Tag: MCC

ಪಾಲಿಕೆ ಕಚೇರಿಯಿಂದ ಬಾಡಿಗೆ ಬಾಕಿಗಾಗಿ ವಾಹನ ಚಾಲಕರ ಪ್ರತಿಭಟನೆ
ಮೈಸೂರು

ಪಾಲಿಕೆ ಕಚೇರಿಯಿಂದ ಬಾಡಿಗೆ ಬಾಕಿಗಾಗಿ ವಾಹನ ಚಾಲಕರ ಪ್ರತಿಭಟನೆ

December 11, 2018

ಮೈಸೂರು:  ಮೂರು ತಿಂಗಳಿಂದ ಬಾಕಿ ಇರುವ ಬಾಡಿಗೆ ಮೊತ್ತ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ಕಚೇರಿ ಮುಂದೆ ಬಾಡಿಗೆ ವಾಹನ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು. ನಗರಪಾಲಿಕೆಯ ಟೆಂಡರ್ ಆಧಾರದ ಮೇಲೆ ಹಲವು ವಾಹನಗಳನ್ನು ಪಾಲಿಕೆ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದೆ. ಆದರೆ ಬಾಡಿಗೆ ಮೊತ್ತವನ್ನು ಸರಿಯಾಗಿ ಪಾವತಿಸುವುದಕ್ಕೆ ನಿರ್ಲಕ್ಷಿಸುತ್ತಿದೆ. ಟೆಂಡರ್‍ದಾರರು ವಾಹನ ಚಾಲಕರಿಗೆ ಕಳೆದ ಮೂರು ತಿಂಗಳಿಂದ ಹಣ ನೀಡಿಲ್ಲ. ಬಾಡಿಗೆ ಹಣ ಹೆಚ್ಚು ಮಾಡಬೇಕು ಮತ್ತು ನಿಗದಿತ ಸಮಯಕ್ಕೆ ವಾಹನದ ಬಾಡಿಗೆ ಹಣ ನೀಡುವಂತೆ…

ಗ್ರಂಥಾಲಯ ಕರ ಪಾವತಿಸದ ಸ್ಥಳೀಯ ಸಂಸ್ಥೆಗಳ  ಪಟ್ಟಿಯಲ್ಲಿ ಮೈಸೂರು ಪಾಲಿಕೆಗೆ ಮೊದಲ ಸ್ಥಾನ
ಮೈಸೂರು

ಗ್ರಂಥಾಲಯ ಕರ ಪಾವತಿಸದ ಸ್ಥಳೀಯ ಸಂಸ್ಥೆಗಳ ಪಟ್ಟಿಯಲ್ಲಿ ಮೈಸೂರು ಪಾಲಿಕೆಗೆ ಮೊದಲ ಸ್ಥಾನ

December 4, 2018

ಮೈಸೂರು: ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಕಾಯ್ದೆ 1984ರ ಪ್ರಕಾರ ಎಲ್ಲಾ ಸ್ಥಳೀಯ ಸಂಸ್ಥೆಗಳು ಶೇ.6ರಷ್ಟು ಗ್ರಂಥಾಲಯ ಕರ ವನ್ನು ವಸೂಲಿ ಮಾಡುತ್ತವೆ. ಆ ಹಣದಲ್ಲಿಯೇ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳ ಎಲ್ಲಾ ಅಗತ್ಯಗಳಿಗೆ ಬಳಸಿಕೊಳ್ಳಲಾಗುತ್ತದೆ. ಆದರೆ ಸ್ಥಳೀಯ ಸಂಸ್ಥೆಗಳು ವಸೂಲಿ ಮಾಡಿರುವ ಗ್ರಂಥಾಲಯ ಕರವನ್ನು ಇಲಾ ಖೆಗೆ ಪಾವತಿಸದಿದ್ದರೆ ಸಾರ್ವಜನಿಕ ಗ್ರಂಥಾಲಯ ಗಳ ಅಭಿವೃದ್ಧಿ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಗ್ರಂಥಾಲಯಗಳ ಶ್ರೇಯೋಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರಿಂದ ಸಂಗ್ರಹಿಸುವ ಶೇ.6ರಷ್ಟು ತೆರಿಗೆ ಯನ್ನು ಶಾಸನಬದ್ಧವಾಗಿ ಗ್ರಂಥಾಲಯಗಳ ಅಭಿ ವೃದ್ಧಿಗೆ…

