ಜಮ್ಮಾಬಾಣೆಗೆ ಜಾಗಕ್ಕೆ ಕಂದಾಯ ನಿಗದಿ ಸರಿಯಲ್ಲ ಕಂದಾಯ ಇಲಾಖೆ ಆಡಿಟ್ ವರದಿಯಲ್ಲಿ ಉಲ್ಲೇಖ
ಕೊಡಗು

ಜಮ್ಮಾಬಾಣೆಗೆ ಜಾಗಕ್ಕೆ ಕಂದಾಯ ನಿಗದಿ ಸರಿಯಲ್ಲ ಕಂದಾಯ ಇಲಾಖೆ ಆಡಿಟ್ ವರದಿಯಲ್ಲಿ ಉಲ್ಲೇಖ

June 15, 2018

ಮಡಿಕೇರಿ:  ಜಮ್ಮಾ ಜಾಗ ಸಮೀಪವಿರುವ ಜಾಗಗಳನ್ನು ಜಮ್ಮಾ ಬಾಣೆ ಎಂದು ಪರಿಗಣಿಸಿ ಜನತೆಗೆ ನೀಡ ಲಾಗಿದ್ದು, ಅಲ್ಲಿ ಯಾವುದೇ ಕೃಷಿ ಚಟು ವಟಿಕೆಗೆ ಅವಕಾಶವಿಲ್ಲದ್ದರಿಂದ ಅಂತಹ ಜಾಗಗಳಿಗೆ ಕಂದಾಯ ನಿಗದಿ ಮಾಡಿರು ವುದು, ಪರಿವರ್ತನೆಗೆ ಅವಕಾಶ ನೀಡಿರು ವುದು ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಸರಿಯಲ್ಲವೆಂದು ಜಿಲ್ಲಾ ಕಂದಾಯ ಇಲಾಖೆ ಕುರಿತು ಲೆಕ್ಕ ತಪಾಸಣೆ ಮಾಡಿರುವ ತಂಡ ವರದಿ ಸಲ್ಲಿಸಿದೆ.

ಮಾರ್ಚ್ ತಿಂಗಳಲ್ಲಿ ಸ್ಥಳೀಯ ತಿಂಗ ಳಲ್ಲಿ ಸ್ಥಳೀಯ ಲೆಕ್ಕ ಪರಿಶೋಧಕರ ಐವರ ತಂಡ 2012 ರಿಂದ 2017ರವರೆಗೆ ತಪಾಸಣೆ ಮಾಡಿ ಜಿಲ್ಲಾಧಿಕಾರಿಗಳಿಗೆ ತನ್ನ ಅಭಿಪ್ರಾಯವನ್ನು ಸಲ್ಲಿಸಿದೆ. ಕೂರ್ಗ್ ರೆಗ್ಯುಲೇಶನ್ ಅಪೆಂಡಿಕ್ಸ್ III ರ ಪ್ರಕಾರ ಬಾಣೆ ಎಂಬುದು ಅರಣ್ಯ ಭೂಮಿ ಯಾಗಿದ್ದು, ಇದನ್ನು ಮೇವು, ಹಸಿರು ಗೊಬ್ಬರ ಸೌದೆ ಹಾಗೂ ಕೃಷಿ ಮತ್ತು ಮನೆಗೆ ಬೇಕಾದ ಮರಗಳನ್ನು ಪಡೆಯಲು ಮಾತ್ರ ಬಳಸಬಹುದಾಗಿದ್ದು, ಜೌಗು ಪ್ರದೇಶ ಹೊಂದಿರುವರು ಮಾತ್ರ ಅನುಭವಿ ಸಲು ಅವಕಾಶವಿದ್ದು, ಕಂದಾಯ ವ್ಯಾಪ್ತಿಗೆ ಬರಲು ಸಾಧ್ಯವಿಲ್ಲ ಎಂದು ಇವರುಗಳು ಉಲ್ಲೇಖಿಸಿದ್ದಾರೆ. ಅಲ್ಲದೆ 1910ರ ರೆವಿನ್ಯೂ ಸೆಟಲ್‍ಮೆಂಟ್ ಆಫ್ ಕೂರ್ಗ್ ಕಾನೂ ನಿನಲ್ಲೂ ಬಾಣೆ ಜಾಗವನ್ನು ಅರಣ್ಯ ಜಾಗವೆಂದು ಹೇಳಿರುವುದರಿಂದ ಬಾಣೆ ಸ್ಪಷ್ಟವಾಗಿ ಅರಣ್ಯ ಇಲಾಖೆಗೆ ಸೇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನಲೆಯಲ್ಲಿ ಇಂತಹ ಜಾಗಗಳ ಮೇಲೆ ಕಂದಾಯ ಇಲಾಖೆಗೆ ಯಾವುದೇ ಹಕ್ಕು ಇಲ್ಲ. ಕಂದಾಯ ನಿಗದಿ, ಮಾರಾ ಟಕ್ಕೆ ಅವಕಾಶ ಹಾಗೂ ಜಾಗದ ಇತರ ಉಪಯೋಗಕ್ಕೆ ಬದಲಾವಣೆ ಮಾಡಿರು ವುದು ಸರಿಯಾದ ಕ್ರಮವಲ್ಲ ಎಂದು ಆಡಿಟ್ ತಂಡ ಬಣ್ಣಿಸಿದೆ. ಈ ಅಂಶಗಳಿಗೆ ಕೆಳಗಿನ ಸಮರ್ಥನೆ ಯನ್ನು ತಂಡದ ಅಧಿಕಾರಿಗಳು ನೀಡಿದ್ದಾರೆ.

ಜಮ್ಮಾ ಮಾತ್ರ ಸಾಗು ಭೂಮಿಗಳು ಜೌಗು ಪ್ರದೇಶವಾಗಿದ್ದು, ಭತ್ತ ಬೆಳೆಯಲು ಸೂಕ್ತವಾಗಿದ್ದವು. ಇಂತಹ ಜಾಗಗಳನ್ನು ಕೊಡಗಿನಲ್ಲಿ ಅರಸರ ಕಾಲದಲ್ಲಿ ವಿತರಿ ಸಲಾಗಿತ್ತು. ಅವುಗಳ ಪಕ್ಕದಲ್ಲೇ ಇದ್ದ ಅರಣ್ಯ ಭೂಮಿಯನ್ನು ಮೇವು, ಗೊಬ್ಬರ, ಸೌದೆ ಹಾಗೂ ಕೃಷಿ ಮತ್ತು ಮನೆಗೆ ಬೇಕಾದ ಸೌದೆ ಪಡೆಯಲಿಕ್ಕಷ್ಟೇ ಜನರಿಗೆ ನೀಡಲಾಗಿತ್ತು. ಇಂತಹ ಜಾಗಗಳಿಗೆ ಕಂದಾಯ ದಾಖಲಾತಿಯಲ್ಲಿ ಬಾಣೆ ಭೂಮಿ ಎಂದು ಕರೆಯಲಾಗಿದ್ದು, ಭೂ ಕಂದಾಯದ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.

