ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಅರಸು,  ರಾಜೀವ್ ಗಾಂಧಿ ಜನ್ಮ ದಿನಾಚರಣೆ
ಮೈಸೂರು

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಅರಸು, ರಾಜೀವ್ ಗಾಂಧಿ ಜನ್ಮ ದಿನಾಚರಣೆ

December 11, 2018

ಮೈಸೂರು:  ಮೈಸೂ ರಿನ ಜೆಎಲ್‍ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿಣಿ ಸಭೆಯನ್ನು ಸಂಸದ ಆರ್.ಧ್ರುವನಾರಾಯಣ್ ಉದ್ಘಾಟಿಸಿದರು.

ಮೈಸೂರು ಜಿಲ್ಲಾ ಮತ್ತು ನಗರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಜನ್ಮ ದಿನಾ ಚರಣೆ ಹಾಗೂ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಸಂಸದ ಆರ್.ಧ್ರುವ ನಾರಾಯಣ್, ಡಿ.ದೇವರಾಜ ಅರಸು ಅವರು ನಮ್ಮ ಮೈಸೂರು ಜಿಲ್ಲೆಯವರಾಗಿ ಶಾಸಕ ಸ್ಥಾನದಿಂದ ಮಂತ್ರಿ ಪದವಿ ಅಲಂಕರಿಸಿದ್ದೂ ಮಾತ್ರವಲ್ಲದೆ, 7 ವರ್ಷಗಳಿಗೂ ಅಧಿಕ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ದೇವರಾಜ ಅರಸು ಹಿಂದುಳಿದ ವರ್ಗ ಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಈ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಲುವಾಗಿ ಹಾವನೂರು ಆಯೋಗ ರಚನೆ ಮಾಡಿದರು. 20 ಅಂಶಗಳ ಕಾರ್ಯಕ್ರಮ ವನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದ ಕೀರ್ತಿ ದೇವರಾಜ ಅರಸು ಅವ ರಿಗೆ ಸಲ್ಲುತ್ತದೆ. ಕನ್ನಡ ನಾಡಿಗೆ `ಕರ್ನಾಟಕ’ ಎಂದು ನಾಮಕರಣ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿ ನಿಗೆ ಬರಬೇಕು ಎಂಬ ಆಶಯದಲ್ಲಿ ಕಾರ್ಯನಿರ್ವಹಿಸಿದ ಅವರು ತಮ್ಮ ದೂರ ದೃಷ್ಟಿಯ ಆಡಳಿತ ವೈಖರಿಯಿಂದ ನಮ್ಮ ರಾಜ್ಯದಲ್ಲಿ ಹತ್ತುಹಲವು ಸುಧಾರಣೆ ಕಾಣಲು ಸಾಧ್ಯವಾಯಿತು. ಭೂ ಸುಧಾರಣೆ ಹಾಗೂ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿಗೊಳಿಸಿ ಕ್ರಾಂತಿಯನ್ನೇ ಮಾಡಿದರು. ಇಂತಹ ಧೀಮಂತ ರಾಜ ಕಾರಣಿಯಾದ ದೇವರಾಜ ಅರಸು ಅವರು ನಮ್ಮಂತಹ ರಾಜಕಾರಣಿಗಳಿಗೆ ಆದರ್ಶ ಪ್ರಾಯರು ಎಂದು ಅಭಿಮಾನ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ರಾಜೀವ್‍ಗಾಂಧಿ ತಮ್ಮ ಅಲ್ಪಾವಧಿ ಆಡಳಿತದಲ್ಲೇ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಎಂದೂ ರಾಜಕಾರಣದತ್ತ ಆಕರ್ಷಿತರಾದವರಲ್ಲ. ಅನಿವಾರ್ಯ ಸನ್ನಿವೇಶದಿಂದ ರಾಜಕಾರಣ ಪ್ರವೇಶಿಸಿದರು. ಇವರು ನೀಡಿದ ಪ್ರೋತ್ಸಾಹ ದಿಂದಾಗಿ ಇಂದು ಮಾಹಿತಿ ತಂತ್ರಜ್ಞಾನ ದೇಶದಲ್ಲಿ ಉನ್ನತ ಮಟ್ಟಕ್ಕೆ ತಲುಪಿದೆ. ಯುವ ಸಮುದಾಯದ ಬಗೆಗಿನ ಕಾಳಜಿಯಿಂದ 21 ವರ್ಷ ವಯೋಮಾನಕ್ಕೆ ನೀಡಿದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿ ದರು. ಈ ಇಬ್ಬರು ಮಹನೀಯರ ಜಯಂತಿ ಆಚರಣೆ ವೇಳೆ ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಲು ಮುಂದಾಗ ಬೇಕು ಎಂದು ತಿಳಿಸಿದರು.

ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಸಿ.ಹೆಚ್.ವಿಜಯಶಂಕರ್ ಮಾತನಾಡಿ, ಡಿ.ದೇವರಾಜ ಅರಸು ಮತ್ತು ರಾಜೀವ್ ಗಾಂಧಿ ಇಬ್ಬರು ಧೀಮಂತ ನಾಯಕರು. ಇವರ ವಿಚಾರಗಳು ಹಾಗೂ ಆದರ್ಶ ಗಳು ನಮಗೆ ಅಗತ್ಯ. ಇಂದಿನ ಸಭೆಯಲ್ಲಿ ಈ ಇಬ್ಬರು ನಾಯಕರ ಚಿಂತನೆ ಅಳವ ಡಿಸಿಕೊಳ್ಳುವ ಸಂಬಂಧ ನಾವು ಆತ್ಮಾವ ಲೋಕನ ಮಾಡಿಕೊಳ್ಳಬೇಕು ಎಂದರು.
ಉಳುವವನೇ ಭೂಮಿ ಒಡೆಯ ಕಾನೂನು ಜಾರಿಗೊಳಿಸಿದ ದೇವರಾಜ ಅರಸು, ಭೂ ಮಾಲೀಕರಲ್ಲಿ ನಡುಕ ಹುಟ್ಟಿಸಿದ್ದರು. ಹಿಂದು ಳಿದ ವರ್ಗಗಳು ಆರ್ಥಿಕ, ಸಾಮಾಜಿಕ, ರಾಜ ಕೀಯವಾಗಿ ಮುಂದೆ ಬರಲು ದೇವರಾಜ ಅರಸು ಕಾರಣರಾದರು. ದೇವರಾಜ ಅರಸು ಅವರ ಕೊಡುಗೆ-ಸಾಧನೆ ಒಂದು ದಂತ ಕಥೆ. ಅದೇ ರೀತಿ ರಾಜೀವ್ ಗಾಂಧಿ ಅಕಾ ಲಿಕ ಮರಣಕ್ಕೆ ತುತ್ತಾಗದಿದ್ದರೆ ಈ ದೇಶಕ್ಕೆ ಕನಿಷ್ಠ 25 ವರ್ಷಗಳು ಉತ್ತಮ ಆಡಳಿತ ನೀಡುತ್ತಿದ್ದರು ಎಂದು ನುಡಿದರು. ಇದಕ್ಕೂ ಮುನ್ನ ಡಿ.ದೇವರಾಜ ಅರಸು ಹಾಗೂ ರಾಜೀವ್ ಗಾಂಧಿಯವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾ ಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ವಾಸು, ಕಳಲೆ ಕೇಶವಮೂರ್ತಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮಾಜಿ ಮೇಯರ್ ಆರೀಫ್ ಹುಸೇನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಮತ್ತಿತರರಿದ್ದರು.

Translate »