ಸರ್ಕಾರಿ ಜಾಗ ಒತ್ತುವರಿ ಆರೋಪ ಪಾಲಿಕೆಯಿಂದ ನೋಟೀಸ್
ಮೈಸೂರು

ಸರ್ಕಾರಿ ಜಾಗ ಒತ್ತುವರಿ ಆರೋಪ ಪಾಲಿಕೆಯಿಂದ ನೋಟೀಸ್

November 16, 2018

ಮೈಸೂರು: ಸರ್ಕಾರಿ ಜಾಗ ಒತ್ತುವರಿ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕುಂಬಾರಕೊಪ್ಪಲಿನ ಎನ್.ಸ್ವಾಮಿ ಎಂಬುವರಿಗೆ ಜುಲೈ 19ರಂದು ಅಂತಿಮ ನೋಟೀಸ್ ಜಾರಿಗೊಳಿಸಿದ್ದಾರೆ. 2017ರ ಡಿಸೆಂಬರ್ 21ರಂದು ಜಿಲ್ಲಾಧಿಕಾರಿಗಳು ಫೋನ್-ಇನ್ ಕಾರ್ಯಕ್ರಮ ನಡೆಸಿದಾಗ ಕುಂಬಾರಕೊಪ್ಪಲು ಗ್ರಾಮದ ಮಹದೇವು ಎಂಬುವರು ಕರೆ ಮಾಡಿ, ಗ್ರಾಮದ ನಿವೇಶನ ಸಂಖ್ಯೆ 102/ಬಿ ಮಾಲೀಕರಾದ ಎನ್.ಸ್ವಾಮಿ ಅವರು ಸರ್ಕಾರಿ ಜಾಗ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದಾರೆಂದು ಆರೋಪಿಸಿದ ಹಿನ್ನೆಲೆಯಲ್ಲಿ ಸರ್ವೆ ನಡೆಸಿ ಅಗತ್ಯ ಕ್ರಮ ವಹಿಸುವಂತೆ ಡಿಸಿ ಅವರು ಸೂಚಿಸಿದ್ದರು….

