ಪೊನ್ನಂಪೇಟೆಯಲ್ಲಿ ‘ಪುತ್ತರಿ ಕೋಲ್ ಮಂದ್’
ಕೊಡಗು

ಪೊನ್ನಂಪೇಟೆಯಲ್ಲಿ ‘ಪುತ್ತರಿ ಕೋಲ್ ಮಂದ್’

December 24, 2019

ಪೊನ್ನಂಪೇಟೆ, ಡಿ.23- ಪೊನ್ನಂಪೇಟೆ ಕೊಡವ ಸಮಾಜದಿಂದ ನಡೆದ ಕೊಡವ ಸಾಂಸ್ಕøತಿಕ ದಿನ ಹಾಗೂ ಪುತ್ತರಿ ಕೋಲ್ ಮಂದ್ ನಮ್ಮೆ ಆಚರಣೆಯಲ್ಲಿ ಉಮ್ಮತ್ತಾಟಿನ ತಾಳ, ಪುತ್ತರಿ ಕೋಲಾಟದ ಕೋಲುಗಳ ಕಲರವದೊಂದಿಗೆ ಕೊಡವ ಸಾಂಸ್ಕøತಿಕ ಶ್ರೀಮಂತಿಕೆ ಸಾರಲಾಯಿತು.

ಕೊಡವ ಸಮಾಜದ ಸಾಂಸ್ಕøತಿಕ ಸಮಿತಿ ಸಂಚಾಲಕ, ಜಾನಪದ ತಜ್ಞ ಕಾಳೀಮಾಡ ಮೋಟಯ್ಯ ಮೇಲುಸ್ತುವಾರಿ ಯಲ್ಲಿ ಸಾಂಸ್ಕøತಿಕ ಪೈಪೋಟಿ ಕಾರ್ಯಕ್ರಮ ನಡೆಯಿತು. ಹಿರಿಯರಾದ ಕೇಕಡ ನಾಣಯ್ಯ ಹಾಗೂ ಪಾರುಂಗಡ ಸನ್ನಿ ಮೊಣ್ಣಪ್ಪ ಕಾವೇರಿ, ಮಾತೆಯ ಪ್ರತಿಮೆಯ ಮುಂದೆ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ ಮಾಡರಾಜೀವ್ ಬೋಪಯ್ಯ ಮಾತನಾಡಿ, ಕೊಡವರ ಆಚಾರ-ವಿಚಾರ, ಕಲೆ, ಸಂಸ್ಕøತಿಯ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿಕೊಡವ ಸಾಂಸ್ಕøತಿಕ ದಿನವನ್ನು ಕಳೆದ 20 ವರ್ಷಗಳಿಂದ ಆಯೋಜಿಸಿ ಕೊಂಡು ಬರಲಾಗುತ್ತಿದೆ ಎಂದರು.

ಕೊಡವ ಸಾಂಸ್ಕøತಿಕ ಮತ್ತು ಜಾನಪದ ಕಲಾ ಪೈಪೋಟಿಯಲ್ಲಿ ಪುತ್ತರಿ ಕೋಲಾಟ್, ಬೊಳಕಾಟ್, ಪರೆಯಕಳಿ, ಉಮ್ಮತ್ತಾಟ್, ವಾಲಗತ್ತಾಟ್, ಕಪ್ಪೆಯಾಟ್, ಕತ್ತಿಯಾಟ್, ಪ್ರದರ್ಶನದಲ್ಲಿ ಕೊಡವ ಸಾಂಸ್ಕøತಿಕ ವೈಭವ ಕಂಗೊಳಿಸಿತು. ಪೈಪೋಟಿಯ ನಂತರ ಪುತ್ತರಿ ಹಬ್ಬದ ವಿಶೇಷ ಖಾದ್ಯ ‘ತಂಬುಟ್ಟ್’ನೊಂದಿಗೆ ಸಾಂಪ್ರದಾಯಿಕ ಊಟೋಪಚಾರ ಸವಿದರು.

