ಮೇಯರ್ ಇಲ್ಲದೆ ನಡೆಯಲಿದೆ ಈ ಬಾರಿಯ ಮೈಸೂರು ದಸರಾ
ಮೈಸೂರು

ಮೇಯರ್ ಇಲ್ಲದೆ ನಡೆಯಲಿದೆ ಈ ಬಾರಿಯ ಮೈಸೂರು ದಸರಾ

October 4, 2018

ಮೈಸೂರು: ವಿಶ್ವ ಪ್ರಸಿದ್ಧ ಐತಿಹಾಸಿಕ ದಸರಾ ಮಹೋತ್ಸವವು ಈ ಬಾರಿ ಪೂಜ್ಯ ಮಹಾಪೌರರಿಲ್ಲದೆ ನಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಜನಮನ ಸೂರೆಗೊಳ್ಳುವ ವಿಜಯದಶಮಿ ಮೆರವಣಿಗೆ ಯಲ್ಲಿ ಮೇಯರ್ ಗೌನ್ ತೊಟ್ಟು, ಕುದುರೆ ಮೇಲೆ ಸವಾರಿ ಮಾಡುವುದು ಸಂಪ್ರದಾಯವಾಗಿ ಬಂದಿರುವ ಪದ್ಧತಿ ಹಾಗೂ ದಸರಾ ಮಹೋತ್ಸವದ ಪ್ರತಿಯೊಂದು ಕಾರ್ಯ ಕ್ರಮದಲ್ಲೂ ಮೇಯರ್ ಉಪಸ್ಥಿತರಿದ್ದು, ಪ್ರತಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತಿದ್ದರು. ಆದರೆ ಈಗ ಮೊದಲ ಬಾರಿಗೆ ಮೇಯರ್ ಇಲ್ಲದ ದಸರಾ ನಡೆಯುತ್ತಿದೆ. ಪಾಲಿಕೆಯ ಎಲ್ಲಾ 65 ವಾರ್ಡುಗಳ ಸದಸ್ಯರು ಆಯ್ಕೆಗೊಂಡು ತಿಂಗಳು ಕಳೆ ದರೂ, ಅವರ ಆಯ್ಕೆಯು ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗದಿರುವುದು ಮೇಯರ್-ಉಪಮೇಯರ್ ಚುನಾವಣೆ ವಿಳಂಬವಾಗಲು ಪ್ರಮುಖ ಕಾರಣವಾಗಿದೆ.

