ಕನ್ನಡ ಚಿತ್ರರಂಗದ ದಿಗ್ಗಜರ ಬಗ್ಗೆ ನಿಂದನೆ:  ಸೈಬರ್ ಕ್ರೈಂ ಪೊಲೀಸರಿಗೆ ದೂರು
ಮೈಸೂರು

ಕನ್ನಡ ಚಿತ್ರರಂಗದ ದಿಗ್ಗಜರ ಬಗ್ಗೆ ನಿಂದನೆ: ಸೈಬರ್ ಕ್ರೈಂ ಪೊಲೀಸರಿಗೆ ದೂರು

November 27, 2018

ಮೈಸೂರು:  ಕನ್ನಡದ ಮೇರು ನಟ ಅಂಬರೀಶ್ ಅವರ ಸಾವನ್ನು ಸಂಭ್ರಮಿಸಿ, ಡಾ.ರಾಜ್‍ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಅವರ ಬಗ್ಗೆ ಫೇಸ್ ಬುಕ್‍ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಮೈಸೂರಿನ ಬೆಳಕು ಸಂಸ್ಥೆಯ ಕಾರ್ಯಕರ್ತರು ಸೋಮವಾರ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

`ದುಷ್ಟ ಸಂಹಾರ’ ಎಂಬ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ ಈ ಮೂವರು ದಿಗ್ಗಜರ ಭಾವಚಿತ್ರದೊಂದಿಗೆ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿ ಸಿರುವುದು ಈಗಾಗಲೇ ನೋವಿನಲ್ಲಿರುವ ಅಭಿಮಾನಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬೆಳಕು ಸಂಸ್ಥೆಯ ಸಂಸ್ಥಾಪಕ, ಸಾಮಾಜಿಕ ಹೋರಾಟಗಾರ ಕೆ.ಎಂ.ನಿಶಾಂತ್ ಇನ್ನಿತರರು ದೂರಿನಲ್ಲಿ ತಿಳಿಸಿದ್ದಾರೆ.

ಇಂದಿನ ಈ ಸೂಕ್ಷ್ಮ ಸಂದರ್ಭ ದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿ ಸಬೇಕೆಂಬ ದುರುದ್ದೇಶದಿಂದ ಇಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣ ದಲ್ಲಿ ಅಪ್ಲೋಡ್ ಮಾಡಿ, ಕೋಮು ಸೌಹಾರ್ದವನ್ನು ಹದಗೆಡಿಸುವ ಕುತಂತ್ರ ಇದರಲ್ಲಿ ಅಡಗಿದೆ. ಇಂತಹ ವಿಧ್ವಂಸಕ ಕೃತ್ಯಕ್ಕೆ ಕೈಹಾಕಿರುವ ದೇಶದ್ರೋಹಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳು ವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಎಂ.ಎನ್. ಧನುಷ್, ಪ್ರವೀಣ್, ಸುದರ್ಶನ್, ಪ್ರಜ್ವಲ್, ಅಣ್ಣಯ್ಯ, ನಿಕಿಲ್, ಧ್ಯಾನ್ ಇನ್ನಿತರರು ಇದ್ದರು.

Translate »