Tag: Madikeri

ಡಿ.1 ರಂದು ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಳ ನಿಯುಕ್ತಿ
ಕೊಡಗು

ಡಿ.1 ರಂದು ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಳ ನಿಯುಕ್ತಿ

November 28, 2018

ಮಡಿಕೇರಿ: 2016-17ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (6-8) ಸಂಬಂಧ ಆಯ್ಕೆ ಯಾದ ಅಭ್ಯರ್ಥಿಗಳ ಮುಖ್ಯ ಆಯ್ಕೆಪಟ್ಟಿ ಯನ್ನು ನ.23 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸಭೆಯಲ್ಲಿ ಎಲ್ಲಾ ಜಿಲ್ಲೆಯ ಉಪ ನಿರ್ದೇಶಕರಿಗೆ ವಿತರಿಸಿ ನವೆಂಬರ್, 27 ರಿಂದ ಡಿಸೆಂಬರ್, 14 ರವರೆಗೆ ಕೌನ್ಸಿಲಿಂಗ್ ಮಾಡಿ ಸ್ಥಳ ನಿಯುಕ್ತಿಗೊಳಿಸಲು ಆದೇಶಿಸಿರುತ್ತಾರೆ. ಈ ಸಂಬಂಧ ಕೊಡಗು ಜಿಲ್ಲೆಯಲ್ಲಿ 17 ಆಂಗ್ಲ ಭಾಷಾ ಶಿಕ್ಷಕರು, 06 ಗಣಿತ/ ವಿಜ್ಞಾನ ಶಿಕ್ಷಕರು ಮತ್ತು 4 ಸಮಾಜ ವಿಜ್ಞಾನ…

ಇಂದು ಕನ್ನಡ ರಾಜ್ಯೋತ್ಸವ, ವಿವಿಧ ಸ್ಪರ್ಧೆಗಳು
ಕೊಡಗು

ಇಂದು ಕನ್ನಡ ರಾಜ್ಯೋತ್ಸವ, ವಿವಿಧ ಸ್ಪರ್ಧೆಗಳು

November 28, 2018

ಮಡಿಕೇರಿ: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಸ್ಪರ್ಧೆಗಳು £ವೆಂಬರ್ 28 ರಂದು ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಲಿದೆ. ನ.28ರಂದು ಬೆಳಗ್ಗೆ 10 ಗಂಟೆಗೆ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ, ನಂತರ ಕಲಾಕ್ಷೇತ್ರದ ಮುಂಭಾಗ ಕನ್ನಡ ಧ್ವಜಾರೋಹಣ, 10.30 ಗಂಟೆಗೆ ಉದ್ಘಾ ಟನಾ ಕಾರ್ಯಕ್ರಮ ನಡೆಯಲಿದೆ. ನಗರ ಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಎಸ್.ಮಚ್ಚಾಡೋ, ನಾಪೋಕ್ಲು…

ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ 4ನೇ ಕರಡು ಅಧಿಸೂಚನೆ
ಕೊಡಗು

ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ 4ನೇ ಕರಡು ಅಧಿಸೂಚನೆ

November 27, 2018

ಮಡಿಕೇರಿ:  ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯದಿಂದ 4ನೇ ಕರಡು ಅಧಿಸೂಚನೆ ಹೊರಬಿದ್ದಿದ್ದು, ಡಿಸೆಂಬರ್ 2ರ ಒಳಗೆ ಕೊಡಗಿನ ಜನರು ವೈಯಕ್ತಿಕ ಆಕ್ಷೇಪಣೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕೆಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ. ನಗರದ ಖಾಸಗಿ ಹೋಟೆಲೊಂದರಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ತುರ್ತುಸಭೆ ನಡೆಯಿತು. ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರ…

