ಉಕ್ಕಿ ಹರಿಯುತ್ತಿರುವ ಮ್ಯಾನ್‍ಹೋಲ್
ಮೈಸೂರು

ಉಕ್ಕಿ ಹರಿಯುತ್ತಿರುವ ಮ್ಯಾನ್‍ಹೋಲ್

June 11, 2018

ಮೈಸೂರು: ಮೈಸೂರಿನ ಗಾಂಧಿ ನಗರದ ನಾಲ್ಕನೇ ಕ್ರಾಸ್‍ನಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಾಲಯದ ಬಳಿ ಕಳೆದ ಎರಡು ತಿಂಗಳಿಂದಲೂ ಮ್ಯಾನ್‍ಹೋಲ್ ಉಕ್ಕಿ ಹರಿಯುತ್ತಿದ್ದು, ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮುಖಂಡ ಎಸ್.ರಾಜು ಆರೋಪಿಸಿದ್ದಾರೆ.

ಉಕ್ಕಿ ಹರಿಯುತ್ತಿರುವ ಮ್ಯಾನ್‍ಹೋಲ್ ಅನ್ನು ದುರಸ್ತಿ ಮಾಡಿ ಸ್ಥಳೀಯ ಜನರಿಗೆ ನೆರವಾಗುವಂತೆ ಕಳೆದ ಎರಡು ತಿಂಗಳಿಂದ ಗಾಂಧಿ ನಗರದ ಜ್ಞಾನ ಜ್ಯೋತಿ ಮಹಿಳಾ ಸ್ವಸಹಾಯ ಸಂಘ ಹಾಗೂ ಸ್ಥಳೀಯ ನಿವಾಸಿಗಳು ಹಲವು ಬಾರಿ ಒಳ ಚರಂಡಿ ಮಂಡಳಿ ಮತ್ತು ನಗರ ಪಾಲಿಕೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಲಿಕೆ ಸದಸ್ಯರಾಗಲೀ ಅಥವಾ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.

ಈಗಾಗಲೇ ಎರಡು ದಿನ ಗಡುವು ನೀಡಲಾಗಿದ್ದು, ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಉಕ್ಕಿ ಹರಿಯುತ್ತಿರುವ ಮ್ಯಾನ್‍ಹೋಲ್ ಅನ್ನು ಸರಿಪಡಿಸದಿದ್ದಲ್ಲಿ ಸ್ಥಳೀಯರೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

Translate »