ಮೇಯರ್ ಚುನಾವಣೆಗೆ ಎರಡೇ ದಿನ ಬಾಕಿ ದೋಸ್ತಿಗಳ ನಿರ್ಧಾರ ಇನ್ನೂ ನಿಗೂಢ
ಮೈಸೂರು

ಮೇಯರ್ ಚುನಾವಣೆಗೆ ಎರಡೇ ದಿನ ಬಾಕಿ ದೋಸ್ತಿಗಳ ನಿರ್ಧಾರ ಇನ್ನೂ ನಿಗೂಢ

November 15, 2018

ಮೈಸೂರು: ಮೈಸೂರು ನಗರಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಹತ್ತಿರವಾಗಿದ್ದರೂ ಮೈತ್ರಿ ಪಕ್ಷಗಳ ನಿರ್ಧಾರವಿನ್ನೂ ಪ್ರಕಟವಾಗಿಲ್ಲ. ಮೇಯರ್ ಚುನಾವಣೆ ನ.17ರಂದು ನಿಗಧಿಯಾಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಗದ್ದುಗೆ ಏರುವ ಪಕ್ಷ ಯಾವುದು? ಎಂಬುದಿನ್ನೂ ತಿಳಿದಿಲ್ಲ. ಚುನಾವಣೆ ಸಂಬಂಧ ಜೆಡಿಎಸ್ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇ ಗೌಡರು ಹಾಗೂ ಸಾ.ರಾ.ಮಹೇಶ್ ಹೆಗಲಿಗಿದ್ದರೆ, ಕಾಂಗ್ರೆಸ್ ಹೊಣೆಯನ್ನು ಮಾಜಿ ಸಚಿವ ತನ್ವೀರ್ ಸೇಠ್ ಹೊತ್ತಿದ್ದಾರೆ. ಈಗಾಗಲೇ ಉಭಯ ಪಕ್ಷಗಳ ಸ್ಥಳೀಯ ಪದಾಧಿಕಾರಿಗಳು, ಮುಖಂಡರು ಹಾಗೂ ಪಾಲಿಕೆ ಸದಸ್ಯರ ಅಭಿಪ್ರಾಯವನ್ನೂ ಸಂಗ್ರಹಿಸಿ,…

ಛಾವಣಿ ಮೇಲೇರಿ ಮಾಲೀಕನಿಂದ ಆತ್ಮಹತ್ಯೆ ಬೆದರಿಕೆ
ಮೈಸೂರು

ಛಾವಣಿ ಮೇಲೇರಿ ಮಾಲೀಕನಿಂದ ಆತ್ಮಹತ್ಯೆ ಬೆದರಿಕೆ

November 14, 2018

ಮೈಸೂರು: ನಿಯಮ ಉಲ್ಲಂಘಿಸಿ ನಿರ್ಮಿಸುತ್ತಿದ್ದ ಕಟ್ಟಡ ನೆಲಸಮಗೊಳಿಸಲು ಸಕಲ ಸಲಕರಣೆಗಳು, ಗ್ಯಾಂಗ್‍ಮನ್‍ಗಳೊಂದಿಗೆ ವೀರಾವೇಶದಿಂದ ತೆರಳಿದ್ದ ಮುಡಾ ಮತ್ತು ಪಾಲಿಕೆ ಅಧಿಕಾರಿಗಳು, ಮಾಲೀಕ ಛಾವಣಿ ಏರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ ಕಾರಣಕ್ಕೆ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದ ಪ್ರಸಂಗ ಮೈಸೂರಿನ ರಾಜೀವ್‍ನಗರ 2ನೇ ಹಂತದ ದೇವನೂರು ಕೆರೆ ಸಮೀಪ ಮಂಗಳವಾರ ಬೆಳಿಗ್ಗೆ ನಡೆಯಿತು. ಪೂರ್ವ ಯೋಜನೆ, ಸರಿಯಾದ ಸಿದ್ಧತೆ, ಭದ್ರತಾ ವ್ಯವಸ್ಥೆ ಮಾಡಿಕೊಳ್ಳದೇ ಕಟ್ಟಡ ನೆಲಸಮ ಮಾಡಲು ಹೋದ ಅಧಿಕಾರಿಗಳು, ಮಾಲೀಕ ಸುಮಾರು 20 ಅಡಿ ಎತ್ತರದ…

