ಪೌರ ಕಾರ್ಮಿಕರಿಗೆ ಇಂದಿನಿಂದ ಇಂದಿರಾ ಕ್ಯಾಂಟೀನ್ ಊಟ
ಮೈಸೂರು

ಪೌರ ಕಾರ್ಮಿಕರಿಗೆ ಇಂದಿನಿಂದ ಇಂದಿರಾ ಕ್ಯಾಂಟೀನ್ ಊಟ

October 4, 2018

ಮೈಸೂರು: ಪೌರ ಕಾರ್ಮಿಕರ ಬಹುದಿನದ ಬೇಡಿಕೆಯೊಂದನ್ನು ಸರ್ಕಾರ ಗುರುವಾರ(ಅ.4) ಈಡೇರಿಸುತ್ತಿದ್ದು, ಹಸಿವಿನಿಂದ ಕಂಗೆಡುತ್ತಿದ್ದ ಪೌರಕಾರ್ಮಿಕರಿಗೆ ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದೆ.

ಮುಂಜಾನೆಯಿಂದಲೇ ಪೊರಕೆ ಹಿಡಿದು ರಸ್ತೆಗಿಳಿಯುತ್ತಿದ್ದ ಪೌರ ಕಾರ್ಮಿಕರು ಊಟ ವಿಲ್ಲದೆ ಮಧ್ಯಾಹ್ನ 4 ಗಂಟೆಗೆ ತಮ್ಮ ಮನೆ ಸೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೀಡ ಲಾಗುವ ಬಿಸಿಯೂಟದ ಯೋಜನೆಯಂತೆ ಪೌರ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವಂತೆ ಪೌರ ಕಾರ್ಮಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದವು. ಪೌರ ಕಾರ್ಮಿಕರ ಬೇಡಿಕೆಯು ಸೂಕ್ತವಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಬಿಎಂಪಿಯ ಪೌರಕಾರ್ಮಿ ಕರಿಗೆ ಇಂದಿರಾ ಕ್ಯಾಂಟೀನ್‍ನಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಮೈಸೂರಿಗೂ ಪೌರ ಕಾರ್ಮಿಕರಿಗೆ ಊಟದ ವ್ಯವಸ್ಥೆ ಜಾರಿಗೊಳಿಸಿದೆ. ಸ್ವಚ್ಛತೆಯಲ್ಲಿ ದೇಶದಲ್ಲಿಯೇ ಮೈಸೂರು ನಗರ ಎರಡು ಬಾರಿ ಮೊದಲ ಸ್ಥಾನ ಪಡೆದಿತ್ತು.

ಇದರಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಾಗಿತ್ತು. ಆದರೆ ಕೆಲ ಕಾರಣಗಳಿಂದ ಕಳೆದ ಎರಡು ವರ್ಷದಿಂದ ಮೈಸೂರು ನಗರ ಐದನೇ ಸ್ಥಾನಕ್ಕೆ ಕುಸಿದಿದೆ. ಮತ್ತೆ ಮೈಸೂರು ನಗರ ಮೊದಲ ಸ್ವಚ್ಛ ನಗರವಾಗಲೇಬೇಕೆಂದು ಪಾಲಿಕೆ ಪಣ ತೊಟ್ಟಿರುವ ಹಿನ್ನೆಲೆಯಲ್ಲಿ ಇದೀಗ ಪೌರ ಕಾರ್ಮಿಕರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ಮಧ್ಯಾಹ್ನ ಊಟ ವ್ಯವಸ್ಥೆ ಮಾಡುತ್ತಿದೆ.

ಗುರುವಾರದಿಂದ ಜಾರಿ: ಮೈಸೂರು ನಗರದ 65 ವಾರ್ಡ್‍ಗಳಲ್ಲಿ ಒಟ್ಟು 2426 ಮಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಾರ್ಡ್ ವಿಸ್ತೀರ್ಣಕ್ಕೆ ಅನುಗುಣವಾಗಿ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಈಗಾಗಲೇ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಾಲಿಕೆಯ ಕಚೇರಿ ಮುಂದೆ ಪೌರಕಾರ್ಮಿಕರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನಾಳೆ(ಅ.4)ಯಿಂದಲೇ ಮೈಸೂರು ನಗರದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಊಟ ಸರಬರಾಜು ಮಾಡುವಂತೆ ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ಪ್ರತಿದಿನ ಬೆಳಿಗ್ಗೆ 11.30ಕ್ಕೆ: ಇಂದಿರಾ ಕ್ಯಾಂಟೀನ್ ಮುಖ್ಯಸ್ಥ ಮಧು ಎಂ.ವಾಸುದೇವ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಸರ್ಕಾರದ ಸೂಚನೆಯ ಮೇರೆಗೆ ನಾಳೆಯಿಂದಲೇ ಮೈಸೂರಿನಲ್ಲಿ 2426 ಪೌರ ಕಾರ್ಮಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಮೈಸೂರಿನಲ್ಲಿರುವ 11 ಇಂದಿರಾ ಕ್ಯಾಂಟೀನ್‍ಗಳಿಗೆ ವಾರ್ಡ್‍ಗಳನ್ನು ಹಂಚಿಕೆ ಮಾಡಲಾಗಿದೆ.

ಅಡುಗೆ ಮನೆಯಿಂದಲೇ 11 ಆಟೋಗಳಲ್ಲಿ ಎಲ್ಲಾ ವಾರ್ಡ್‍ಗಳ ಪೌರ ಕಾರ್ಮಿಕರಿಗೆ ಆಹಾರ ಪೂರೈಸಲಾಗುತ್ತದೆ. ಪ್ರತಿ ವಾರ್ಡ್‍ಗೆ ಪಾಲಿಕೆ ವತಿಯಿಂದ ನಿಯೋಜಿಸಲ್ಪಟ್ಟಿರುವ ಮೇಲ್ವಿಚಾರಕರಿಗೆ ಊಟ ಒಪ್ಪಿಸಲಾಗುತ್ತದೆ. ಮೇಲ್ವಿಚಾರಕರೇ ಪೌರ ಕಾರ್ಮಿಕರಿಗೆ ಊಟ ಬಡಿಸಲಿದ್ದಾರೆ.

ಸ್ವಾಗತ…: ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಊಟ ಪೂರೈಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಊಟ ಯೋಜನೆ ಜಾರಿಗೆ ತರಲು ಆದೇಶಿಸಿರುವುದು ಸ್ವಾಗತಾರ್ಹ ಸಂಗತಿ. ನಮ್ಮ ಇನ್ನಿತರೆ ಬೇಡಿಕೆಗಳ ಈಡೇರಿಕೆ ಹೋರಾಟ ಮಾತ್ರ ಮುಂದುವರೆಯುತ್ತದೆ ಎನ್ನುತ್ತಾರೆ ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಎನ್.ಮಾರ

Translate »