ರೈತರಿಗೆ ವೈಜ್ಞಾನಿಕ ಕೃಷಿ ಬಗ್ಗೆ ಅರಿವು ಮೂಡಿಸಿ ಸಾಹಿತಿ ದೇವನೂರ ಮಹದೇವ ಸಲಹೆ
ಮಂಡ್ಯ

ರೈತರಿಗೆ ವೈಜ್ಞಾನಿಕ ಕೃಷಿ ಬಗ್ಗೆ ಅರಿವು ಮೂಡಿಸಿ ಸಾಹಿತಿ ದೇವನೂರ ಮಹದೇವ ಸಲಹೆ

December 24, 2019

ಭಾರತೀನಗರ, ಡಿ.23(ಅ.ಸತೀಶ್)- ಮಿತ ನೀರಿನ ಬಳಕೆ, ವೈಜ್ಞಾನಿಕ ಕೃಷಿ ಪದ್ಧತಿ ಕುರಿತಂತೆ ರೈತರಿಗೆ ಅರಿವು ಮೂಡಿಸ ಬೇಕಾದ ಗುರುತರ ಜವಾಬ್ದಾರಿ ರೈತ ಸಂಘದ ಮೇಲಿದೆ ಎಂದು ಸಾಹಿತಿ ದೇವನೂರ ಮಹದೇವ ಹೇಳಿದರು.

ಭಾರತೀನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯಿಂದ ವಿಶ್ವ ರೈತ ದಿನಾಚರಣೆ, ಕೆ.ಎಸ್.ಪುಟ್ಟಣ್ಣಯ್ಯ, ಎನ್.ಡಿ.ಸುಂದರೇಶ್ ನೆನಪಿನಾರ್ಥ ನಡೆದ ರೈತರ ಬಹಿರಂಗ ಸಭೆ ಹಾಗೂ ‘ಕಾಯಕ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ರೈತರು ಕೃಷಿಯಿಂದ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಕೃಷಿಯನ್ನು ಲಾಭದಾಯಕ ಉದ್ಯಮ ವನ್ನಾಗಿ ಮಾಡಲು ಆಲೋಚನೆ ನಡೆಸುವುದು ಅಗತ್ಯ. ಕಬ್ಬು, ಭತ್ತದ ಬೆಳೆಗಳನ್ನೇ ಬೆಳೆದು ನಷ್ಟ ಮಾಡಿಕೊಳ್ಳುವು ದನ್ನು ಬಿಟ್ಟು ಇನ್ನಾದರೂ, ಪರ್ಯಾಯ ಬೆಳೆಗಳತ್ತ ಆಲೋಚನೆ ನಡೆಸಬೇಕು. ಬೆಳೆ ಬೆಳೆಯುವುದಕ್ಕೆ ಮಾತ್ರ ಒತ್ತು ನೀಡದೆ, ಸಣ್ಣ ಪುಟ್ಟ ಗುಡಿ ಕೈಗಾರಿಕೆಗಳತ್ತಲೂ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಸಾಂಪ್ರದಾಯಿಕವಾಗಿ ಕೃಷಿ ಪದ್ಧತಿಯಲ್ಲೇ ನಿರತರಾಗಿದ್ದ ರೈತರಿಗೆ ಚೈತನ್ಯ ನೀಡಿ, ಹೋರಾಟದ ಹಾದಿಯಲ್ಲಿ ಸಾಗು ವಂತೆ ಮಾಡಿದ ಪೆÇ್ರ. ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್, ಕೆ.ಎಸ್. ಪುಟ್ಟಣ್ಣಯ್ಯನವರ ಕಾರ್ಯ ಅನನ್ಯ. ಅವರ ಹೋರಾಟ ದಿಂದಾಗಿ ರೈತರ ಹಲವಾರು ಸಮಸ್ಯೆಗಳು ಬಗೆಹರಿದಿವೆ. ಅಂತಹ ಮಹನೀಯ ಆದರ್ಶಗಳು ಇಂದಿನ ಯುವ ರೈತರಿಗೆ ಮಾರ್ಗದರ್ಶನವಾಗಬೇಕು ಎಂದರು.

ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ದೇಶದಲ್ಲಿ ರೈತಪರ ಕಾಳಜಿಯುಳ್ಳ ರೈತ ನಾಯಕರಿಗೆ ಅಧಿಕಾರ ಸಿಕ್ಕಿದ್ದು ಕಡಿಮೆ. ಇದರಿಂದಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾ ಗಿಲ್ಲ. ರೈತಪರ ಹೋರಾಟಕ್ಕೆ ಹೆಸರಾದ ಡಾ.ಚರಣ್‍ಸಿಂಗ್ ಹಾಗೂ ಹೆಚ್.ಡಿ.ದೇವೇಗೌಡ ಅವರು ರೈತರ ಸಮಸ್ಯೆ ಗಳನ್ನು ಬಗೆಹರಿಸಲು ಉತ್ಸುಕರಾಗಿದ್ದರು. ಆದರೆ, ಅವರು ಈ ದೇಶದ ಪ್ರಧಾನಿಯಾದದ್ದು ಕೆಲವು ತಿಂಗಳು ಮಾತ್ರ. ರೈತಪರ ಕಾಳಜಿಯುಳ್ಳವರಿಗೆ ಎಂದೂ ಸಂಪೂರ್ಣ ಅಧಿಕಾರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರೈತರು ಕೃಷಿ ಪದ್ಧತಿ ಅನುಸರಿಸುತ್ತಿರುವ ಬಗ್ಗೆ ಅವಲೋ ಕನ ಮಾಡಿಕೊಳ್ಳಬೇಕಾಗಿದೆ. ಮಂಡ್ಯವನ್ನು ಸಂಪದ್ಭರಿತ ಜಿಲ್ಲೆ ಎಂದು ಹೇಳಲಾಗುತ್ತದೆ. ಆದರೆ, ಜಿಲ್ಲೆಯಲ್ಲೇ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಎಲ್ಲರೂ ಆಲೋಚನೆ ಮಾಡಬೇಕಾಗಿದೆ ಎಂದರು.

ಮಾಜಿ ಸಂಸದ ಜಿ.ಮಾದೇಗೌಡ ಮಾತನಾಡಿ, ಪ್ರಸ್ತುತ ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಏನೇ ಸಮಸ್ಯೆಗಳಾ ದರೂ ಕೆ.ಎಸ್.ಪುಟ್ಟಣ್ಣಯ್ಯ ಅವರು ಪಕ್ಷಬೇಧ ಮರೆತು ಹೋರಾಟ ಮಾಡಿ ನ್ಯಾಯ ದೊರಕಿಸಿ ಕೊಡುತ್ತಿದ್ದರು. ಆದರೆ, ಅಂತಹ ಮಹಾನ್ ನಾಯಕನನ್ನು ಕಳೆದುಕೊಂಡಿ ರುವುದು ದುರಾದೃಷ್ಟಕರ ಎಂದರು.

ಕೆ.ಎಸ್.ಪುಟ್ಟಣ್ಣಯ್ಯನವರ ಜೊತೆ ಕಾವೇರಿ ಹಾಗೂ ಮೈಷುಗರ್ ಪುನಶ್ಚೇತನಕ್ಕಾಗಿ ನಾನು ಹಲವಾರು ಹೋರಾಟ ಗಳಲ್ಲಿ ಭಾಗವಹಿಸಿz್ದÉೀನೆ. ನಮ್ಮ ಸಮಸ್ಯೆಗಳನ್ನು ಹೋರಾಟದ ಮೂಲಕವೇ ಬಗೆಹರಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ರೈತರ ಸಮಸ್ಯೆಗಳು ಏನೆಂದು ಇಂದಿನ ಅಧಿಕಾರಿಗಳಿಗೆ ಗೊತ್ತಾಗು ತ್ತಿಲ್ಲ. ಆ ಕೆಲಸವನ್ನು ರೈತ ಸಂಘ ಮಾಡಬೇಕಾಗಿದೆ ಎಂದರು.

ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಬಂದು ಲಕ್ಷಾಂತರ ಮಂದಿ ಬೀದಿಗೆ ಬಿದ್ದಿದ್ದರು. ಆದರೆ, 17 ಮಂದಿ ಶಾಸಕರು ಅಧಿಕಾರದಾಸೆಗಾಗಿ ರಾಜೀನಾಮೆ ಕೊಟ್ಟು ಮುಂಬೈ ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಸರ್ಕಾರವೂ ಸಹ ನೆರೆ ಸಂತ್ರಸ್ತರಿಗೆ ಸಮರ್ಪಕ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾ ಗಿದೆ ಎಂದು ಆರೋಪಿಸಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು. ಈ ವೇಳೆ 101 ರೈತ ಮಹಿಳೆಯರಿಗೆ ‘ಕಾಯಕ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಸಮಾರಂಭದಲ್ಲಿ ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ಸ್ಮಿತಾ ಪುಟ್ಟಣ್ಣಯ್ಯ, ರಾಜ್ಯ ರೈತ ಸಂಘದ ವರಿಷ್ಠ ಸುರೇಶ್‍ಬಾಬು, ಮುಖಂಡರಾದ ಗಣಪತಿ ಪಾಟೀಲ್, ನಂದಿನಿ ಜಯ ರಾಂ, ಎಂ.ರಾಮು, ಅಣ್ಣೂರು ಮಹೇಂದ್ರ, ರವಿ ಕುಮಾರ್, ಕೆ.ಪಿ.ದೊಡ್ಡಿ ಪುಟ್ಟಸ್ವಾಮಿ, ಶಂಭೂನಹಳ್ಳಿ ಸುರೇಶ್, ತಾಪಂ ಸದಸ್ಯೆ ಲಲಿತಾ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತ ಸಂಘದ ಜಿಲ್ಲಾಧ್ಯಕ್ಷರು ಇತರರು ಭಾಗವಹಿಸಿದ್ದರು.