ಮೈಸೂರು ಮೇಯರ್‌ಗಿರಿಗಾಗಿ ಜೆಡಿಎಸ್ ಕಸರತ್ತು
ಮೈಸೂರು

ಮೈಸೂರು ಮೇಯರ್‌ಗಿರಿಗಾಗಿ ಜೆಡಿಎಸ್ ಕಸರತ್ತು

November 12, 2018

ಮೈಸೂರು:  ಮೈಸೂರು ನಗರ ಪಾಲಿಕೆ ಮೇಯರ್ ಸ್ಥಾನಕ್ಕೆ, ಮೈತ್ರಿ ಪಕ್ಷಗಳ ಕಸ ರತ್ತು ಮುಂದು ವರಿದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಭಾನುವಾರ ಕಿಂಗ್ಸ್‍ಕೋರ್ಟ್ ಹೋಟೆಲ್ ಸಭಾಂಗಣದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಪಾಲಿಕೆ ಸದಸ್ಯರ ಸಭೆ ಕರೆದಿದ್ದರು. ಆದರೆ ಕೆಲವು ಕಾರಣಗಳಿಂದ ನಾಳೆ(ನ.12) ಮಧ್ಯಾಹ್ನ 12ಕ್ಕೆ ಸಭೆ ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಟಿಡಿ, ಜೆಡಿಎಸ್‍ಗೆ ಮೇಯರ್ ಸ್ಥಾನ ನೀಡಬೇಕೆಂಬುದು ಪಕ್ಷದ ಸ್ಥಳೀಯ ಪದಾಧಿಕಾರಿಗಳು, ನಗರ…

ನ.17ರಂದು ಮೇಯರ್ ಚುನಾವಣೆ
ಮೈಸೂರು

ನ.17ರಂದು ಮೇಯರ್ ಚುನಾವಣೆ

November 8, 2018

ಮೈಸೂರು: ಮೈಸೂರು ಮೇಯರ್, ಉಪ ಮೇಯರ್ ಆಯ್ಕೆಗೆ ನವೆಂಬರ್ 17ರಂದು ಚುನಾ ವಣೆ ನಿಗದಿಪಡಿಸಲಾಗಿದೆ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಕೋರ್ಟ್ ಹಾಲ್‍ನಲ್ಲಿ ಇಂದು ಅಧಿ ಕಾರಿಗಳೊಂದಿಗೆ ಮೇಯರ್ ಚುನಾವಣೆ ಸಂಬಂಧ ಸಭೆ ನಡೆಸಿದ ಪ್ರಭಾರ ಪ್ರಾದೇಶಿಕ ಆಯುಕ್ತ ವಿ.ಯಶವಂತ ಅವರು, ಚುನಾವಣೆಗೆ ದಿನಾಂಕ ನಿಗದಿಪಡಿಸಿದರು. ಚುನಾವಣಾ ವೇಳಾಪಟ್ಟಿಯೊಂದಿಗೆ ಹೊಸದಾಗಿ ಆಯ್ಕೆಯಾಗಿರುವ ಎಲ್ಲಾ ಕಾರ್ಪೊರೇಟರ್ ಗಳಿಗೂ ತಿಳಿವಳಿಕೆ ನೋಟೀಸ್ ತಲುಪಿಸಿ ಎಂದು ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ಶಿವಾನಂದ ಮೂರ್ತಿ ಅವರಿಗೆ ಸೂಚನೆ ನೀಡಿದರು. ಚುನಾವಣೆ ಪ್ರಕ್ರಿಯೆ ಕ್ರಮಬದ್ಧ…

