ಪಾಲಿಕೆ ಕಚೇರಿಯಿಂದ ಬಾಡಿಗೆ ಬಾಕಿಗಾಗಿ ವಾಹನ ಚಾಲಕರ ಪ್ರತಿಭಟನೆ
ಮೈಸೂರು

ಪಾಲಿಕೆ ಕಚೇರಿಯಿಂದ ಬಾಡಿಗೆ ಬಾಕಿಗಾಗಿ ವಾಹನ ಚಾಲಕರ ಪ್ರತಿಭಟನೆ

December 11, 2018

ಮೈಸೂರು:  ಮೂರು ತಿಂಗಳಿಂದ ಬಾಕಿ ಇರುವ ಬಾಡಿಗೆ ಮೊತ್ತ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ಕಚೇರಿ ಮುಂದೆ ಬಾಡಿಗೆ ವಾಹನ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರಪಾಲಿಕೆಯ ಟೆಂಡರ್ ಆಧಾರದ ಮೇಲೆ ಹಲವು ವಾಹನಗಳನ್ನು ಪಾಲಿಕೆ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದೆ. ಆದರೆ ಬಾಡಿಗೆ ಮೊತ್ತವನ್ನು ಸರಿಯಾಗಿ ಪಾವತಿಸುವುದಕ್ಕೆ ನಿರ್ಲಕ್ಷಿಸುತ್ತಿದೆ. ಟೆಂಡರ್‍ದಾರರು ವಾಹನ ಚಾಲಕರಿಗೆ ಕಳೆದ ಮೂರು ತಿಂಗಳಿಂದ ಹಣ ನೀಡಿಲ್ಲ. ಬಾಡಿಗೆ ಹಣ ಹೆಚ್ಚು ಮಾಡಬೇಕು ಮತ್ತು ನಿಗದಿತ ಸಮಯಕ್ಕೆ ವಾಹನದ ಬಾಡಿಗೆ ಹಣ ನೀಡುವಂತೆ ಒತ್ತಾಯಿಸಿದರು. ಬಾಕಿಯಿರುವ ಬಾಡಿಗೆ ಹಣ ಪಾವತಿಸಿ, ಬಾಡಿಗೆ ಹಣ ಹೆಚ್ಚಿಗೆ ಮಾಡಿ ಎಂದು ಅಧಿಕಾರಿ ಗಳನ್ನು ಕೇಳಿದರೆ, ಬೇರೆ ವಾಹನ ಕರೆಸಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಹಣ ಕೇಳಿದರೆ ವಾಹನ ಟೆಂಡರ್ ವಾಪಸ್ ಪಡೆಯುವುದಾಗಿ ಬೆದರಿಕೆ ಹಾಕುತ್ತಾರೆ. 3 ತಿಂಗಳಿಂದ ಬಾಡಿಗೆ ನೀಡದಿದ್ದರೆ ಜೀವನ ಸಾಗಿಸುವುದು ಕಷ್ಟವಾಗಲಿದೆ. ವಾಹನಗಳ ಸಾಲದ ಕಂತನ್ನು ಕಟ್ಟಲಾಗುತ್ತಿಲ್ಲ ಎಂದು ಚಾಲಕರು ಅಳಲು ತೋಡಿಕೊಂಡರು.

ಸ್ಥಳಕ್ಕೆ ಆಗಮಿಸಿದ ನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಸಮಸ್ಯೆ ಆಲಿಸಿದರಲ್ಲದೆ, ಟೆಂಡರ್‍ದಾರರು ಹಾಗೂ ಅಧಿಕಾರಿ ಗಳೊಡನೆ ಚರ್ಚಿಸಿ ಬಾಡಿಗೆ ಹಣ ನೀಡುವ ವ್ಯವಸ್ಥೆ ಮಾಡು ತ್ತೇನೆ. ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

Translate »