ಜಮ್ಮಾ ಮತ್ತು ಸಾಗು ಜಾಗಗಳೊಂ ದಿಗೆ ಸೇರ್ಪಡಿಗೊಂಡ ಇಂತಹ ಜಾಗಗ ಳನ್ನು ಜಮ್ಮಾ ಬಾಣೆ ಮತ್ತು ಸಾಗು ಬಾಣೆ ಎಂದು ಕರೆಯಲಾಯಿತು. ಇಂತಹ ಜಾಗ ಗಳನ್ನು ಹೊಂದಿರುವವರು ಪಕ್ಕದ ಜಮ್ಮಾ ಹಾಗೂ ಸಾಗು ಭೂಮಿ ಅಭಿವೃದ್ಧಿಗೆ ಬೇಕಾದ ಗೊಬ್ಬರ ಹಾಗೂ ಮರಗಳನ್ನು ಬಾಣೆ ಜಾಗದಿಂದ ಪಡೆಯಲು ಅವ ಕಾಶವಿತ್ತು. ಆದರೆ ಬಾಣೆ ಜಾಗಗಳನ್ನು ಅಭಿವೃದ್ಧಿ ಪಡಿಸಲು ಅವಕಾಶವಿಲ್ಲ ಹಾಗೂ ಮಾಲೀಕತ್ವದ ಹಕ್ಕು ಹೊಂದಿರು ವುದಿಲ್ಲ. ಈ ಜಾಗಗಳ ಮರಗಳ ಹಕ್ಕು. ಕೂಡಾ ಸರ್ಕಾರದ್ದಾಗಿದೆ. ಆದರೆ ಕೊಡ ಗಿನ ಬಾಣೆ ಹಿಡುವಳಿದಾರರು ಸ್ವಂತಕ್ಕೆ ಬೇಕಾದ ಮರಗಳನ್ನು ಉಚಿತವಾಗಿ ಬಾಣೆಯಿಂದ ಪಡೆಯಲು ಅರ್ಹತೆ ಹೊಂದಿ ದ್ದಾರೆ. ಗಂಧದ ಮರಕ್ಕೆ ಇದು ಅನ್ವಯಿಸುವುದಿಲ್ಲ.

ಈ ಹಿಂದೆ ಕೂರ್ಗ್ ಲ್ಯಾಂಡ್ ಅಂಡ್ ರೆವೆನ್ಯೂ ರೆಗ್ಯುಲೇಶನ್ 1899ರ ಕಾನೂನು ಜಾರಿ ಬರುವವರಿಗೆ ಬಾಣೆ ಜಾಗವನ್ನು ಮಾರಾಟ ಮಾಡಿದಲ್ಲಿ ಅಥವಾ ಕೃಷಿ ಮಾಡಿದಲ್ಲಿ ಅವುಗಳ ಕಂದಾಯಕ್ಕೆ ಒಳ ಪಡುತ್ತಿದ್ದವು. ಆಗ ಅವನ್ನು ಸರ್ಕಾರದ ವಶಕ್ಕೆ ಪಡೆಯಲು ಅವಕಾಶವಿರಲಿಲ್ಲ.

ನಂತರ ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಜಾರಿಗೆ ಬರುವವರೆಗೆ ಬಾಣೆ ಜಾಗವನ್ನು ಉಪವಿಭಾಗಾಧಿಕಾರಿಗಳ ಅನು ಮತಿ ಪಡೆದು ಮಾರಾಟ ಮಾಡಿದಲ್ಲಿ ಜಾಗದ ಮಾರುಕಟ್ಟೆ ಮೌಲ್ಯದ ಶೇಕಡ 20ಅನ್ನು ‘ನಜ್ರಾನ’ ರೂಪದಲ್ಲಿ ಕಟ್ಟಿ ಭೂ ಕಂದಾಯವನ್ನೂ ಕಟ್ಟಿಸಿಕೊಳ್ಳಲಾಗುತ್ತಿತ್ತು. ಅಧಿಕಾರಿಯ ಅನುಮತಿ ಇಲ್ಲದೆ ವಿಲೇ ವಾರಿ ಮಾಡಿದಲ್ಲಿ ಸರಕಾರ ವಶಪಡಿಸಿ ಕೊಳ್ಳುವ ಅವಕಾಶವಿತ್ತು.

