಡ ವರದಿ ಸಲ್ಲಿಸಿದೆ. ಮಾರ್ಚ್ ತಿಂಗಳಲ್ಲಿ ಸ್ಥಳೀಯ ತಿಂಗ ಳಲ್ಲಿ ಸ್ಥಳೀಯ ಲೆಕ್ಕ ಪರಿಶೋಧಕರ ಐವರ ತಂಡ 2012 ರಿಂದ…

ವಾರದ ಮಹಾಮಳೆಗೆ ತತ್ತರಿಸಿದ ದಕ್ಷಿಣ ಕೊಡಗು
ಕೊಡಗು

ವಾರದ ಮಹಾಮಳೆಗೆ ತತ್ತರಿಸಿದ ದಕ್ಷಿಣ ಕೊಡಗು

June 14, 2018

30ಕ್ಕೂ ಹೆಚ್ಚು ಕಡೆ ಬರೆ ಕುಸಿತ ಕೇರಳಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಂದ್ ಬರೆ ಕುಸಿತಕ್ಕೆ ಕೇರಳ ಕ್ಲೀನರ್ ಬಲಿ ಜಿಲ್ಲಾಡಳಿತದಿಂದ ಪರಿಶೀಲನೆ; ಪರಿಹಾರ ಕಾರ್ಯ ಆರಂಭ ಮಡಿಕೇರಿ: ಕಳೆದ ಒಂದು ವಾರಗಳಿಂದ ಸುರಿದ ಮಳೆಗೆ ದಕ್ಷಿಣ ಕೊಡಗು ಸಂಪೂರ್ಣ ತತ್ತರಿಸಿ ಹೋಗಿದೆ. ಮಾಕುಟ್ಟ ವಿರಾಜಪೇಟೆ ಮೂಲಕ ಕೇರಳ ಮತ್ತು ಮೈಸೂರಿಗೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ಹೆದ್ದಾರಿ ಸಂಚಾರ ದುಸ್ತರ ಗೊಂಡಿದೆ.ಇದರಿಂದಾಗಿ ವಾಹನ ಮತ್ತು ಪ್ರಯಣಿಕರಿಗೆ ಸಮಸ್ಯೆಯಾಗಿ ಪರಿಣಮಿ ಸಿದೆ. ಮಂಗಳವಾರ ರಾತ್ರಿ ಸುರಿದ ಬಾರಿ…

ರೈಲ್ವೆ ಮಾರ್ಗ ಸರ್ವೇ ಕೇರಳದ ಕುತಂತ್ರ: ಕೊಡಗು ಏಕೀಕರಣ ರಂಗ ಆರೋಪ
ಕೊಡಗು

ರೈಲ್ವೆ ಮಾರ್ಗ ಸರ್ವೇ ಕೇರಳದ ಕುತಂತ್ರ: ಕೊಡಗು ಏಕೀಕರಣ ರಂಗ ಆರೋಪ

June 14, 2018

ಮಡಿಕೇರಿ: ಮೈಸೂರು-ಕೊಡಗು-ಕೇರಳ ರೈಲು ಮಾರ್ಗದ ಸರ್ವೆ ಕಾರ್ಯ ಕೇರಳ ರಾಜ್ಯದ ಕುತಂತ್ರ ವಾಗಿದ್ದು, ಈ ಯೋಜನೆಯಲ್ಲಿ ಯಾವುದೇ ಜೀವಂತಿಕೆ ಇಲ್ಲ ಎಂದು ಕೊಡಗು ಏಕೀಕರಣ ರಂಗ ಅಭಿಪ್ರಾಯಪಟ್ಟಿದೆ. ಅಂದಾಜು 6 ಸಾವಿರ ಕೋಟಿ ವೆಚ್ಚದ ಯೋಜನೆ ಇದಾಗಿದೆಯಾದರೂ, ಕೊಂಕಣ ರೈಲ್ವೆ ಕಾರ್ಪೊರೇಷನ್ ವೆಬ್‍ಸೈಟ್‍ನಲ್ಲೂ ಈ ಕುರಿತು ಯಾವುದೇ ಮಾಹಿತಿ ಪ್ರಕ ಟಗೊಂಡಿಲ್ಲ. ರಾಜ್ಯ ಸರಕಾರದಿಂದಲೂ ಯಾವುದೇ ಪ್ರಸ್ತಾಪಗಳು ಕೇಂದ್ರ ಸರ ಕಾರಕ್ಕೆ ಇಂದಿಗೂ ಸಲ್ಲಿಕೆಯಾಗದೇ ಇರುವ ಸಂದರ್ಭ ಕೊಂಕಣ ರೈಲ್ವೆ ಕಾರ್ಪೊ ರೇಷನ್ ಹೆಸರಲ್ಲಿ ಕೆಲವು ಸಿಬ್ಬಂದಿ…

ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ
ಕೊಡಗು

ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ

June 14, 2018

ಮಡಿಕೇರಿ: ಮಾನಸಿಕ ಖಿನ್ನ ತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಚಿಟ್ಟಿಚ್ಚ ಎಂಬವರ ಪತ್ನಿ ಸಿ.ರೂಪ ಅವರೇ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಈ ಸಂಬಂಧ ಮೃತರ ತಾಯಿ ಚೊಟ್ಟೆಕಾಳಪಂಡ ಎಂ. ಅಕ್ಕಮ್ಮ ಅವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆ ಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀ ಸರು ತನಿಖೆ ಕೈಗೊಂಡಿದ್ದಾರೆ.