ಪಾಲಿಕೆಯಿಂದ ಪ್ಲಾಸ್ಟಿಕ್ ಕಸ ಖರೀದಿಗೆ ಐಟಿಸಿ ಕಂಪನಿ ಒಡಂಬಡಿಕೆ
ಮೈಸೂರು

ಪಾಲಿಕೆಯಿಂದ ಪ್ಲಾಸ್ಟಿಕ್ ಕಸ ಖರೀದಿಗೆ ಐಟಿಸಿ ಕಂಪನಿ ಒಡಂಬಡಿಕೆ

November 5, 2018

ಮೈಸೂರು: ಮೈಸೂರು ನಗರದಲ್ಲಿ ಪ್ರತಿ ದಿನ ಸಂಗ್ರಹವಾಗುವ ಪ್ಲಾಸ್ಟಿಕ್ ಕಸದ ಸಮಸ್ಯೆ ನೀಗಿಸು ವುದಕ್ಕಾಗಿ ಮೈಸೂರು ನಗರಪಾಲಿಕೆ ಮತ್ತೊಂದು ಹೆಜ್ಜೆ ಯೊಂದನ್ನು ಇಟ್ಟಿದ್ದು, ಐಟಿಸಿ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಪ್ಲಾಸ್ಟಿಕ್ ಕಸ ನೀಡುವುದಕ್ಕೆ ಮುಂದಾಗಿದೆ. ಮೈಸೂರು ನಗರದಲ್ಲಿ ಪ್ರತಿದಿನ 400 ರಿಂದ 450 ಟನ್ ಕಸ ಸಂಗ್ರಹವಾಗುತ್ತಿದ್ದು, ಅದರಲ್ಲಿ 120ರಿಂದ 130 ಟನ್ ಪ್ಲಾಸ್ಟಿಕ್ ಕಸ ಸಂಗ್ರಹವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕಸಗಳನ್ನು ನಿರ್ವಹಣೆ ಮಾಡು ವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈ ಹಿನ್ನೆಲೆ ಯಲ್ಲಿ ಪ್ಲಾಸ್ಟಿಕ್…

ನಗರ ಪ್ರದೇಶದ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ವಿದ್ಯುನ್ಮಾನ ಭೂ ನಕಾಶೆ ತಯಾರಿ
ಮೈಸೂರು

ನಗರ ಪ್ರದೇಶದ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ವಿದ್ಯುನ್ಮಾನ ಭೂ ನಕಾಶೆ ತಯಾರಿ

October 26, 2018

ಬೆಂಗಳೂರು: ನಗರ ಪ್ರದೇಶಗಳಲ್ಲಿ ಒತ್ತುವರಿ ಭೂಮಿ ತೆರವಿಗೆ ಭೌಗೋಳಿಕ ನಕಾಶೆ ಸಿದ್ಧಪಡಿಸಲು ಇಂದಿಲ್ಲಿ ಸೇರಿದ್ದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ 10 ಮಹಾನಗರ ಪಾಲಿಕೆ ಹಾಗೂ ರಾಜ್ಯದ ಎಲ್ಲಾ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯ ಭೂ ನಕಾಶೆ ಸಿದ್ಧಗೊಳ್ಳಲಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಒತ್ತುವರಿ ಯಾಗಿದ್ದು, ಇದನ್ನು ತೆರವುಗೊಳಿಸುವ ಮೊದಲ ಹೆಜ್ಜೆಯಾಗಿ ವಿದ್ಯುನ್ಮಾನ ನಕಾಶೆ ಹೊರಬರಲಿದೆ. ಈ ನಕ್ಷೆಯಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ಜೊತೆಗೆ…

ಸಚಿವರ ಮನವೊಲಿಕೆ ಯತ್ನ ವಿಫಲ
ಮೈಸೂರು

ಸಚಿವರ ಮನವೊಲಿಕೆ ಯತ್ನ ವಿಫಲ

October 6, 2018

ಮೈಸೂರು:  ಖಾಯಂ ಮಾಡಬೇಕು. ಬೆಳಗಿನ ಉಪಾಹಾರಕ್ಕೆ ಹಣ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೂರು ದಿನದಿಂದ ಮೈಸೂರು ಮಹಾನಗರಪಾಲಿಕೆ ಎದುರು ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುತ್ತಿರುವ ಪೌರ ಕಾರ್ಮಿಕರ ಮನವೊಲಿಸುವ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಪ್ರವಾಸೋದ್ಯಮ ಸಚಿವರ ಯತ್ನ ವಿಫಲವಾಯಿತು. ಹೀಗಾಗಿ ತಮ್ಮ ಬೇಡಿಕೆ ಈಡೇರದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ ಮುಷ್ಕರ ನಿರತರು ಪ್ರತಿಭಟನೆ ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಕೈಗೊಂಡಿರುವ ತೀರ್ಮಾನವನ್ನು ಜಾರಿಗೊಳಿಸುವ ಜತೆಗೆ ಇಂದಿರಾ ಕ್ಯಾಂಟೀನ್…

1 3 4 5 6 7
Translate »