ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಗಮನ ನೀಡಿ
ಮೈಸೂರು

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಗಮನ ನೀಡಿ

December 24, 2019

ಚಿನಕುರುಳಿ, ಡಿ.23- ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿ ಕೆಗೂ ಹೆಚ್ಚು ಗಮನ ನೀಡಬೇಕು ಎಂದು ಬೆಂಗಳೂರು ವಿವಿ ನಿವೃತ್ತ ರಿಜಿಸ್ಟರ್ ಕೆ.ಎನ್.ನಿಂಗೇಗೌಡ ಸಲಹೆ ನೀಡಿದರು.

ಗ್ರಾಮದ ಎಸ್‍ಟಿಜಿ ವಿದ್ಯಾಸಂಸ್ಥೆಯಲ್ಲಿ 3 ದಿನಗಳ ಕಾಲ ನಡೆದ ಕಲಾ ವಿಸ್ಮಯ-2019 ಶಾಲಾ ವಾರ್ಷಿಕೋತ್ಸವದ ಸಮಾ ರೋಪದಲ್ಲಿ ಮಾತನಾಡಿದ ಅವರು, ಶಿಕ್ಷಣ ವಾಣೀಜ್ಯಕರಣವಾಗಿರುವ ದಿನಗಳಲ್ಲಿ ಗ್ರಾಮೀಣ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡ ಬೇಕೆಂಬ ಆಶಯದೊಂದಿಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಮ್ಮ ತಂದೆ-ತಾಯಿ ಹೆಸರಲ್ಲಿ ಎಸ್‍ಟಿಜಿ ಶಿಕ್ಷಣ ಸಂಸ್ಥೆ ಆರಂಭಿಸಿರು ವುದು ಶ್ಲಾಘನೀಯ ಎಂದರು.

ಅಂತಾರಾಷ್ಟ್ರೀಯ ವಿದ್ಯಾಸಂಸ್ಥೆಗಳಲ್ಲಿ ಸಿಗುವ ಎಲ್ಲಾ ರೀತಿಯ ಮೂಲ ಸೌಕರ್ಯ ಎಸ್‍ಟಿಜಿ ವಿದ್ಯಾಸಂಸ್ಥೆಯಲ್ಲಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ರಾಜ್ಯ ಮಾತ್ರವಲ್ಲ, ಹೊರರಾಜ್ಯ, ವಿದೇಶಗಳಿಂದ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಮಾಡು ವಂತಹ ಮಟ್ಟಕ್ಕೆ ಬೆಳೆಯಬೇಕು ಎಂದರು.

ಮೈಸೂರು ಮುಕ್ತ ವಿವಿ ನಿವೃತ್ತ ಉಪ ಕುಲಪತಿ ಡಾ.ಎನ್.ಎಸ್.ರಾಮೇಗೌಡ, ಮಕ್ಕಳ ಶೈಕ್ಷಣಿಕ ಜ್ಞಾನ ಹೆಚ್ಚಿಸುವ ಶಿಕ್ಷಣ ನೀಡಬೇಕು. ದೇಶ ಪ್ರಗತಿ ಹೊಂದಲು ಮಾನವ ಶಕ್ತಿ ಮುಖ್ಯ. ಹಾಗಾಗಿ ಯುವ ಜನಾಂಗವನ್ನು ಸನ್ನಢತೆಯಲ್ಲಿ ಮುಂದೆ ಸಾಗಿಸುವ ಜವಾ ಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿವೆ ಎಂದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತ ನಾಡಿ, ಗ್ರಾಮೀಣ ಮಕ್ಕಳ ಭವಿಷ್ಯ ಉತ್ತಮ ಗೊಳಿಸುವ ಹಿನ್ನೆಲೆಯಲ್ಲಿ ವಿದ್ಯಾಸಂಸ್ಥೆ ಆರಂಭಿಸಿ ದ್ದೇನೆ ಎಂದರು. ಕಾರ್ಯಕ್ರಮವನ್ನು ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಉದ್ಘಾಟಿಸಿ, ಹಲವು ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಮಕ್ಕಳು, ಪೋಷಕ ರನ್ನು ರಂಜಿಸಿದರು.

ಈ ವೇಳೆ ಬಿ.ಎಸ್.ಸತ್ಯನಾರಾಯಣ, ಕೆ.ಮುರುಳೀಧರ್, ಗ್ರಾಪಂ ಅಧ್ಯಕ್ಷೆ ವರಲಕ್ಷ್ಮಿ, ಉಪಾಧ್ಯಕ್ಷ ನಾಗರಾಜು, ಗುತ್ತಿಗೆದಾರ ಬಾಪೂಜಿ, ಸಂಸ್ಥೆ ಸಿಇಓ ಸಿ.ಪಿ.ಶಿವರಾಜು, ಕಾರ್ಯ ದರ್ಶಿ ಹರೀಶ್, ಆಡಳಿತಾಧಿಕಾರಿ ನಿವೇ ದಿತ, ಪ್ರಾಂಶುಪಾಲೆ ಮಾಚಮ್ಮ ಹಲವರಿದ್ದರು.

Translate »