ಗುಂಡು ಹೊಡೆದುಕೊಂಡು ಬೆಳೆಗಾರ ಆತ್ಮಹತ್ಯೆ
ಕೊಡಗು

ಗುಂಡು ಹೊಡೆದುಕೊಂಡು ಬೆಳೆಗಾರ ಆತ್ಮಹತ್ಯೆ

June 13, 2018

ಮಡಿಕೇರಿ:  ಸಾಲಬಾಧೆಯಿಂದ ಮನನೊಂದ ಕಾಫಿ ಬೆಳೆಗಾರ ರೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಪೋಕ್ಲು ಪೇರೂರು ಗ್ರಾಮದಲ್ಲಿ ನಡೆದಿದೆ. ನಾಪೋಕ್ಲು ಸಮೀಪದ ಪೇರೂರು ಗ್ರಾಮದ ನಿವಾಸಿ ಮಚ್ಚೂರ ಪವನ್ ಮಂದಣ್ಣ(67) ಎಂಬವರೆ ಆತ್ಮಹತ್ಯೆಗೆ ಶರಣಾದ ಬೆಳೆಗಾರರಾಗಿದ್ದಾರೆ. ಕೃಷಿಗಾಗಿ ಸಾಲ ಮಾಡಿದ್ದ ಮಚ್ಚೂರ ಪವನ್ ಮಂದಣ್ಣ ಸಾಲ ತೀರಿಸಲಾಗದೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇಂದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಕ್ಷಣವೇ ನೆರೆಹೊರೆಯವರು ಮಂದಣ್ಣ ಅವರನ್ನು ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ…

ಜಲಮಯ… ಕೊಡಗೆಲ್ಲಾ ಜಲಮಯಾ…!
ಕೊಡಗು

ಜಲಮಯ… ಕೊಡಗೆಲ್ಲಾ ಜಲಮಯಾ…!

June 12, 2018

ನಾಪೋಕ್ಲು : ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಹಳ್ಳಕೊಳ್ಳ, ತೋಡು, ಹೊಳೆ, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.ಕಾವೇರಿ ನದಿ ಹರಿಯುತ್ತಿರುವ ಚೆರಿಯ ಪರಂಬು, ಕೊಟ್ಟಮುಡಿ ಹಾಗೂ ಬೊಳಿ ಬಾಣೆಗಳಲ್ಲಿ ನೀರಿನ ಮಟ್ಟ ಏರಿಕೆಯಾ ಗಿದ್ದು, ರಸ್ತೆಯ ಮೇಲೆ ಉಕ್ಕಿ ಹರಿಯು ತ್ತಿದೆ. ಚೆರಿಯಪರಂಬು, ನಾಪೋಕ್ಲು -ಮೂರ್ನಾಡು ರಸ್ತೆಯ ಬೊಳಿಬಾಣೆಯ ಲ್ಲಿಯೂ ಕಾವೇರಿ ನದಿ ಪ್ರವಾಹ ಜೋರಾ ಗಿದ್ದು, ವಾಹನಗಳು ನೀರಿನಲ್ಲಿಯೇ ಸಾಗು ತ್ತಿವೆ. ಇದೇ ರೀತಿ ಮಳೆ ಮುಂದುವರಿ ದರೆ. ನಾಪೋಕ್ಲು -ಮೂರ್ನಾಡು ರಸ್ತೆಯ ಸಂಪರ್ಕ…

ಕೊಡಗಿನಾದ್ಯಂತ ಮುಂದುವರೆದ ಮಳೆಯ ಅಬ್ಬರ: ಭಾಗಮಂಡಲ ತ್ರಿವೇಣ ಸಂಗಮ ಜಲಾವೃತ
ಕೊಡಗು

ಕೊಡಗಿನಾದ್ಯಂತ ಮುಂದುವರೆದ ಮಳೆಯ ಅಬ್ಬರ: ಭಾಗಮಂಡಲ ತ್ರಿವೇಣ ಸಂಗಮ ಜಲಾವೃತ

June 11, 2018

ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಡಿಕೇರಿ:  ಕೊಡಗು ಜಿಲ್ಲೆಯಾದ್ಯಂತ ಗಾಳಿ, ಮಳೆಯ ಆರ್ಭಟ ಮುಂದುವರೆದಿದೆ. ಭಾಗಮಂಡಲದ ತ್ರಿವೇಣ ಸಂಗಮದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನದಿ ನೀರು ರಸ್ತೆಯನ್ನು ಆವರಿಸಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ತೀವ್ರತೆ ಜಿಲ್ಲೆಯಾದ್ಯಂತ ಹೆÉಚ್ಚಿದ್ದು, ಕಾವೇರಿಯ ಉಗಮಸ್ಥಾನ ವಾದ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಯಾಗು ತ್ತಿದೆ. ಭಾಗಮಂಡಲ ಮತ್ತು ಅಯ್ಯಂಗೇರಿ ರಸ್ತೆಗಳ ಮೇಲೆ ನದಿ ನೀರು ಹರಿಯಲಾರಂಭಿಸಿದ್ದು, ಕಾವೇರಿಯ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ…

1 26 27 28 29 30 32
Translate »