ಕೆ.ಆರ್.ಪೇಟೆ, ಡಿ.24- ಪರಿಶ್ರಮದ ಮೂಲಕ ಅನ್ನ ನೀಡುವ ರೈತರ ಕಾಯಕ ಎಲ್ಲಾ ಕಾಯಕಕ್ಕಿಂತ ಸರ್ವಶ್ರೇಷ್ಠ ಕಾಯಕ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಾನಕೀರಾಂ ತಿಳಿಸಿದರು. ಪಟ್ಟಣದ ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ರಾಷ್ಟ್ರೀಯ ರೈತರ, ವಿಶ್ವ ಮಣ್ಣು ದಿನಾಚರಣೆ ಹಾಗೂ ಆತ್ಮ ಯೋಜನೆಯಡಿ ಪ್ರಗತಿಪರ ರೈತರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂ ಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆವರು ಹರಿಸಿ ಭೂ ತಾಯಿ ಸೇವೆ ಮಾಡುವ ರೈತರ ಕಾಯಕ ಸರ್ವಶ್ರೇಷ್ಠ ಕಾಯಕ. ಪಟ್ಟಣ ನಿವಾಸಿಗಳಂತೆ…
ಮೈಷುಗರ್, ಪಿಎಸ್‍ಎಸ್‍ಕೆ ಖಾಸಗಿಗೆ ವಹಿಸಲು ನಿರ್ಧಾರ: ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳ ಒಕ್ಕೊರಲ ನಿರ್ಣಯ
December 24, 2019ಮಂಡ್ಯ, ಡಿ.23(ನಾಗಯ್ಯ)- ಜಿಲ್ಲೆಯ ಮೈಷುಗರ್ ಹಾಗೂ ಪಿಎಸ್‍ಎಸ್‍ಕೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸುವ ಮೂಲಕ ಪ್ರಾರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ನಗರದ ಜಿಪಂ ಸಭಾಂಗಣದಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಒಪ್ಪಿಗೆ ಮೇರೆಗೆ ಖಾಸಗಿ ಯವರಿಗೆ ಟೆಂಡರ್ ನೀಡುವ ಮೂಲಕ ಪ್ರಾರಂಭಕ್ಕೆ ನಿರ್ಧರಿಸಲಾಯಿತು. ಸಭೆಯಲ್ಲಿದ್ದ ಶಾಸಕರಾದ ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ.ಅನ್ನದಾನಿ, ಕೆ.ಸುರೇಶ್‍ಗೌಡ, ಕೆ.ಸಿ.ನಾರಾಯಣಗೌಡ, ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ ಸೇರಿದಂತೆ ಎಲ್ಲರೂ ಖಾಸಗಿಯವರಿಗೆ…
ರೈತರಿಗೆ ವೈಜ್ಞಾನಿಕ ಕೃಷಿ ಬಗ್ಗೆ ಅರಿವು ಮೂಡಿಸಿ ಸಾಹಿತಿ ದೇವನೂರ ಮಹದೇವ ಸಲಹೆ
December 24, 2019ಭಾರತೀನಗರ, ಡಿ.23(ಅ.ಸತೀಶ್)- ಮಿತ ನೀರಿನ ಬಳಕೆ, ವೈಜ್ಞಾನಿಕ ಕೃಷಿ ಪದ್ಧತಿ ಕುರಿತಂತೆ ರೈತರಿಗೆ ಅರಿವು ಮೂಡಿಸ ಬೇಕಾದ ಗುರುತರ ಜವಾಬ್ದಾರಿ ರೈತ ಸಂಘದ ಮೇಲಿದೆ ಎಂದು ಸಾಹಿತಿ ದೇವನೂರ ಮಹದೇವ ಹೇಳಿದರು. ಭಾರತೀನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯಿಂದ ವಿಶ್ವ ರೈತ ದಿನಾಚರಣೆ, ಕೆ.ಎಸ್.ಪುಟ್ಟಣ್ಣಯ್ಯ, ಎನ್.ಡಿ.ಸುಂದರೇಶ್ ನೆನಪಿನಾರ್ಥ ನಡೆದ ರೈತರ ಬಹಿರಂಗ ಸಭೆ ಹಾಗೂ ‘ಕಾಯಕ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಯುವ ರೈತರು ಕೃಷಿಯಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಕೃಷಿಯನ್ನು…
ಮಂಡ್ಯ ಸಂಜಯ ಸರ್ಕಲ್ ಒತ್ತುವರಿ