ಮೇಲಿನ ಎರಡು ಪ್ರಕ್ರಿಯೆಗಳಲ್ಲಿ ಸರ್ಕಾರ ಬಾಣೆ ಜಾಗಗಳ ಮೇಲಿನ ಹಕ್ಕನ್ನು ಕಳೆದು ಕೊಂಡಿತ್ತು. ಆದರೆ ಕಾನೂನಿಗೆ ವಿರುದ್ಧ ವಾಗಿ ಬಾಣೆ ಜಾಗಗಳಲ್ಲಿ ಬೇಸಾಯ ಮಾಡಿದ್ದು, ಅವುಗಳನ್ನು ಮಾರಾಟ ಮಾಡದೆ ಇದ್ದರೂ, ಕಂದಾಯ ನಿಗದಿ ಮಾಡಿರುವುದು ತಪ್ಪು ಎಂದು ತಂಡ ಅಭಿಪ್ರಾಯಪಟ್ಟಿದೆ. ಅಲ್ಲದೆ ಬಾಣೆ ಜಾಗ ಗಳಲ್ಲಿ ಬೇಸಾಯ ಮಾಡದೆ, ಮಾರಾಟ ಮಾಡದೆ ಇರುವ ಪ್ರಕರಣಗಳಲ್ಲೂ ಜಾಗ ಸರ್ಕಾರಕ್ಕೆ ಸೇರಬೇಕು ಎಂದಿದೆ. ಕಂದಾಯ ನಿಗದಿ ಮಾಡಿದ್ದರೂ ಜಾಗದ ಮೌಲ್ಯದ ಬೆಲೆಯನ್ನೂ ಸಂಗ್ರಹಿಸಿಲ್ಲ ವಾದ್ದರಿಂದ ಅದು ಸರ್ಕಾರದ ಜಾಗ ಎಂದು ವಾದಿಸಿದೆ. ಈ ಎಲ್ಲಾ ಅಂಶ ಗಳನ್ನು ಪರಿಗಣಿಸಿದರೆ, ಜಮ್ಮಾ ಬಾಣೆ ಹಾಗೂ ಸಾಗು ಬಾಣೆ ಹಿಡುವಳಿದಾರರಿಗೆ ಜಾಗಗಳ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಈ ಜಾಗಗಳು ಸರ್ಕಾರದ ಜಾಗಗಳಾ ಗಿದ್ದು, ಕಂದಾಯ ನಿಗದಿ ಪಡಿಸಿದ್ದರೂ ಜಾಗಗಳ ಉಪಯೋಗದ ಹಕ್ಕು ಹೊರತು ಮಾಲೀಕತ್ವದ ಹಕ್ಕು ಹೊಂದಿಲ್ಲವೆಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಕರ್ನಾಟಕ ಲ್ಯಾಂಡ್ ರೆವಿನ್ಯೂ ಕಾಯ್ದೆ ಸೆಕ್ಷನ್ 95(2)ರ ಪ್ರಕಾರ ಕೃಷಿ ಭೂಮಿ ಯನ್ನು ಇತರ ಚಟುವಟಿಕೆಗೆ ಬಳಸಲು ‘ಜಾಗ ಉಪಯೋಗ ಬದಲಾವಣೆ’ (Change of land use)ಗೆ ಜಿಲ್ಲಾ ಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ವಿದೆ. ಆದರೆ ಇದೇ ಕಾಯ್ದೆಯ 2 (2) ರಂತೆ ಕಾಫಿ ಮತ್ತು ಜೌಗು ಜಾಗ (Wet land) ದ ಫಸಲುಗಳನು ಕೃಷಿ ಫಸಲು ಎಂದು ಪರಿಗಣಿಸದೆ ಪ್ಲಾಂಟೇಶನ್ ಫಸಲು ಮತ್ತು ಜೌಗು ಜಾಗದ ಫಸಲು ಎಂದು ಪ್ರತ್ಯೇಕವಾಗಿ ನಮೂದಿಸಿರುವುದ ರಿಂದ ಅಂತಹ ಜಾಗಗಳು ಭೂ ಪರಿ ವರ್ತನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನು ಇವರುಗಳು ಬಯಸಿದ್ದಾರೆ.

Translate »