ಇಂದು ಒಂದು ಗಂಟೆ ಕಾಲ ಕೊಡಗು ಬಂದ್‍ಗೆ ಕರೆ
ಕೊಡಗು

ಇಂದು ಒಂದು ಗಂಟೆ ಕಾಲ ಕೊಡಗು ಬಂದ್‍ಗೆ ಕರೆ

November 14, 2018

ಮಡಿಕೇರಿ: ಸಂತೋಷ್ ತಮ್ಮಯ್ಯ ಬಂಧನ ಹಿಂದೂ ಪರ ಸಂಘಟನೆಗಳ ವಿರುದ್ದ ನಡೆಯುತ್ತಿರುವ ಪಿತೂರಿಯಾಗಿದ್ದು, ಅವರಿಗೆ ನ್ಯಾಯ ಒದಗಿಸಬೇಕು ಹಾಗೂ ಜನಾಂಗೀಯ ನಿಂದನೆ ಮಾಡಿರುವ ಆಸೀಫ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ 1 ಗಂಟೆ ಕಾಲ ಕೊಡಗು ಬಂದ್‍ಗೆ ಹಿಂದೂ ಸುರಕ್ಷಾ ವೇದಿಕೆ ಕರೆ ನೀಡಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಹಿಂದೂ ಸುರಕ್ಷಾ ವೇದಿಕೆ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ತಮ್ಮಯ್ಯ ಅವರ ಬಂಧನ ಖಂಡನೀಯ. ಇವರಿಗೆ ನ್ಯಾಯ ದೊರಕಬೇಕು. ಹಾಗೂ ಕೊಡಗಿನವರ ಬಗ್ಗೆ ಜನಾಂಗೀಯ ನಿಂದನೆ ಮಾಡಿ ರುವ ಆಸೀಫ್ ವಿರುದ್ಧ ಕ್ರಮಕೈಗೊಳ್ಳಬೇಕು. ಇದಕ್ಕೆ ಆಗ್ರಹಿಸಿ ಬುಧವಾರ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆವರೆಗೆ ಜಿಲ್ಲೆಯ ಎಲ್ಲಾ ಪಟ್ಟಣಗಳಲ್ಲಿ ಅಂಗಡಿ-ಮುಂಗಟ್ಟು ಮುಚ್ಚಿ ಬೆಂಬಲ ನೀಡುವಂತೆ ಕೋರಿದ್ದಾರೆ.

Translate »