ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ 4ನೇ ಕರಡು ಅಧಿಸೂಚನೆ
ಕೊಡಗು

ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ 4ನೇ ಕರಡು ಅಧಿಸೂಚನೆ

November 27, 2018

ಮಡಿಕೇರಿ:  ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯದಿಂದ 4ನೇ ಕರಡು ಅಧಿಸೂಚನೆ ಹೊರಬಿದ್ದಿದ್ದು, ಡಿಸೆಂಬರ್ 2ರ ಒಳಗೆ ಕೊಡಗಿನ ಜನರು ವೈಯಕ್ತಿಕ ಆಕ್ಷೇಪಣೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕೆಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ.

ನಗರದ ಖಾಸಗಿ ಹೋಟೆಲೊಂದರಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ತುರ್ತುಸಭೆ ನಡೆಯಿತು. ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರ ಮಣಿ, ಹೋರಾಟ ಸಮಿತಿ ಪ್ರಮುಖರಾದ ಚೇರಂಡ ನಂದಾ ಸುಬ್ಬಯ್ಯ, ತೀತರ ಧರ್ಮಜಾ ಉತ್ತಪ್ಪ, ಅರುಣ್ ಭೀಮಯ್ಯ, ಭರತ್ ಅವರುಗಳು ಪಕ್ಷಾತೀತ ಸಭೆ ನಡೆಸಿ ವರದಿಗೆ ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಿದರು.

ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ, ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ತರು ವಂತೆ ಆಗ್ರಹಿಸಿ ಗೋವಾ ಫೌಂಡೇಷನ್ ಮತ್ತು ಕೆಲವು ಸರಕಾರೇತರ ಸಂಸ್ಥೆಗಳು ಸುಪ್ರೀಂ ಕೋರ್ಟ್‍ನ ಹಸಿರು ಪೀಠಕ್ಕೂ ಅರ್ಜಿ ಸಲ್ಲಿಸಿವೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಪರಿಸರ ಖಾತೆ ಸಚಿವಾ ಲಯಕ್ಕೆ ನೋಟಿಸ್ ನೀಡಿ ಯೋಜನೆ ಜಾರಿಯ ಕುರಿತು ಮಾಹಿತಿ ಕೇಳಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ ಖಾತೆ ಸಚಿವಾಲಯ ಅಕ್ಬೋಬರ್ 3 ರಂದು ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂ ಧಿಸಿದಂತೆ ಕರಡು ಅಧಿಸೂಚನೆ ಹೊರಡಿ ಸಿದ್ದು, ಡಿಸೆಂಬರ್ 2ರೊಳಗೆ ಸಾರ್ವಜ ನಿಕರು ಆಕ್ಷೇಪಣೆ ಸಲ್ಲಿಸಲು ಗಡುವು ನೀಡಿದೆ. ಈಗಾಗಲೇ ಜಿಲ್ಲೆಯ ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ. ನಲ್ಲೂ ವರದಿ ವಿರೋಧಿಸಿ ನಿರ್ಣಯ ಮಂಡಿಸಿ ಕೇಂದ್ರ ಪರಿಸರ ಖಾತೆ ಸಚಿವಾಲಯಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ. ಕೊಡಗು ಜಿಲ್ಲೆಯ ಹಿತ ದೃಷ್ಟಿಯಿಂದ ಜನರೂ ಕೂಡ ವೈಯಕ್ತಿಕ ಆಕ್ಷೇಪಣೆಗಳನ್ನು ಸಲ್ಲಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಮನವಿ ಮಾಡಿದರು.

