Tag: MCC

ಪೌರ ಕಾರ್ಮಿಕರ ಮುಷ್ಕರಕ್ಕೆ ಶಾಸಕ ನಾಗೇಂದ್ರ ಬೆಂಬಲ
ಮೈಸೂರು

ಪೌರ ಕಾರ್ಮಿಕರ ಮುಷ್ಕರಕ್ಕೆ ಶಾಸಕ ನಾಗೇಂದ್ರ ಬೆಂಬಲ

October 5, 2018

ಮೈಸೂರು: ಖಾಯಂ ಮಾತಿಗೆ ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿ ರುವ ಮುಷ್ಕರಕ್ಕೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಮಾತನಾಡಿದ ಎಲ್. ನಾಗೇಂದ್ರ ಅವರು, ನಗರ ಪಾಲಿಕೆ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಮರ್ಪಕ ವಾಗಿ ವೇತನ ಸಿಗುತ್ತಿಲ್ಲ. ಇಎಸ್‍ಐ, ಪಿಎಫ್ ಸೇರಿ ದಂತೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈ ಕಾರಣದಿಂದಲೇ ಪೌರಕಾರ್ಮಿಕರಿಗೆ ಚೆಕ್ ಮೂಲಕವೇ ವೇತನ ನೀಡಬೇಕೆಂದು…

ಮೈಸೂರು ಸೇರಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶನಕ್ಕೆ ನಿರ್ಧಾರ
ಮೈಸೂರು

ಮೈಸೂರು ಸೇರಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶನಕ್ಕೆ ನಿರ್ಧಾರ

October 5, 2018

ಮೈಸೂರು: ಮೈಸೂರು ಮಹಾನಗರಪಾಲಿಕೆ ಸೇರಿದಂತೆ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದ ನಾಮ ನಿರ್ದೇಶನ ಸದಸ್ಯರ ನೇಮಕಕ್ಕೆ ಸಚಿವ ಸಂಪುಟ ತೀರ್ಮಾನಿಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಸ್ಥಳೀಯ ಸಂಸ್ಥೆಗಳಿಗೆ ಆಯಾಯ ಪಕ್ಷಗಳ ಅಧಿಕ ಸದಸ್ಯರನ್ನು, ವಿಪಕ್ಷ ವಾದ ಬಿಜೆಪಿ ಪ್ರಾಬಲ್ಯವಿರುವ ಸಂಸ್ಥೆಗಳಿಗೆ ಮೈತ್ರಿ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸದಸ್ಯರನ್ನು ನೇಮಿಸಲು ನಿರ್ಧರಿಸಲಾಗಿದೆ. ಅಂತೆಯೇ ಮೈಸೂರು ನಗರ ಪಾಲಿಕೆಗೆ ಎಲ್ಲಾ ನಾಮ ನಿರ್ದೇಶನ ಸದಸ್ಯ ಸ್ಥಾನಗಳು ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಮೇಯರ್ ಚುನಾವಣೆಗೂ…

ಪೌರ ಕಾರ್ಮಿಕರಿಗೆ ಇಂದಿನಿಂದ ಇಂದಿರಾ ಕ್ಯಾಂಟೀನ್ ಊಟ
ಮೈಸೂರು

ಪೌರ ಕಾರ್ಮಿಕರಿಗೆ ಇಂದಿನಿಂದ ಇಂದಿರಾ ಕ್ಯಾಂಟೀನ್ ಊಟ

October 4, 2018

ಮೈಸೂರು: ಪೌರ ಕಾರ್ಮಿಕರ ಬಹುದಿನದ ಬೇಡಿಕೆಯೊಂದನ್ನು ಸರ್ಕಾರ ಗುರುವಾರ(ಅ.4) ಈಡೇರಿಸುತ್ತಿದ್ದು, ಹಸಿವಿನಿಂದ ಕಂಗೆಡುತ್ತಿದ್ದ ಪೌರಕಾರ್ಮಿಕರಿಗೆ ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದೆ. ಮುಂಜಾನೆಯಿಂದಲೇ ಪೊರಕೆ ಹಿಡಿದು ರಸ್ತೆಗಿಳಿಯುತ್ತಿದ್ದ ಪೌರ ಕಾರ್ಮಿಕರು ಊಟ ವಿಲ್ಲದೆ ಮಧ್ಯಾಹ್ನ 4 ಗಂಟೆಗೆ ತಮ್ಮ ಮನೆ ಸೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೀಡ ಲಾಗುವ ಬಿಸಿಯೂಟದ ಯೋಜನೆಯಂತೆ ಪೌರ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವಂತೆ ಪೌರ ಕಾರ್ಮಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದವು. ಪೌರ…

