Tag: Mysore

ಕೊರೊನಾ ಎಫೆಕ್ಟ್: 10 ರೂ. ಇದ್ದ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ 50 ರೂ.ಗೆ ಏರಿಕೆ!
ಮೈಸೂರು

ಕೊರೊನಾ ಎಫೆಕ್ಟ್: 10 ರೂ. ಇದ್ದ ರೈಲ್ವೆ ಪ್ಲಾಟ್ ಫಾರಂ ಟಿಕೆಟ್ ಬೆಲೆ 50 ರೂ.ಗೆ ಏರಿಕೆ!

March 18, 2020

ನವದೆಹಲಿ, ಮಾ.17- ದೇಶಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಜನ ಸಂದಣಿ ಕಡಿಮೆ ಮಾಡುವುದಕ್ಕಾಗಿ ರೈಲ್ವೆ ಇಲಾಖೆ 10 ರೂಪಾಯಿ ಇದ್ದ ಪ್ಲಾಟ್ ಟಿಕೆಟ್ ದರವನ್ನು 50 ರೂಪಾಯಿಗೆ ಹೆಚ್ಚಳ ಮಾಡಿದೆ. ಆರು ರೈಲ್ವೆ ವಲಯಗಳಲ್ಲಿ ಮಾತ್ರ ಪ್ಲಾಟ್ ಫಾರಂ ಟಿಕೆಟ್ ದರ ಏರಿಕೆ ಮಾಡಲಾಗಿದ್ದು, ಪಶ್ಚಿಮ ರೈಲ್ವೆ, ಮುಂಬೈ, ವಡೋದ್ರಾ, ಅಹಮದಾಬಾದ್, ರತ್ನಂ, ರಾಜ್‍ಕೋಟ್, ಭಾವನಗರ ರೈಲ್ವೆ ವಲಯದ ಸುಮಾರು 250 ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಜೊತೆಗೆ ನಿಲ್ದಾಣಕ್ಕೆ ಬರುವ ಜನರಿಗೆ…

ಕೊರೊನಾ: ಎಲ್ಲಾ ಆಧಾರ್ ಕೇಂದ್ರ ಇಂದಿನಿಂದ ಸ್ಥಗಿತ
ಮೈಸೂರು

ಕೊರೊನಾ: ಎಲ್ಲಾ ಆಧಾರ್ ಕೇಂದ್ರ ಇಂದಿನಿಂದ ಸ್ಥಗಿತ

March 18, 2020

ಮೈಸೂರಿನಲ್ಲಿ 76 ಕಿಟ್‍ಗಳಿಂದ ನೋಂದಣಿ ನಡೆಯುತ್ತಿತ್ತು ನೋಂದಾಯಿಸಿಕೊಂಡಿದ್ದ 7 ಸಾವಿರ ಮಂದಿಗೆ ತಪ್ಪಿದ ಅವಕಾಶ ಮೈಸೂರು, ಮಾ.17(ಎಂಟಿವೈ)- ಕೊರೊನಾ ಹರಡುವ ಭೀತಿಯಿಂದ ಮೈಸೂರಿನ ವಿವಿಧೆಡೆಯ ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳ ಸೇವೆ ಯನ್ನು ಮಾ.18ರಿಂದ ಜಾರಿಗೆ ಬರು ವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸು ವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಆದೇಶಿಸಿದ್ದಾರೆ. ಮೈಸೂರಿನ ವಿಜಯನಗರ 1ನೇ ಹಂತದ ಆಧಾರ ಕೇಂದ್ರ, ಕರ್ನಾಟಕ ಒನ್ ಕೇಂದ್ರ, ಬ್ಯಾಂಕ್, ಅಂಚೆ ಕಚೇರಿ, ನಾಡಕಚೇರಿ, ಅಟಲ್ ಜೀ ಜನಸ್ನೇಹಿ ಕೇಂದ್ರ ಸೇರಿದಂತೆ ವಿವಿಧೆಡೆ…

