ಸಿದ್ದಗಂಗಾ ಶ್ರೀಗಳ ಚಿಕಿತ್ಸಾ ವಿಚಾರದಲ್ಲಿ ಡಿಕೆಶಿ ಹೇಳಿಕೆಗೆ ಖಂಡನೆ
ಮೈಸೂರು

ಸಿದ್ದಗಂಗಾ ಶ್ರೀಗಳ ಚಿಕಿತ್ಸಾ ವಿಚಾರದಲ್ಲಿ ಡಿಕೆಶಿ ಹೇಳಿಕೆಗೆ ಖಂಡನೆ

December 11, 2018

ಬೆಳಗಾವಿ(ಸುವರ್ಣಸೌಧ):  ಸಿದ್ದಗಂಗಾ ಶ್ರೀಗಳು ಆರೋಗ್ಯ ವಾಗಿದ್ದಾರೆ. ಚಿಕಿತ್ಸೆಗೆ ತುಂಬಾ ಚೆನ್ನಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾರೂ ಕೂಡ ಆಸ್ಪತ್ರೆಗೆ ಹೋಗುವ ಅವಶ್ಯಕತೆಯಿಲ್ಲ. ಅಲ್ಲಿನ ಅಲ್ಪಸಂಖ್ಯಾತರ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವ ಕುಮಾರ್ ನೀಡಿದ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿ ರುವ ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ, ವೈದ್ಯರಿಗೆ ಯಾವುದೇ ಧರ್ಮವಿಲ್ಲ. ಅದರಲ್ಲೂ ಸಿದ್ದಗಂಗಾ ಶ್ರೀಗಳಂತಹ ಮಹಾ ಗುರುಗಳ ವಿಷಯದಲ್ಲಿ ಡಿ.ಕೆ.ಶಿವಕುಮಾರ್ ಅವರು ಸಂಕುಚಿತ ಮನೋಭಾವ ವ್ಯಕ್ತಪ ಡಿಸಿರುವುದು ಖಂಡನೀಯವೆಂದರು. ಅಲ್ಪಸಂಖ್ಯಾತ, ಬಹು ಸಂಖ್ಯಾತ ಎಂಬ ವಿಷಯ ಪ್ರಸ್ತಾಪ ಮಾಡು ವುದು ಸರಿಯಲ್ಲ ಎಂದು ಹೇಳಿದರು.

ಮಾಜಿ ಸಚಿವ ಸೋಮಣ್ಣ ಮಾತನಾಡಿ, ಶ್ರೀಗಳ ವಿಷಯದಲ್ಲಿ ಮೈನಾರಿಟಿ, ಮೆಜಾ ರಿಟಿ ವಿಷಯ ಪ್ರಸ್ತಾಪ ಮಾಡುವುದು ಸರಿ ಯಲ್ಲ. ಇವರಿಗಿಂತ ಮುಂಚೆ ನಾನು ಆ ಆಸ್ಪತ್ರೆಗೆ ಹೋಗಿ ಗುರುಗಳನ್ನು ನೋಡಿ ಕೊಂಡು ಬಂದಿದ್ದೇನೆ. ಗುಡಿ, ಗೋಪುರ, ಮಂದಿರ, ಮಸೀದಿ ಎಲ್ಲಾ ಸಾಂಕೇತಿಕವಷ್ಟೆ. ನಾವೆಲ್ಲ ಒಂದೇ ಎಂದು ಹೇಳಿದರು. ಬಸ ವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಡಿಕೆಶಿ ಹೇಳಿಕೆ ನೀಚತನದ್ದು ಹಾಗೂ ಬಾಲಿಶವಾದುದು. ವೈದ್ಯೋ ನಾರಾಯಣೋ ಹರಿ ಅನ್ನುತ್ತಾರೆ. ವೈದ್ಯರು ಇಡೀ ಸಮಾಜದ ಬಂಧುಗಳು ಎಂದರು. ಈ ಮಧ್ಯೆ ಡಿ.ಕೆ.ಶಿವಕುಮಾರ್ ಎಚ್ಚೆತ್ತಿದ್ದು, ತಮ್ಮ ಹೇಳಿಕೆಗೆ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.

Translate »