ನಗರಪಾಲಿಕೆ ಸದಸ್ಯರ ಆಯ್ಕೆ ಸಂಬಂಧ ಪಾಲಿಕೆ ಕಮೀ ಷ್ನರ್ ನೀಡಿದ ಪಟ್ಟಿಯೊಂದಿಗಿನ ಪತ್ರದ ಆಧಾರದ ಮೇಲೆ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರು ಸರ್ಕಾರಕ್ಕೆ ಕಳೆದ ಒಂದು ವಾರದ ಹಿಂದೆಯೇ ಪತ್ರ ಬರೆದು ಮುಂದಿನ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ ಗಳು ನೀಡಿರುವ ಕಾರ್ಪೊರೇಟರ್‍ಗಳ ಪಟ್ಟಿಯನ್ನು ಗೆಜೆಟ್ ನಲ್ಲಿ ಆದೇಶವಾಗಿ ಹೊರಡಿಸಿ, ಮೇಯರ್ ಹಾಗೂ ಉಪಮೇಯರ್ ಅನ್ನು ಸರ್ಕಾರ ನಿಗದಿಪಡಿಸಿರುವ ಮೀಸಲಾತಿಯಂತೆ ಚುನಾ ವಣೆ ಮೂಲಕ ಆಯ್ಕೆ ಮಾಡುವಂತೆ ಪ್ರಾದೇಶಿಕ ಆಯು ಕ್ತರಿಗೆ ಪತ್ರ ಮುಖೇನ ನಿರ್ದೇಶನ ನೀಡಬೇಕು. ಆದರೆ ಈವರೆಗೆ ಗೆಜೆಟ್ ಪತ್ರ ಹೊರಡಿಸಿಲ್ಲ ಹಾಗೂ ತಮಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಮೂಲಗಳು ತಿಳಿಸಿವೆ. ನಗರಾಭಿವೃದ್ಧಿ ಇಲಾಖೆ ಕಾರ್ಯ ದರ್ಶಿಗಳಿಂದ ಪತ್ರ ಬಂದ ತಕ್ಷಣ ಪ್ರಾದೇಶಿಕ ಆಯುಕ್ತರು ಮೇಯರ್-ಉಪಮೇಯರ್ ಚುನಾವಣಾ ದಿನಾಂಕ ನಿಗದಿ ಪಡಿಸಿ ಆಯ್ಕೆಯಾಗಿರುವ ಎಲ್ಲಾ 65 ಮಂದಿ ಕಾರ್ಪೊರೇಟರ್ ಗಳಿಗೆ 10 ದಿನ ಮುಂಚಿತವಾಗಿ ನೋಟೀಸ್ (ತಿಳುವಳಿಕೆ ಪತ್ರ) ತಲುಪಿಸಿ, ಆ ದಿನದಂದು ನೂತನ ಸದಸ್ಯರು ಅಧಿಕಾರ ವಹಿಸಿ ಕೊಂಡ ನಂತರ ಚುನಾವಣಾ ಪ್ರಕ್ರಿಯೆ ನಡೆಸಿ ಮೇಯರ್ ಮತ್ತು ಉಪಮೇಯರ್‍ರನ್ನು ಆಯ್ಕೆ ಮಾಡಬೇಕಾಗಿದೆ.

ಇಷ್ಟೆಲ್ಲಾ ಪ್ರಕ್ರಿಯೆಗೆ ಸಮಯಾವಕಾಶ ಬೇಕಿರುವುದರಿಂದ ಹಾಗೂ ದಸರಾ ಉದ್ಘಾಟನೆಗೆ ಕೇವಲ ಒಂದು ವಾರ ಇರುವ ಕಾರಣ 2018ರ ದಸರಾ ಮಹೋತ್ಸವಕ್ಕೆ ಮೇಯರ್ ಇರುವುದಿಲ್ಲ ಎಂಬುದು ಖಚಿತವಾಗಿದೆ.

ಮೈಸೂರು ಮಹಾನಗರ ಪಾಲಿಕೆಗೆ ಆಗಸ್ಟ್ 31 ರಂದು ಚುನಾ ವಣೆ ನಡೆದು ಸೆಪ್ಟೆಂಬರ್ 3 ರಂದು ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯ 22, ಕಾಂಗ್ರೆಸ್‍ನ 20, ಜೆಡಿಎಸ್‍ನ 17, ಪಕ್ಷೇತರ 5 ಮತ್ತು ಬಿಎಸ್ಪಿಯ ಓರ್ವ ಸದಸ್ಯ ಆಯ್ಕೆಯಾಗಿದ್ದಾರೆ. ಮೇಯರ್‍ಗೆ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನಕ್ಕೆ ಬಿಸಿ(ಎ) ಮೀಸಲಾತಿ ಪ್ರಕಟಿಸಿದೆಯಾದರೂ, ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿರುವುದರಿಂದ ಮೇಯರ್ ಸ್ಥಾನಕ್ಕೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್, ಜೆಡಿಎಸ್ ಪಟ್ಟು ಹಿಡಿದಿದ್ದು, ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ.