ವಿವಿಧ ಸ್ಪಧೆಯಲ್ಲಿ ಜಯಗಳಿಸಿದವರ ವಿವರ: ಪುತ್ತರಿ ಕೋಲಾಟ್- ಹಿರಿಯರ ವಿಭಾಗ: ಟಿ.ಶೆಟ್ಟಿಗೇರಿ ಕೊಡವ ಸಮಾಜ (ಪ್ರಥಮ), ಬಿರುನಾಣಿ ಪುತ್ತ್‍ಭಗವತಿ (ದ್ವಿತೀಯ), ಗೋಣಿಕೊಪ್ಪ ಕಾವೇರಿ ಕಾಲೇಜು(ತೃತೀಯ). ಕಿರಿಯರ ವಿಭಾಗ: ಟಿ.ಶೆಟ್ಟಿಗೇರಿ ರೂಟ್ಸ್ ಏಜ್ಯುಕೇಷನಲ್ ಟ್ರಸ್ಟ್(ಪ್ರಥಮ), ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ (ದ್ವಿತೀಯ). ಬೊಳಕಾಟ್- ಹಿರಿಯರ ವಿಭಾಗ: ಟಿ.ಶೆಟ್ಟಿಗೇರಿ ಕೊಡವ ಸಮಾಜ(ಪ್ರಥಮ), ಗೋಣಿಕೊಪ್ಪ ಕಾವೇರಿ ಕಾಲೇಜು(ದ್ವಿತೀಯ), ಬಿರುನಾಣಿ ಪುತ್ತು ಭಗವತಿ(ತೃತೀಯ). ಕಿರಿಯರ ವಿಭಾಗ: ಪೊನ್ನಂಪೇಟೆ ಅಪ್ಪಚ್ಚಕವಿ (ಪ್ರಥಮ), ಟಿ.ಶೆಟ್ಟಿಗೇರಿ ರೂಟ್ಸ್(ದ್ವಿತೀಯ).

ಪರೆಯಕಳಿ- ಹಿರಿಯರ ವಿಭಾಗ- ಬೋಟೋ ಳಿಯ ಆರ್ಜಿತಂಡ(ಪ್ರಥಮ), ತೂಚಮಕೇರಿ ತಂಡ (ದ್ವಿತೀಯ), ಗೋಣಿಕೊಪ್ಪ ಕಾವೇರಿ ಕಾಲೇಜು(ತೃತೀಯ), ಕಿರಿಯರ ವಿಭಾಗ- ಪೊನ್ನಂಪೇಟೆ ಅಪ್ಪಚ್ಚಕವಿ (ಪ್ರಥಮ), ಟಿ.ಶೆಟ್ಟಿಗೇರಿ ರೂಟ್ಸ್ (ದ್ವಿತೀಯ), ನೆಲ್ಲಮಾಡ ವೇದಾಂತ್-ಸಿದ್ಧಾಂತ್ (ತೃತೀಯ).

ಉಮ್ಮತ್ತಾಟ್ ಹಿರಿಯರ ವಿಭಾಗ: ಬಾಡ ಗರಕೇರಿ ಮಹಿಳಾ ಸಮಾಜ(ಪ್ರಥಮ), ಹೈಸೊಡ್ಲೂರು ಪಯ್ಯಡ ಮಂದ್ (ದ್ವಿತೀಯ), ಗೋಣಿಕೊಪ್ಪ ಕಾವೇರಿ ಕಾಲೇಜು(ತೃತೀಯ), ಕಿರಿಯರ ವಿಭಾಗ- ಟಿ.ಶೆಟ್ಟಿಗೇರಿ ರೂಟ್ಸ್(ಪ್ರಥಮ), ಪೊನ್ನಂ ಪೇಟೆ ಅಪ್ಪಚ್ಚಕವಿ (ದ್ವಿತೀಯ), ಹುದಿಕೇರಿ ಲಿಟಲ್ ಫ್ಲವರ್ ಶಾಲೆ(ತೃತೀಯ).

