ಮೈಷುಗರ್, ಪಿಎಸ್‍ಎಸ್‍ಕೆ ಖಾಸಗಿಗೆ ವಹಿಸಲು ನಿರ್ಧಾರ:  ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳ ಒಕ್ಕೊರಲ ನಿರ್ಣಯ
ಮಂಡ್ಯ

ಮೈಷುಗರ್, ಪಿಎಸ್‍ಎಸ್‍ಕೆ ಖಾಸಗಿಗೆ ವಹಿಸಲು ನಿರ್ಧಾರ: ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳ ಒಕ್ಕೊರಲ ನಿರ್ಣಯ

December 24, 2019

ಮಂಡ್ಯ, ಡಿ.23(ನಾಗಯ್ಯ)- ಜಿಲ್ಲೆಯ ಮೈಷುಗರ್ ಹಾಗೂ ಪಿಎಸ್‍ಎಸ್‍ಕೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ವಹಿಸುವ ಮೂಲಕ ಪ್ರಾರಂಭಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ನಗರದ ಜಿಪಂ ಸಭಾಂಗಣದಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಒಪ್ಪಿಗೆ ಮೇರೆಗೆ ಖಾಸಗಿ ಯವರಿಗೆ ಟೆಂಡರ್ ನೀಡುವ ಮೂಲಕ ಪ್ರಾರಂಭಕ್ಕೆ ನಿರ್ಧರಿಸಲಾಯಿತು.

ಸಭೆಯಲ್ಲಿದ್ದ ಶಾಸಕರಾದ ಸಿ.ಎಸ್. ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ.ಅನ್ನದಾನಿ, ಕೆ.ಸುರೇಶ್‍ಗೌಡ, ಕೆ.ಸಿ.ನಾರಾಯಣಗೌಡ, ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ ಸೇರಿದಂತೆ ಎಲ್ಲರೂ ಖಾಸಗಿಯವರಿಗೆ ವಹಿಸಲು ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಲಾಯಿತು.

ಸಚಿವ ಆರ್.ಅಶೋಕ್ ಮಾತನಾಡಿ, ಒಂದು ವಾರದೊಳಗೆ ಟೆಂಡರ್ ಕರೆದು ಖಾಸಗಿಯವರಿಗೆ ನೀಡಲು ಕ್ರಮ ವಹಿಸ ಲಾಗುವುದು. ಇದರ ಬಗ್ಗೆ ಮುಖ್ಯಮಂತ್ರಿ ಗಳೊಂದಿಗೆ 4 ಬಾರಿ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

ಕಾರ್ಖಾನೆಗಳ ಪುನಶ್ಚೇತನ ಹಾಗೂ ಆರಂಭಕ್ಕೆ ಎಲ್ಲಾ ಸರ್ಕಾರಗಳಿಂದ ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಆ ಹಣ ಎಲ್ಲಿಗೆ ಹೋಯಿತು ಎಂಬು ದರ ಬಗ್ಗೆ ಇದುವರೆಗೂ ಯಾರಿಗೂ ಗೊತ್ತಿಲ್ಲ. ಇಲ್ಲಿಯವರೆಗೆ ಬಂದ ಸರ್ಕಾರ ಗಳು ಸುಮಾರು 700ರಿಂದ 800 ಕೋಟಿ ರೂ. ಹಣ ಬಿಡುಗಡೆ ಮಾಡಿವೆ. ಆದರೆ ಹಣ ಖರ್ಚಾದ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಖಾನೆಗಳಿಗೆ ನೀಡುವ ಹಣ ಬೇಕಾ ಬಿಟ್ಟಿ ಪೋಲಾಗುತ್ತಿದೆ. ಬೇರೆಯವರ ಹಿತಾಸಕ್ತಿಗಾಗಿ ಹಣ ದುರ್ಬಳಕೆಯಾಗು ತ್ತಿದೆ. ಅದನ್ನು ತಪ್ಪಿಸಿ ಕಾರ್ಖಾನೆ ಪ್ರಾರಂ ಭಿಸಲು ಕ್ರಮ ವಹಿಸಬೇಕಾಗಿದೆ. ಆದ್ದ ರಿಂದ ಎಲ್ಲರ ಒಪ್ಪಿಗೆಯಂತೆ ಖಾಸಗಿಯವ ರಿಗೆ ಲೀಸ್‍ಗೆ ನೀಡಿ ಕಬ್ಬು ಅರೆಯುವಿಕೆಗೆ ಕ್ರಮ ವಹಿಸಲಾಗುವುದು. ಪ್ರಸ್ತುತ ವರ್ಷ ದಲ್ಲಿನ ರೈತರು ಕಾರ್ಖಾನೆಗಳಿಗೆ ಸಾಗಿಸಿ ರುವ ಕಬ್ಬು ಸಾಗಾಣೆ ವೆಚ್ಚವನ್ನು ಸರ್ಕಾರ ದಿಂದ ಭರಿಸುವ ಬಗ್ಗೆ ಕ್ರಮ ವಹಿಸ ಲಾಗುವುದು ಎಂದರು.