ಮಂಜಿನ ನಗರಿಯಲ್ಲಿ ಅಂಬರೀಶ್ ಹೆಜ್ಜೆ…
ಕೊಡಗು

ಮಂಜಿನ ನಗರಿಯಲ್ಲಿ ಅಂಬರೀಶ್ ಹೆಜ್ಜೆ…

November 26, 2018

ಮಡಿಕೇರಿ:  ಕನ್ನಡ ಚಿತ್ರೋದ್ಯ ಮದ ಹೆಸರಾಂತ ಹಿರಿಯ ನಟ, ಮಾಜಿ ಸಚಿವ, ಕಾಂಗ್ರೆಸ್‍ನ ಹಿರಿಯ ಮುಖಂಡ, ಮಂಡ್ಯದ ಗಂಡು ಅಂಬರೀಷ್ ಅವರ ಅಗಲಿಕೆಗೆ ಕೊಡಗು ಜಿಲ್ಲೆ ಕೂಡ ಕಂಬನಿ ಮಿಡಿದಿದೆ. ಕೊಡಗು ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಅಂಬ ರೀಷ್ ತಮ್ಮ ಬಿಡುವಿನ ಸಮಯವನ್ನು ಕಳೆಯಲು ಜಿಲ್ಲೆಯನ್ನೇ ಆಯ್ಕೆ ಮಾಡಿ ಕೊಳ್ಳುತ್ತಿದ್ದರು. ಸುಂಟಿಕೊಪ್ಪ ನಿವಾಸಿ, ಉಪಾಸಿ ಸಂಸ್ಥೆಯ ಮಾಜಿ ಅಧ್ಯಕ್ಷ, ಉದ್ಯಮಿ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ ಅವರ ಸಹೋ ದರ ಆನಂದ್ ಬಸಪ್ಪ, ಕೆಪಿಸಿಸಿ ಮುಖಂಡ…

ಕಾಣೆಯಾಗಿದ್ದ ವಿದ್ಯಾರ್ಥಿಯ ಶವ ಪತ್ತೆ
ಕೊಡಗು

ಕಾಣೆಯಾಗಿದ್ದ ವಿದ್ಯಾರ್ಥಿಯ ಶವ ಪತ್ತೆ

November 22, 2018

ಕುಶಾಲನಗರ: ಮಂಗಳವಾರದಿಂದ ಕಾಣೆಯಾಗಿದ್ದ ವಿದ್ಯಾರ್ಥಿಯ ಶವ ಇಂದು ಇಲ್ಲಿನ ಮಾದಾಪಟ್ಟಣ ಬಳಿಯ ಕಾವೇರಿ ನದಿಯಲ್ಲಿ ದೊರೆತಿದೆ. ಮೂಲತಃ ಸಕಲೇಶಪುರದಲ್ಲಿ ಕಾರ್ತಿಕ್ ಕುಶಾಲನಗರದ ಪಾಲಿಟೆಕ್ನಿಕ್‍ನಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿ ಯಾಗಿದ್ದು, ಹಾಸ್ಟೆಲ್‍ನಲ್ಲಿ ವಾಸವಿದ್ದ ಕಾರ್ತಿಕ್ ನಿನ್ನೆಯಿಂದ ಕಾಣೆಯಾಗಿದ್ದ. ಈ ಬಗ್ಗೆ ಪ್ರಾಂಶುಪಾಲರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಂದು ಕಾವೇರಿ ನದಿಯಲ್ಲಿ ಶವ ಪತ್ತೆಯಾಗಿದ್ದು, ಈಜಲು ತೆರಳಿದ್ದ ವೇಳೆ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕುಡಿದ ಅಮಲಿನಲ್ಲಿ ಸರಣಿ ಅಪಘಾತ; ಸುಮೋ ಚಾಲಕ ಪೊಲೀಸ್ ವಶಕ್ಕೆ
ಕೊಡಗು

