ನ.17ರಂದು ಮೇಯರ್ ಚುನಾವಣೆ
ಮೈಸೂರು

ನ.17ರಂದು ಮೇಯರ್ ಚುನಾವಣೆ

November 8, 2018

ಮೈಸೂರು: ಮೈಸೂರು ಮೇಯರ್, ಉಪ ಮೇಯರ್ ಆಯ್ಕೆಗೆ ನವೆಂಬರ್ 17ರಂದು ಚುನಾ ವಣೆ ನಿಗದಿಪಡಿಸಲಾಗಿದೆ.
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಕೋರ್ಟ್ ಹಾಲ್‍ನಲ್ಲಿ ಇಂದು ಅಧಿ ಕಾರಿಗಳೊಂದಿಗೆ ಮೇಯರ್ ಚುನಾವಣೆ ಸಂಬಂಧ ಸಭೆ ನಡೆಸಿದ ಪ್ರಭಾರ ಪ್ರಾದೇಶಿಕ ಆಯುಕ್ತ ವಿ.ಯಶವಂತ ಅವರು, ಚುನಾವಣೆಗೆ ದಿನಾಂಕ ನಿಗದಿಪಡಿಸಿದರು. ಚುನಾವಣಾ ವೇಳಾಪಟ್ಟಿಯೊಂದಿಗೆ ಹೊಸದಾಗಿ ಆಯ್ಕೆಯಾಗಿರುವ ಎಲ್ಲಾ ಕಾರ್ಪೊರೇಟರ್ ಗಳಿಗೂ ತಿಳಿವಳಿಕೆ ನೋಟೀಸ್ ತಲುಪಿಸಿ ಎಂದು ಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ಶಿವಾನಂದ ಮೂರ್ತಿ ಅವರಿಗೆ ಸೂಚನೆ ನೀಡಿದರು. ಚುನಾವಣೆ ಪ್ರಕ್ರಿಯೆ ಕ್ರಮಬದ್ಧ ವಾಗಿ ನಡೆಯಬೇಕಾಗಿರುವುದರಿಂದ ಮೀಟಿಂಗ್ ಪ್ರೊಸೀಡಿಂಗ್ಸ್ ಅನ್ನು ನಿಯಮಾನುಸಾರ ಸಿದ್ಧಪಡಿಸಿ ಅಂದು ಸಭಾಂಗಣದಲ್ಲಿ ಆಸನಗಳ ವ್ಯವಸ್ಥೆ ಮಾಡು ವಂತೆಯೂ ಪ್ರಾದೇಶಿಕ ಆಯುಕ್ತ ಯಶವಂತ್ ನಿರ್ದೇ ಶನ ನೀಡಿದರು. ಚುನಾವಣಾ ಪ್ರಕ್ರಿಯೆ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪಾಲಿಕೆ ಕಚೇರಿ ಸಭಾಂಗಣ, ಆವರಣ ಹಾಗೂ
ಪ್ರವೇಶ ದ್ವಾರದ ಬಳಿ ಸಿಬ್ಬಂದಿಗಳನ್ನು ನಿಯೋಜಿಸಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಬೇಕೆಂದು ಸಭೆಯಲ್ಲಿ ಹಾಜರಿದ್ದ ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎನ್.ವಿಷ್ಣುವರ್ಧನ್ ಸೂಚನೆ ನೀಡಿದರು. ಸಭೆಯಲ್ಲಿ ಸಹಾಯಕ ಪ್ರಾದೇಶಿಕ ಆಯುಕ್ತರಾದ ರೂಪಾ, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ, ಮೇಯರ್ ಆಪ್ತ ಕಾರ್ಯದರ್ಶಿ ನಿರ್ಮಲ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

ಮೇಯರ್ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ
ಮೈಸೂರು: ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಉಭಯ ಪಕ್ಷಗಳ ಹೈಕಮಾಂಡ್ ಮೈಸೂರು ಮೇಯರ್, ಉಪ ಮೇಯರ್ ನಿರ್ಧರಿಸ ಲಿವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಮೇಯರ್ ಚುನಾವಣೆ ದಿನಾಂಕ ನಿಗದಿಗೊಂಡಿದ್ದು, ಯಾವ ಪಕ್ಷದವರು ಮೇಯರ್ ಆಗಬೇಕು, ಯಾರು ಉಪ ಮೇಯರ್ ಆಗಬೇಕೆಂಬುದರ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹಾಗೂ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಹಾಗೂ ಪ್ರಮುಖರು ಸಭೆ ಸೇರಿ ಚರ್ಚಿಸಿ ನಿರ್ಧರಿಸುತ್ತಾರೆ ಎಂದ ಅವರು, ಉಭಯತ್ರರ ನಿರ್ದೇಶನದಂತೆ ಆಯ್ಕೆ ಮಾಡಲಾಗುವುದು ಎಂದರು. ಎರಡೂ ಪಕ್ಷದಲ್ಲೂ ಆಕಾಂಕ್ಷಿಗಳಿದ್ದಾರೆಯಾದರೂ ಅಂತಿಮ ವಾಗಿ ವರಿಷ್ಠರು ಹೇಳಿದಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಬೇರೆ ಯಾರ ಒತ್ತಾಯವೂ ಇರುವುದಿಲ್ಲ ಎಂದು ಜಿ.ಟಿ.ದೇವೇಗೌಡರು ತಿಳಿಸಿದರು.

Translate »