ಕಕ್ಷಿದಾರರಿಗೆ ನ್ಯಾಯಾಲಯದಲ್ಲಿ ಥರ್ಮಲ್ ಸ್ಕ್ರೀನಿಂಗ್
ಮೈಸೂರು

ಕಕ್ಷಿದಾರರಿಗೆ ನ್ಯಾಯಾಲಯದಲ್ಲಿ ಥರ್ಮಲ್ ಸ್ಕ್ರೀನಿಂಗ್

March 18, 2020

ಮೈಸೂರು,ಮಾ.17(ಎಂಟಿವೈ)- ಕೊರೊನಾ ವೈರಸ್ ಭೀತಿಯಿಂದ ತುರ್ತು ಪ್ರಕರಣಗಳನ್ನಷ್ಟೇ ನಡೆಸಲು ತೀರ್ಮಾನಿಸಿದ್ದ ಜಿಲ್ಲಾ ನ್ಯಾಯಾಲಯದಲ್ಲಿ ಇಂದಿನಿಂದ ಕಕ್ಷಿದಾರರಿಗೆ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಮೈಸೂರು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ 34 ನ್ಯಾಯಾಲಯಗಳಿದ್ದರೆ, ತಾಲೂಕು ಕೇಂದ್ರಗಳಲ್ಲಿ ಒಟ್ಟು 16 ನ್ಯಾಯಾಲಯಗಳಿವೆ. ಎಲ್ಲಾ ಕಡೆ ತುರ್ತು ಪ್ರಕರಣಗಳ ವಿಚಾರಣೆಗಷ್ಟೇ ಆದ್ಯತೆ ನೀಡಲಾಗುವುದು. ನ್ಯಾಯಾಲಯದ ಆವರಣದಲ್ಲಿ ಜನಜಂಗುಳಿ ತಡೆ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಇಂದು ನ್ಯಾಯಾಲಯಕ್ಕೆ ಆಗಮಿಸಿದ ವಕೀಲರು, ಕಕ್ಷಿದಾರರಿಗೆ, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ನಾಲ್ವರು ಸಿಬ್ಬಂದಿ…

ಕೊರೊನಾ ಭೀತಿ: ಆಧಾರ್ ಕೇಂದ್ರಕ್ಕಿಲ್ಲವೇ ನಿರ್ಬಂಧ?
ಮೈಸೂರು

ಕೊರೊನಾ ಭೀತಿ: ಆಧಾರ್ ಕೇಂದ್ರಕ್ಕಿಲ್ಲವೇ ನಿರ್ಬಂಧ?

March 17, 2020

ಮೈಸೂರು,ಮಾ,16(ಅರ್‍ಕೆಬಿ)- ಕೊರೊನಾ ವೈರಸ್ ಭೀತಿಯಿಂದಾಗಿ ಇಡೀ ರಾಜ್ಯದಲ್ಲಿ ನಿರ್ಬಂಧವಿದ್ದರೂ ಮೈಸೂ ರಿನ ವಿಜಯನಗರದಲ್ಲಿರುವ ಆಧಾರ್ ಕೇಂದ್ರಕ್ಕೆ ಯಾವುದೇ ನಿರ್ಬಂಧ ಇಲ್ಲದೆ ನೂರಾರು ಜನ ಒಂದೆಡೆ ಸೇರುತ್ತಿದ್ದಾರೆ. ಕೊರೊನಾ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದೆಲ್ಲೆಡೆ ಒಂದು ವಾರ ಕಾಲ ಶಾಲಾ-ಕಾಲೇಜು, ಚಿತ್ರಮಂದಿರ, ಮಾಲ್‍ಗಳು, ಮದುವೆ, ಸಭೆ ಸಮಾರಂಭಗಳನ್ನು ಬಂದ್ ಮಾಡಿ ನಿರ್ಬಂಧ ಹೇರಿದೆ. ಅಲ್ಲದೆ ಮೈಸೂರು ಜಿಲ್ಲಾಡಳಿತ ಸಹ ಸಭೆ-ಸಮಾರಂಭ, ಕಾರ್ಯ ಕ್ರಮಗಳಿಗೆ ಬ್ರೇಕ್ ಹಾಕಿದೆ. ಜಿಲ್ಲೆಯ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆ, ಸಭೆ…

ಐಷಾರಾಮಿ ಬಡಾವಣೆಗೆ ಹೊಂದಿಕೊಂಡಿದ್ದರೂ 25 ವರ್ಷದಿಂದ ಮೂಲಸೌಕರ್ಯ ವಂಚಿತರ ಅಳಲು!
ಮೈಸೂರು

ಐಷಾರಾಮಿ ಬಡಾವಣೆಗೆ ಹೊಂದಿಕೊಂಡಿದ್ದರೂ 25 ವರ್ಷದಿಂದ ಮೂಲಸೌಕರ್ಯ ವಂಚಿತರ ಅಳಲು!