ಕುಡಿದ ಅಮಲಿನಲ್ಲಿ ಸರಣಿ ಅಪಘಾತ; ಸುಮೋ ಚಾಲಕ ಪೊಲೀಸ್ ವಶಕ್ಕೆ

November 19, 2018

ಮಡಿಕೇರಿ: ಪಶುಪಾಲನಾ ಇಲಾಖೆಯ ಹೊರಗುತ್ತಿಗೆ ವಾಹನ ಚಾಲಕ ನೋರ್ವ ಮದ್ಯದ ಅಮಲಿನಲ್ಲಿ ಸರಕಾರಿ ವಾಹನ ಚಲಾಯಿಸಿ 2 ದ್ವಿಚಕ್ರ ವಾಹನ ಗಳಿಗೆ ಡಿಕ್ಕಿ ಘಟನೆ ಶನಿವಾರ ರಾತ್ರಿ ನಗರದಲ್ಲಿ ನಡೆದಿದೆ. ಅರವಿಂದ್ ಎಂಬಾತನೆ ಅಪಘಾತ ಎಸಗಿದ ವ್ಯಕ್ತಿಯಾಗಿದ್ದು, ನಗರ ಸಂಚಾರಿ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ರಾತ್ರಿ 8.30ರ ಸಮಯದಲ್ಲಿ ಪಶುಪಾಲನಾ ಇಲಾಖೆಯ ಟಾಟಾ ಸುಮೋ (ಕೆಎ.12.ಜಿ.726) ವಾಹನವನ್ನು ಹೊರ ಗುತ್ತಿಗೆ ಚಾಲಕ ಅರವಿಂದ್ ಎಂಬಾತ ಕಂಠ ಪೂರ್ತಿ ಮದ್ಯ ಸೇವಿಸಿಕೊಂಡು ಅಶೋಕಪುರ ರಸ್ತೆಯಲ್ಲಿ…

ವ್ಯಕ್ತಿ ಕೊಲೆಗೆ ಯತ್ನಿಸಿದವನಿಗೆ 7 ವರ್ಷ ಜೈಲು
ಕೊಡಗು

ವ್ಯಕ್ತಿ ಕೊಲೆಗೆ ಯತ್ನಿಸಿದವನಿಗೆ 7 ವರ್ಷ ಜೈಲು

November 18, 2018

ಮಡಿಕೇರಿ: ವ್ಯಕ್ತಿಯೋರ್ವ ರನ್ನು ಕತ್ತಿಯಿಂದ ಕಡಿದು ಹತ್ಯೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆ ಯಲ್ಲಿ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗೆ 7 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಮರಗೋಡು ಮೂಲದ ನಿವಾಸಿ ರಘು ಎಂಬಾತನೇ ಶಿಕ್ಷೆಗೆ ಒಳಗಾದ ಅಪ ರಾಧಿಯಾಗಿದ್ದಾನೆ. ಪ್ರಕರಣ ಹಿನ್ನೆಲೆ: 2018ರ ಜನವರಿ 14 ರಂದು ಮರಗೋಡು ನಿವಾಸಿಯಾದ ಜೆ.ಎನ್. ರಮೇಶ್ ಎಂಬವರು ಕಾಫಿ ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯನ್ನು ಕಾವಲು ಕಾಯಲು ಅತ್ತ ಕಡೆ ಹೋಗು…

ಶ್ರೀ ಜಗದಾತ್ಮಾನಂದಜೀ ಪಂಚಭೂತಗಳಲ್ಲಿ ಲೀನ
ಕೊಡಗು

ಶ್ರೀ ಜಗದಾತ್ಮಾನಂದಜೀ ಪಂಚಭೂತಗಳಲ್ಲಿ ಲೀನ

November 17, 2018

ಮಡಿಕೇರಿ: ಹಲವು ವರ್ಷಗಳಿಂದ ಭಗವಂತನ ಸಾನಿಧ್ಯವೇ ದೊರೆತ ಆನಂದದಲ್ಲಿದ್ದ ಪೊನ್ನಂಪೇಟೆ ರಾಮ ಕೃಷ್ಣ ಶಾರದಾಶ್ರಮ ಸ್ವಾಮಿ ಜಗದಾತ್ಮನಂದಜಿ ಅವರು ಸಹಸ್ರಾರು ಭಕ್ತಾಧಿಗಳ ಅಶ್ರುತರ್ಪಣೆಯ ನಡುವೆ ಪಂಚಭೂತಗಳಲ್ಲಿ ಲೀನವಾದರು. ಬದುಕಲು ಕಲಿಯಿರಿ ಕೃತಿಯ ಮೂಲಕ ಯುವ ಸಮುದಾಯವನ್ನು ಬಡಿದೆಚ್ಚರಿಸಿ ಸ್ಫೂರ್ತಿಯಾಗಿಸಿದ್ದ ಸ್ವಾಮೀಜಿ ದೈವಾಧೀನರಾಗಿದ್ದು ಪೊನ್ನಂಪೇಟೆ ಪಟ್ಟಣ್ಣವನ್ನೇ ದುಖಃದ ಮಡುವಿಗೆ ತಳ್ಳಿತ್ತು. ಶುಕ್ರವಾರ ಬೆಳಿಗಿನಿಂದಲೇ ಪೊನ್ನಂಪೇಟೆ, ಗೋಣಿಕೊಪ್ಪ ಪಟ್ಟಣ್ಣಗಳು ಮೋಡ ಕವಿದ ವಾತಾವರಣದಿಂದ ಪ್ರಕೃತಿ ಕೂಡ ಸ್ವಾಮಿಯ ಅಗಲಿಕೆಗೆ ಮಿಡಿದು ಕಂಬನಿ ಹರಿಸಿತ್ತು. ಸನ್ಯಾಸಿ ಜೀವನ ಪ್ರಾರಂಭಿಸಿ 58 ವರ್ಷಗಳ…

