Tag: MP Pratap Simha

ಮೈಸೂರು-ಕೊಡಗು ಲೋಕಸಭಾ ಟಿಕೆಟ್ ನನಗೇ ಸಿಗಲಿದೆ
ಮೈಸೂರು

ಮೈಸೂರು-ಕೊಡಗು ಲೋಕಸಭಾ ಟಿಕೆಟ್ ನನಗೇ ಸಿಗಲಿದೆ

August 14, 2018

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್ ನನಗೇ ದೊರೆಯಲಿದ್ದು, ಜನತೆಯ ಶ್ರೀರಕ್ಷೆಯಿಂದ ಪುನರಾಯ್ಕೆಯಾಗುವ ವಿಶ್ವಾಸವನ್ನು ಸಂಸದ ಪ್ರತಾಪ್ ಸಿಂಹ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಬಿ.ಎಸ್.ಯಡಿಯೂರಪ್ಪ ಅವರ ಆಶೀರ್ವಾದ ನನ್ನ ಮೇಲಿದ್ದು, ಮತ್ತೆ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಟಿಕೆಟ್ ನನಗೆ ಲಭ್ಯವಾಗಲಿದೆ. ಜೊತೆಗೆ ಕ್ಷೇತ್ರದ ಜನತೆಯ ಶ್ರೀರಕ್ಷೆಯೂ ನನ್ನ ಮೇಲಿದ್ದು, ಪುನರಾಯ್ಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ…

ಇಂದು ಮಧ್ಯರಾತ್ರಿ ಮೈಸೂರಲ್ಲಿ ಬಿಜೆಪಿ ಯುವ  ಮೋರ್ಚಾದಿಂದ ‘ಮಿಡ್‍ನೈಟ್ ಫ್ರೀಡಂ ರನ್’
ಮೈಸೂರು

ಇಂದು ಮಧ್ಯರಾತ್ರಿ ಮೈಸೂರಲ್ಲಿ ಬಿಜೆಪಿ ಯುವ  ಮೋರ್ಚಾದಿಂದ ‘ಮಿಡ್‍ನೈಟ್ ಫ್ರೀಡಂ ರನ್’

August 14, 2018

ಮೈಸೂರು:  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ವತಿಯಿಂದ ಆ.14ರ ಮಧ್ಯರಾತ್ರಿ ಮೈಸೂರು ನಗರದಲ್ಲಿ ‘ಮಿಡ್‍ನೈಟ್ ಫ್ರೀಡಂ ರನ್’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವ ಮೋರ್ಚಾ ರಾಜ್ಯಾಧ್ಯಕ್ಷರೂ ಆದ ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ರಾಷ್ಟ್ರಧ್ವಜದ ಧ್ವಜಾರೋಹಣ ನೆರವೇರಿಸಲಾಗುವುದು. ಬಳಿಕ ಇಲ್ಲಿಂದ ಮಿಡ್ ನೈಟ್ ಫ್ರೀಡಂ…

ಬಸವ ಜಯಂತಿ ಪ್ರಚಾರ ರಥಕ್ಕೆ ಚಾಲನೆ, ಪೋಸ್ಟರ್ ಬಿಡುಗಡೆ
ಮೈಸೂರು

ಬಸವ ಜಯಂತಿ ಪ್ರಚಾರ ರಥಕ್ಕೆ ಚಾಲನೆ, ಪೋಸ್ಟರ್ ಬಿಡುಗಡೆ

July 30, 2018

ಮೈಸೂರು:  ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಆ.4 ಮತ್ತು 5ರಂದು ನಡೆಯಲಿರುವ ಬಸವೇಶ್ವರ ಜಯಂತಿ ಕಾರ್ಯಕ್ರಮದ ಪ್ರಚಾರ ರಥಕ್ಕೆ ಜೆಎಸ್‍ಎಸ್ ಮಹಾವಿದ್ಯಾಪೀಠದ ಗೌರವ ಕಾರ್ಯದರ್ಶಿ ಎಸ್.ಪಿ.ಮಂಜುನಾಥಸ್ವಾಮಿ ಭಾನುವಾರ ಮೈಸೂರಿನ ಕೆ.ಆರ್.ಮೊಹಲ್ಲಾದ ಮಾಧವಾಚಾರ್ ರಸ್ತೆಯ ಮಹದೇಶ್ವರ ದೇವಸ್ಥಾನ ವೃತ್ತದಲ್ಲಿ ಚಾಲನೆ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯಿತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ಸಮಾರಂಭ ನಡೆಯಿತು. ಪ್ರಚಾರ ರಥಕ್ಕೆ ಚಾಲನೆ ನೀಡಿದ ಬಳಿಕ ಎಸ್.ಪಿ.ಮಂಜುನಾಥಸ್ವಾಮಿ ಅವರು ಮಾತನಾಡಿ, 12ನೇ ಶತಮಾನದಲ್ಲಿಯೇ ಅನುಭವ…

ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಯೋಗ
ಮೈಸೂರು

ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಯೋಗ

July 29, 2018

ಭೂಸ್ವಾಧೀನ ಪ್ರಕ್ರಿಯೆಗೆ ಆ.15ರೊಳಗೆ ಅಧಿಸೂಚನೆ ಅಗತ್ಯವಿರುವ 290 ಎಕರೆ ಭೂಮಿ ಸಮೀಕ್ಷಾ ವರದಿಗೆ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ `ಸಾಹಸ ಜೋಡಿ’ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್‍ಸಿಂಹ ಉತ್ಸಾಹ ಮೈಸೂರು:  ಮೈಸೂರು ವಿಮಾನ ನಿಲ್ದಾಣದ ಎದುರಿನ ರಾಷ್ಟ್ರೀಯ ಹೆದ್ದಾರಿ(ಎನ್‍ಎಚ್-212)ಗೆ ಅಂಡರ್‍ಪಾಸ್ ನಿರ್ಮಿಸಿ, ಅದರ ಮೇಲೆ ರನ್ ವೇ ವಿಸ್ತರಿಸುವ ಯೋಜನೆ ಜಾರಿಗೆ ಕಾಲ ಕೂಡಿ ಬಂದಂತಿದೆ. ಯೋಜನೆಗೆ ಅಗತ್ಯವಾದ ಭೂಮಿಯನ್ನು ಗುರುತಿಸಿ, ಪೂರ್ಣ ಪ್ರಮಾಣದ ಭೂಸ್ವಾಧೀನ ಪ್ರಕ್ರಿಯೆಗೆ ಆ.15ರೊಳಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕು. ಅಲ್ಲದೆ…

ಹೈಟೆನ್ಷನ್ ಲೈನ್ ಕೆಳಗೆ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹ ಚಾಲನೆ
ಮೈಸೂರು

ಹೈಟೆನ್ಷನ್ ಲೈನ್ ಕೆಳಗೆ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಸಚಿವ ಜಿಟಿಡಿ, ಸಂಸದ ಪ್ರತಾಪ್ ಸಿಂಹ ಚಾಲನೆ

July 29, 2018

ಮೈಸೂರು: ಮೈಸೂರಿನ ಶಾರದಾದೇವಿನಗರ ವೃತ್ತದ ಬಳಿಯಿಂದ ಬೋಗಾದಿ ಗದ್ದಿಗೆ ರಸ್ತೆಯವರೆಗೆ ಹಾದು ಹೋಗಿರುವ ಹೈಟೆನ್ಷನ್ ಲೈನ್‍ನಡಿಯ ಉದ್ಯಾನವನವನ್ನು ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಸಚಿವ ಜಿ.ಟಿ.ದೇವೇಗೌಡರು ಹಾಗೂ ಸಂಸದ ಪ್ರತಾಪ್ ಸಿಂಹ ಶನಿವಾರ ಚಾಲನೆ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ವಾರ್ಡ್ ಸಂಖ್ಯೆ 24 ಹಾಗೂ 22ರ ವ್ಯಾಪ್ತಿಯಲ್ಲಿ ಈ ಹೈಟೆನ್ಷನ್ ಲೈನ್ ಪಾರ್ಕ್ ಹಾದು ಹೋಗಿದ್ದು, ಶಾರದಾದೇವಿನಗರದ ವೃತ್ತದ ಬಳಿ ಸಚಿವರು ಗುದ್ದಲಿ ನೆರವೇರಿಸಿದರು. ಕೇಂದ್ರ…