ಪ್ರಸ್ತುತ 2 ಕಾರ್ಖಾನೆಗಳ ವ್ಯಾಪ್ತಿಯ ಲ್ಲಿರುವ ರೈತರ ಕಬ್ಬನ್ನು ತಾರತಮ್ಯ ಮಾಡದೆ ಕಟಾವು ಮಾಡಬೇಕು. ಬಡ ರೈತರ ಕಬ್ಬು ಕಟಾವು ಮಾಡಲು ಪರವಾ ನಗಿ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದು, ರಾಜಕೀಯ ಪ್ರಭಾವ ಹೊಂದಿರುವ ರೈತರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ. ಇದು ನಿಲ್ಲಬೇಕು. ಸುಮಾರು 16ರಿಂದ 18 ತಿಂಗಳ ಕಬ್ಬು ಕಟಾವು ಮಾಡಲು ಕ್ರಮ ವಹಿಸಬೇಕು. ಅಲ್ಲದೆ, ಎಲ್ಲಾ ಕಬ್ಬನ್ನು ಕಟಾವು ಮಾಡಲು ಆಯಾ ತಾಲೂಕಿನ ತಹಶೀಲ್ದಾರ್‍ಗಳು ಜವಾಬ್ದಾರಿ ತೆಗೆದುಕೊಂಡು ಕಟಾವು ಮಾಡಿಸಬೇಕು ಎಂದು ಸೂಚಿಸಿದರು.

ಗ್ರಾಮ ಲೆಕ್ಕಿಗರು ಸರ್ಕಾರಿ ಆದೇಶ ದಂತೆ ಬೆಳಿಗ್ಗೆ 11 ರಿಂದ ಸಂಜೆ 5 ರವ ರೆಗೂ ತಮ್ಮ ಸೇವಾ ವ್ಯಾಪ್ತಿಯಲ್ಲೇ ಕೆಲಸ ನಿರ್ವಹಿಸಬೇಕು. ಅವಶ್ಯಕತೆ ಇದ್ದರೆ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಕ್ಕೂ ಬರಬೇಕು. ಇಲ್ಲವಾದರೆ ಕಾನೂನು ರೀತಿ ಕ್ರಮ ಕೈಗೊಳ್ಳು ವುದಾಗಿ ಸಚಿವರು ಎಚ್ಚರಿಕೆ ನೀಡಿದರು.

ಡಿ.26ರಿಂದ ಜಿಲ್ಲೆಯಲ್ಲಿ ಭತ್ತ ಖರೀ ದಿಗೆ ನೋಂದಣಿ ಆರಂಭ ಆಗಲಿದ್ದು, ರೈತರು ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು. ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಉಪಾ ಧ್ಯಕ್ಷೆ ಗಾಯಿತ್ರಿ, ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್, ಜಿಪಂ ಸಿಇಓ ಕೆ.ಯಾಲಕ್ಕಿ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿಪಂ ಸದಸ್ಯರಾದ ಹೆಚ್.ಟಿ. ಮಂಜು, ಶಿವಪ್ರಕಾಶ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.ಸಭೆಯಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

ಕೆಆರ್‍ಎಸ್ ವ್ಯಾಪ್ತಿ ಗಣಿಗಾರಿಕೆ ನಿಷೇಧಕ್ಕೆ ಸರ್ಕಾರ ಸಿದ್ಧ
ಕೆಆರ್‍ಎಸ್ ಅಣೆಕಟ್ಟೆ ಭದ್ರತೆ ದೃಷ್ಟಿಯಿಂದ ಕಲ್ಲು ಗಣಿಗಾರಿಕೆ ನಿಲ್ಲಿಸಲು ಸರ್ಕಾರ ಬದ್ಧವಾಗಿದೆ ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದರು. ಸಭೆಯಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದ ಸಚಿವರು, ಶೀಘ್ರ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡಿದರೆ, ಕೂಡಲೇ ಕೆಆರ್‍ಎಸ್ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ನಿಷೇಧ ಮಾಡಲಾಗುವುದು ಎಂದು ಘೋಷಿಸಿದರು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರಿಂದ ಅವಶ್ಯಕ ಸ್ಥಳಗಳಲ್ಲಿ ಚೆಕ್ ಪೆÇೀಸ್ಟ್ ಪ್ರಾರಂಭ ಮಾಡಿ, ಕಳ್ಳರನ್ನು ಹಿಡಿಯಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

Translate »