December 23, 2019ಸ್ವರ್ಣಸಂದ್ರದಿಂದ ಕಲ್ಲಹಳ್ಳಿವರೆಗಿನ ಹೆದ್ದಾರಿಯೂ ಒತ್ತುವರಿ ಸುಗಮ ಸಂಚಾರಕ್ಕೆ ಅಡ್ಡಿ ಮಂಡ್ಯ, ಡಿ.22- ನಾಡನ್ನಾಳುತ್ತಿದ್ದ ಮಹಾ ರಾಜರು ಪ್ರಜೆಗಳ ಸುರಕ್ಷತೆ ದೃಷ್ಟಿಯನ್ನಿಟ್ಟು ಕೊಂಡು ರಸ್ತೆಗಳು, ವೃತ್ತಗಳು, ನಿಲ್ದಾಣ ಗಳು, ಕೆರೆ-ಕಟ್ಟೆಗಳು ಇತ್ಯಾದಿ ಸಾರ್ವಜನಿಕ ಉಪಯೋಗಿ ತಾಣಗಳನ್ನು ನಿರ್ಮಿಸುತ್ತಿ ದ್ದರು. ಅದಕ್ಕೊಂದು ವೈಜ್ಞಾನಿಕ ಮಾನ ದಂಡವೂ ಇರುತ್ತಿತ್ತು. ಸರ್ಕಾರಿ ದಾಖಲೆ ಗಳಲ್ಲಿ ಅದನ್ನು ನಾವು ಇಂದಿಗೂ ನೋಡ ಬಹುದು. ಆದರೆ ಪ್ರಸ್ತುತ ಭ್ರಷ್ಟ ಆಡಳಿತ ವ್ಯವಸ್ಥೆಯಿಂದಾಗಿ ಅದೆಷ್ಟೋ ರಸ್ತೆಗಳು, ವೃತ್ತಗಳು, ಕೆರೆ-ಕಟ್ಟೆಗಳು ಸಾರ್ವಜನಿಕ ಉಪ ಯೋಗಿ ತಾಣಗಳು ನಾಪತ್ತೆಯಾಗಿ ಪಟ್ಟ…
ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸಲು ಎಸ್‍ಟಿಜಿ ಸ್ಥಾಪನೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಭಿಪ್ರಾಯ
December 23, 2019ಚಿನಕುರಳಿ, ಡಿ.22(ಸಿ.ಎ.ಲೋಕೇಶ್)- ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಶಾಸಕ ಸಿ.ಎಸ್.ಪುಟ್ಟರಾಜು ಚಿನಕುರಳಿಯಲ್ಲಿ ಎಸ್‍ಟಿಜಿ ಶಾಲೆ ತೆರೆದಿದ್ದಾರೆ ಎಂದು ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಭಿಪ್ರಾಯಪಟ್ಟರು. ಇಲ್ಲಿನ ಎಸ್‍ಟಿಜಿ ವಿದ್ಯಾಸಂಸ್ಥೆಯಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿರುವ ಕಲಾವಿಸ್ಮಯ- 2019 ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಿಂದ ಹೊರ ದೇಶಗಳಿಗೆ ವಿದ್ಯಾಭ್ಯಾಸಕ್ಕೆ ಹೋದ ಬಹಳಷ್ಟು ಮಂದಿ ಅಲ್ಲೇ ಉಳಿದು ಬಿಡುತ್ತಾರೆ. ಆದರೆ, ಶಾಸಕ ಸಿ.ಎಸ್.ಪುಟ್ಟರಾಜು ಅವರ ಪುತ್ರ ಸಿ.ಪಿ.ಶಿವರಾಜು ಅಮೆರಿಕದಲ್ಲಿ ವಿದ್ಯಾಭ್ಯಾಸ ಮುಗಿಸಿದರೂ ಮತ್ತೆ ತಾಯ್ನಾಡಿಗೆ…
ಸಮಾಜಕ್ಕೆ ಪ್ರವಾದಿ ಮಹಮ್ಮದ್‍ರ ಸಂದೇಶ ಅನಿವಾರ್ಯ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
December 23, 2019ಮಂಡ್ಯ, ಡಿ.22(ನಾಗಯ್ಯ)- ಪ್ರಸ್ತುತ ಪ್ರವಾದಿ ಮಹಮ್ಮದ್ ಅವರ ಸಂದೇಶ ಗಳನ್ನು ಸಮಾಜಕ್ಕೆ ತಲುಪಿಸುವÀ ಅನಿವಾರ್ಯ ಇದೆ ಎಂದು ಸುತ್ತೂರು ಮಠದ ಶ್ರೀ ಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ನಗರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮುಸ್ಲಿಂ ಒಕ್ಕೂಟದ ವತಿ ಯಿಂದ ಆಯೋಜಿಸಿದ್ದ ಪ್ರವಾದಿ ಮಹ ಮ್ಮದ್ ಕುರಿತಾದ ಸೀರತ್ ಪ್ರವಚನ ಮತ್ತು ಸೌಹಾರ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ಎಲ್ಲಾ ಧರ್ಮಗಳನ್ನು ಗೌರವಿಸಲಾಗುವುದು. ಹೀಗಾಗಿ ಧರ್ಮ ದಲ್ಲಿ…
ಶಿಕ್ಷಕರ ಸಮಸ್ಯೆ ನಿವಾರಣೆಗೆ ನೂತನ `ಆ್ಯಪ್’
December 19, 201920 ದಿನದಲ್ಲಿ ಆ್ಯಪ್ ಬಿಡುಗಡೆಗೆ ಕ್ರಮ: ಶಿಕ್ಷಣ ಸಚಿವ ಸುರೇಶ್‍ಕುಮಾರ್ ಮಂಡ್ಯ, ಡಿ.18(ನಾಗಯ್ಯ)- ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಮಸ್ಯೆ ನಿವಾರಣೆಗೆ ನೂತನವಾಗಿ ಆ್ಯಪ್ ಜಾರಿಗೆ ತರಲಾಗುತ್ತಿದ್ದು, ಇನ್ನು 20 ದಿನದಲ್ಲಿ ಈ ಆ್ಯಪ್ ಬಿಡುಗಡೆಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ತಿಳಿಸಿದರು. ತಾಲೂಕಿನ ಸಾತನೂರು ಗ್ರಾಮದ ಅಚೀ ವರ್ಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಬುಧವಾರ ರಾಜ್ಯಶಾಸ್ತ್ರ ಅಕಾಡೆಮಿ ಯಿಂದ ಆಯೋಜಿಸಲಾಗಿದ್ದ ಶೈಕ್ಷಣಿಕ…