ವಾಲಗತ್ತಾಟ್ ಪುರುಷ ಹಿರಿಯರ ವಿಭಾಗ: ಕಬ್ಬಚ್ಚೀರ ಮಾಚಯ್ಯ(ಪ್ರಥಮ), ಮತ್ರಂಡ ಹರ್ಷಿತ್‍ಪೂವಯ್ಯ(ದ್ವಿತೀಯ), ವೇದಾಂತ್‍ಗಣಪತಿ(ತೃತೀಯ), ಕಿರಿಯರ ವಿಭಾಗ: ಲಖೀನ್ ಚಿಣ್ಣಪ್ಪ(ಪ್ರಥಮ), ಕುಂಞಂಗಡ ರಾಕೇಶ್(ದ್ವಿತೀಯ), ನಮನ್ ನಂಜಪ್ಪ(ತೃತೀಯ), ಹಿರಿಯ ಮಹಿಳೆ ಯರ ವಿಭಾಗ: ಅಪ್ಪಚ್ಚೀರ ದರ್ಶಿನಿ (ಪ್ರಥಮ), ಕೆಂಜಂಗಡ ಜೀವಿತ್‍ತಂಗಮ್ಮ (ದ್ವಿತೀಯ), ಅಣ್ಣೀರ ರೂಪಪೆಮ್ಮಯ್ಯ (ತೃತೀಯ), ಕಿರಿಯರ ವಿಭಾಗ: ಸಿ. ದೇಚಮ್ಮ(ಪ್ರಥಮ), ದೀಕ್ಷಿತ(ದ್ವಿತೀಯ), ಸೀತಮ್ಮ(ತೃತೀಯ).

ಕತ್ತಿಯಾಟ್ ಹಿರಿಯರ ವಿಭಾಗ: ಟಿ.ಶೆಟ್ಟಿಗೇರಿ ಕೊಡವ ಸಮಾಜ(ಪ್ರಥಮ), ಗೋಣಿಕೊಪ್ಪ ಕಾವೇರಿ ಕಾಲೇಜು (ದ್ವಿತೀಯ), ಬಿರುನಾಣಿ ಪುತ್ತುಭಗವತಿ (ತೃತೀಯ). ಕಿರಿಯರ ವಿಭಾಗ: ಟಿ.ಶೆಟ್ಟಿಗೇರಿ ರೂಟ್ಸ್(ಪ್ರಥಮ).

ಕಪ್ಪೆಯಾಟ್ ಕಿರಿಯರು: ಕರ್ತಮಾಡ ಕಾಂಚನ್(ಪ್ರಥಮ), ಕರ್ತಮಾಡ ಅನುಪ್(ದ್ವಿತೀಯ), ನೆಲ್ಲಮಾಡ ಸಿದ್ಧಾಂತ್ (ತೃತೀಯ). ಹಿರಿಯರು: ಅಣ್ಣೀರ ನಾಚಪ್ಪ (ಪ್ರಥಮ), ನೆಲ್ಲಮಾಡ ಸೋಮಣ್ಣ (ದ್ವಿತೀಯ), ಮಾಯಣಮಾಡ ಆದರ್ಶ್ ಕಾರ್ಯಪ್ಪ(ತೃತೀಯ). ಸಂಗೀತ ಕುರ್ಚಿ: ಕೊಡಂಗಡ ತೃಷಿ ರೋಶನ್(ಪ್ರಥಮ), ಕೊಡಂಗಡ ಚರಿತಾ ಬಿದ್ದಪ್ಪ(ದ್ವಿತೀಯ), ಮಲ್ಚೀರ ಗ್ರೇಷಿ ಗಿರೀಶ್(ತೃತೀಯ) ಅವರು ಪೈಪೋಟಿಯಲ್ಲಿ ಬಹುಮಾನ ಪಡೆದರು.

ತೀರ್ಪುಗಾರರಾಗಿ ಮೀದೇರಿರ ಕಾರ್ಯಪ್ಪ, ಸೋಮೆಯಂಡಕಾವೇರಪ್ಪ, ಕಾಳಿಮಾಡ ಲತಾ ಮೋಟಯ್ಯ, ಬಲ್ಲಡಿ ಚಂಡಕಸ್ತೂರಿ ಕಾರ್ಯನಿರ್ವಹಿಸಿದರು.

Translate »