ಸಂಸದ ಪ್ರತಾಪ್ ಸಿಂಹರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಮೈಸೂರು

ಸಂಸದ ಪ್ರತಾಪ್ ಸಿಂಹರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

July 29, 2018

ಮೈಸೂರು: ಸಂಸದ ಪ್ರತಾಪ್ ಸಿಂಹ ಅವರು ಇಂದು ಮೈಸೂರಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ವಿಜಯನಗರ 2ನೇ ಹಂತದ ಹೈಟೆನ್ಷನ್ ರಸ್ತೆಯಲ್ಲಿರುವ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಕೃಷ್ಣದೇವರಾಯ ಸರ್ಕಲ್ ಬಳಿ ಪ್ರತಾಪ್ ಸಿಂಹ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಅಮೃತ ಯೋಜನೆಯ 1 ಕೋಟಿ ರೂ. ಅನುದಾನದಲ್ಲಿ ಮೈಸೂರು ಮಹಾನಗರ ಪಾಲಿಕೆ ಕೈಗೊಂಡಿರುವ ಕಾಮಗಾರಿಗೆ ಕೇಂದ್ರ ಸರ್ಕಾರದ ಶೇ. 50 ರಷ್ಟು ಅನುದಾನ ರಾಜ್ಯ ಸರ್ಕಾರ ಶೇ. 25 ಮತ್ತು ಪಾಲಿಕೆಯು ಶೇ. 25 ರಷ್ಟು…

ಲೋಕಸಭೆಯಲ್ಲಿ ಕೊಡಗಿನ ಮಳೆ ಹಾನಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರಸ್ತಾಪ: ನೆರವಿಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಕೊಡಗು

ಲೋಕಸಭೆಯಲ್ಲಿ ಕೊಡಗಿನ ಮಳೆ ಹಾನಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರಸ್ತಾಪ: ನೆರವಿಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

July 26, 2018

ನವದೆಹಲಿ: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸಂಸತ್‍ನಲ್ಲಿ ಇಂದು ಕೊಡಗಿನ ಮಳೆ ಹಾನಿಯನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಸಂಕಷ್ಟದಲ್ಲಿರುವ ಕೊಡಗಿನ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಚುಚ್ಚಿದರು. ಕೇಂದ್ರ ಸರ್ಕಾರವು ಕೊಡಗಿಗೆ ನೆರವಿನ ಹಸ್ತ ನೀಡಬೇಕೆಂದು ಮನವಿ ಮಾಡಿದರು. ಸಂಸತ್‍ನಲ್ಲಿ ಇಂದು ಸಭಾಧ್ಯಕ್ಷರ ಸ್ಥಾನದಲ್ಲಿ ಉಪ ಸಭಾಧ್ಯಕ್ಷ ತಮಿಳುನಾಡಿನ ತಂಬಿದುರೈ ಅವರು ಆಸೀನರಾಗಿದ್ದಾಗ ಪ್ರತಾಪ್ ಸಿಂಹ ಅವರಿಗೆ ಮಾತನಾಡಲು ಅವಕಾಶ ದೊರೆಯಿತು. ಕರ್ನಾಟಕದ ದಕ್ಷಿಣ ಭಾಗ ತೀವ್ರ ನೆರೆ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ವಿಚಾರವನ್ನು ಸದನದಲ್ಲಿ…

ಸಂಸದ ಪ್ರತಾಪ ಸಿಂಹರಿಂದ ಹತ್ತು ಪಥದ ಹೆದ್ದಾರಿ ಕಾಮಗಾರಿ ಪರಿಶೀಲನೆ
ಮೈಸೂರು

ಸಂಸದ ಪ್ರತಾಪ ಸಿಂಹರಿಂದ ಹತ್ತು ಪಥದ ಹೆದ್ದಾರಿ ಕಾಮಗಾರಿ ಪರಿಶೀಲನೆ

July 14, 2018

ಮೈಸೂರು:  ಮೈಸೂರು-ಬೆಂಗಳೂರು ಮುಖ್ಯರಸ್ತೆಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಜಂಕ್ಷನ್‍ನಿಂದ ಟೋಲ್‍ಗೇಟ್‍ವರೆಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿಸಿರುವ 10 ಪಥದ ರಸ್ತೆಯ ಕಾಮಗಾರಿಯನ್ನು ಶುಕ್ರವಾರ ಸಂಸದ ಪ್ರತಾಪ ಸಿಂಹ ಪರಿಶೀಲಿಸಿ, ರಸ್ತೆ ವಿಭಜಕ ಸೇರಿದಂತೆ ವಿವಿಧೆಡೆ ಇರುವ ನ್ಯೂನತೆಯನ್ನು ಸರಿಪಡಿಸುವಂತೆ ಸೂಚನೆ ನೀಡಿದರು. ರಿಂಗ್ ರಸ್ತೆಯ ಜಂಕ್ಷನ್‍ನಿಂದ ಪರಿಶೀಲನೆ ಆರಂಭಿಸಿದ ಅವರು ರಸ್ತೆ ವಿಭಜಕದಲ್ಲಿರುವ ನ್ಯೂನತೆ, ನಾಲ್ಕು ರಸ್ತೆಗಳು ಸೇರುವ ಜಂಕ್ಷನ್‍ನಲ್ಲಿ ರಸ್ತೆ ಅಗಲೀಕರಣ ಮಾಡುವ ವೇಳೆ ಎಸಗಿರುವ ದೋಷವನ್ನು ಸರಿಪಡಿಸುವಂತೆ ಸೂಚನೆ ನೀಡಿದರಲ್ಲದೆ, ಕಾಮಗಾರಿಯ ಗುಣಮಟ್ಟ ಹಾಗೂ…

