Tag: Mandya

ಸಂಘಟಿತ ಹೋರಾಟದಿಂದ ಗಂಗಾಮತಸ್ಥರ ಅಭಿವೃದ್ಧಿ ಸಾಧ್ಯ
ಮಂಡ್ಯ

ಸಂಘಟಿತ ಹೋರಾಟದಿಂದ ಗಂಗಾಮತಸ್ಥರ ಅಭಿವೃದ್ಧಿ ಸಾಧ್ಯ

December 6, 2018

ಮಂಡ್ಯ: ಗಂಗಾಮತಸ್ಥರು ಸಾಮಾ ಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಭಿವೃದ್ದಿ ಹೊಂದಬೇಕಾದರೆ ಸಂಘಟಿತ ಹೋರಾಟ ನಡೆಸಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.ನಗರದ ಗಾಂಧಿ ಭವನದಲ್ಲಿ ಬುಧವಾರ ಜಿಲ್ಲಾ ಗಂಗಾಮತಸ್ಥರ ಸಂಘ ಆಯೋ ಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾ ಟಿಸಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿಯೂ ಮೀನುಗಾರರ ಬೇಡಿಕೆ ಈಡೇರಿಲ್ಲ. ಅವರಿಗೆ ದೊರೆಯ ಬೇಕಿದ್ದ ಸೌಲಭ್ಯಗಳು ಸಿಗದೆ ಉಳ್ಳವರ ಪಾಲಾಗುತ್ತಿವೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕಾದರೆ ಸಂಘಟಿತ ಹೋರಾಟ ನಡೆಸಬೇಕು. ಆ ಮೂಲಕ ಆಳುವ ವರ್ಗದ…

ರಾತ್ರೋರಾತ್ರಿ ಮಂಡ್ಯ ಮನೆ ಖಾಲಿ ಮಾಡಿದ ಮಾಜಿ ಸಂಸದೆ ರಮ್ಯಾ
ಮಂಡ್ಯ, ಮೈಸೂರು

ರಾತ್ರೋರಾತ್ರಿ ಮಂಡ್ಯ ಮನೆ ಖಾಲಿ ಮಾಡಿದ ಮಾಜಿ ಸಂಸದೆ ರಮ್ಯಾ

December 4, 2018

ಮಂಡ್ಯ: ಮಾಜಿ ಸಂಸದೆ ರಮ್ಯಾ, ಮಂಡ್ಯ ವಿದ್ಯಾನಗರದ ಕೆ.ಆರ್.ರಸ್ತೆಯಲ್ಲಿದ್ದ ತಮ್ಮ ಬಾಡಿಗೆ ಮನೆ ಯನ್ನು ಭಾನುವಾರ ರಾತ್ರೋರಾತ್ರಿ ಖಾಲಿ ಮಾಡಿದ್ದಾರೆ. 2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ರಮ್ಯಾ ಅವರು, ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಸಾದತ್ ಆಲಿಖಾನ್ ಅವರ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದರೆ ಕಳೆದ ಭಾನುವಾರ ತಡರಾತ್ರಿ 2 ಲಾರಿಗಳಲ್ಲಿ ಮನೆಯಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಇತರೆ ಸಾಮಾನು ಸರಂಜಾಮುಗಳನ್ನು ಬೆಂಗಳೂರಿಗೆ ಸಾಗಿಸಿದ್ದಾರೆ. ಭಾನುವಾರ ರಾತ್ರಿ ಹತ್ತು ಗಂಟೆ ಯಿಂದ…

ನಾಲೆ ಅಂಚಿಗೆ ಸ್ಕೂಟರ್ ಉರುಳಿದಾಗ… ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ನೀರುಪಾಲು
ಮೈಸೂರು

ನಾಲೆ ಅಂಚಿಗೆ ಸ್ಕೂಟರ್ ಉರುಳಿದಾಗ… ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ನೀರುಪಾಲು

December 3, 2018

ಮಂಡ್ಯ:  ನಾಲೆ ಅಂಚಿಗೆ ಸ್ಕೂಟರ್ ಉರುಳಿ ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರು ನೀರು ಪಾಲಾದ ಘಟನೆ ತಾಲೂಕಿನ ಲೋಕ ಸರಗ್ರಾಮದ ಬಳಿ ಭಾನುವಾರ ನಡೆದಿದೆ. ಗ್ರಾಮದ ನಾಗಮ್ಮ (50), ಅಂಬಿಕಾ (33) ಹಾಗೂ ಮಾನ್ಯತಾ (5) ಮೃತಪಟ್ಟವರು. ಘಟನೆಯ ವಿವರ: ಅಂಬಿಕಾ ಅವರು ಕಳೆದ ಶುಕ್ರವಾರ (ನ.30) ನೂತನ ಗೃಹಪ್ರವೇಶ ನೆರವೇರಿಸಿದ್ದರು. ಇಂದು ತಾಯಿ ನಾಗಮ್ಮ ಹಾಗೂ ಮಗಳು ಮಾನ್ಯತಾಳೊಂದಿಗೆ ಗ್ರಾಮದ ದೇವಸ್ಥಾನಕ್ಕೆ ಸ್ಕೂಟರ್‍ನಲ್ಲಿ ತೆರಳಿ, ಪೂಜೆ ಸಲ್ಲಿಸಿ ವಾಪಸ್ ಬರುತ್ತಿದ್ದಾಗ ಲೋಕಸರ ಬಳಿ ಸ್ಕೂಟರ್…

