ಶ್ರೀರಂಗಪಟ್ಟಣದಲ್ಲಿ ಜ. 8ರಿಂದ ‘ಮಕ್ಕಳ ವಿಜ್ಞಾನ ಹಬ್ಬ’
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಜ. 8ರಿಂದ ‘ಮಕ್ಕಳ ವಿಜ್ಞಾನ ಹಬ್ಬ’

December 19, 2019

ಶ್ರೀರಂಗಪಟ್ಟಣ, ಡಿ.18(ವಿನಯ್ ಕಾರೇಕುರ)- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ 2020ರ ಜ. 8ರಿಂದ 11ರವರೆಗೆ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ನೆರವೇರಲಿದ್ದು, ಕಾರ್ಯಕ್ರಮದ ರೂಪುರೇಷೆ ಕುರಿತು ಶಾಸಕ ರವೀಂದ್ರ ಶ್ರೀಕಂಠಯ್ಯ ವಿವಿಧ ಇಲಾಖೆಗಳ ಅಧಿಕಾರಿ ಗಳು ಹಾಗೂ ಮುಖಂಡರ ಸಭೆ ನಡೆಸಿದರು.

ಪಟ್ಟಣದ ಜೂನಿಯರ್ ಕಾಲೇಜು ಆವರಣ ದಲ್ಲಿ ಸಭೆ ನಡೆಸಿದ ಶಾಸಕರು, ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಹಬ್ಬಕ್ಕೆ ವಿವಿಧ ರಾಜ್ಯಗಳ 400ಕ್ಕೂ ಅಧಿಕ ಹಾಗೂ ರಾಜ್ಯದ 350ಕ್ಕೂ ಅಧಿಕ ಯುವ ವಿಜ್ಞಾನಿಗಳು ಭಾಗ ವಹಿಸಲಿದ್ದು, ವಿವಿಧ ಇಲಾಖೆಗಳ ಅಧಿಕಾರಿ ಗಳು, ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಸಂಸದರು ಸೇರಿದಂತೆ ಗಣ್ಯರು ಭಾಗವಹಿಸು ತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ರೂಪು-ರೇಷೆಗಳ ಕುರಿತು ಅಧಿಕಾರಿಗಳು ಹಾಗೂ ಮುಖಂಡರ ಅಭಿಪ್ರಾಯ ಪಡೆದ ಅವರು, ಕಾರ್ಯಕ್ರಮ ವನ್ನು ಯಶಸ್ವಿಯಾಗಿ ನಡೆಸಲು ಪ್ರತಿ ಯೊಬ್ಬರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ವಿವಿಧ ಕಲಾತಂಡಗಳು ಹಾಗೂ ಸ್ತಬ್ದ ಚಿತ್ರಗಳೊಂದಿಗೆ ಶ್ರೀರಂಗನಾಥಸ್ವಾಮಿ ದೇಗು ಲದ ಆವರಣದಿಂದ ಕಾಲೇಜು ಆವರಣಕ್ಕೆ ಯುವ ವಿಜ್ಞಾನಿಗಳನ್ನು ಮೆರವಣಿಗೆ ಮೂಲಕ ಕರೆ ತರುವುದು. ಕಾಲೇಜು ಆವರಣದ ಲ್ಲಿನ ಕೊಠಡಿಗಳಲ್ಲಿ ಯುವ ವಿಜ್ಞಾನಿಗಳು ನಿರ್ಮಿಸಿದ ಕೃತಕ ಮಾದರಿಗಳನ್ನು ಪ್ರದ ರ್ಶನಕ್ಕೆ ಇಡುವ ವ್ಯವಸ್ಥೆ ಹಾಗೂ ಪೊಲೀಸ್ ಭದ್ರತೆ ಕೈಗೊಳ್ಳುವುದರ ಬಗ್ಗೆ ಅಧಿಕಾರಿ ಗಳ ಜೊತೆ ಶಾಸಕರು ಚರ್ಚಿಸಿದರು.

ಈ ವೇಳೆ ಔಷಧೋಪಚಾರ, ಊಟ-ವಸತಿ ಸೇರಿದಂತೆ ಇನ್ನಿತರೆ ಸೌಲಭ್ಯ ಗಳನ್ನು ಸಮರ್ಪಕವಾಗಿ ನಿರ್ವಹಿಸಲು ವಿವಿಧ ಸಮಿತಿ ಹಾಗೂ ಉಪ ಸಮಿತಿ ನೇಮಿಸಲಾಯಿತು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ಮುಖಂಡರುಗಳು ಉಪಸ್ಥಿತರಿದ್ದರು.

Translate »