ಮೈಸೂರು ನಗರಪಾಲಿಕೆ ನೂತನ ಸದಸ್ಯರಿಗೆ ಸುತ್ತೂರು ಶ್ರೀಗಳಿಂದ ಸನ್ಮಾನ
ಮೈಸೂರು

ಮೈಸೂರು ನಗರಪಾಲಿಕೆ ನೂತನ ಸದಸ್ಯರಿಗೆ ಸುತ್ತೂರು ಶ್ರೀಗಳಿಂದ ಸನ್ಮಾನ

September 27, 2018

ಮೈಸೂರು: ಮೈಸೂರು ನಗರಪಾಲಿಕೆಗೆ ನೂತನವಾಗಿ ಆಯ್ಕೆಯಾದ ಪಾಲಿಕೆ ಸದಸ್ಯರನ್ನು ಬುಧ ವಾರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸನ್ಮಾನಿಸಿದರು. ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ನಡೆದ ಕಾರ್ಯಕ್ರಮ ದಲ್ಲಿ 65 ಪಾಲಿಕೆ ಸದಸ್ಯರನ್ನು ಸನ್ಮಾನಿಸಿ, ಆಶೀರ್ವದಿಸಿದರು. ನಂತರ ಮಾಜಿ ಶಾಸಕ ವಾಸು ಮಾತನಾಡಿ, ಮೈಸೂರು ನಗರ ಪಾಲಿಕೆ ದೇಶದ ಗೌರವಯುತ ಪಾಲಿಕೆಗಳಲ್ಲೊಂದಾಗಿದೆ. ಈ ಹಿಂದಿನ ಪಾಲಿಕೆ ಸದಸ್ಯರು ನಗರದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡದೇ ಸೇವಾ ಮನೋ ಭಾವನೆಯಿಂದ ಕೆಲಸ ಮಾಡಿದ್ದಾರೆ. ಇದನ್ನೇ ಈಗಿನ…

ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಿ: ಜನತೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮನವಿ
ಮೈಸೂರು

ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಿ: ಜನತೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮನವಿ

September 26, 2018

ಮೈಸೂರು: ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಸಾಂಸ್ಕøತಿಕ ನಗರಿ ಮೈಸೂರನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಎಂದು ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಜನತೆಯಲ್ಲಿ ಮನವಿ ಮಾಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ದೇವರಾಜ ಮಾರುಕಟ್ಟೆಯ ಚಿಕ್ಕಗಡಿಯಾರದ ಬಳಿ ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣಾ 4ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡದಂತೆ ತಡೆಯಬೇಕು. ಪ್ಲಾಸ್ಟಿಕ್ ತಿಂದು ದನ-ಕರುಗಳು ಅನಾರೋಗ್ಯಕ್ಕೊಳಗಾಗುವುದಲ್ಲದೆ ಪರಿಸರ ಹಾನಿಯಾಗಲಿದೆ ಎಂದರು. ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸ್ವಚ್ಛತೆಗೆ ಪ್ರಶಸ್ತಿ ಬಂದಿರುವುದರಿಂದ ಈ ಬಾರಿಯೂ ಸ್ವಚ್ಛತೆ ಕಾಪಾಡುವ ಮೂಲಕ…

ಮೈಸೂರು ಮೇಯರ್ ಸ್ಥಾನ ಜೆಡಿಎಸ್‍ಗೆ ದಕ್ಕುವ ಸಾಧ್ಯತೆ: ಕಾಂಗ್ರೆಸ್‍ಗೆ ಬೆಂಗಳೂರು, ತುಮಕೂರು ಪಾಲಿಕೆ ಬಿಟ್ಟು ಮೈಸೂರು ಉಳಿಸಿಕೊಳ್ಳಲು ಜೆಡಿಎಸ್ ತಂತ್ರಗಾರಿಕೆ
ಮೈಸೂರು

ಮೈಸೂರು ಮೇಯರ್ ಸ್ಥಾನ ಜೆಡಿಎಸ್‍ಗೆ ದಕ್ಕುವ ಸಾಧ್ಯತೆ: ಕಾಂಗ್ರೆಸ್‍ಗೆ ಬೆಂಗಳೂರು, ತುಮಕೂರು ಪಾಲಿಕೆ ಬಿಟ್ಟು ಮೈಸೂರು ಉಳಿಸಿಕೊಳ್ಳಲು ಜೆಡಿಎಸ್ ತಂತ್ರಗಾರಿಕೆ

September 6, 2018

ಮೈಸೂರು: ಅತಂತ್ರ ಸ್ಥಿತಿಯನ್ನೇ ದಾಳವಾಗಿರಿಸಿಕೊಂಡಿರುವ ಜಾತ್ಯಾತೀತ ಜನತಾದಳ ಹೇಗಾದರೂ ಮಾಡಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮತ್ತೆ ಮೇಯರ್ ಸ್ಥಾನ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಚುನಾವಣಾ ಫಲಿತಾಂಶ ಹೊರ ಬೀಳುತ್ತಿ ದ್ದಂತೆಯೇ ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ನೊಂದಿಗೆ ಕೈಜೋಡಿಸುವುದು ಅನಿವಾರ್ಯ ಎಂಬುದು ಖಚಿತವಾಗುತ್ತಿದ್ದಂತೆಯೇ ಮೇಯರ್ ಸ್ಥಾನ ಕೈ ತಪ್ಪದಂತೆ ಎಚ್ಚರ ವಹಿಸಿ ರಣತಂತ್ರ ರೂಪಿಸುತ್ತಿದೆ. ಅತಂತ್ರವಾಗಿರುವ ತುಮಕೂರು ಮಹಾನಗರ ಪಾಲಿಕೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಮುಂದಾಗಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರ…

ಮೈಸೂರು ಪಾಲಿಕೆಯಿಂದ ಮತದಾನ ಜಾಗೃತಿ
ಮೈಸೂರು

ಮೈಸೂರು ಪಾಲಿಕೆಯಿಂದ ಮತದಾನ ಜಾಗೃತಿ

August 28, 2018

ಮೈಸೂರು: ಆಗಸ್ಟ್ 31 ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸುವಂತೆ ಇಂದು ಮೈಸೂರಲ್ಲಿ ಜನ ಜಾಗೃತಿ ಮೂಡಿಸಲಾಯಿತು. ಮೈಸೂರು ಮಹಾನಗರ ಪಾಲಿಕೆಯು ಮತದಾರರ ಶಿಕ್ಷಣ ಮತ್ತು ಚುನಾವಣಾ ಪಾಲ್ಗೊಳ್ಳುವಿಕೆ (ಸ್ವೀಪ್) ಚಟುವಟಿಕೆ ಅಂಗವಾಗಿ ಇಂದು ಜೆಎಲ್‍ಬಿ ರಸ್ತೆಯ ಆರ್‍ಟಿಓ ಸರ್ಕಲ್, ನಂಜುಮಳಿಗೆ ಸರ್ಕಲ್, ವಿವೇಕಾನಂದ ಸರ್ಕಲ್, ಜೆ.ಪಿ. ನಗರದ ಗೊಬ್ಬಳಿ ಮರ ಸರ್ಕಲ್, ಆಗ್ರಹಾರ ಸರ್ಕಲ್, ಬನುಮಯ್ಯ ಕಾಲೇಜು, ಪುರಭವನ ಸೇರಿದಂತೆ ಸುತ್ತಮುತ್ತಲ ಸ್ಥಳಗಳಲ್ಲಿ ಬೀದಿ ನಾಟಕ, ಜಾನಪದ ಗೀತೆ, ಜಾನಪದ…