ಸಂಗಮದಲ್ಲಿ ಅಭಿಷೇಕ್‍ಗೌಡರಿಂದ ಅಸ್ಥಿ ವಿಸರ್ಜನೆ ಕಾವೇರಿ ಮಡಿಲಲ್ಲಿ ಅಂಬಿ ಅಸ್ಥಿ ಲೀನ
ಮಂಡ್ಯ

ಸಂಗಮದಲ್ಲಿ ಅಭಿಷೇಕ್‍ಗೌಡರಿಂದ ಅಸ್ಥಿ ವಿಸರ್ಜನೆ ಕಾವೇರಿ ಮಡಿಲಲ್ಲಿ ಅಂಬಿ ಅಸ್ಥಿ ಲೀನ

November 29, 2018

ಮಂಡ್ಯ: ಅನಾರೋಗ್ಯದಿಂದ ಶನಿವಾರ ಅಗಲಿದ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದಲ್ಲಿರುವ ಸಂಗಮದಲ್ಲಿ ಬುಧವಾರ ವಿಸರ್ಜನೆ ಮಾಡಲಾಯಿತು. ಮಧ್ಯಾಹ್ನ ಬೆಂಗಳೂರಿನಿಂದ ಮೂರು ಮಡಿಕೆಗಳಲ್ಲಿ ತರಲಾಗಿದ್ದ ಅಸ್ಥಿಯನ್ನು ಶಾಸ್ತ್ರೋಕ್ತವಾಗಿ ಅಂಬರೀಶ್ ಪುತ್ರ ಅಭಿಷೇಕ್ ಗೌಡ ಅವರು ವಿಸರ್ಜನೆ ಮಾಡಿದರು. ಒಟ್ಟು ಆರು ಮಡಿಕೆಗಳಲ್ಲಿ ಅಂಬರೀಶ್ ಅಸ್ಥಿಯನ್ನು ಸಂಚಯನ ಮಾಡಲಾಗಿತ್ತು. ಈ ಪೈಕಿ ಮೂರು ಮಡಿಕೆಗಳಲ್ಲಿರುವ ಅಸ್ಥಿ ಯನ್ನು ಇಂದು ಶ್ರೀರಂಗಪಟ್ಟಣದ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ಇನ್ನುಳಿದ 3 ಮಡಿಕೆಯಲ್ಲಿರುವ ಅಸ್ಥಿಯ ಪೈಕಿ ಒಂದು ಬೆಂಗಳೂರಿನ…

ಬರಪೀಡಿತ ತಾಲೂಕುಗಳಲ್ಲಿ ನರೇಗಾ ಸಮರ್ಪಕ ಅನುಷ್ಠಾನಗೊಳಿಸಿ
ಮಂಡ್ಯ

ಬರಪೀಡಿತ ತಾಲೂಕುಗಳಲ್ಲಿ ನರೇಗಾ ಸಮರ್ಪಕ ಅನುಷ್ಠಾನಗೊಳಿಸಿ

November 29, 2018

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ಸೂಚನೆ ಮಂಡ್ಯ: ಬರಪೀಡಿತ ತಾಲೂಕುಗಳಲ್ಲಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ಸೂಚಿಸಿದರು. ನಗರದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವ ತಾಲೂಕುಗಳಲ್ಲಿ ಕನಿಷ್ಠ ಮಳೆ ಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಕುಡಿಯುವ…