ಕಸ್ತೂರಿ ರಂಗನ್ ವರದಿಯನ್ನು ಅರಣ್ಯ ಪ್ರದೇಶಗಳಲ್ಲಿ ಜಾರಿಗೊಳಿಸಲು ನಮ್ಮ ಆಕ್ಷೇಪಣೆ ಇಲ್ಲವೆಂದು ಸ್ಟಷ್ಟಪಡಿಸಿದ ಕೆ.ಜಿ. ಬೋಪಯ್ಯ, ಜನವಸತಿ ಪ್ರದೇಶಗಳನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸಲು ನಮ್ಮ ವಿರೋಧವಿದೆ. ಹಿಂದಿನಿಂದಲೂ ಈ ಕುರಿತು ಪಕ್ಷಾತೀತ ವಿರೋಧ ವ್ಯಕ್ತಪಡಿಸ ಲಾಗಿದೆ. ಮಾತ್ರವಲ್ಲದೆ ಕಸ್ತೂರಿ ರಂಗನ್ ಸಮಿತಿಯಲ್ಲಿ ಭೂಗೋಳ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ತಜ್ಞರು ಇಲ್ಲ. ಈ ವಿಷಯ ವನ್ನು ಮುಂದಿಟ್ಟುಕೊಂಡು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಅವರ ಸಲಹೆ ಪಡೆದು ಸುಪ್ರೀಂಕೋರ್ಟ್‍ನಲ್ಲೂ ಸಮರ್ಥ ವಾದ ಮಂಡಿಸಲಾಗುತ್ತದೆ ಎಂದು ಕೆ.ಜಿ.ಬೋಪಯ್ಯ ತಿಳಿಸಿದರು.

ಹೋರಾಟ ಸಮಿತಿಯ ಪ್ರಮುಖರಾದ ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ, ಕೇರಳ ರಾಜ್ಯದಲ್ಲಿ ಜನವಸತಿ ಮತ್ತು ಅರಣ್ಯ ಪ್ರದೇಶಗಳನ್ನು ವಿಂಗಡಿಸಿ 13 ಸಾವಿರ ಚದರ ಕಿ.ಮೀ. ಇದ್ದ ಪ್ರದೇಶವನ್ನು 9 ಸಾವಿರ ಚದರ ಕಿ.ಮೀ.ಗೆ ತಗ್ಗಿಸಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಇಂತಹ ವಿಂಗಡಣೆಯನ್ನು ಇಂದಿಗೂ ಮಾಡ ಲಾಗಿಲ್ಲ. ಪರಿಣಾಮವೆಂಬಂತೆ ಕೊಡಗು ಜಿಲ್ಲೆಯನ್ನು ಸಂಪೂರ್ಣ ಅರಣ್ಯ ಮಾಡಲು ಕೆಲವು ಪರಿಸರವಾದಿಗಳು ಮುಂದಾಗಿದ್ದಾರೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದರು.

ಮಡಿಕೇರಿ, ವಿರಾಜಪೇಟೆ, ಸೋಮವಾರ ಪೇಟೆ ಅರಣ್ಯ ಪ್ರದೇಶಗಳನ್ನು ಒಳಗೊಂಡಿದೆ. ಕಸ್ತೂರಿ ರಂಗನ್ ವರದಿಯ ಅನ್ವಯ ಅರಣ್ಯ ಪ್ರದೇಶದಿಂದ 10 ಕಿ.ಮೀ.ವರೆಗೆ ಯೋಜನೆ ವಿಸ್ತರಿಸಬಹುದು. ಹೀಗೆ ವಿಸ್ತಾರ ವಾದರೆ ಇಡೀ ಜಿಲ್ಲೆ ಅರಣ್ಯವಾಗಿ ಮಾರ್ಪ ಡುತ್ತದೆ. ಅನಿವಾರ್ಯವಾಗಿ ಜಿಲ್ಲೆಯ ಜನರು ಗುಳೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಯೋಜನೆ ಜಾರಿಗೊಳಿ ಸಲು ಜನಾಂಗವನ್ನು ಬಳಸಿಕೊಳ್ಳಲು ಕೆಲವರು ಪ್ರಯತ್ನಿಸುತ್ತಿದ್ದು, ಸುಶಿಕ್ಷಿತ ವರ್ಗ ಈ ತಂತ್ರಕ್ಕೆ ಮರಳಾಗಬಾರದೆಂದು ನಂದಾ ಸುಬ್ಬಯ್ಯ ಮನವಿ ಮಾಡಿದರು. ಈ ಹಿಂದೆ ನಡೆದ ಜನಜಾಗೃತಿ ಜನಾಂ ದೋಲನದ ಭಾಗವಾಗಿ ಜಿಲ್ಲೆಯಿಂದ 6 ಸಾವಿರ ಆಕ್ಷೇಪದ ಅರ್ಜಿಗಳು ಕೇಂದ್ರ ಪರಿಸರ ಖಾತೆ ಸಚಿವಾಲಯಕ್ಕೆ ಸಲ್ಲಿಕೆಯಾಗಿವೆ ಎಂದೂ ನಂದಾ ಸುಬ್ಬಯ್ಯ ತಿಳಿಸಿದರು.

Translate »