ಇಂದು ಒಂದು ಗಂಟೆ ಕಾಲ ಕೊಡಗು ಬಂದ್‍ಗೆ ಕರೆ
ಕೊಡಗು

ಇಂದು ಒಂದು ಗಂಟೆ ಕಾಲ ಕೊಡಗು ಬಂದ್‍ಗೆ ಕರೆ

November 14, 2018

ಮಡಿಕೇರಿ: ಸಂತೋಷ್ ತಮ್ಮಯ್ಯ ಬಂಧನ ಹಿಂದೂ ಪರ ಸಂಘಟನೆಗಳ ವಿರುದ್ದ ನಡೆಯುತ್ತಿರುವ ಪಿತೂರಿಯಾಗಿದ್ದು, ಅವರಿಗೆ ನ್ಯಾಯ ಒದಗಿಸಬೇಕು ಹಾಗೂ ಜನಾಂಗೀಯ ನಿಂದನೆ ಮಾಡಿರುವ ಆಸೀಫ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ 1 ಗಂಟೆ ಕಾಲ ಕೊಡಗು ಬಂದ್‍ಗೆ ಹಿಂದೂ ಸುರಕ್ಷಾ ವೇದಿಕೆ ಕರೆ ನೀಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಹಿಂದೂ ಸುರಕ್ಷಾ ವೇದಿಕೆ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಮ್ಮಯ್ಯ ಅವರ ಬಂಧನ ಖಂಡನೀಯ. ಇವರಿಗೆ ನ್ಯಾಯ ದೊರಕಬೇಕು. ಹಾಗೂ ಕೊಡಗಿನವರ ಬಗ್ಗೆ ಜನಾಂಗೀಯ…

ಸಂತ್ರಸ್ತರಿಗೆ ಮನೆ ಕಟ್ಟುವ ಮೊದಲು ಮನಸ್ಸು ಕಟ್ಟಬೇಕು
ಕೊಡಗು

ಸಂತ್ರಸ್ತರಿಗೆ ಮನೆ ಕಟ್ಟುವ ಮೊದಲು ಮನಸ್ಸು ಕಟ್ಟಬೇಕು

November 12, 2018

ಮಡಿಕೇರಿ:  ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಮನೆ, ಕಟ್ಟಡ ನಿರ್ಮಿಸುವ ಮೊದಲು ಸಂತ್ರಸ್ತರ ಮನಸ್ಸು ಮತ್ತು ಬದುಕು ಕಟ್ಟುವುದಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ, ಹೆಸರಾಂತ ಮಹಿಳಾ ಸಾಹಿತಿ ಡಾ. ವೈದೇಹಿ ಸಲಹೆ ನೀಡಿದ್ದಾರೆ. ಕಾಲೂರು ಗ್ರಾಮದಲ್ಲಿ ಪ್ರಾಜೆಕ್ಟ್ ಕೂರ್ಗ್ ಮತ್ತು ಭಾರತೀಯ ವಿದ್ಯಾಭವನ ಸಹ ಯೋಗದಲ್ಲಿ ಪ್ರಕೃತಿ ವಿಕೋಪ ಸಂತ್ರಸ್ತ ಮಹಿಳೆಯರು ಯಶಸ್ವಿ ಕೌಶಲಾಭಿವೃದ್ದಿ ಯೋಜನೆಯಡಿ ತಯಾರಿಸಿದ ವಿವಿಧ ಮಸಾಲೆ ಪದಾರ್ಥಗಳ ಕೂರ್ಗ್ ಫ್ಲೇ ವರ್ಸ್ ಉತ್ಪನ್ನಗಳನ್ನು ಲೋಕಾರ್ಪ ಣೆಗೊಳಿಸಿ ಮಾತನಾಡಿದ…

1 4 5 6 7 8 32
Translate »