ಡಿ.1 ರಂದು ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಳ ನಿಯುಕ್ತಿ
ಕೊಡಗು

ಡಿ.1 ರಂದು ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಳ ನಿಯುಕ್ತಿ

November 28, 2018

ಮಡಿಕೇರಿ: 2016-17ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ (6-8) ಸಂಬಂಧ ಆಯ್ಕೆ ಯಾದ ಅಭ್ಯರ್ಥಿಗಳ ಮುಖ್ಯ ಆಯ್ಕೆಪಟ್ಟಿ ಯನ್ನು ನ.23 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಸಭೆಯಲ್ಲಿ ಎಲ್ಲಾ ಜಿಲ್ಲೆಯ ಉಪ ನಿರ್ದೇಶಕರಿಗೆ ವಿತರಿಸಿ ನವೆಂಬರ್, 27 ರಿಂದ ಡಿಸೆಂಬರ್, 14 ರವರೆಗೆ ಕೌನ್ಸಿಲಿಂಗ್ ಮಾಡಿ ಸ್ಥಳ ನಿಯುಕ್ತಿಗೊಳಿಸಲು ಆದೇಶಿಸಿರುತ್ತಾರೆ.

ಈ ಸಂಬಂಧ ಕೊಡಗು ಜಿಲ್ಲೆಯಲ್ಲಿ 17 ಆಂಗ್ಲ ಭಾಷಾ ಶಿಕ್ಷಕರು, 06 ಗಣಿತ/ ವಿಜ್ಞಾನ ಶಿಕ್ಷಕರು ಮತ್ತು 4 ಸಮಾಜ ವಿಜ್ಞಾನ ಶಿಕ್ಷಕರು ವಿಷಯಗಳಿಗೆ ಆಯ್ಕೆ ಗೊಂಡಿರುವ ಅಭ್ಯರ್ಥಿಗಳ ಮುಖ್ಯ ಆಯ್ಕೆ ಪಟ್ಟಿಯನ್ನು ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಹಾಗೂ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಡಿ.1 ರಂದು ಬೆಳಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ 2016-17ನೇ ಸಾಲಿನ ಸರ್ಕಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6-8) ಸ್ಥಳ ನಿಯುಕ್ತಿ ಮಾಡ ಲಾಗುತ್ತದೆ. ಆದ್ದರಿಂದ ಆಯ್ಕೆಗೊಂಡಿ ರುವ ಅಭ್ಯರ್ಥಿಗಳು ತಮ್ಮ ಮೂಲ ದಾಖ ಲೆಗಳೊಂದಿಗೆ (ಮೂಲ ಪ್ರಮಾಣ ಪತ್ರ ಗಳು ಹಾಗೂ 3 ಸೆಟ್ ಜೆರಾಕ್ಸ್ ದೃಢೀಕೃತ ಪ್ರತಿಗಳು) ಕೌನ್ಸಿಲಿಂಗ್‍ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೊ ತಿಳಿಸಿದ್ದಾರೆ.

Translate »