ಹುಣಸೂರು ರಸ್ತೆ ನೇರಗೊಳಿಸುವ ಕಾಮಗಾರಿ ಐದು ಮರ ತೆರವುಗೊಳಿಸಲು ನಿರ್ಧಾರ
ಮೈಸೂರು

ಹುಣಸೂರು ರಸ್ತೆ ನೇರಗೊಳಿಸುವ ಕಾಮಗಾರಿ ಐದು ಮರ ತೆರವುಗೊಳಿಸಲು ನಿರ್ಧಾರ

July 13, 2018

ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿ ಗೃಹದ ಮುಂಭಾಗದಿಂದ ಪಡುವಾರಹಳ್ಳಿ ಸಿಗ್ನಲ್ ಜಂಕ್ಷನ್‍ವರೆಗಿನ ಹುಣಸೂರು ರಸ್ತೆ ನೇರಗೊಳಿಸುವ ಕಾಮಗಾರಿಗೆ ಅಡ್ಡಿಯಾಗಿರುವ 5 ಮರಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಮರಗಳ ತೆರವಿಗೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧವಿದ್ದ ಹಿನ್ನೆಲೆಯಲ್ಲಿ ಯೋಜಿತ ರೀತಿಯಲ್ಲಿ ಕಾಮಗಾರಿ ಸಾಧ್ಯವಾಗಿರಲಿಲ್ಲ. ಹಾಗಾಗಿ ಸಂಸದ ಪ್ರತಾಪ್‍ಸಿಂಹ ಅವರು ಗುರುವಾರ ಮೈಸೂರು ಗ್ರಾಹಕರ ಪರಿಷತ್ ಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ ಹಾಗೂ ನಗರ ಪಾಲಿಕೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಕೇವಲ 5 ಮರಗಳ ತೆರವಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಸಂಸದ…

ಸಂಸದರಿಂದ ವಾಕ್-ಶ್ರವಣ ಸಂಸ್ಥೆಯ ನೂತನ ಕಟ್ಟಡ ಕಾಮಗಾರಿ ಪರಿಶೀಲನೆ
ಮೈಸೂರು

ಸಂಸದರಿಂದ ವಾಕ್-ಶ್ರವಣ ಸಂಸ್ಥೆಯ ನೂತನ ಕಟ್ಟಡ ಕಾಮಗಾರಿ ಪರಿಶೀಲನೆ

July 13, 2018

ಟಿ.ಕೆ.ಲೇಔಟ್‍ನಲ್ಲಿ 137 ಕೋಟಿ ರೂ. ಅಂದಾಜು ವೆಚ್ಚದ ಮೂರು ಅಂತಸ್ತಿನ ಕಟ್ಟಡ ಮೈಸೂರು:  ಮೈಸೂರಿನ ಟಿ.ಕೆ.ಲೇಔಟ್‍ನಲ್ಲಿ 137 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನೂತನ ಕಟ್ಟಡ ಕಾಮಗಾರಿಯನ್ನು ಸಂಸದ ಪ್ರತಾಪ್‍ಸಿಂಹ ಗುರುವಾರ ಪರಿಶೀಲನೆ ನಡೆಸಿದರು. 2014ರಲ್ಲಿ ಪ್ರಾರಂಭಗೊಂಡಿದ್ದ ಕಾಮಗಾರಿ ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಡಿಸೆಂಬರ್ ಒಳಗಾರಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ವಾಕ್ ಮತ್ತು ಶ್ರವಣ ಸಂಸ್ಥೆಯ…

1 3 4 5 6 7
Translate »