March 17, 2020

ಮೈಸೂರು, ಮಾ.16(ಎಂಕೆ)- ಕುಡಿಯುವ ನೀರು, ಶೌಚಾಲಯ, ಬೆಳಕು, ಒಳಚರಂಡಿ ಸೇರಿದಂತೆ ಕನಿಷ್ಠ ಮೂಲ ಸೌಕರ್ಯಗಳಿ ಲ್ಲದೆ 31 ಕುಟುಂಬಗಳು 25 ವರ್ಷಗಳಿಂದ ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿವೆ. ಮೈಸೂರಿನ ದಟ್ಟಗಳ್ಳಿ 3ನೇ ಹಂತ, 2ನೇ ಘಟ್ಟ ‘ಹೆಚ್’ ಬಡಾವಣೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 15×30 ವಿಸ್ತೀ ರ್ಣದ 26 ಇಡಬ್ಲ್ಯೂಎಸ್ ಮತ್ತು 5 ಇತರೆ ಮನೆಗಳು ಸೇರಿ 31 ಕುಟುಂಬಗಳ 150ಕ್ಕೂ ಹೆಚ್ಚು ಜನರು 25 ವರ್ಷಗಳಿಂದ ವಾಸ ವಿದ್ದು, ಕತ್ತಲೆಯಲ್ಲೇ ಜೀವನ ಸಾಗಿಸುತ್ತಿ ದ್ದಾರೆ. ಅಲ್ಲದೆ 20…

ಮೈಸೂರು ಸಂಸ್ಥಾನ ಆಸ್ಥಾನ್ ವಿದ್ವಾನ್  ಪ್ರೊ.ವಿ.ನಾಗಭೂಷಣಾಚಾರ್ ನಿಧನ
ಮೈಸೂರು

ಮೈಸೂರು ಸಂಸ್ಥಾನ ಆಸ್ಥಾನ್ ವಿದ್ವಾನ್ ಪ್ರೊ.ವಿ.ನಾಗಭೂಷಣಾಚಾರ್ ನಿಧನ

March 17, 2020

ಮೈಸೂರು, ಮಾ.16- ಮೈಸೂರಿನ ಕೆ.ಟಿ.ಸ್ಟ್ರೀಟ್ ನಿವಾಸಿಯೂ ಆದ ಮೈಸೂರು ಸಂಸ್ಥಾನದ ಆಸ್ಥಾನ್ ವಿದ್ವಾನ್ ಆಗಿದ್ದ ಪ್ರೊ.ವಿ. ನಾಗಭೂಷಣಾಚಾರ್ ಅವರು ನಿನ್ನೆ (ಭಾನುವಾರ) ಧಾರವಾಡದ ತಮ್ಮ ಮೊಮ್ಮಗಳ ಮನೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕೆ.ವೀರಪ್ಪಚಾರ್ ಮತ್ತು ಚೆನ್ನಾಜಮ್ಮ ಅವರ ಪುತ್ರರೂ, ನಾದ ಪ್ರವೀಣ ಎಂ.ವೆಂಕಟೇಶ ದೇವರ್ ಅವರ ಅಚ್ಚುಮೆಚ್ಚಿನ ಶಿಷ್ಯರೂ ಆಗಿದ್ದ ಪ್ರೊ.ನಾಗಭೂಷಣಾಚಾರ್ ಅವರು 1956 ರಿಂದ 1967ರವರೆಗೆ ಮೈಸೂರು ಸಂಸ್ಥಾನದ ‘ಆಸ್ಥಾನ್ ವಿದ್ವಾನ್’ ಆಗಿದ್ದರು. 1967ರಿಂದ 1992ರವರೆಗೆ ಮೈಸೂರು ವಿಶ್ವವಿದ್ಯಾನಿಲ ಯದ ಲಲಿತಕಲಾ ಕಾಲೇಜಿನಲ್ಲಿ…

ನೆಲಕಚ್ಚಿದ ಮೈಸೂರು ಪ್ರವಾಸೋದ್ಯಮ
ಮೈಸೂರು

ನೆಲಕಚ್ಚಿದ ಮೈಸೂರು ಪ್ರವಾಸೋದ್ಯಮ

March 16, 2020

ಮೈಸೂರು,ಮಾ.15(ಎಂಟಿವೈ)- ರಜಾದಿನಗಳಲ್ಲಿ ಕಿಕ್ಕಿರಿದು ತುಂಬಿರುತ್ತಿದ್ದ ಪ್ರವಾಸಿ ತಾಣಗಳು ಭಣಗುಡು ತ್ತಿವೆ. ಎಲ್ಲೆಡೆ ಭೀತಿ ಮೂಡಿಸಿರುವ ಕೊರೊನಾ ಮಹಾ ಮಾರಿಯಿಂದಾಗಿ ಮೈಸೂರು ಪ್ರವಾಸೋದ್ಯಮ ನೆಲ ಕಚ್ಚಿದ್ದು, 50 ಕೋಟಿ ರೂ. ಆದಾಯ ತರುತ್ತಿದ್ದ ಉದ್ಯಮ ಇದೀಗ 5 ಕೋಟಿ ರೂ. ಕೂಡ ಸಂಗ್ರಹ ವಿಲ್ಲದೆ ತೀವ್ರ ನಷ್ಟಕ್ಕೆ ಒಳಗಾಗಿದೆ. ಹೌದು, ರಾಜ್ಯದಲ್ಲಿಯೇ ಮೈಸೂರು ಟೂರಿಸಂ ಜನಮನ್ನಣೆಗಳಿಸಿದ್ದು, ವಿದೇಶಿ ಹಾಗೂ ದೇಶದ ಮೂಲೆ ಮೂಲೆಯಿಂದ ಅಪಾರ ಸಂಖ್ಯೆಯ ಪ್ರವಾಸಿ ಗರನ್ನು ಪ್ರತಿದಿನ ಆಕರ್ಷಿಸುತ್ತಿತ್ತು. ಕೊಡಗು, ಚಾಮ ರಾಜನಗರ ಹಾಗೂ ಊಟಿ,…

ದೆಹಲಿಯ ಮೊದಲ ಕೊರೊನಾ ಪೀಡಿತ ವ್ಯಕ್ತಿ ಸಂಪೂರ್ಣ ಗುಣಮುಖ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮೈಸೂರು

ದೆಹಲಿಯ ಮೊದಲ ಕೊರೊನಾ ಪೀಡಿತ ವ್ಯಕ್ತಿ ಸಂಪೂರ್ಣ ಗುಣಮುಖ ಆಸ್ಪತ್ರೆಯಿಂದ ಡಿಸ್ಚಾರ್ಜ್

March 16, 2020

ನವದೆಹಲಿ, ಮಾ.15- ರಾಷ್ಟ್ರ ರಾಜ ಧಾನಿ ನವದೆಹಲಿಯಲ್ಲಿ ಮೊದಲು ಕೊರೊನಾ ವೈರಸ್‍ಗೆ ತುತ್ತಾಗಿದ್ದ ವ್ಯಕ್ತಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪೂರ್ವ ದೆಹಲಿಯ ಮಯೂರ್ ವಿಹಾರ್ ನಿವಾಸಿಯಾಗಿದ್ದ 45 ವರ್ಷದ ವ್ಯಕ್ತಿ ಇಟಲಿ ದೇಶಕ್ಕೆ ಹೋಗಿ ಬಂದ ನಂತರ ಕೊರೊನಾ ವೈರಸ್ ಸೋಂಕು ಅವ ರಲ್ಲಿ ಕಾಣಿಸಿಕೊಂಡಿತ್ತು. ಈ ಮೂಲಕ ದೆಹಲಿಯಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕೇಸ್ ದಾಖಲಾಗಿತ್ತು. ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇಟಲಿಗೆ ಹೋಗಿ ಬಂದ ನಂತರ ಐಸೋಲೇಷನ್ ವಾರ್ಡಿಗೆ ಅಡ್ಮಿಟ್ ಆಗುವ…

ಭಾರತದಲ್ಲಿ 109 ಮಂದಿಗೆ ಕೊರೊನಾ ಪ್ರಕರಣ ಪತ್ತೆ ಕರ್ನಾಟಕದಲ್ಲಿ 1,308 ಮಂದಿ ಗೃಹಬಂಧನ
ಮೈಸೂರು

ಭಾರತದಲ್ಲಿ 109 ಮಂದಿಗೆ ಕೊರೊನಾ ಪ್ರಕರಣ ಪತ್ತೆ ಕರ್ನಾಟಕದಲ್ಲಿ 1,308 ಮಂದಿ ಗೃಹಬಂಧನ

March 16, 2020

ಬೆಂಗಳೂರು, ಮಾ.15- ಭಾರತದಲ್ಲಿ ಕೊರೊನಾ ವೈರಸ್‍ನಿಂದಾಗಿ ಮಾಲ್, ಥಿಯೇಟರ್, ಅಂಗಡಿಗಳು, ಶಾಪಿಂಗ್ ಕಾಂಪ್ಲೆಕ್ಸ್‍ಗಳು ಬಹುತೇಕ ಬಂದ್ ಆಗಿವೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ್ದು, ಸೋಂಕಿನ ಪ್ರಕರಣ ಇನ್ನಷ್ಟು ಹೆಚ್ಚಾಗುವ ಆತಂಕ ಮೂಡಿದೆ. ದೇಶದಲ್ಲಿ ಕೊರೊನಾಗೆ ಮೊದಲ ಬಲಿಯಾಗಿರುವುದು ಕರ್ನಾಟಕ. ಹೀಗಾಗಿ, ರಾಜ್ಯ ದೆಲ್ಲೆಡೆ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. ಭಾರತದಲ್ಲಿ ಒಟ್ಟಾರೆ ಇದುವರೆಗೂ 109 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಓರ್ವ ಮೃತಪಟ್ಟಿದ್ದು, 7 ಸೋಂಕಿತ ಪ್ರಕರಣ ಪತ್ತೆಯಾಗಿವೆ. ದೆಹಲಿಯಲ್ಲಿ ಒಬ್ಬರು, ಕಲಬುರ್ಗಿಯಲ್ಲಿ ಒಬ್ಬರು…

ಕೊಡಗಿನಲ್ಲಿ ಕೊರೊನಾ ಶಂಕಿತರ ಸಂಖ್ಯೆ 6ಕ್ಕೆ ಏರಿಕೆ
ಮೈಸೂರು

ಕೊಡಗಿನಲ್ಲಿ ಕೊರೊನಾ ಶಂಕಿತರ ಸಂಖ್ಯೆ 6ಕ್ಕೆ ಏರಿಕೆ

March 16, 2020

ಮಡಿಕೇರಿ,ಮಾ.15-ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಶಂಕಿತರ ಸಂಖ್ಯೆ 6ಕ್ಕೆ ಏರಿಕೆ ಯಾಗಿದೆ. ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಈ ಹಿಂದೆ ವಿದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಜ್ವರ ಮತ್ತು ಗಂಟಲು ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸ್ಥಳಾಂ ತರಿಸಿ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆಗೆ ದಾಖಲು ಮಾಡಿಕೊಳ್ಳಲಾಗಿತ್ತು. ಈವರೆಗೆ ವಿದೇಶದಿಂದ ಬಂದ ಮೂವರು ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಅವರನ್ನು ಮತ್ತು ಇವರೊಂದಿಗೆ ಸಂಪರ್ಕದಲ್ಲಿದ್ದ ಇತರ ಮೂವರು ಸೇರಿದಂತೆ ಒಟ್ಟು 6…

1 9 10 11 12 13 330
Translate »