ಮೈಸೂರು ಮಹಾನಗರ ಪಾಲಿಕೆ ಚುನಾವಣೆ:  65 ವಾರ್ಡ್‍ಗಳಲ್ಲಿ 725 ಮತಗಟ್ಟೆ ಸ್ಥಾಪನೆ
ಮೈಸೂರು

ಮೈಸೂರು ಮಹಾನಗರ ಪಾಲಿಕೆ ಚುನಾವಣೆ:  65 ವಾರ್ಡ್‍ಗಳಲ್ಲಿ 725 ಮತಗಟ್ಟೆ ಸ್ಥಾಪನೆ

August 11, 2018

ಮೈಸೂರು: ಆಗಸ್ಟ್ 31ರಂದು ನಡೆಯಲಿರುವ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ 65 ವಾರ್ಡ್‍ಗಳ ಚುನಾವಣೆಗೆ ಒಟ್ಟು 725 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅಡಿಷನಲ್ ಡಿಸಿ ಟಿ.ಯೋಗೇಶ್ ತಿಳಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ 3,97,692 ಮಹಿಳೆಯರೂ ಸೇರಿದಂತೆ ಒಟ್ಟು 7,99,422 ಮತದಾರರು ಹಕ್ಕು ಚಲಾಯಿಸಲಿದ್ದು, ವಿಧಾನಸಭಾ ಚುನಾವಣೆ ವೇಳೆ ಪರಿಷ್ಕರಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಹೆಸರಿರುವವರೆಲ್ಲರೂ ಪಾಲಿಕೆ ಚುನಾವಣೆಯಲ್ಲಿ ಮತ ಹಾಕಲು ಹಕ್ಕುಳ್ಳವರಾಗಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತೀ ಮತಗಟ್ಟೆಗೆ ಓರ್ವ ಅಧ್ಯಕ್ಷಾಧಿಕಾರಿ (Returning…

ಆ.31 ಮೈಸೂರು ಮಹಾನಗರ ಪಾಲಿಕೆ ಚುನಾವಣೆ
ಮೈಸೂರು

ಆ.31 ಮೈಸೂರು ಮಹಾನಗರ ಪಾಲಿಕೆ ಚುನಾವಣೆ

August 10, 2018

ಅದರಂತೆ ಆಗಸ್ಟ್ 13ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಆಗಸ್ಟ್ 20 ನಾಮಪತ್ರ ಸಲ್ಲಿಸಲು ಕಡೇ ದಿನವಾಗಿರುತ್ತದೆ. ಆಗಸ್ಟ್ 21 ನಾಮಪತ್ರಗಳ ಪರಿಶೀಲನೆ, 23ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕಡೇ ದಿನವಾಗಿರುತ್ತದೆ. ಆಗಸ್ಟ್ 31ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದಲ್ಲಿ ಸೆ.2ರಂದು ಮರು ಮತದಾನವಾಗಬೇಕಿದೆ. ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಮಹಾನಗರಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಸೆಪ್ಟೆಂಬರ್…

ಚೆಲುವಾಂಬ ಪಾರ್ಕ್ ಬಳಿ ಹೂವಿನ ವ್ಯಾಪಾರಕ್ಕೆ ಸ್ಥಳೀಯರ ಆಕ್ಷೇಪ ಮತ್ತೆ ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿಗಳು
ಮೈಸೂರು

ಚೆಲುವಾಂಬ ಪಾರ್ಕ್ ಬಳಿ ಹೂವಿನ ವ್ಯಾಪಾರಕ್ಕೆ ಸ್ಥಳೀಯರ ಆಕ್ಷೇಪ ಮತ್ತೆ ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿಗಳು

August 6, 2018

ಮೈಸೂರು:  ಮೈಸೂರಿನ ವಾಲ್ಮೀಕಿ ರಸ್ತೆಯಿಂದ ಚೆಲುವಾಂಬ ಪಾರ್ಕ್ ಬಳಿ ಸ್ಥಳಾಂತರಗೊಂಡಿದ್ದ ಹೂವಿನ ವ್ಯಾಪಾರಿಗಳಿಗೆ ಮತ್ತೆ ಸಂಕಟ ಉಂಟಾಗಿದ್ದು, ಪಾರ್ಕ್‍ನ ಅಂದ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹೂವಿನ ವ್ಯಾಪಾರಿಗಳಿಗೆ ಒಂಟಿಕೊಪ್ಪಲು ನಿವಾಸಿಗಳು ಅವಕಾಶ ನಿರಾಕರಿಸಿರುವುದರಿಂದ ಮತ್ತೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ವಾಲ್ಮೀಕಿ ರಸ್ತೆಯಲ್ಲಿ ಮಹಾರಾಣಿ ವಾಣಿಜ್ಯ ಕಾಲೇಜು ಈ ಶೈಕ್ಷಣಿಕ ಸಾಲಿನಿಂದ ಆರಂಭವಾಗಿರುವುದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಲ್ಮೀಕಿ ರಸ್ತೆಯ ಬದಿಯಲ್ಲಿದ್ದ 8 ಹೂವಿನ ಮಳಿಗೆಗಳು, ಟೀ ಸ್ಟಾಲ್ ಅನ್ನು ಸ್ಥಳಾಂತರ ಮಾಡುವುದಕ್ಕೆ ಸೂಚನೆ ನೀಡಲಾಗಿತ್ತು….

1 4 5 6 7
Translate »