Tag: Mandya

ಹಸಿರು ಉಳಿಸಲು ಕುಂಚ ಹಿಡಿದ ಮಕ್ಕಳು
ಮಂಡ್ಯ

ಹಸಿರು ಉಳಿಸಲು ಕುಂಚ ಹಿಡಿದ ಮಕ್ಕಳು

June 13, 2018

ಮಂಡ್ಯ: ಬೆಳಿಗ್ಗೆ 10ರ ಎಳೆ ಬಿಸಿಲು. ಮರದ ನೆರಳಿನ ಅಡಿಯಲ್ಲಿ ಹರಡಿಕೊಂಡಿದ್ದ ಹುಲ್ಲುಹಾಸಿನ ಮೇಲೆ ಕುಳಿ ತಿದ್ದ ಮಕ್ಕಳು ಉತ್ಸಾಹದ ಚಿಲುಮೆಯಂತಿ ದ್ದರು. ಕೈಯಲ್ಲಿ ಬಣ್ಣ ಬಣ್ಣದ ಪೆನ್ಸಿಲ್ ಹಿಡಿ ದಿದ್ದ ಅವರು ಪರಿಸರದ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ಚಿತ್ರಗಳ ಮುಖೇನ ಹರಿ ಬಿಡಲು ಸಿದ್ಧರಾಗಿದ್ದರು…ಇದು ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಅರಣ್ಯ ಇಲಾಖೆಯು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಂಗಳವಾರ ಮಂಡ್ಯದ ಜಿಲ್ಲಾ ಡಳಿತ ಭವನದ…

ಪಿಕ್ ಪಾಕೆಟ್, ಮೊಬೈಲ್ ಕಳ್ಳನ ಬಂಧನ
ಮಂಡ್ಯ

ಪಿಕ್ ಪಾಕೆಟ್, ಮೊಬೈಲ್ ಕಳ್ಳನ ಬಂಧನ

June 13, 2018

ಮಂಡ್ಯ: ಮಕ್ಕಳನ್ನು ಬಳಸಿಕೊಂಡು ಮೊಬೈಲ್ ಮತ್ತು ಪಿಕ್ ಪಾಕೇಟ್ ಮಾಡುತ್ತಿದ್ದ ತೆಲಂಗಾಣ ಮೂಲದ ಕಳ್ಳನೋರ್ವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಾಗಮಂಗಲದಲ್ಲಿ ಮಂಗಳವಾರ ನಡೆದಿದೆ. ತೆಲಂಗಾಣ ಮೂಲದ ಮಂಜೇಶ ಎಂಬಾತನೇ ಪಿಕ್ ಪಾಕೆಟ್‍ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ . ಘಟನೆ ವಿವರ: ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಬಳಿ ವ್ಯಕ್ತಿಯೊಬ್ಬನ ಜೇಬಿನಲ್ಲಿದ್ದ 7 ಸಾವಿರ ರೂಪಾಯಿ ನಗದನ್ನು ಮಂಜೇಶ ಕದಿಯಲೆತ್ನಿಸಿ ದ್ದಾನೆ, ತಕ್ಷಣ ಎಚ್ಚೆತ್ತ ಆತ ಕಿರುಚಿಕೊಂಡು ಕಳ್ಳನನ್ನು ಹಿಡಿಯಲು ಮುಂದಾದ, ಸಾರ್ವಜನಿಕರು…

ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಾಗಯ್ಯ, ಲಾಳನಕೆರೆ
ಮಂಡ್ಯ

ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಾಗಯ್ಯ, ಲಾಳನಕೆರೆ

June 12, 2018

ಮಂಡ್ಯ: ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಆಂತರಿಕ ಭಿನ್ನಮತ ಸ್ಫೋಟ ಗೊಂಡಿದೆ. ಸಕ್ಕರೆ ನಾಡಿನ ಉಸ್ತುವಾರಿ ಪಟ್ಟಕ್ಕಾಗಿ ಸಚಿವರಿಬ್ಬರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಖಾತೆ ಹಂಚಿಕೆ ಕ್ಯಾತೆ ಮುಗಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿಗಾಗಿ ಸಚಿವ ಸಿ.ಎಸ್.ಪುಟ್ಟರಾಜು ಪಟ್ಟು ಹಿಡಿದಿದ್ದು, ಬೀಗರಾದ ಸಚಿವ ಡಿ.ಸಿ.ತಮ್ಮಣ್ಣ ಪರ ಜೆಡಿಎಸ್‍ನ ದೊಡ್ಡಗೌಡರು ಬ್ಯಾಟಿಂಗ್ ನಡೆಸುತ್ತಿರುವುದು ಜೆಡಿಎಸ್‍ನೊಳಗಿನ ಭಿನ್ನಮತಕ್ಕೆ ನಾಂದಿಯಾಗಿದೆ. ಮಂಡ್ಯ ದಳದೊಳಗಿನ ಈ ಆಂತರಿಕ ಕಚ್ಚಾಟ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಹಂಚಿಕೆ…

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ
ಮಂಡ್ಯ

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ

June 12, 2018

ಮಂಡ್ಯ: ಮಂಡ್ಯ ಜಿಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎಲ್.ಬಾಗಲವಾಡೆ ಅವರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗೆ ವಾರ್ಡ್‍ವಾರು ಮೀಸಲಾತಿ ಪ್ರಕಟಿಸಿದ್ದಾರೆ. ಮಂಡ್ಯ ನಗರಸಭೆಯ 35 ವಾರ್ಡ್‍ಗಳ ಮೀಸಲಾತಿ ಈ ಕೆಳಗಿನಂತಿದೆ. ಮಂಡ್ಯ ನಗರಸಭೆ: ವಾರ್ಡ್ 1 – ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 2- ಸಾಮಾನ್ಯ, ವಾರ್ಡ್ 3-ಹಿಂದುಳಿದ ವರ್ಗ (ಬಿ) ಮಹಿಳೆ, ವಾರ್ಡ್ 4- ಸಾಮಾನ್ಯ ಮಹಿಳೆ, ವಾರ್ಡ್ 5 – ಹಿಂದುಳಿದ ವರ್ಗ (ಎ),…

ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮ: ಆತಂಕ
ಮಂಡ್ಯ

ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮ: ಆತಂಕ

June 12, 2018

ಮಂಡ್ಯ: ಬಹುಭಾಷಾ ನಟ ಪ್ರಕಾಶ್ ರೈ ಅವರು ಸೋಮವಾರ ಜಿಲ್ಲೆ ಯಲ್ಲಿ ಮಿಂಚಿನ ಸಂಚಾರ ನಡೆಸಿ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು.ಇಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು ಕೆ.ಆರ್.ಪೇಟೆಯ ಸರ್ಕಾರಿ ಶತ ಮಾನದ ಶಾಲೆ, ಪಾಂಡವಪುರದ ಫ್ರೆಂಚ್ ರಾಕ್ ಶಾಲೆ ಹಾಗೂ ಭಾರತೀನಗರದ ಮೆಣಸ ಗೆರೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳು ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದರು. ಕೆ.ಆರ್.ಪೇಟೆ: ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳದ್ದಲ್ಲಿ ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮವಾಗ…

ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ: ಕೆಆರ್‌ಎಸ್‌ಗೆ ಜೀವ ಕಳೆ
ಮೈಸೂರು

ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ: ಕೆಆರ್‌ಎಸ್‌ಗೆ ಜೀವ ಕಳೆ

June 11, 2018

ರೈತ ಸಮುದಾಯದಲ್ಲಿ ಸಂತಸ ಕೆಆರ್‌ಎಸ್‌ ನೀರಿನ ಮಟ್ಟದಲ್ಲಿ ಹೆಚ್ಚಳ ಮಂಡ್ಯ: ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಗೆ ಹರಿದು ಬರುತ್ತಿರುವ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲ್ಲದೇ ಪ್ರಸ್ತುತ ಅಣೆಕಟ್ಟೆಯಲ್ಲಿ 78 ಅಡಿಯಷ್ಟು ನೀರು ಸಂಗ್ರಹವಾಗಿರುವುದು ರೈತ ಸಮುದಾಯದಲ್ಲಿ ಸಂತಸ ಮನೆ ಮಾಡಿದೆ. ಗರಿಷ್ಠ 124.80ಅಡಿ ಸಾಮಥ್ರ್ಯದ ಕೆಆರ್‌ಎಸ್‌ನಲ್ಲಿ ಭಾನುವಾರ ಸಂಜೆ ವೇಳೆಗೆ 78.50 ಅಡಿ ನೀರು ಸಂಗ್ರಹವಾಗಿತ್ತು. ಕೆಆರ್‍ಎಸ್‍ಗೆ 4470 ಕ್ಯೂಸೆಕ್ಸ್…

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಲ್ಲಿ ಶೇ.83.92 ರಷ್ಟು ಶಾಂತಿಯುತ ಮತದಾನ
ಮಂಡ್ಯ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಲ್ಲಿ ಶೇ.83.92 ರಷ್ಟು ಶಾಂತಿಯುತ ಮತದಾನ

June 9, 2018

ಮಂಡ್ಯ: ದಕ್ಷಿಣ ಶಿಕ್ಷಕರ ಕ್ಷೇತ್ರ ದಿಂದ ವಿಧಾನ ಪರಿಷತ್‍ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಶೇ. 83.92ರಷ್ಟು ಮತದಾನವಾಗಿದೆ.ಮಂಡ್ಯ ನಗರದಲ್ಲಿ 3 ಮತಗಟ್ಟೆ ಕೇಂದ್ರ ಗಳನ್ನು ಸ್ಥಾಪಿಸಲಾಗಿತ್ತು. ಮಳವಳ್ಳಿ, ಮದ್ದೂರು, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲೂಕುಗಳಲ್ಲಿ ಒಂದೊಂದು ಮತಗಟ್ಟೆ ಕೇಂದ್ರ ತೆರೆಯಲಾಗಿತ್ತು. ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ಶಾಂತಿ ಯುತವಾಗಿ ನಡೆಯಿತು. ಪಾಂಡವಪುರ ಅತೀ ಹೆಚ್ಚು ಶೇ.92. 19ರಷ್ಟು ಮತಚಲಾವಣೆ ಯಾದರೆ, ಶ್ರೀರಂಗ ಪಟ್ಟಣದಲ್ಲಿ ಅತೀ ಕಡಿಮೆ ಶೇ.71.60ರಷ್ಟು ಮತದಾನವಾಗಿದೆ. ಇನ್ನುಳಿದಂತೆ…

ಆನ್‍ಲೈನ್‍ನಲ್ಲಿ ಯುವತಿಗೆ 13 ಸಾವಿರ ರೂ. ವಂಚನೆ
ಮಂಡ್ಯ

ಆನ್‍ಲೈನ್‍ನಲ್ಲಿ ಯುವತಿಗೆ 13 ಸಾವಿರ ರೂ. ವಂಚನೆ

June 9, 2018

ಮಂಡ್ಯ: ಬ್ಯಾಂಕ್‍ನವರೆಂದು ಕರೆ ಮಾಡಿ ಆಧಾರ್ ಮತ್ತು ಓಟಿಪಿ ನಂಬರ್ ಪಡೆದು ಯುವತಿ ಯೊಬ್ಬಳ ಖಾತೆ ಯಿಂದ ಆನ್‍ಲೈನ್ ಮೂಲಕ 13 ಸಾವಿರ ರೂ. ಎಗರಿಸಿದ ಘಟನೆ ನಾಗಮಂಗಲದಲ್ಲಿ ನಡೆದಿದೆ. ನಾಗಮಂಗಲ ತಾಲೂಕಿನ ಕಸುವಿನಹಳ್ಳಿ ಗ್ರಾಮದ ಜ್ಯೋತಿ ಎಂಬ ಯುವತಿಯೇ ವಂಚನೆಗೊಳಗಾದವರು. ಘಟನೆ ಹಿನ್ನೆಲೆ: ಜ್ಯೋತಿ ಅವರ ಮೊ: 9591821316ಗೆ ರಾಹುಲ್ ಹೆಸರಿನ ವ್ಯಕ್ತಿಯೊಬ್ಬ ಮೊ: 8617802782 ನಿಂದ ಬುಧ ವಾರ ಸಂಜೆ ಹಿಂದಿಯಲ್ಲಿ ಮಾತನಾಡಿದ್ದಾನೆ. ತಾನು ಬ್ಯಾಂಕಿನವ ನೆಂದು ನಿಮ್ಮ ಎಟಿಎಂ ಕಾರ್ಡ್ ರಿನ್ಯೂವಲ್ ಮಾಡಲು…

