ಮಂಡ್ಯ ಸಂಜಯ ಸರ್ಕಲ್ ಒತ್ತುವರಿ
ಮಂಡ್ಯ

ಮಂಡ್ಯ ಸಂಜಯ ಸರ್ಕಲ್ ಒತ್ತುವರಿ

December 23, 2019

ಸ್ವರ್ಣಸಂದ್ರದಿಂದ ಕಲ್ಲಹಳ್ಳಿವರೆಗಿನ ಹೆದ್ದಾರಿಯೂ ಒತ್ತುವರಿ

ಸುಗಮ ಸಂಚಾರಕ್ಕೆ ಅಡ್ಡಿ

ಮಂಡ್ಯ, ಡಿ.22- ನಾಡನ್ನಾಳುತ್ತಿದ್ದ ಮಹಾ ರಾಜರು ಪ್ರಜೆಗಳ ಸುರಕ್ಷತೆ ದೃಷ್ಟಿಯನ್ನಿಟ್ಟು ಕೊಂಡು ರಸ್ತೆಗಳು, ವೃತ್ತಗಳು, ನಿಲ್ದಾಣ ಗಳು, ಕೆರೆ-ಕಟ್ಟೆಗಳು ಇತ್ಯಾದಿ ಸಾರ್ವಜನಿಕ ಉಪಯೋಗಿ ತಾಣಗಳನ್ನು ನಿರ್ಮಿಸುತ್ತಿ ದ್ದರು. ಅದಕ್ಕೊಂದು ವೈಜ್ಞಾನಿಕ ಮಾನ ದಂಡವೂ ಇರುತ್ತಿತ್ತು. ಸರ್ಕಾರಿ ದಾಖಲೆ ಗಳಲ್ಲಿ ಅದನ್ನು ನಾವು ಇಂದಿಗೂ ನೋಡ ಬಹುದು. ಆದರೆ ಪ್ರಸ್ತುತ ಭ್ರಷ್ಟ ಆಡಳಿತ ವ್ಯವಸ್ಥೆಯಿಂದಾಗಿ ಅದೆಷ್ಟೋ ರಸ್ತೆಗಳು, ವೃತ್ತಗಳು, ಕೆರೆ-ಕಟ್ಟೆಗಳು ಸಾರ್ವಜನಿಕ ಉಪ ಯೋಗಿ ತಾಣಗಳು ನಾಪತ್ತೆಯಾಗಿ ಪಟ್ಟ ಭದ್ರರ ಆದಾಯದ ತಾಣಗಳಾಗಿ ಮಾರ್ಪ ಟ್ಟಿವೆ..! ಇದಕ್ಕೊಂದು ತಾಜಾ ನಿದರ್ಶನ ಮಂಡ್ಯ ನಗರದ ಪ್ರಮುಖ ಸರ್ಕಲ್‍ಗಳಲ್ಲಿ ಒಂದಾದ ಸಂಜಯ ಸರ್ಕಲ್ ಮತ್ತು ರಸ್ತೆಗಳು.!

ಮಂಡ್ಯ ನಗರದ ಸಂಜಯ ಸಿನಿಮಾ ಮಂದಿರಕ್ಕೆ ಹೊಂದಿಕೊಂಡಂತೆಯೇ ಈ ಸರ್ಕಲ್ ಇರುವುದರಿಂದ ಸಾಮಾನ್ಯವಾಗಿ ಜನರು ಇದನ್ನು ಸಂಜಯ ಸರ್ಕಲ್ ಅಂತಲೇ ಗುರುತಿಸುತ್ತಾರೆ. ನಿತ್ಯವೂ ಸಾವಿ ರಾರು ವಾಹನಗÀಳು ಸಂಚರಿಸುವ ಈ ಸರ್ಕಲ್ ಸಂಚಾರಿಗಳಿಗೆ ಸುರಕ್ಷಿತ ತಾಣ ವಾಗುವ ಬದಲು ಮರಣ ವೃತ್ತವಾಗಿ ಮಾರ್ಪಟ್ಟಿದೆ. ಪಟ್ಟಭದ್ರರ ಅತಿಕ್ರಮಣ, ನಗರಾಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಧೋರಣೆ ಫಲವಾಗಿ ಇಂದು ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ನಿತ್ಯವೂ ಒಂದಲ್ಲಾ ಒಂದು ರೀತಿಯ ಅಪಘಾತ ಸಾಮಾನ್ಯವಾಗಿ ಬಿಟ್ಟಿದೆ.