ಅನುಮಾನಾಸ್ಪದವಾಗಿ ಯುವತಿ ಸಾವು
ಮಂಡ್ಯ

ಅನುಮಾನಾಸ್ಪದವಾಗಿ ಯುವತಿ ಸಾವು

November 29, 2018

ಮಂಡ್ಯ: ಪ್ರೀತಿಸಿ ಮದುವೆ ಯಾಗಿದ್ದ ಯುವತಿ ನೇಣು ಬಿಗಿದು ಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ನಡೆದಿದೆ. ಸುಕನ್ಯಾ(19) ಮೃತ ಯುವತಿ. ಹೆಬ್ಬಕವಾಡಿ ಗ್ರಾಮದವರೇ ಆದ ಸುಕನ್ಯಾ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಸುಜೇಂದ್ರ ಪರಿಚಯವಾಗಿದ್ದು, ಇಬ್ಬರು ಪರಸ್ಪರ ಎರಡು ವರ್ಷದಿಂದ ಪ್ರೀತಿಸುತ್ತಿ ದ್ದರು. ಆದರೆ, ಇಬ್ಬರ ಮನೆಯಲ್ಲೂ ಮದುವೆಗೆ ವಿರೋಧವಿತ್ತು. ಪೋಷಕರ ವಿರೋಧದ ನಡುವೆಯೂ ಮೂರು ತಿಂಗಳ ಹಿಂದೆ ಸುಕನ್ಯಾ ಮತ್ತು ಸುಜೇಂದ್ರ ಕುಣಿಗಲ್‍ನ ದೇವಸ್ಥಾನವೊಂದರಲ್ಲಿ ಮದುವೆಯಾಗಿ ದ್ದರು. ಮದುವೆಯ ನಂತರ ಸುಕನ್ಯಾ ಹೆಬ್ಬಕವಾಡಿಯಲ್ಲಿಯೇ…

ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಕಬ್ಬು ಬೆಳೆ ನಾಶ
ಮಂಡ್ಯ

ವಿದ್ಯುತ್ ಶಾರ್ಟ್ ಸರ್ಕಿಟ್‍ನಿಂದ ಕಬ್ಬು ಬೆಳೆ ನಾಶ

November 29, 2018

ಮಂಡ್ಯ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ 8 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು ಬೆಳೆ ಸುಟ್ಟು ಹೋಗಿ ಲಕ್ಷಾಂತರ ರೂ. ನಷ್ಟವಾಗಿ ರುವ ಘಟನೆ ತಾಲೂಕಿನ ಬಿಳಿದೇಗಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುಶೀಲಮ್ಮ ಎಂಬುವರ ಒಂದು ಎಕರೆ, ಬಿ.ಸಿ.ರಾಜು ಅವರಿಗೆ ಸೇರಿದ ಒಂದು ಎಕರೆ, ಹನುಮಂತು ಅವರ 30ಗುಂಟೆ, ಶಿವಲಿಂಗ ಅವರ 30ಗುಂಟೆ, ಚೋಟಪ್ಪ ಅವರಿಗೆ ಸೇರಿದ 20 ಗುಂಟೆ, ರಮೇಶ ಅವರಿಗೆ ಸೇರಿದ ಒಂದು ಎಕರೆ ಸೇರಿದಂತೆ ಒಟ್ಟು ಎಂಟು ಎಕರೆಯಲ್ಲಿ ಬೆಳೆಯಲಾದ ಕಬ್ಬು ಸಂಪೂರ್ಣ ಸುಟ್ಟುಹೋಗಿದೆ….

ರೋಗಗಳಿಂದ ನರಳುತ್ತಿರುವ ಚಿಕ್ಕೋನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು
ಮಂಡ್ಯ, ಮೈಸೂರು

ರೋಗಗಳಿಂದ ನರಳುತ್ತಿರುವ ಚಿಕ್ಕೋನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು

November 28, 2018

ಮಂಡ್ಯ: ಮದ್ದೂರು ತಾಲೂಕಿನ ಕೊಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಸ್ಪೆಂಟ್‍ವಾಷ್ ಮೇಜರ್ ಟ್ಯಾಂಕ್ ವಾರದ ಹಿಂದೆ ಸ್ಫೋಟಗೊಂಡು ವಾರವೇ ಕಳೆದಿದ್ದು, ಕಾರ್ಖಾನೆ ಸುತ್ತಲಿನ ಚಿಕ್ಕೋನಹಳ್ಳಿ, ತಗ್ಗಹಳ್ಳಿ, ಅಣ್ಣೆದೊಡ್ಡಿ, ಕೀಳಘಟ್ಟ, ಯು.ಸಿ.ದೊಡ್ಡಿ, ಗೊಲ್ಲರದೊಡ್ಡಿ ಸೇರಿದಂತೆ 17 ಗ್ರಾಮಗಳ ಜನರು ವಿವಿಧ ರೋಗಗಳಿಂದ ನರಳುತ್ತಿದ್ದಾರೆ. ಚಿಕ್ಕೋನಹಳ್ಳಿ ಗ್ರಾಮವೊಂದರಲ್ಲೇ 500ಕ್ಕೂ ಹೆಚ್ಚು ಜನರಿಗೆ ಸೊಂಟ ನೋವು, ಕೆಮ್ಮು, ನೆಗಡಿ, ತುರಿಕೆ, ಗಂಟಲು ಕೆರೆತ, ಚರ್ಮ ರೋಗಗಳು, ಶ್ವಾಸಕೋಶದ ಸಮಸ್ಯೆ ಬಾಧಿಸುತ್ತಿದೆ. ಟ್ಯಾಂಕ್ ಸ್ಫೋಟದಿಂದ 82 ಲಕ್ಷ ಲೀಟರ್‍ಗೂ ಅಧಿಕ ರಾಸಾಯನಿಕ ದ್ರಾವಣ…

