ಬಾರಿಕಾಡು ತೋಟದ ಬಳಿ ಆನೆ ಸಾವು
ಕೊಡಗು

ಬಾರಿಕಾಡು ತೋಟದ ಬಳಿ ಆನೆ ಸಾವು

November 27, 2018

ವಿರಾಜಪೇಟೆ: ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಗ್ರಾಮದ ತೋಟವೊಂದರ ಬಳಿ ಹೆಣ್ಣಾನೆಯೊಂದು ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಸೋಮವಾರ ಬೆಳಿಗ್ಗೆ 8.30 ಸಮಯದಲ್ಲಿ ಗ್ರಾಮಸ್ಥರು ಕೆಲಸಕ್ಕೆ ತೆರಳುವ ಸಂದರ್ಭ ಅದೇ ಗ್ರಾಮದ ತಾಲೂಕು ಪಂಚಾ ಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಅವರ ತೋಟದ ಬದಿಯಲ್ಲಿ ಆನೆಯೊಂದು ನರಳುತ್ತಿರುವುದನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಈ ಕಾಡಾನೆಗೆ ಸುಮಾರು 60 ವರ್ಷ ವಯಸ್ಸಿರಬಹುದು ಎನ್ನಲಾಗಿದೆ. ಅನಾ ರೋಗ್ಯದಿಂದ ನಿತ್ರಾಣವಾಗಿದ್ದ ಆನೆ ಒಂದು ಕಾಲು ಸ್ವಾಧೀನ ಕಳೆದು ಕೊಂಡಿತ್ತೆನ್ನಲಾಗಿದೆ. ಆಹಾರ ಜೀರ್ಣವಾಗದ ಕಾರಣ ಆನೆಯ ಹೊಟ್ಟೆ ಊದಿಕೊಂಡಿತ್ತು. ಅಪರಾಹ್ನ ಒಂದು ಗಂಟೆ ಸುಮಾರಿಗೆ ಆನೆ ಇಹಲೋಹ ತ್ಯಜಿಸಿತು. ವಲಯ ಅರಣ್ಯಾ ಧಿಕಾರಿ ಕೆ.ಪಿ.ಗೋಪಾಲ್, ವೃತ್ತ ನಿರೀಕ್ಷಕ ಎನ್.ಕುಮಾರ್ ಆರಾಧ್ಯ, ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಇತರರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು. ತಜ್ಞ ವ್ಯೆದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅರಣ್ಯ ಇಲಾಖೆಯ ವತಿಯಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕಳೆದ ಮೂರು ತಿಂಗಳುಗಳಿಂದಲೂ ಮೀಸಲು ಅರಣ್ಯದಲ್ಲಿ ಆನೆ ಬಹಳ ನಿಧಾನವಾಗಿ ಸಂಚರಿಸುತ್ತಿತ್ತು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.