ಮೈಸೂರು-ಬೆಂಗಳೂರು ಹೆದ್ದಾರಿಯೂ ಒತ್ತುವರಿ: ಮಂಡ್ಯ ನಗರ ವ್ಯಾಪ್ತಿಯಲ್ಲಿ ಸ್ವರ್ಣಸಂದ್ರದಿಂದ ಕಲ್ಲಹಳ್ಳಿವರಗೆ ಬೆಂಗ ಳೂರು-ಮೈಸೂರು ಹೆದ್ದಾರಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆಗಸ್ಟ್ 16, 2007 ರಂದು ಆರ್‍ಟಿಐ ಕಾರ್ಯಕರ್ತ ಕಲ್ಲಹಳ್ಳಿ ರವೀಂದ್ರ ಅವರು ಲೋಕಾಯು ಕ್ತಕ್ಕೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು, ಮಂಡ್ಯ ಜಿಲ್ಲಾಧಿಕಾರಿ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಒತ್ತುವರಿ ಮಾಡಿಕೊಂಡಿರುವ ಬೆಂಗ ಳೂರು-ಮೈಸೂರು ಹೆದ್ದಾರಿಯ ಅಗಲೀ ಕರಣ ಮಾಡುವಂತೆ ಸೂಚಿಸಿದ್ದರ ಮೇರೆಗೆ, ಮಂಡ್ಯ ನಗರ ಪರಿಮಿತಿಯ ವ್ಯಾಪ್ತಿಯೊ ಳಗೆ ನಗರಸಭೆಯ ಅಧಿಕಾರಿಗಳು ರಸ್ತೆಯ ಇಕ್ಕೆಲಗಳಲ್ಲಿ ಗಡಿ ಗುರುತು ಮಾಡಿದ್ದರು. ಆ ನಂತರ ಕೆಲವು ಸರ್ಕಾರಿ ಇಲಾಖೆಗಳ ಕಾಂಪೌಂಡ್‍ಗಳನ್ನು ಒಡೆದು ಹಿಂದಕ್ಕೆ ಹಾಕಿಕೊಂಡಿದ್ದು ಮತ್ತು ಕೆಲವು ಕಡೆ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿದ್ದರು.

ಈಗ ಮತ್ತೆ ಆ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಮಂಡ್ಯ ನಗರದ ಅಭಿವೃದ್ಧಿಗೆ 50 ಕೋಟಿ ರೂ.ಗಳ ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದು ಲೋಕೋಪಯೋಗಿ ಇಲಾಖೆಗೆ 30.50 ಕೋಟಿ ರೂ. ಅನುದಾನ ಬಿಡುಗಡೆಯಾ ಗುತ್ತಿದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿಯ ವಾಹನ ದಟ್ಟಣೆ ಅಧಿಕವಾ ಗಿದ್ದು, ಮಂಡ್ಯ ನಗರಕ್ಕೆ ಬಿಡುಗಡೆ ಯಾಗಿರುವ 50 ಕೋಟಿ ಅನುದಾನ ದಲ್ಲಿ ಮಂಡ್ಯ ನಗರ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು-ಮೈಸೂರು ಹೆದ್ದಾರಿ ಅಗಲೀ ಕರಣಗೊಳಿಸಿ ಅಭಿವೃದ್ಧಿಪಡಿಸುವಂತೆಯೂ ರವೀಂದ್ರ ಒತ್ತಾಯಿಸಿದ್ದಾರೆ.

ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಯಲ್ಲಿರುವ ಬೃಹತ್ ಮರಗಳನ್ನು ಕಡಿಯಲು ಅನುಕೂಲವಾಗುವಂತೆ 2007ರಲ್ಲೇ ರಸ್ತೆಯ ಎರಡು ಬದಿಗಳಲ್ಲಿ ಹೊಸದಾಗಿ ಮರ ಗಳನ್ನು ಬೆಳೆಸಲಾಗಿದೆ. ಸರ್ಕಾರದ ನಿಯ ಮಾನುಸಾರ ಈ ರಸ್ತೆಯು ರಸ್ತೆ ಮಧ್ಯ ಭಾಗದಿಂದ 21ಮೀ. ಅಗಲ ಇರಬೇಕಾ ಗಿತ್ತು. ಒಟ್ಟು ರಸ್ತೆ ಅಗಲ 42 ಮೀ. ಇರ ಬೇಕಾಗಿತ್ತು. ಆದರೆ ಸ್ಥಳೀಯ ರಾಜಕಾರಣಿ ಗಳ ಸ್ವಾರ್ಥದಿಂದ ಈ ರಸ್ತೆ ಅಭಿವೃದ್ಧಿ ಆಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇನ್ನು ಮುಂದಾದರೂ ಮಂಡ್ಯ ಜಿಲ್ಲಾಧಿ ಕಾರಿಗಳು, ಈ ಬಗ್ಗೆ ಕಾನೂನು ಕ್ರಮ ಜರು ಗಿಸಿ, ಸರ್ಕಾರದಿಂದ ಬಿಡುಗಡೆಯಾಗಿರುವ 50 ಕೋಟಿ ಅನುದಾನದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿಯನ್ನು ಮಂಡ್ಯ ನಗರ ವ್ಯಾಪ್ತಿಯಲ್ಲಿ ಅಗಲೀಕರಣಗೊಳಿಸಿ ರಸ್ತೆಯನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಲಿ ಎಂದೂ ಅವರು ಒತ್ತಾಯಿಸಿದ್ದು ತಪ್ಪಿದ್ದಲ್ಲಿ, ಈ ಹಿಂದೆ ಲೋಕಾಯುಕ್ತಕ್ಕೆ ನೀಡಿರುವ ವರದಿಗಳು, ರಸ್ತೆ ವಿಸ್ತೀರ್ಣಕ್ಕೆ ಸಂಬಂಧಪಟ್ಟಂತೆ ಇರುವ ಗೆಜೆಟ್ ನೋಟಿಫಿಕೇಶನ್‍ಗಳು, ಸರ್ಕಾರದ ಮಾರ್ಗಸೂಚಿಗಳು, ಆದೇಶ, ಸುತ್ತೋಲೆ ಗಳ ಉಲ್ಲಂಘನೆ ಮಾಡಿರುವ ಬಗ್ಗೆ ಮತ್ತೆ ಕಾನೂನು ಹೋರಾಟ ನಡೆಸಬೇಕಾಗು ತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಮೈಸೂರು ಒಡೆಯರ ದೂರದೃಷ್ಟಿ ಜನಪ್ರತಿನಿಧಿಗಳಿಗೇಕಿಲ್ಲ?: ಮಂಡ್ಯ ಜನರ ಪ್ರಶ್ನೆ
ಮೈಸೂರು ಮಹಾರಾಜರು ಭವಿಷ್ಯ ದಲ್ಲಿ ಮಂಡ್ಯದಲ್ಲಿ ವಾಹನ ದಟ್ಟಣೆ ಒತ್ತಡ ವನ್ನು ಗಮನದಲ್ಲಿಟ್ಟುಕೊಂಡೇ ನಗರಕ್ಕೆ ವಿಸ್ತಾರ ರಸ್ತೆಗಳು, ವೃತ್ತಗಳನ್ನು ಗುರುತು ಮಾಡಿದ್ದರು. ಆದರೆ, ಇಂದು ಮಂಡ್ಯದ ಜನಪ್ರತಿನಿಧಿಗಳ ಹಿತಾಸಕ್ತಿಯ ಕೊರತೆ ಯಿಂದ ನಗರದ ಪ್ರಮುಖ ವೃತ್ತಗಳಲ್ಲೊಂ ದಾದ ಸಂಜಯ ಸರ್ಕಲ್ ಒತ್ತುವರಿಯಾ ಗಿದ್ದು ಅವ್ಯವಸ್ಥೆ ತಾಣವಾಗಿ ಮಾರ್ಪಟ್ಟಿದೆ.

ಮೈಸೂರು ಮಹಾರಾಜರು 1940 ರಲ್ಲೇ ಸಂಜಯ ಸರ್ಕಲ್‍ಗೆ 151 ಅಡಿ ನಿಗದಿಪಡಿಸಿದ್ದರು. ಆದರೆ ಇಂದು ಈ ವೃತ್ತ ನಾಲ್ಕೂ ದಿಕ್ಕುಗಳಲ್ಲೂ ಒತ್ತುವರಿ ಯಾಗಿದ್ದು ಕೇವಲ 80 ರಿಂದ 90 ಅಡಿಗೆ ಇಳಿದಿದೆ. ಈ ವೃತ್ತಕ್ಕೆ ಹೊಂದಿ ಕೊಂಡಂತಿರುವ 2 ಪೆಟ್ರೋಲ್ ಬಂಕ್ ನವರು ಲೋಕೋಪಯೋಗಿ ಇಲಾಖೆ ಹಾಗೂ ಸಂಜಯ ಟಾಕೀಸ್ ಮಾಲೀ ಕರು ಒತ್ತುವರಿ ಮಾಡಿಕೊಂಡಿರುವುದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಸುಂದರನಗರ, ಸವಾರರ ಸುರಕ್ಷತೆಯ ಬಗ್ಗೆ ಮೈಸೂರು ಒಡೆಯರ್ ಗಿದ್ದ ದೂರದೃಷ್ಟಿ ನಮ್ಮ ಜನ ಪ್ರತಿನಿಧಿ ಗಳು, ಅಧಿಕಾರಿಗಳಿಗೆ ಯಾಕಿಲ್ಲ? ಎಂದು ಮಂಡ್ಯದ ಜನ ಪ್ರಶ್ನಿಸುತ್ತಿದ್ದಾರೆ.

ಪ್ರಸ್ತುತ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದರ ಭಾಗವಾಗಿ ನಗರದ ಹೊರವಲಯದಲ್ಲಿ ಬೈಪಾಸ್ ಕಾಮಗಾರಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ನಗರ ವ್ಯಾಪ್ತಿಯ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಎಲ್ಲಾ ರೀತಿಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಪೆಟ್ರೋಲ್ ಬಂಕ್‍ಗಳು, ಚಿತ್ರಮಂದಿರಗಳನ್ನು ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೇ ಸರ್ವೇ ಕಾರ್ಯ ಕೂಡ ಮುಗಿದಿದೆ. ಸಂಜಯ ಸರ್ಕಲ್‍ನಲ್ಲಿ ಯಾವುದೇ ಒತ್ತುವರಿಯಾಗಿದ್ದರೇ, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ. -ಡಾ. ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ

ನಾಗಯ್ಯ, ಲಾಳನಕೆರೆ

Translate »