ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ
ಮಂಡ್ಯ

ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ

June 15, 2018

ಮಂಡ್ಯ:  ಹೈಟೆಕ್ ವೇಶ್ಯಾ ವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ಮೂವರು ಬಾಂಗ್ಲಾ ಯುವತಿ ಯರನ್ನು ರಕ್ಷಣೆ ಮಾಡಿರುವ ಘಟನೆ ಮದ್ದೂರು ಪಟ್ಟಣ ಸಮೀಪದ ಲಾಡ್ಜ್ ವೊಂದರಲ್ಲಿಂದು ನಡೆದಿದೆ.

ಮೈಸೂರು-ಬೆಂಗಳೂರು ಹೆದ್ದಾರಿ ಬದಿಯ ಪ್ರಕೃತಿ ಲಾಡ್ಜ್‍ನಲ್ಲಿಯೇ ಹೈಟೆಕ್ ವೇಶ್ಯವಾಟಿಕೆ ನಡೆಸುತ್ತಿದ್ದುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಹಿನ್ನೆಲೆ: ಪ್ರಕೃತಿ ಲಾಡ್ಜ್ ನಲ್ಲಿ ಗುಹೆ ರೀತಿ ಕೊಠಡಿ ನಿರ್ಮಿಸಿ ಹುಡುಗಿಯರನ್ನು ಅಡಗಿಸಿಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಸಂಬಂಧ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ನೀಡಿದ ಖಚಿತ ಮಾಹಿತಿ ಮೇರೆಗೆ ಇಂದು ದಾಳಿ ನಡೆಸಿದ ಪೊಲೀಸರು, ಸತತ 5ಗಂಟೆಗಳ ಪರಿಶೀಲನೆ ನಂತರ ಗುಹೆ ರೀತಿ ಕೊಠಡಿ ಪತ್ತೆಯಾಗಿದೆ. ಕೊಠಡಿಯಲ್ಲಿದ್ದ ಸುಮಾರು ಮೂವರು ಬಾಂಗ್ಲಾ ಮೂಲದ ಯುವತಿಯರನ್ನು ರಕ್ಷಿಸಲಾಗಿದೆ.

ಪೊಲೀಸ್ ದಾಳಿ ನಡೆಯುತ್ತಿದ್ದಂತೆ ವಸತಿ ಗೃಹ ಮಾಲೀಕ ನಾಪತ್ತೆಯಾಗಿದ್ದಾರೆ. ವಸತಿ ಗೃಹದಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »