Tag: MCC

ವಾಲ್ಮೀಕಿ ರಸ್ತೆಯಿಂದ ಹೂಗುಚ್ಛ ಮಾರುವವರ ಎತ್ತಂಗಡಿ
ಮೈಸೂರು

ವಾಲ್ಮೀಕಿ ರಸ್ತೆಯಿಂದ ಹೂಗುಚ್ಛ ಮಾರುವವರ ಎತ್ತಂಗಡಿ

August 1, 2018

ಮೈಸೂರು: ಕಳೆದ 15 ವರ್ಷಗಳಿಂದ ಮೈಸೂರಿನ ವಾಲ್ಮೀಕಿ ರಸ್ತೆಯ ಫುಟ್‍ಪಾತ್ ಮೇಲೆ ಹೂ ಗುಚ್ಛ ತಯಾರಿಸಿ ಮಾರುತ್ತಿದ್ದವರನ್ನು ಮೈಸೂರು ನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಪಡುವಾರಹಳ್ಳಿ ಬಳಿ ವಾಲ್ಮೀಕಿ ರಸ್ತೆಯಲ್ಲಿ ನಿರ್ಮಿಸಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮತ್ತು ಹಾಸ್ಟೆಲ್ ಕಟ್ಟಡಗಳು ಕಾರ್ಯಾರಂಭಗೊಂಡಿರುವುದ ರಿಂದ ವಿದ್ಯಾರ್ಥಿನಿಯರು ಓಡಾಡಲು ಅಡ್ಡಿ ಯಾಗುತ್ತದೆ ಎಂಬ ಕಾರಣಕ್ಕಾಗಿ ವಾಲ್ಮೀಕಿ ರಸ್ತೆಯ ಫುಟ್‍ಪಾತ್‍ನಲ್ಲಿದ್ದ ಹೂಗುಚ್ಛ ಮಾರುವವರನ್ನು ನಗರ ಪಾಲಿಕೆ ಆರೋಗ್ಯ ಘಟಕದ ಅಧಿಕಾರಿಗಳು ಸೋಮವಾರ ತೆರವುಗೊಳಿಸಿದ್ದು, ಮುಂದೆ ಆ ಭಾಗದಲ್ಲಿ ವ್ಯಾಪಾರ ಮಾಡದಂತೆ…

ಪ್ಲಾಸ್ಟರ್ ಆಫ್ ಪ್ಯಾರಿಸ್, ರಟ್ಟಿನ ಗಣಪನ ಮಾರಾಟ ನಿಷೇಧ
ಮೈಸೂರು

ಪ್ಲಾಸ್ಟರ್ ಆಫ್ ಪ್ಯಾರಿಸ್, ರಟ್ಟಿನ ಗಣಪನ ಮಾರಾಟ ನಿಷೇಧ

July 31, 2018

ಪರಿಸರ ಸ್ನೇಹಿ ಮಣ್ಣಿನ ಗಣಪನ ತಯಾರಿಕೆ, ಬಳಕೆಗೆ ಅವಕಾಶ  4 ಅಡಿಗಿಂತ ಹೆಚ್ಚಿನ ಎತ್ತರದ ಗಣಪನ ಪ್ರತಿಷ್ಠಾಪನೆಗೆ ಅನುಮತಿ ನಕಾರ ರಸ್ತೆ ಬದಿ ಮಾರಾಟ ನಿಷೇಧ, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ಮೈಸೂರು: ಮೈಸೂರು ನಗರದಲ್ಲಿ ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಪೇಪರ್ ಮೋಲ್ಡ್‍ನಿಂದ ತಯಾರಿಸಿರುವ ಬಣ್ಣದ ಗಣಪತಿ ಮೂರ್ತಿಯ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ನಾಲ್ಕು ಅಡಿಗಿಂತ ಅಧಿಕ ಎತ್ತರದ ಗಣಪತಿ ಮೂರ್ತಿ ತಯಾರಿಸದಂತೆ ಮೈಸೂರು ನಗರ ಪಾಲಿಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ….

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕೆಪಿಜೆಪಿ ಸ್ಪರ್ಧೆ
ಮೈಸೂರು

ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕೆಪಿಜೆಪಿ ಸ್ಪರ್ಧೆ

July 7, 2018

ಮೈಸೂರು: ಮೈಸೂರು ನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ಹೊಸದಾಗಿ ಪದಾಧಿಕಾರಿಗಳ ನೇಮಕ ಮಾಡಿದ್ದು, ನಗರಾಧ್ಯಕ್ಷರಾಗಿ ಶ್ರೀನಿಧಿ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ ಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಪಿಜೆಪಿ ಸಂಸ್ಥಾಪಕ ಅಧ್ಯಕ್ಷ ಡಿ.ಮಹೇಶ್ ಗೌಡ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಸ್ಟ್ ಲೆಸ್ ಹಾಗೂ ಕ್ಯಾಶ್ ಲೆಸ್ ತತ್ವ ಸಿದ್ದಾಂತದ ಮೂಲಕ ಕೆಪಿಜೆಪಿ ಈಗಾಗಲೇ ರಾಜ್ಯದ ಮನೆ ಮಾತಾಗಿದೆ….

ಮೈಸೂರು ಪಾಲಿಕೆ ವಾರ್ಡ್ ಮೀಸಲಾತಿ  ಪುನರ್ ಪರಿಶೀಲನೆಗೆ ಮಾಜಿ ಮೇಯರ್ ಆಗ್ರಹ
ಮೈಸೂರು

ಮೈಸೂರು ಪಾಲಿಕೆ ವಾರ್ಡ್ ಮೀಸಲಾತಿ  ಪುನರ್ ಪರಿಶೀಲನೆಗೆ ಮಾಜಿ ಮೇಯರ್ ಆಗ್ರಹ

June 24, 2018

ಮೈಸೂರು: ಮೈಸೂರು ನಗರ ಪಾಲಿಕೆಯ ವಾರ್ಡ್‍ಗಳಿಗೆ ರಾಜ್ಯ ಸರ್ಕಾರ ಹೊರಡಿಸಿರುವ ಮೀಸಲಾತಿಯ ಅಧಿಸೂಚನೆ ಅವೈಜ್ಞಾನಿಕವಾಗಿದ್ದು, ಕೂಡಲೇ ಮೀಸಲಾತಿ ಪಟ್ಟಿಯನ್ನು ಪುನರ್ ಪರಿಶೀಲಿಸಿ ವಾಸ್ತವತೆಗೆ ಅನುಗುಣವಾದ ಅಧಿಸೂಚನೆ ಹೊರಡಿಸುವಂತೆ ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯ ಸರ್ಕಾರ ಮೈಸೂರು ನಗರ ಪಾಲಿಕೆಯ ಎಲ್ಲಾ ವಾರ್ಡ್‍ಗಳನ್ನು ಪುನರ್ ವಿಂಗಡಣೆ ಮಾಡಿದೆ. ಅಲ್ಲದೆ ಎಲ್ಲಾ ವಾರ್ಡ್‍ಗಳಿಗೂ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ. ಇದು ಅವೈಜ್ಞಾನಿಕ ಮೀಸಲಾತಿಯಾಗಿದ್ದು, ಹಲವು ವಾರ್ಡ್‍ಗಳಲ್ಲಿ ಸಾಮಾಜಿಕ…

3ಕ್ಕಿಂತ ಹೆಚ್ಚು ನಾಯಿ ಸಾಕಬಾರದೇಕೆ?
ಮೈಸೂರು

3ಕ್ಕಿಂತ ಹೆಚ್ಚು ನಾಯಿ ಸಾಕಬಾರದೇಕೆ?

June 16, 2018

ಮೈಸೂರು: ನಾವು ಪ್ರಾಣಿಪ್ರಿಯರು. ಮೂರಕ್ಕಿಂತ ಹೆಚ್ಚು ನಾಯಿಗಳನ್ನು ಸಾಕಬಾರದೆಂದರೆ ಹೇಗೆ? ಎಂದು ಎನ್‍ಜಿಓ ಪ್ರಮುಖರು ಇಂದಿಲ್ಲಿ ಮೈಸೂರು ಮಹಾನಗರ ಪಾಲಿಕೆ ಪಶು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಮನೆಗಳಲ್ಲಿ ನಾಯಿಗಳನ್ನು ಸಾಕಲು ಪಾಲಿಕೆಯಿಂದ ಪೂರ್ವಾನುಮತಿ ಪಡೆಯ ಬೇಕೆಂಬ ನಿಯಮ ಜಾರಿಗೆ ತರಲು ಮುಂದಾ ಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಬೋಗಾದಿ ಬಳಿ ಇರುವ ಪೀಪಲ್ ಫಾರ್ ಅನಿಮಲ್ (ಪಿಎಫ್‍ಎ) ಸಂಸ್ಥೆ ಆವರಣದಲ್ಲಿ ಏರ್ಪ ಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರಾಣಿಪ್ರಿಯ ಸರ್ಕಾರೇತರ ಸಂಘ-ಸಂಸ್ಥೆ ಪ್ರಮುಖರು ಪಾಲ್ಗೊಂಡು ನಾಯಿ ಗಳ ಸಾಗಾಣಿಕೆಗೆ ನಿಯಂತ್ರಣ ಹೇರು…

ಉಕ್ಕಿ ಹರಿಯುತ್ತಿರುವ ಮ್ಯಾನ್‍ಹೋಲ್
ಮೈಸೂರು

ಉಕ್ಕಿ ಹರಿಯುತ್ತಿರುವ ಮ್ಯಾನ್‍ಹೋಲ್

June 11, 2018

ಮೈಸೂರು: ಮೈಸೂರಿನ ಗಾಂಧಿ ನಗರದ ನಾಲ್ಕನೇ ಕ್ರಾಸ್‍ನಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಾಲಯದ ಬಳಿ ಕಳೆದ ಎರಡು ತಿಂಗಳಿಂದಲೂ ಮ್ಯಾನ್‍ಹೋಲ್ ಉಕ್ಕಿ ಹರಿಯುತ್ತಿದ್ದು, ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮುಖಂಡ ಎಸ್.ರಾಜು ಆರೋಪಿಸಿದ್ದಾರೆ. ಉಕ್ಕಿ ಹರಿಯುತ್ತಿರುವ ಮ್ಯಾನ್‍ಹೋಲ್ ಅನ್ನು ದುರಸ್ತಿ ಮಾಡಿ ಸ್ಥಳೀಯ ಜನರಿಗೆ ನೆರವಾಗುವಂತೆ ಕಳೆದ ಎರಡು ತಿಂಗಳಿಂದ ಗಾಂಧಿ ನಗರದ ಜ್ಞಾನ ಜ್ಯೋತಿ ಮಹಿಳಾ ಸ್ವಸಹಾಯ ಸಂಘ ಹಾಗೂ ಸ್ಥಳೀಯ ನಿವಾಸಿಗಳು ಹಲವು ಬಾರಿ ಒಳ ಚರಂಡಿ ಮಂಡಳಿ ಮತ್ತು ನಗರ ಪಾಲಿಕೆಗೆ…

ನಾಯಿ ಸಾಕಲು ಪರವಾನಗಿ ಅವಶ್ಯ
ಮೈಸೂರು

ನಾಯಿ ಸಾಕಲು ಪರವಾನಗಿ ಅವಶ್ಯ

June 8, 2018

ಮೈಸೂರು: ಬೆಂಗಳೂರು ಬೃಹತ್ ನಗರ ಪಾಲಿಕೆ ಮಾದರಿಯಲ್ಲಿ ನಾಯಿ ಸಾಕಲು ಪರವಾನಗಿ ಪಡೆಯುವ ನಿಯಮಾವಳಿ ರೂಪಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.ನಾಯಿ ಸಾಕಲು ಅನುಮತಿ ಪಡೆಯಬೇಕೆಂಬ ಕಾನೂನನ್ನು ರಾಜ್ಯ ಸರ್ಕಾರ ಜೂನ್ 4ರಂದು ರೂಪಿಸಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ತರಲು ಮುಂದಾಗಿದ್ದು, ಅದರಲ್ಲಿ ಒಂದು ಅಪಾರ್ಟ್‍ಮೆಂಟ್‍ಗೆ ಒಂದು ನಾಯಿ ಸಾಕಲು ಮಾತ್ರ ಅವಕಾಶವಿರುವ ನಿಯಮವೂ ಸೇರಿದೆ. ಸರ್ಕಾರದ ಈ ನಿಯಮದ ಪ್ರಸ್ತಾವನೆಯನ್ನು ಕೌನ್ಸಿಲ್ ಮುಂದಿಟ್ಟು ಅನುಮೋದನೆ ಪಡೆದುಕೊಂಡ ನಂತರ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ. ಅದೇ ನಿಯಮವನ್ನು…

ಕಟ್ಟಡ ಮಾಲೀಕರೇ ಎಚ್ಚರ: ಮೈಸೂರಲ್ಲಿ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ
ಮೈಸೂರು

ಕಟ್ಟಡ ಮಾಲೀಕರೇ ಎಚ್ಚರ: ಮೈಸೂರಲ್ಲಿ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡ

June 5, 2018

ಮೈಸೂರು: ಮಾಲೀಕರೇ ಎಚ್ಚರ! ನಕ್ಷೆ, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದರೆ ಮೈಸೂರು ಮಹಾನಗರ ಪಾಲಿಕೆಯು ದುಪ್ಪಟ್ಟು ದಂಡ ವಿಧಿಸುತ್ತದೆ. ಸ್ಥಳೀಯ ಸಂಸ್ಥೆಯಿಂದ ಅನುಮೋದಿಸಿದ ನಕ್ಷೆಗೂ ನೀವು ಕಟ್ಟಿದ ಮನೆ ಅಥವಾ ವಾಣ ಜ್ಯ ಕಟ್ಟಡದ ವಿಸ್ತೀರ್ಣಕ್ಕೂ ವ್ಯತ್ಯಾಸ ಕಂಡು ಬಂದಲ್ಲಿ ಆಸ್ತಿ ತೆರಿಗೆ ಜೊತೆಗೆ ಎರಡು ಪಟ್ಟು ದಂಡ ತೆರಬೇಕಾಗುತ್ತದೆ. ಕಟ್ಟಡದ ವಿಸ್ತೀರ್ಣ ಅಳತೆ ಮಾಡಿ ನಿಯಮ ಹಾಗೂ ನಕ್ಷೆ ಉಲ್ಲಂಘಿಸಿರುವ ಆಸ್ತಿಗಳ ಸರ್ವೆ ಕಾರ್ಯಕ್ಕೆ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ ವಲಯಾಧಿಕಾರಿಗಳು ಚಾಲನೆ ನೀಡಿದ್ದಾರೆ. ಈ…

1 5 6 7
Translate »