ಹಸಿರು ಉಳಿಸಲು ಕುಂಚ ಹಿಡಿದ ಮಕ್ಕಳು
ಮಂಡ್ಯ

ಹಸಿರು ಉಳಿಸಲು ಕುಂಚ ಹಿಡಿದ ಮಕ್ಕಳು

June 13, 2018

ಮಂಡ್ಯ: ಬೆಳಿಗ್ಗೆ 10ರ ಎಳೆ ಬಿಸಿಲು. ಮರದ ನೆರಳಿನ ಅಡಿಯಲ್ಲಿ ಹರಡಿಕೊಂಡಿದ್ದ ಹುಲ್ಲುಹಾಸಿನ ಮೇಲೆ ಕುಳಿ ತಿದ್ದ ಮಕ್ಕಳು ಉತ್ಸಾಹದ ಚಿಲುಮೆಯಂತಿ ದ್ದರು. ಕೈಯಲ್ಲಿ ಬಣ್ಣ ಬಣ್ಣದ ಪೆನ್ಸಿಲ್ ಹಿಡಿ ದಿದ್ದ ಅವರು ಪರಿಸರದ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ಚಿತ್ರಗಳ ಮುಖೇನ ಹರಿ ಬಿಡಲು ಸಿದ್ಧರಾಗಿದ್ದರು…ಇದು ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಅರಣ್ಯ ಇಲಾಖೆಯು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಂಗಳವಾರ ಮಂಡ್ಯದ ಜಿಲ್ಲಾ ಡಳಿತ ಭವನದ ಆವರಣದಲ್ಲಿ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯ.

ಗಿಡಮರಗಳಿಂದ ಕೂಡಿದ ಸುಂದರ ಉದ್ಯಾನ ಹೊಂದಿರುವ ಜಿಲ್ಲಾ ಭವನದ ಆವರಣ ಮಕ್ಕಳ ಉತ್ಸಾಹವನ್ನು ಇಮ್ಮಡಿ ಗೊಳಿಸಿತ್ತು. ಕಾರ್ಯಕ್ರಮದ ಉದ್ಘಾಟನೆ ಮುಗಿದ ಕೂಡಲೇ ಮಕ್ಕಳು ಗುಂಪು ಗುಂಪಾಗಿ, ಉದ್ಯಾನದಲ್ಲಿರುವ ಗಿಡ-ಮರಗಳ ಬಳಿಗೆ ಹೋಗಿ ಕುಳಿತು ಪರಿಸರದ ಕುರಿತ ತಮ್ಮ ಕಲ್ಪನೆಗೆ ಬಣ್ಣ ತುಂಬತೊಡಗಿದರು.

ನಗರದ ಸುತ್ತ-ಮುತ್ತಲಿನ ಸರ್ಕಾರಿ, ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿದ್ಯಾರ್ಥಿ ಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪರಿಸರ ಅಧಿಕಾರಿ ಸವಿತಾ ಮಾತನಾಡಿ, ನಿತ್ಯ ಜೀವನದಲ್ಲಿ ಎಲ್ಲರೂ ಅಂಗಡಿ, ಮಾರುಕಟ್ಟೆಗಳಿಂದ ತಂದ ಪ್ಲಾಸ್ಟಿಕ್ ಕವರ್ ಸೇರಿದಂತೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿ ದ್ದೇವೆ. ಇದು ಪರಿಸರದ ಮೇಲೆ ದುಷ್ಪರಿ ಣಾಮ ಬೀರುತ್ತಿದೆ. ಈ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದರು.
ಪ್ಲಾಸ್ಟಿಕ್ ಎಲ್ಲೆಡೆ ಹರಡಿಕೊಂಡು ಪರಿಸರ ವನ್ನು ಹಾಳು ಮಾಡುತ್ತಿದೆ. ಒಳಚರಂಡಿ ಮತ್ತು ಚರಂಡಿಗಳಲ್ಲಿ ಪ್ಲಾಸ್ಟಿಕ್‍ನಿಂದಾಗಿ ಕೊಳಚೆ ನೀರು ಸರಾಗವಾಗಿ ಹರಿಯದೇ ಹೆಚ್ಚು ಸಮಸ್ಯೆ ಉಂಟು ಮಾಡುತ್ತಿದೆ ಎಂದು ತಿಳಿಸಿದರು.

ಆಹಾರವನ್ನು ತಿಂದು ಪ್ಲಾಸ್ಟಿಕ್‍ನೊಂದಿಗೆ ಎಲ್ಲೆಂದರಲ್ಲಿ ಬಿಸಾಡುವುದರಿಂದ ಅದನ್ನು ತಿಂದ ಪ್ರಾಣ , ಪಕ್ಷ್ಷಿಗಳ ಹೊಟ್ಟೆಯಲೂ ಪ್ಲಾಸ್ಟಿಕ್ ಅಂಶ ಸೇರುತ್ತಿದೆ. ಮನುಷ್ಯನ ಆರೋಗ್ಯದ ಮೇಲೆಯೂ ಪ್ಲಾಸ್ಟಿಕ್ ಪರಿಣಾಮ ಬೀರು ತ್ತಿದೆ ಎಂದರು.
ಪ್ಲಾಸ್ಟಿಕ್‍ನಿಂದಾಗುವ ದುಷ್ಪರಿಣಾಮದ ಬಗ್ಗೆ ಎಲ್ಲರೂ ತಿಳಿದುಕೊಂಡು ಪ್ಲಾಸ್ಟಿಕ್ ಬಳಕೆ ಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಪ್ಲಾಸ್ಟಿಕ್ ಬದಲು, ಬಟ್ಟೆ ಬ್ಯಾಗ್ ಬಳಸಬೇಕು. ಪರಿಸರ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕು ಎಂದು ಸಲಹೆ ನೀಡಿದರು.

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು ಎಂಬ ಉದ್ದೇಶದಿಂದ ಚಿತ್ರ ಬರೆಯುವ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು. ಕಾರ್ಯಕ್ರಮ ದಲ್ಲಿ ಉಪ ಪರಿಸರ ಅಧಿಕಾರಿ ಹೇಮಲತಾ, ಶಿಕ್ಷಕರಾದ ಶಿವರುದ್ರ, ಮಧು ಇದ್ದರು.

Translate »