ಮಂಡ್ಯದಲ್ಲಿ ಅಂಬರೀಶ್‍ಗೆ ಅಪಾರ ಅಶ್ರುತರ್ಪಣ
ಮಂಡ್ಯ, ಮೈಸೂರು

ಮಂಡ್ಯದಲ್ಲಿ ಅಂಬರೀಶ್‍ಗೆ ಅಪಾರ ಅಶ್ರುತರ್ಪಣ

November 26, 2018

ಮಂಡ್ಯ: ಭಾನುವಾರ ಮುಸ್ಸಂಜೆ ನಗರದೆಲ್ಲೆಡೆ ದುಃಖದ ಕಾರ್ಮೋಡ ಕವಿದಿತ್ತು. ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದೊಳಕ್ಕೆ ಸೂರ್ಯನ ಕಿರಣಗಳು ಸಹ `ಮಂಡ್ಯದ ಗಂಡಿನ’ ಅಂತಿಮ ದರ್ಶನ ಪಡೆಯಲು ಪರದಾಡುವಷ್ಟು ಅಭಿಮಾನಿಗಳ ಸಾಗರವೇ ತುಂಬಿತ್ತು. ಅಭಿಮಾನಿಗಳ ಕಂಬನಿ ಹರಿದಿತ್ತು, ವೇದಿಕೆಗೆ ಹತ್ತಿದಾಗಲೆಲ್ಲಾ ಸಿಳ್ಳೆ, ಕೇಕೆ ಹಾಕುತ್ತಾ ಅಂಬರೀಶ್ ಅಣ್ಣಾಂಗೇ… ಎಂದು ಗದ್ದಲ ವೆಬ್ಬಿಸುವ ಅಭಿಮಾನಿಗಳನ್ನು `ಲೇ ಸುಮ್ಮನಿ ರಲ್ಲೋ, ಸುಮ್ನೆ ನಿಂತ್ಕೊಳ್ರೋ ಅಂತೆಲ್ಲಾ ಸದಾ ಕೆಂಡಕಾರುತ್ತಿದ್ದ ಕಣ್ಣುಗಳು ಸೋತು ಎವೆಯಿಕ್ಕದೆ ಮುಚ್ಚಿದ್ದವು, ಮೈಸೂರು ಪೇಟ ಧರಿಸಿ ಮಲಗಿದ್ದ ಅಂಬರೀಶ್ ಯಾವ ಕ್ಷಣದಲ್ಲಾದರೂ ಎದ್ದು…

ಹುಟ್ಟೂರಲ್ಲಿ ಅಂಬಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ಆಗ್ರಹ
ಮಂಡ್ಯ, ಮೈಸೂರು

ಹುಟ್ಟೂರಲ್ಲಿ ಅಂಬಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ಆಗ್ರಹ

November 26, 2018

ಭಾರತೀನಗರ: ಚಿತ್ರನಟ ಅಂಬರೀಶ್ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ದೊಡ್ಡರಸಿನ ಕೆರೆಯಲ್ಲೇ ನಡೆಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ದೊಡ್ಡ ರಸಿನಕೆರೆ ಗೇಟ್ ಬಳಿ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಅಂಬರೀಶ್ ಪರ ಘೋಷಣೆ ಕೂಗಿದ ದೊಡ್ಡರಸಿನಕೆರೆ ಗ್ರಾಮಸ್ಥರು, ಅಂಬರೀಶ್ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸದೇ ಅವರ ಹುಟ್ಟೂರಿ ನಲ್ಲಿಯೇ ನೆರವೇರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಗ್ರಾಮದ ಮುಖಂಡರಾದ ಜಯರಾಮು ಮಾತನಾಡಿ, ದೊಡ್ಡರಸಿನ ಕೆರೆ ಅಂಬರೀಶ್ ಅವರ ಹುಟ್ಟೂರು. ಅವರು ಹಾಗೂ ನಮ್ಮ ನಡುವೆ ಅಪಾರ ಪ್ರೀತಿಯಿತ್ತು. ಅವರು ಆಗಾಗ…

1 30 31 32 33 34 56
Translate »