ಸಮಾರಂಭಕ್ಕೂ ಮುನ್ನ ಭಾರತೀನಗರದ ಅಂಬೇಡ್ಕರ್ ಭವನದಿಂದ ವೇದಿಕೆಯವರೆಗೆ ರೈತ ಸಂಘದ ಕಾರ್ಯ ಕರ್ತರು ಎತ್ತಿನ ಗಾಡಿಗಳ ಮೂಲಕ ಮೆರವಣಿಗೆ ನಡೆಸಿದರು.

ಜಿಲ್ಲೆಯಲ್ಲಿ 33ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಆದರೆ, 50 ಲಕ್ಷ ಟನ್‍ಗೂ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ. ಪ್ರಸ್ತುತ 21ಲಕ್ಷ ಟನ್ ಕಬ್ಬನ್ನು ಅರೆಯಲಾಗಿದೆ. ಇನ್ನೂ 28ಲಕ್ಷ ಟನ್ ಕಬ್ಬು ಒಣಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್‍ರಿಗೆ ಮನವಿ ಮಾಡಲಾಗಿದೆ.
– ಡಿ.ಸಿ.ತಮ್ಮಣ್ಣ, ಶಾಸಕ

ಬೋಲ್ಸಾನಾರೋ ಆಹ್ವಾನಕ್ಕೆ ವಿರೋಧ
2020, ಜ.26ರ ಗಣರಾಜ್ಯೋತ್ಸವಕ್ಕೆ ಬ್ರೆಜಿಲ್ ಅಧ್ಯಕ್ಷ ಬೋಲ್ಸಾನಾರೋ ಅವರಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿ ರುವುದಕ್ಕೆ ರಾಜ್ಯ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ.

ಭಾರತೀನಗರದಲ್ಲಿ ನಡೆದ ವಿಶ್ವ ರೈತ ದಿನಾಚರಣೆ ಜಾಥಾ ದಲ್ಲಿ ರೈತ ಸಂಘದ ಕಾರ್ಯಕರ್ತರು, ಗಣರಾಜ್ಯೋತ್ಸವ ಸಂಭ್ರಮಕ್ಕೆ ಬ್ರೆಜಿಲ್ ಅಧ್ಯಕ್ಷ ಬೋಲ್ಸಾನಾರೋ ಅತಿಥಿಯಾಗುವುದು ಬೇಡ ಎಂಬ ಬ್ಯಾನರ್ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬ್ರೆಜಿಲ್ ಅಧ್ಯಕ್ಷ ಬೋಲ್ಸಾನಾರೋ ಅವರು, ಭಾರತವು ಕಬ್ಬು ಬೆಳೆ ನೀತಿ ರೂಪಿಸಿ, ಕಬ್ಬಿಗೆ ಸಬ್ಸಿಡಿ ಕೊಡುತ್ತಿದೆ. ಅಲ್ಲದೆ, ಬೆಲೆ ನಿಗದಿ ಮಾಡುತ್ತಿದೆ. ಇದು ವಿಶ್ವ ವಾಣಿಜ್ಯ ಒಪ್ಪಂದಕ್ಕೆ ವಿರುದ್ಧವಾದುದು ಎಂದು ಪ್ರಕರಣ ದಾಖಲಿಸಿ ದ್ದಾರೆ. ಇಂತಹ ನಾಯಕರಿಂದ ರೈತರಿಗೆ ಅನ್ಯಾಯವಾಗು ತ್ತದೆ. ಆದ್ದರಿಂದ ಇಂತಹವರು ನಮ್ಮ ದೇಶಕ್ಕೆ ಬರುವುದು ಬೇಡ. ಕೂಡಲೇ ಕೇಂದ್ರ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

Translate »