ಬಸ್ಸಿನಲ್ಲೇ ಆತ್ಮಹತ್ಯೆಗೆ ಶರಣಾದ ಚಾಲಕ
ಮಂಡ್ಯ

ಬಸ್ಸಿನಲ್ಲೇ ಆತ್ಮಹತ್ಯೆಗೆ ಶರಣಾದ ಚಾಲಕ

June 9, 2018

ಮಂಡ್ಯ: ಖಾಸಗಿ ಬಸ್ಸಿನಲ್ಲಿ ನೇಣು ಬಿಗಿದುಕೊಂಡು ಚಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ನಗರದ ಸಮೀಪ ಚಿಕ್ಕಮಂಡ್ಯ ಗ್ರಾಮದಲ್ಲಿ ನಡೆದಿದೆ. ಕಾರ್ತಿಕ್(22) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಕಾರ್ತಿಕ್ ಬಸ್ಸೊಂದನ್ನು ಲೀಸ್‍ಗೆ ಪಡೆದು ಓಡಿಸುತ್ತಿದ್ದರು. ಕಾರ್ತಿಕ್ ತಂದೆ-ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದರು. ರಾತ್ರಿ ಚಿಕ್ಕಮಂಡ್ಯ ಗ್ರಾಮದ ಶನಿದೇವರ ದೇವಸ್ಥಾನ ಬಳಿ ಬಸ್ ನಿಲ್ಲಿಸಿ ಅದರೊಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಬೆಳಗ್ಗೆ ವೇಳೆಗೆ ಕಾರ್ತಿಕ್ ಬಸ್‍ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು…

ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿಮದ್ದೂರಿನ ವಿವಿಧೆಡೆ ಸರಣ ಪ್ರತಿಭಟನೆ
ಮಂಡ್ಯ

ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿಮದ್ದೂರಿನ ವಿವಿಧೆಡೆ ಸರಣ ಪ್ರತಿಭಟನೆ

June 9, 2018

ಮದ್ದೂರು: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಮದ್ದೂರಿನ ವಿವಿಧೆಡೆ ಸರಣ ಪ್ರತಿಭಟನೆ ನಡೆದಿದೆ. ಕಬ್ಬಿನ ಬಾಕಿ ಹಣ ಪಾವತಿ ಮತ್ತು ರಾಜ್ಯ ಸರ್ಕಾರ ಟನ್ ಕಬ್ಬಿಗೆ ಸಾವಿರ ರೂ. ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸಿ ತಾಲೂಕಿನ ಕೊಪ್ಪ ಎನ್‍ಎಸ್‍ಎಲ್ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿದರೇ, ಅವಧಿಗೂ ಮುನ್ನವೇ ರೈತರ ಚಿನ್ನಾಭರಣವನ್ನು ಬಹಿರಂಗ ಹರಾಜು ಹಾಕುತ್ತಿರುವ ಪಟ್ಟಣದ ಐಐಎಫ್‍ಎಲ್ ಗೋಲ್ಡ್ ಲೋನ್ ಕ್ರಮ ಖಂಡಿಸಿ ರೈತರು ಹಾಗೂ ವೇತನ ಪಾವತಿಗೆ ಆಗ್ರಹಿಸಿ ಟಾಸ್ಕ್‍ವರ್ಕ್ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಕಬ್ಬಿನ…

1 49 50 51 52 53 56
Translate »