ಡಿ.23ಕ್ಕೆ ರೈತರ ಬೃಹತ್ ಸಮಾವೇಶ, ಕಾಯಕ ಯೋಗಿ ಪ್ರಶಸ್ತಿ ಪ್ರದಾನ
December 19, 2019ಮಳವಳ್ಳಿ, ಡಿ.18- ತಾಲೂಕಿನ ಭಾರತೀನಗರದಲ್ಲಿ ಡಿ.23ರಂದು ರೈತರ ಬೃಹತ್ ಸಮಾವೇಶ ಹಾಗೂ ‘ಕಾಯಕ ಯೋಗಿ’ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳ ಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ತಾಲೂಕು ರೈತ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಿ.23ರಂದು ರಾಷ್ಟ್ರದಾದ್ಯಂತ ಚೌದರಿ ಚರಣ್‍ಸಿಂಗ್ ಅವರ ಹುಟ್ಟುಹಬ್ಬವನ್ನು ವಿಶ್ವ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಗಾಗಿ, ಭಾರತೀನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ…
ಉತ್ತಮ ಸಮಾಜಕ್ಕೆ ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯ
December 19, 2019ಭಾರತೀನಗರ, ಡಿ.18(ಅ.ಸತೀಶ್)- ವಿದ್ಯೆ ಇಲ್ಲದಿದ್ದರೆ ಬದುಕು ಅತಂತ್ರವಾಗು ತ್ತದೆ. ಹಾಗಾಗಿ, ಉತ್ತಮ ಸಮಾಜ ನಿರ್ಮಾ ಣಕ್ಕೆ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಎಂದು ನಿವೃತ್ತ ಶಿಕ್ಷಕ ಮಡೇನಹಳ್ಳಿ ಎಂ.ಸಿ.ದಾಸಪ್ಪ ಸಲಹೆ ನೀಡಿದರು. ಇಲ್ಲಿಗೆ ಸಮೀಪದ ಮಡೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಪರಿಸರ ಜಾಗೃತಿ ವೇದಿಕೆಯಿಂದ ನಡೆದ ‘ಪರಿಸರ ಉಳಿಸಿ ಆಂದೋಲನ’ದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಗುಣ ಗಳನ್ನು ಮೈಗೂಡಿಸಿಕೊಂಡು ಶಿಕ್ಷಣ ಪಡೆ ಯುವ ಜೊತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರು ಕೈ ಜೋಡಿಸಬೇಕು. ಗುರು-ಹಿರಿಯರನ್ನು ಗೌರವದಿಂದ…
ಶ್ರೀರಂಗಪಟ್ಟಣದಲ್ಲಿ ಜ. 8ರಿಂದ ‘ಮಕ್ಕಳ ವಿಜ್ಞಾನ ಹಬ್ಬ’
December 19, 2019ಶ್ರೀರಂಗಪಟ್ಟಣ, ಡಿ.18(ವಿನಯ್ ಕಾರೇಕುರ)- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 2020ರ ಜ. 8ರಿಂದ 11ರವರೆಗೆ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ನೆರವೇರಲಿದ್ದು, ಕಾರ್ಯಕ್ರಮದ ರೂಪುರೇಷೆ ಕುರಿತು ಶಾಸಕ ರವೀಂದ್ರ ಶ್ರೀಕಂಠಯ್ಯ ವಿವಿಧ ಇಲಾಖೆಗಳ ಅಧಿಕಾರಿ ಗಳು ಹಾಗೂ ಮುಖಂಡರ ಸಭೆ ನಡೆಸಿದರು. ಪಟ್ಟಣದ ಜೂನಿಯರ್ ಕಾಲೇಜು ಆವರಣ ದಲ್ಲಿ ಸಭೆ ನಡೆಸಿದ ಶಾಸಕರು, ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ವಿವಿಧ ರಾಜ್ಯಗಳ 400ಕ್ಕೂ ಅಧಿಕ ಹಾಗೂ ರಾಜ್ಯದ 350ಕ್ಕೂ ಅಧಿಕ ಯುವ…