ಮೇಯರ್ ಬಿ.ಭಾಗ್ಯವತಿ ಮತ್ತು ಉಪಮೇಯರ್ ಎಂ. ಇಂದಿರಾ ಇದ್ದ ಪಾಲಿಕೆ ಕಡೇ ಅವಧಿ 2018ರ ಸೆಪ್ಟೆಂಬರ್ 4ಕ್ಕೆ ಅಂತ್ಯಗೊಂಡಿತ್ತು. ಮೇಯರ್-ಉಪಮೇಯರ್ ಚುನಾ ವಣೆ ವಿಳಂಬದ ಹಿನ್ನೆಲೆಯಲ್ಲಿ ಸರ್ಕಾರ ಮೈಸೂರು ಮಹಾ ನಗರ ಪಾಲಿಕೆ ಆಡಳಿತಾಧಿಕಾರಿಯನ್ನಾಗಿ ಸಮಾವರ್ತಿತ (ಕಾನ್‍ಕರಂಟ್ ಚಾರ್ಜ್) ಮೈಸೂರು ವಿಭಾಗದ ಪ್ರಭಾರ ಪ್ರಾದೇಶಿಕ ಆಯುಕ್ತರಾಗಿರುವ ಆಡಳಿತ ತರಬೇತಿ ಸಂಸ್ಥೆ (AIT) ಮಹಾನಿರ್ದೇಶಕ ಕಪಿಲ್ ಮೋಹನ್ ಅವರನ್ನು ಸೆಪ್ಟೆಂಬರ್ 17ರಿಂದ ನೇಮಿಸಿದೆ. ಈ ಹಿಂದೆ 2005ರ ಜೂನ್ 30ರಿಂದ 2006ರ ಜೂನ್ 21ರವರೆಗೆ ಬಿ. ಭಾರತಿ ಅವರು ಮೇಯರ್ ಆದ ನಂತರ 2008ರ ಸೆಪ್ಟೆಂಬರ್ 18 ರವರೆಗೆ ಅಯೂಬ್‍ಖಾನ್ ಮೇಯರ್ ಆಗಿ ಅಧಿಕಾರ ವಹಿಸಿಕೊಳ್ಳು ವವರೆಗೆ 2006 ಮತ್ತು 2007ರ ದಸರಾ, ಮೇಯರ್ ಇಲ್ಲದೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಆ ಎರಡು ವರ್ಷಗಳ ಅವಧಿಯಲ್ಲಿ 2006ರ ಜೂನ್ 22 ರಿಂದ 2008ರ ಫೆಬ್ರವರಿ 18ರವರೆಗೆ ಜಿಲ್ಲಾಧಿಕಾರಿಗಳಾಗಿದ್ದ ಸೆಲ್ವಕುಮಾರ್, ಚೆನ್ನಪ್ಪಗೌಡ ಮತ್ತು ಪಿ. ಮಣಿ ವಣ್ಣನ್ ಅವರು ಮೈಸೂರು ಮಹಾನಗರ ಪಾಲಿಕೆ ಆಡಳಿ ತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.

2013ರ ಸೆಪ್ಟೆಂಬರ್ 5 ರಿಂದ 2014ರ ಸೆಪ್ಟೆಂಬರ್ 9 ರವರೆಗೆ ಮೇಯರ್ ಆಗಿದ್ದ ಎನ್.ಎಂ.ರಾಜೇಶ್ವರಿ ಅವ ರಿಗೆ ಎರಡು ದಸರಾ ಸಿಕ್ಕಿದರೆ, 2018ರ ಜನವರಿ 24 ರಿಂದ ಸೆಪ್ಟೆಂಬರ್ 4 ರವರೆಗೆ ಮೇಯರ್ ಆಗಿದ್ದ ಬಿ. ಭಾಗ್ಯವತಿ ಅವರಿಗೆ ದಸರಾದಲ್ಲಿ ಕುದುರೆ ಏರುವ ಅವ ಕಾಶ ಸಿಗಲಿಲ್ಲ ಎಂಬುದಿಲ್ಲಿ ಗಮನಾರ್ಹ.

Translate »